ಮೋಹನ್ ಲಾಲ್ ದಾಖಲೆ ಛಿದ್ರ ಛಿದ್ರ, ಕಲ್ಯಾಣಿ ಈಗ ಮಲಯಾಳಂ ಚಿತ್ರ 'ಲೋಕ'ದ ಹೊಸ ಮಹಾರಾಣಿ

ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಜಗತ್ತಿನ ಹಲವು ಭಾಷೆಯ ಚಿತ್ರಗಳನ್ನು ಎಲ್ಲಿ ಬೇಕೋ ಅಲ್ಲಿ .. ಯಾವಾಗ ಅಂದ್ರೆ ಅವಾಗ ನೋಡುವ ಸೌಲಭ್ಯ ಇದೆ. ಚಿತ್ರಮಂದಿರಕ್ಕೆ ಈ ಓಟಿಟಿ ತೀವೃ ಸ್ಪರ್ಧೆಯನ್ನೊಡ್ಡುತ್ತಿದೆ. ಇನ್ನು ಮೊದಲಾದರೆ ಕೇವಲ ಒಂದು ಪೋಸ್ಟರ್ ಸಾಕಿತ್ತು. ಚಿತ್ರಮಂದಿರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ಆದರೆ ಈಗ..

ಎಷ್ಟೇ ಪ್ರಚಾರ ಮಾಡಿದರು ಕೂಡ ಚಿತ್ರಮಂದಿರಕ್ಕೆ ಚಿತ್ರವೊಂದು ಬಂದಿದ್ದು ಹೋಗಿದ್ದು ಕೂಡ ಈಗೀಗ ಹಲವರಿಗೆ ಗೊತ್ತೇ ಆಗುವುದಿಲ್ಲ. ಹೊಸಬರು ಎಷ್ಟೇ ಭಿನ್ನವಾದ ಆಲೋಚನೆ ಮಾಡಿದರು ಕೂಡ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದು ತರಲು ಕೂಡ ಸಾಧ್ಯವಾಗುತ್ತಿಲ್ಲ.

a-new-box-office-queen-kalyani-priyadarshans-lokah-becomes-biggest-malayalam-film-worldwide

ಹೀಗಿರುವಾಗ ಮಲಯಾಳಂ ಚಿತ್ರರಂಗವನ್ನು ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವನ್ನು ಹೊಸ ಹುಡುಗಿ ಕಲ್ಯಾಣಿ ಪ್ರಿಯದರ್ಶನ್ ಬೆಕ್ಕಸ ಬೆರಗಾಗಿಸಿದ್ದಾರೆ. ಮೋಹನ್ ಲಾಲ್ ಹೆಸರಿನಲ್ಲಿದ್ದ ದಾಖಲೆಯನ್ನು ಧೂಳಿಪಟ ಮಾಡಿ ಹೊಸ ದಾಖಲೆ ಬರೆದಿದ್ದಾರೆ. ಮಲಯಾಳಂ ಚಿತ್ರರಂಗದ ಬಾಕ್ಸಾಫೀಸ್ ನ ಮಹಾರಾಣಿ ಎನಿಸಿಕೊಂಡಿದ್ದಾರೆ.

ಹೌದು. ಕಲ್ಯಾಣಿ ಅಭಿನಯದ ಲೋಕ : ಚಾಪ್ಟರ್ 1 ಸದ್ಯ ಬಾಕ್ಸಾಫೀಸ್ ನಲ್ಲಿ ಅಬ್ಬರಿಸುತ್ತಿದೆ. ಮೂರು ವಾರ ಆದರೂ ಕೂಡ ಈ ಚಿತ್ರದ ಹವಾ - ಕ್ರೇಜ್ ಕಡಿಮೆಯಾಗಿಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಈ ಚಿತ್ರ ಕಳೆದ 25 ದಿನಗಳಲ್ಲಿ ಕೇವಲ ಭಾರತದಲ್ಲಿ ₹ 137.75 ಕೋಟಿ ಗಳಿಸಿದೆ ಎಂದು ಬಾಕ್ಸಾಫೀಸ್ ಅಂಕಿ ಅಂಶಗಳನ್ನು ಹಂಚಿಕೊಳ್ಳುವ "ಸ್ಯಾಕ್ನಿಲ್" ವರದಿ ಮಾಡಿದೆ.

''ಸ್ಯಾಕ್ನಿಲ್'' ಪ್ರಕಾರ ''ಲೋಕಾ-ಚಾಪ್ಟರ್ 1 ಚಂದ್ರ'' ಚಿತ್ರದ 25 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ವಾರ - ₹ 54.7 ಕೋಟಿ

ಎರಡನೇ ವಾರ - ₹ 47 ಕೋಟಿ

ಮೂರನೇ ವಾರ - ₹ 27.1 ಕೋಟಿ

23ನೇ ದಿನ[ಶುಕ್ರವಾರ] ₹ 1.7 ಕೋಟಿ

24ನೇ ದಿನ[ಶನಿವಾರ] ₹ 3.25 ಕೋಟಿ

25ನೇ ದಿನ[ಭಾನುವಾರ] ₹ 4.00 ಕೋಟಿ *ಅಂದಾಜು

ಒಟ್ಟು ಗಳಿಕೆ - ₹ 137.75 ಕೋಟಿ

ಹೀಗೆ ಭಾರತದಲ್ಲಿಯೇ ₹ 137.75 ಕೋಟಿ ಕೊಳ್ಳೆ ಹೊಡೆದ ಈ ಚಿತ್ರದ ಹೊರದೇಶದ ಗಳಿಕೆಯನ್ನು ಕೂಡ ಕೂಡಿಸಿದರೆ ''ಸ್ಯಾಕ್ನಿಲ್'' ಪ್ರಕಾರ ಚಿತ್ರದ ಗಳಿಕೆ ₹ 270 ಕೋಟಿಯ ಗಡಿಯನ್ನು ದಾಟುತ್ತೆ. ಇದಕ್ಕೆ ಪುಷ್ಠಿ ನೀಡುವಂತೆ koimoi.com ಕೂಡ ಅಂಕಿ ಅಂಶಗಳನ್ನು ಹಂಚಿಕೊಂಡಿದ್ದು ಮಲಯಾಳಂ ಚಿತ್ರರಂಗದಲ್ಲಿಯೇ ಅತೀ ಹೆಚ್ಚು ಹಣ ಗಳಿಸಿದ ಚಿತ್ರ ಎನ್ನುವ ಹೆಗ್ಗಳಿಕೆಗೆ ''ಲೋಕಾ'' ಪಾತ್ರವಾಗಿದೆ ಎಂದು ವರದಿಯನ್ನು ಮಾಡಿದೆ. ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ L2 : ಎಂಪುರಾನ್ ದಾಖಲೆ ಕಲ್ಯಾಣಿಯ ಅಬ್ಬರದ ಎದುರು ಛಿದ್ರವಾಗಿದೆ ಎಂದು ಕೂಡ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

koimoi.com ಪ್ರಕಾರ ವಿಶ್ವದೆಲ್ಲೆಡೆ ಅತೀ ಹೆಚ್ಚು ಹಣ ಗಳಿಸಿದ ಮಲಯಾಳಂನ 5 ಚಿತ್ರಗಳು ಈ ಕೆಳಗಿನಂತಿವೆ

1- ಲೋಕ-ಚಾಪ್ಟರ್ 1-ಚಂದ್ರ : ₹272.27 ಕೋಟಿ
2- L2 ಎಂಪುರಾನ್ - ₹268.05 ಕೋಟಿ
3-ಮಂಜುಮ್ಮೆಲ್ ಬಾಯ್ಸ್ -₹241.56 ಕೋಟಿ
4- ಥುಂಡರಮ್ - ₹237.76 ಕೋಟಿ
5-2018- ₹181 ಕೋಟಿ

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
A new box office queen is here! Lokah, starring Kalyani Priyadarshan, has become the all-time highest-grossing Malayalam film, surpassing industry giant Mohanlal's Empuraan
Read more about: mollywood mohanlal kalyani
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X