ಇನ್ನೂ ₹32 ಕೋಟಿ ಮಾತ್ರ ಬಾಕಿ, 8 ವರ್ಷದ ನಂತರ ಬಾಕ್ಸಾಫೀಸ್ ಸುಲ್ತಾನ್ ಪಟ್ಟಕ್ಕೇರಲಿದ್ದಾರೆ ಆಮಿರ್ ಖಾನ್!

ಚಿತ್ರರಂಗದಲ್ಲಿ ಈಗ ದಕ್ಷಿಣ ಭಾರತೀಯ ಚಿತ್ರಗಳ ಪಾರುಪಥ್ಯ ಇದೆ. ಒಂದು ಕಾಲದಲ್ಲಿ ದಕ್ಷಿಣ ಭಾರತೀಯ ಚಿತ್ರಗಳು ಎಂದರೆ ಮೂಗು ಮುರಿಯುತ್ತಿದ್ದ ಹಿಂದಿ ಉದ್ಯಮದವರೇ ಈಗ ಸೌತ್ ಸಿನಿಮಾಗಳ ಅಬ್ಬರ ಕಂಡು ಬೆರಗಾಗಿದ್ದಾರೆ. ಸತತ ಸೋಲುಗಳನ್ನು ಕಂಡು ಹೈರಾಣಾಗಿದ್ದಾರೆ. ಹೀಗಿರುವಾಗ ಆಮಿರ್ ಖಾನ್ ಅಭಿನಯದ ಸಿತಾರೆ ಜಮೀನ್ ಪರ್ ಚಿತ್ರ ಮಲಗಿರುವ ಬಾಲಿವುಡ್‌ನ ಬಡಿದೆಬ್ಬಿಸುತ್ತಿದೆ. ಮುಂಬೈ ಫಿಲ್ಮ್ ಮೇಕರ್ಸ್ ಮೊಗದಲ್ಲಿ ಮಂದಹಾಸವನ್ನು ಮೂಡಿಸಿದೆ.

ಹೌದು.. ಕಳೆದ ಜೂನ್ 20ರಂದು ಬಿಡುಗಡೆಯಾದ ಸಿತಾರೆ ಜಮೀನ್ ಪರ್ ಚಿತ್ರದ ಹವಾ ಇವತ್ತು ಕೂಡ ಕಡಿಮೆಯಾಗಿಲ್ಲ. ಈ ಮೂರು ವಾರದಲ್ಲಿ 'ಹೌಸ್‌ಫುಲ್ 5' .. 'ಮೆಟ್ರೋ ಇನ್ ದಿನೋ' .. ಬಿಡುಗೆಯಾದರೂ ಕೂಡ ಸಿತಾರೆಗಳು ಕಳೆಗುಂದಿಲ್ಲ. ಹಾಲಿವುಡ್‌ನ 'ಜುರಾಸಿಕ್ ವರ್ಲ್ಡ್ ರೀ ಬರ್ಥ್' ಮುಂದೆ ಕೂಡ ಬಾಲಿವುಡ್‌ನ ಈ ಸಿತಾರೆಗಳು ನಡುಗಿಲ್ಲ.

Aamir Khan 32 Cr for Hit After 8 Years Can Sitaare Zameen Par Deliver

ಇದಕ್ಕೆ ಕೈಗನ್ನಡಿ ಎಂಬಂತೆ .. ಚಿತ್ರಗಳ ಗಳಿಕೆಯ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಸಿತಾರೆ ಜಮೀನ್ ಪರ್ ಚಿತ್ರ ಈ 18 ದಿನದಲ್ಲಿ ಬಾಕ್ಸಾಫೀಸ್‌ನಲ್ಲಿ ₹ 150.05 ಕೋಟಿ ಗಳಿಸಿದೆ ಎಂದು ವರದಿಯನ್ನು ಮಾಡಿದೆ.

ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಸಿತಾರೆ ಜಮೀನ್ ಪರ್ ಚಿತ್ರದ 18 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ದಿನ ಗಳಿಕೆ

ಮೊದಲನೇ ದಿನ { ಶುಕ್ರವಾರ } ₹ 10.7ಕೋಟಿ

ಎರಡನೇ ದಿನ { ಶನಿವಾರ } ₹ 20.2 ಕೋಟಿ

ಮೂರನೇ ದಿನ {ಭಾನುವಾರ} ₹ 27.25ಕೋಟಿ

ನಾಲ್ಕನೇ ದಿನ {ಸೋಮವಾರ} ₹8.5 ಕೋಟಿ

ಐದನೇ ದಿನ {ಮಂಗಳವಾರ} ₹8.5 ಕೋಟಿ

ಆರನೇ ದಿನ {ಬುಧವಾರ} ₹7.25 ಕೋಟಿ

ಏಳನೇ ದಿನ { ಗುರುವಾರ } ₹6.5 ಕೋಟಿ

ಮೊದಲ ವಾರದ ಒಟ್ಟು ಗಳಿಕೆ - ₹88.9 ಕೋಟಿ

ಎಂಟನೇ ದಿನ { ಶುಕ್ರವಾರ } ₹ 6.65 ಕೋಟಿ

ಒಂಬತ್ತನೇ ದಿನ { ಶನಿವಾರ } ₹12.6 ಕೋಟಿ

ಹತ್ತನೇ ದಿನ { ಭಾನುವಾರ } ₹14.5 ಕೋಟಿ

ಹನ್ನೊಂದನೇ ದಿನ { ಸೋಮವಾರ } ₹3.75 ಕೋಟಿ

ಹನ್ನೆರಡನೇ ದಿನ { ಮಂಗಳವಾರ } ₹3.75 ಕೋಟಿ

ಹದಿಮೂರನೇ ದಿನ { ಬುಧವಾರ } ₹2.75 ಕೋಟಿ

ಹದಿನಾಲ್ಕನೇ ದಿನ {ಗುರುವಾರ } ₹ 2.5 ಕೋಟಿ

ಎರಡು ವಾರದ ಒಟ್ಟು ಗಳಿಕೆ - ₹ 46.5 ಕೋಟಿ

ಹದಿನೈದನೇ ದಿನ { ಶುಕ್ರವಾರ } ₹ 2.4 ಕೋಟಿ

ಹದಿನಾರನೇ ದಿನ { ಶನಿವಾರ } ₹4.75 ಕೋಟಿ

ಹದಿನೇಳನೇ ದಿನ { ಭಾನುವಾರ } ₹ 6.15 ಕೋಟಿ

ಹದಿನೆಂಟನೇ ದಿನ { ಸೋಮವಾರ } ₹1.35 ಕೋಟಿ {ಅಂದಾಜು }

ಒಟ್ಟು ಗಳಿಕೆ ₹ 150.05 ಕೋಟಿ

ಅಂದ್ಹಾಗೇ ಬಾಲಿವುಡ್ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಮತ್ತೊಂದು ವೆಬ್ ಸೈಟ್'www.koimoi.com' ವರದಿಯ ಪ್ರಕಾರ ಸಿತಾರೆ ಜಮೀನ್ ಪರ್ ಚಿತ್ರಕ್ಕೆ ಆಮಿರ್ ಖಾನ್ ಖರ್ಚು ಮಾಡಿದ್ದು ಕೇವಲ ₹90 ಕೋಟಿ ಮಾತ್ರ. ವಿಶೇಷ ಅಂದರೆ ಈ ಹಣವನ್ನ ಆಮಿರ್ ಖಾನ್ ಈಗಾಗಲೇ ಮರಳಿ ಪಡೆದಿದ್ದಾರೆ. koimoi ವರದಿಯ ಪ್ರಕಾರ ₹60.5 ಕೋಟಿ ಲಾಭವನ್ನು ಕೂಡ ಕಂಡಿದ್ದಾರೆ.

ಆದರೆ.. ಬಾಲಿವುಡ್‌ನ ಲೆಕ್ಕಾಚಾರದ ಪ್ರಕಾರ ಸಿತಾರೆ ಜಮೀನ್ ಪರ್ ಬ್ಲಾಕ್‌ಬಸ್ಟರ್ ಎಂದು ಕರೆಸಿಕೊಳ್ಳುವುದು ಹಾಕಿದ ಬಂಡವಾಳದ ಮೇಲೆ ಒಂದು ಪಟ್ಟು ಹೆಚ್ಚು ಲಾಭ ಬಂದಾಗಲೇ.

ಹೀಗಾಗಿಯೇ ಈ ಬ್ಲಾಕ್‌ಬಸ್ಟರ್ ಝೋನ್‌ಗೆ ಬರಲು ಆಮಿರ್ ಖಾನ್‌ಗೆ ಬರಲು ಇನ್ನು ₹32 ಕೋಟಿಯ ಅವಶ್ಯಕತೆ ಇದೆ. ಈ ಹಣವನ್ನು ಆಮಿರ್ ಖಾನ್‌ ಈಗ ಗಳಿಸಿದರೆ 08 ವರ್ಷಗಳ ನಂತರ ಆಮಿರ್ ಖಾನ್ ದೊಡ್ಡ ಗೆಲುವನ್ನು ಕಂಡಂತೆ ಆಗಲಿದೆ. ಈ ಮೂಲಕ ಬಾಕ್ಸಾಫೀಸ್‌ ಸುಲ್ತಾನ್ ಎಂಬ ತಮ್ಮ ಹಳೆಯ ಬಿರುದನ್ನು ಕೂಡ ಆಮಿರ್ ಖಾನ್ ಮರಳಿ ಪಡೆದಂತೆ ಆಗಲಿದೆ. ಹೊಸ ಚಿತ್ರಗಳ ಹಾವಳಿಯ ನಡುವೆ ಆಮಿರ್ ಖಾನ್ ಬಾಕ್ಸಾಫೀಸ್‌ನಲ್ಲಿ ₹32 ಕೋಟಿ ಹಣ ಗಳಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
After 8 years, Aamir Khan's "Sitaare Zameen Par" shines at the box office, crossing major milestones. Is it his next clean hit? Find out!
Read more about: bollywood aamir khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X