ಹೊಸ ಹುಡುಗನ ಅಬ್ಬರದ ಮುಂದೆಯೂ ನಡುಗದ ನಲುಗದ ಆಮಿರ್ ಖಾನ್, ಸಿತಾರೆ ಜಮೀನ್ ಪರ್ ಚಿತ್ರದ ಗಳಿಕೆ ಎಷ್ಟು ?
ಹೆಚ್ಚೇನಲ್ಲ .. ಕೆಲ ವರ್ಷಗಳ ಹಿಂದೆ ಆಮಿರ್ ಖಾನ್ ಅಭಿನಯದ ಚಿತ್ರಕ್ಕೆ ಎಲ್ಲಿಲ್ಲದ ಬೇಡಿಕೆ ಇತ್ತು. ವಿತರಕರು ನಾ ಮುಂದು ತಾ ಮುಂದು ಎಂದು ತಮ್ಮ ಆಮಿರ್ ಖಾನ್ ಚಿತ್ರವನ್ನು ಕೊಂಡುಕೊಳ್ಳುತ್ತಿದ್ದರು. ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದರು. ಆ ಕಾಲದಲ್ಲಿ ಆಮಿರ್ ಖಾನ್ ಹಲವರ ಕಣ್ಣಿಗೆ ಸಂತನಂತೆ ಕಾಣ್ತಿದ್ದರು. ಹೀಗಾಗಿ ಇವರ ಚಿತ್ರಗಳನ್ನು ಮುಗಿ ಬಿದ್ದು ನೋಡುತ್ತಿದ್ದರು.
ಆದರೆ ಆ ನಂತರ ಆಮಿರ್ ಖಾನ್ ವಿರುದ್ಧ ಏಕಾಏಕಿ ಆಕ್ರೋಶದ ಅಲೆ ಎದ್ದಿತು. ಆಮಿರ್ ಖಾನ್ ನಡೆ ಮತ್ತು ನುಡಿ ಕೂಡ ಇದಕ್ಕೆ ಪೂಕರವಾಗಿಯೇ ಇತ್ತು. ಹೀಗಾಗಿಯೇ ಇನ್ನೇನು ಆಮಿರ್ ಖಾನ್ ಕಾಲ ಮುಗೀತು ಎಂದೇ ಬಹುತೇಕರು ಅಂದುಕೊಂಡಿದ್ದರು.

ಆದರೆ ಆಮಿರ್ ಖಾನ್ ಸೋಲು ಒಪ್ಪಿಕೊಂಡಿರಲಿಲ್ಲ. ಬದಲಿಗೆ ಎರಡು ಹೀನಾಯ ಸೋಲಿನ ನಂತರ ಕೂಡ ಪ್ರಯತ್ನ ಮುಂದುವರೆಸಿದರು. ಇದರ ಪರಿಣಾಮ ಸದ್ಯ 'ಸಿತಾರೆ ಜಮೀನ್ ಪರ್' ಚಿತ್ರ ಬಾಕ್ಸಾಫೀಸ್‌ನಲ್ಲಿ ಚಿನ್ನ ಬೆಳೆ ಬೆಳೆದಿದೆ. ಆಮಿರ್ ಖಾನ್ ಮೊಗದಲ್ಲಿ ಮಂದಹಾಸವನ್ನು ಮೂಡಿಸಿದೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಸದ್ಯ ಎಲ್ಲೆಡೆ 'ಸೈಯಾರ' ಅಬ್ಬರ ಇದೆ. ಅಲೆ ಇದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ 'ಸ್ಯಾಕ್ನಿಲ್' ಪ್ರಕಾರ ಚಿತ್ರ ಕೇವಲ ನಾಲ್ಕು ದಿನದಲ್ಲಿ 100 ಕೋಟಿಗೂ ಅಧಿಕ ಹಣ ಗಳಿಸಿದೆ.
'ಸೈಯಾರ' ಚಿತ್ರದ ಈ ಅಲೆಯನ್ನು ಕಂಡು ಬಾಲಿವುಡ್‌ನ ಹಲವಾರು ಸೂಪರ್ ಸ್ಟಾರ್‌ಗಳು ಸದ್ಯ ಬೆಚ್ಚಿ ಬಿದ್ದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಅಜಯ್ ದೇವಗನ್ ಅಭಿನಯದ 'ಸನ್ ಆಫ್ ಸರ್ದಾರ್ 2'.. ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಜಾಹ್ನವಿ ಕಪೂರ್ ಅಭಿನಯದ 'ಪರಮ ಸುಂದರಿ' ಸೇರಿ ಹಲವು ಚಿತ್ರಗಳ ಬಿಡುಗಡೆಯ ದಿನಾಂಕದಲ್ಲಿ ಬದಲಾವಣೆಗಳಾಗಿವೆ.
ಆದರೆ.. ಇಷ್ಟೆಲ್ಲಾ ಆದರೂ ಕೂಡ ಆಮಿರ್ ಖಾನ್ ಅಭಿನಯದ 'ಸಿತಾರೆ ಜಮೀನ್ ಪರ್' ಚಿತ್ರ ಇನ್ನೂ ಚಿತ್ರಮಂದಿರದಲ್ಲಿಯೇ ಉಳಿದುಕೊಂಡಿದೆ. 'ಸೈಯಾರ' ಅಬ್ಬರ ಆರ್ಭಟದ ನಡುವೆಯೂ ಕೂಡ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ಇದಕ್ಕೆ ಪುರಾವೆ ಎನ್ನುವಂತೆ 'ಸಿತಾರೆ ಜಮೀನ್ ಪರ್' ಚಿತ್ರ 33ನೇ ದಿನಕ್ಕೆ ಕಾಲಿಟ್ಟಿದ್ದು ಹಲವು ಕಡೆ 50 ದಿನಗಳ ಪ್ರದರ್ಶನ ಕಾಣುವ ಮುನ್ಸೂಚನೆಯನ್ನು ನೀಡಿದೆ. 'ಸ್ಯಾಕ್ನಿಲ್' ವೆಬ್ ಸೈಟ್ ಪ್ರಕಾರ 32 ದಿನದಲ್ಲಿ ₹ 165.57 ಕೋಟಿ ಹಣವನ್ನು ಗಳಿಸಿದೆ.
ಸಲ್ಮಾನ್ ಖಾನ್‌ಗೆ ಹಿಂದಿಕ್ಕಿರುವ ಆಮಿರ್ ಖಾನ್
ಇನ್ನು ಸಲ್ಮಾನ್ ಖಾನ್ ಅಭಿನಯದ 'ಸಿಕಂದರ್' ಚಿತ್ರವನ್ನು ಕೂಡ ಆಮಿರ್ ಖಾನ್ ಹಿಂದಿಕ್ಕುವಲ್ಲಿ ಈ ಬಾರಿ ಯಶಸ್ವಿಯಾಗಿದ್ದಾರೆ. 'ಸ್ಯಾಕ್ನಿಲ್' ಪ್ರಕಾರ 'ಸಿಕಂದರ್' ನಾಲ್ಕು ವಾರಗಳ ಪ್ರದರ್ಶನ ಕಂಡಿತ್ತು. ಈ ನಾಲ್ಕು ವಾರದಲ್ಲಿ ಕೇವಲ ₹ 110.1 ಕೋಟಿ ಮಾತ್ರ ಗಳಿಸಿತ್ತು. ಈ ದಾಖಲೆಯನ್ನು ಆಮಿರ್ ಖಾನ್ ಈಗಾಗಲೇ ಮುರಿದಿದ್ದು ಅಜಯ್ ದೇವಗನ್ ಅಭಿನಯ್ ''ರೇಡ್-2'' ಚಿತ್ರದ ಗಳಿಕೆಯನ್ನು ಹಿಂದಿಕ್ಕುವ ಸವಾಲು ಸದ್ಯ ಆಮಿರ್ ಖಾನ್ ಮುಂದೆ ಇದೆ. 'ಸ್ಯಾಕ್ನಿಲ್' ಪ್ರಕಾರ ಒಟ್ಟು 7 ವಾರ ಪ್ರದರ್ಶನ ಕಂಡಿದ್ದ ''ರೇಡ್-2'' ಒಟ್ಟು ₹ 173.05 ಕೋಟಿ ಗಳಿಸಿತ್ತು. ಈ ಸಂಖ್ಯೆಯನ್ನು ಆಮಿರ್ ಖಾನ್ ಪಾರು ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ವಾರಾಂತ್ಯದಲ್ಲಿಯೇ 2.5 ಕೋಟಿ ಗಡಿ ದಾಟಿದ ಸಿತಾರೆ ಜಮೀನ್ ಪರ್
ಇನ್ನು ಇದೇ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಐದನೇ ವಾರಕ್ಕೆ ಪಾದಾರ್ಪಣೆ ಮಾಡಿರುವ 'ಸಿತಾರೆ ಜಮೀನ್ ಪರ್' ಕಳೆದ ನಾಲ್ಕು ದಿನದಲ್ಲಿಯೇ ₹ 2.5 ಕೋಟಿಗೂ ಹೆಚ್ಚಿನ ಹಣವನ್ನು ಬಾಕ್ಸಾಫೀಸ್‌ನಲ್ಲಿ ಕೊಳ್ಳೆ ಹೊಡೆದಿದೆ. ಸ್ಯಾಕ್ನಿಲ್ ಪ್ರಕಾರ 'ಸಿತಾರೆ ಜಮೀನ್ ಪರ್' ಚಿತ್ರದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ವಾರ - ₹ 88.9 ಕೋಟಿ
ಎರಡನೇ ವಾರ - ₹ 46.5 ಕೋಟಿ
ಮೂರನೇ ವಾರ - ₹ 18.95 ಕೋಟಿ
ನಾಲ್ಕನೇ ವಾರ - ₹ ₹ 8.65 ಕೋಟಿ
ಒಟ್ಟು ಗಳಿಕೆ - ₹ 163. ಕೋಟಿ
29ನೇ ದಿನ [ ಶುಕ್ರವಾರ] - ₹ 35 ಲಕ್ಷ
30ನೇ ದಿನ [ ಶನಿವಾರ ] - ₹ 80 ಲಕ್ಷ
31ನೇ ದಿನ [ ಭಾನುವಾರ ]- ₹1.2 ಕೋಟಿ
32ನೇ ದಿನ [ ಸೋಮವಾರ ] - ₹ 22 ಲಕ್ಷ
ಒಟ್ಟು ಗಳಿಕೆ - ₹ 165.57 ಕೋಟಿ
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











