Sitaare Zameen Par Box Office Day1 ; ಅಕ್ಷಯ್ ಕುಮಾರ್‌ನ ಹಿಂದಿಕ್ಕಿದ ಆಮಿರ್ ಖಾನ್, ಮೊದಲ ದಿನ ಗಳಿಸಿದ್ದೆಷ್ಟು ?

ಈಗೀಗ ಸುಮಾರು ಸಿನಿಮಾಗಳು ಬರುತ್ತಿವೆ, ಹೋಗುತ್ತಿವೆ. ಆದರೆ ಗೆಲುವು ಮಾತ್ರ ಬಹುತೇಕರ ಕೈಗೆ ಸಿಗುತ್ತಿಲ್ಲ. ಹೇಗಾದರೂ ಮಾಡಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದುತರಲು ಚಿತ್ರತಂಡಗಳು ಹರಸಾಹಸ ಮಾಡುತ್ತಿವೆ. ನಾನಾ ಕಸರತ್ತುಗಳನ್ನು ಮಾಡುತ್ತಿವೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಇದು ಕೇವಲ ಕನ್ನಡ ಚಿತ್ರರಂಗದ ಕಥೆ ಮಾತ್ರ ಅಲ್ಲ, ಎಲ್ಲ ಭಾಷೆಯ ಕಥೆ ಕೂಡ ಒಂದೇ ತರ ಇದೆ.

ಇನ್ನು ಮೊದಲಾದರೆ ಹೊಸಬರು ಮಾತ್ರ ಗೆಲ್ಲಲು ಹೆಣಗುತ್ತಿದ್ದರು. ಹೊಸಬರ ಪ್ರಯತ್ನ-ಪ್ರಯೋಗಗಳು ಸ್ಟಾರ್‌ಗಳ ಬಿಗ್ ಬಜೆಟ್ ಕಮರ್ಷಿಯಲ್ ಚಿತ್ರಗಳ ಮುಂದೆ ಕಳೆದು ಹೋಗುತ್ತಿದ್ದವು. ಆದರೆ ಈಗ ಸೂಪರ್ ಸ್ಟಾರ್‌ ಪಟ್ಟವನ್ನು ಅಲಂಕರಿಸಿದವರು ಕೂಡ ಒದ್ದಾಡುತ್ತಿದ್ದಾರೆ. ಇದಕ್ಕೆ ಆಮಿರ್ ಖಾನ್ ಸದ್ಯದ ಉದಾಹರಣೆ.

aamir-khans-sitaare-zameen-par-smashes-kesari-2-record-with-11-cr-day-1

ಹೌದು, ಈ ಮೊದಲು ಆಮಿರ್ ಖಾನ್ ಸಿನಿಮಾ ಅಂದರೆ ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯುತ್ತಿತ್ತು. ಇದಕ್ಕೆ ಅತ್ಯುತ್ತಮ ಕೈಗನ್ನಡಿ ಎಂಬಂತೆ 'ಟೈಮ್ಸ್ ನೌ' ವರದಿಯ ಪ್ರಕಾರ 2018ರಲ್ಲಿ ಬಂದ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರ ಮೊದಲ ದಿನವೇ ₹52.25 ಕೋಟಿಯನ್ನು ಕೊಳ್ಳೆ ಹೊಡೆದಿತ್ತು.

ಆದರೆ ಆ ನಂತರ ಆಮಿರ್ ಖಾನ್ ಅದೃಷ್ಟ ಕೈ ಕೊಡ್ತು. ಈ ಹಿಂದೆ ಅಂದರೆ 2022ರಲ್ಲಿ ತೆರೆಗೆ ಬಂದ ಲಾಲ್ ಸಿಂಗ್ ಚಡ್ಡಾ ಚಿತ್ರ ಮೊದಲ ದಿನ ಕೇವಲ ₹ 11.70 ಕೋಟಿಯನ್ನು ಗಳಿಸಿತ್ತು. ನಿನ್ನೆ ಬಿಡುಗಡೆಯಾದ 'ಸಿತಾರೆ ಜಮೀನ್ ಪರ್‌' ಚಿತ್ರದ ಗಳಿಕೆ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಗಳಿಕೆಗಿಂತ ಕಡಿಮೆ ಇದೆ.

Take a Poll

ಚಿತ್ರಗಳ ಗಳಿಕೆಯ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ, ಸಿತಾರೆ ಜಮೀನ್ ಪರ್ ಚಿತ್ರ ಮೊದಲ ದಿನ { ಜೂನ್ 20 } ಬಾಕ್ಸಾಫೀಸ್‌ನಲ್ಲಿ ₹ 11.50 ಕೋಟಿಯನ್ನು ಗಳಿಸಿದೆ. ಆದರೆ.. ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕೆ ಹೋಲಿಸಿದರೆ ಸಿತಾರೆ ಜಮೀನ್ ಪರ್ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕರಿಂದ ಮತ್ತು ವಿಮರ್ಷಕರಿಂದ ಮೆಚ್ಚುಗೆ ಈ ಚಿತ್ರಕ್ಕೆ ಸಿಕ್ಕಿದೆ. ಈ ಹಿನ್ನೆಲೆ ಆಮಿರ್ ಖಾನ್ ನಿರಾಳವಾಗಿರಬಹುದು. ಇಂದು ಮತ್ತು ನಾಳೆ ಈ ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡು ಬಂದರು ಬರಹುದು.

ಅಕ್ಷಯ್ ಕುಮಾರ್‌ನ ಹಿಂದಿಕ್ಕಿದ ಆಮಿರ್ ಖಾನ್

ಇನ್ನು ಕೇವಲ ಆಮಿರ್ ಖಾನ್ ಮಾತ್ರವಲ್ಲ ಬಾಲಿವುಡ್‌ನ ಕಿಲಾಡಿ ಅಕ್ಷಯ್ ಕುಮಾರ್‌ ಚಿತ್ರಗಳು ಕೂಡ ಬಾಕ್ಸಾಫೀಸ್‌ನಲ್ಲಿ ಹಣ ಗಳಿಸಲು ಪರದಾಡುತ್ತಿವೆ. 'ಹೌಸ್‌ಫುಲ್ 5' ಚಿತ್ರ ಹೊರತು ಪಡಿಸಿದರೆ ಅಕ್ಷಯ್ ಕುಮಾರ್ ಅಭಿನಯದ ಇತ್ತೀಚೆನ ಚಿತ್ರಗಳಲ್ಲಿ ಯಾವ ಚಿತ್ರ ಕೂಡ ಹೇಳಿಕೊಳ್ಳುವಂತಹ ಗಳಿಕೆಯನ್ನು ಮಾಡಿಲ್ಲ. ಇದಕ್ಕೆ ಪುರಾವೆ ಎನ್ನುವಂತೆ 'ಹೌಸ್‌ಫುಲ್ 5' ಚಿತ್ರಕ್ಕೂ ಮೊದಲು ಬಂದಿದ್ದ 'ಕೇಸರಿ 2' ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಕೇವಲ ₹7.75 ಕೋಟಿ ಹಣವನ್ನು ಮಾತ್ರ ಗಳಿಸಿತ್ತು. ಈ ಗಳಿಕೆಯನ್ನು ಈಗ ಸಿತಾರೆ ಜಮೀನ್ ಪರ್ ಚಿತ್ರ ಹಿಂದಿಕ್ಕಿದೆ.

aamir-khans-sitaare-zameen-par-smashes-kesari-2-record-with-11-cr-day-1

ಒಟ್ನಲ್ಲಿ ಸದ್ಯ ಸಿತಾರೆ ಜಮೀನ್ ಪರ್ ಚಿತ್ರ ಸಾಧಾರಣ ಓಪನಿಂಗ್ ಪಡೆದಿದೆ. ಮೊದಲ ದಿನದ ಗಳಿಕೆ ಎರಡಂಕಿಯ ಗಡಿಯನ್ನು ದಾಟಿದೆ. ಇಂದು ಮತ್ತು ನಾಳೆ ಈ ಚಿತ್ರದ ಗಳಿಕೆ ಎಷ್ಟಾಗಲಿದೆ ? ಸೋಮವಾರದ ಪರೀಕ್ಷೆಯಲ್ಲಿ ಸಿತಾರೆ ಜಮೀನ್ ಪರ್ ಪಾಸಾಗುತ್ತಾ ? ಎನ್ನುವುದನ್ನು ಈಗ ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Aamir Khan's 'Sitaare Zameen Par' explodes at the box office with ₹11 Cr on Day 1, leaving 'Kesari 2' behind. Read the full report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X