Agnyathavasi Day 3 Boxoffice; ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡ 'ಅಜ್ಞಾತವಾಸಿ' 3 ದಿನಕ್ಕೆ ಗಳಿಸಿದ್ದೆಷ್ಟು?

ಕನ್ನಡದಲ್ಲಿ ಒಳ್ಳೆ ಕಂಟೆಂಟ್ ಇರುವ ಸಿನಿಮಾ ಬರಲ್ಲ, ಎಂದು ಕೊಂಕು ಮಾತನಾಡುವವರೇ ಹೆಚ್ಚು. ಆದರೆ ಒಳ್ಳೆ ಸಿನಿಮಾ ಬಂದಾಗ ಯಾರೂ ನೋಡಿ ಪ್ರೋತ್ಸಾಹಿಸಲ್ಲ ಎನ್ನುವ ಅಪವಾದವೂ ಇದೆ. ಹೇಮಂತ್ ರಾವ್ ನಿರ್ಮಾಣದ ಕ್ರೈಂ ಥ್ರಿಲ್ಲರ್ 'ಅಜ್ಞಾತವಾಸಿ' ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ನೋಡಲು ಪ್ರೇಕ್ಷಕರು ಬರ್ತಿಲ್ಲ.

ರಂಗಾಯಣ ರಘು ಲೀಡ್ ರೋಲ್‌ನಲ್ಲಿ ನಟಿಸಿರುವ 'ಅಜ್ಞಾತವಾಸಿ' ಸಿನಿಮಾ ಏಪ್ರಿಲ್ 11ರಂದು ತೆರೆಗೆ ಬಂದಿದೆ. ಕರ್ನಾಟಕ ಮಾತ್ರವಲ್ಲದೇ ಚೆನ್ನೈ ಹಾಗೂ ಹೈದರಾಬಾದ್‌ನಲ್ಲಿ ಕೂಡ ಸಿನಿಮಾ ಆಯ್ದ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ. ಸಿನಿಮಾ ನೋಡಿದ ಬಹುತೇಕರು ಮೆಚ್ಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕನ್ನಡ ಸಿನಿರಸಿಕರು ಮಾತ್ರವಲ್ಲದೇ ಪರಭಾಷಿಕರು ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ.

Agnyathavasi Day 3 Boxoffice Rangayana Raghu s thriller film opens with decent numbers

'ಗುಲ್ಟು' ಸಿನಿಮಾ ಖ್ಯಾತಿಯ ಜನಾರ್ಧನ್ ಚಿಕ್ಕಣ್ಣ 'ಅಜ್ಞಾತವಾಸಿ' ಚಿತ್ರ ಕಟ್ಟಿಕೊಟ್ಟಿದ್ದಾರೆ. ಪವನಗೌಡ, ಸಿದ್ದು ಮೂಲಿಮನಿ, ಶರತ್ ಲೋಹಿತಾಸ್ವ, ರವಿಶಂಕರ್ ಗೌಡ ಸೇರಿದಂತೆ ಪ್ರತಿಭಾನ್ವಿತ ಕಲಾವಿದರು ಚಿತ್ರದಲ್ಲಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ. ಚಿತ್ರದ ಕಥೆ, ಚಿತ್ರಕಥೆ, ಮೇಕಿಂಗ್ ಎಲ್ಲದರ ಬಗ್ಗೆಯೂ ಸಿನಿಮಾ ನೋಡಿದವರು ಮೆಚ್ಚಿ ಮಾತನಾಡುತ್ತಿದ್ದಾರೆ. ಆದರೂ ಕನ್ನಡ ಸಿನಿರಸಿಕರು ಸಿನಿಮಾ ನೋಡಲು ಹಿಂದು ಮುಂದು ನೋಡುತ್ತಿದ್ದಾರೆ.

ಪ್ರೇಕ್ಷಕರನ್ನು ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳಿಗೆ ಸೆಳೆಯಲು 'ಅಜ್ಞಾತವಾಸಿ' ವಿಫಲವಾಗುತ್ತಿದೆ. ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಬಂದು ಸಿನಿಮಾ ನೋಡಿ ಗೆಲ್ಲಿಸಬೇಕಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡದೇ ಬಳಿಕ ಓಟಿಟಿಯಲ್ಲಿ ನೋಡಿ "ಅಯ್ಯೋ, ಇಂತಹ ಒಳ್ಳೆ ಸಿನಿಮಾ ಥಿಯೇಟರ್‌ನಲ್ಲಿ ನೋಡಬೇಕಿತ್ತು" ಎಂದು ಬೇಸರ ವ್ಯಕ್ತಪಡಿಸುವುದನ್ನು ಬಿಡಿ. ಸಿನಿಮಾ ಚಿತ್ರಮಂದಿರದಲ್ಲಿ ಇರುವಾಗಲೇ ಬಂದು ನೋಡಿ ಎಂದು ಕೆಲವರು ಮನವಿ ಮಾಡುತ್ತಿದ್ದಾರೆ.

ಮಲ್ಟಿಪ್ಲೆಕ್ಸ್ ಸೇರಿದಂತೆ ಆಯ್ದ ಚಿತ್ರಮಂದಿರಗಳಲ್ಲಿ ಮಾತ್ರ 'ಅಜ್ಞಾತವಾಸಿ' ಸಿನಿಮಾ ಬಿಡುಗಡೆಯಾಗಿದೆ. ಇದು ಕೆಲವರ ಬೇಸರಕ್ಕೆ ಕಾರಣವಾಗಿದೆ. ನಮ್ಮ ಸಮೀಪದ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನವಾದರೆ ಖಂಡಿತ ನೋಡುತ್ತೇವೆ. ಅದು ಬಿಟ್ಟು ಬಹಳ ದೂರಕ್ಕೆ ಪ್ರಯಾಣಿಸಿ ನೋಡುವುದು ಹೇಗೆ? ಎನ್ನುತ್ತಿದ್ದಾರೆ.

ಹೇಮಂತ್ ರಾವ್ ಟ್ವೀಟ್

"3 ದಿನಗಳ ಅಂಕಿಅಂಶಗಳ ಪ್ರಕಾರ, ಸುಮಾರು 15 ಸಾವಿರ ಜನ 'ಅಜ್ಞಾತವಾಸಿ' ಸಿನಿಮಾ ನೋಡಿದ್ದಾರೆ. ನೋಡಿದವರು ಹಾಗೂ ವಿಮರ್ಶಕರಿಂದ ಚಿತ್ರದ ಬಗ್ಗೆ ಉತ್ತಮ ವಿಮರ್ಶೆ ಬಂದಿವೆ. ನೀವು ಅದೇ ರೀತಿಯ ಮಾತುಗಳನ್ನು ಕೇಳಿದ್ದರೆ, ಬಂದು ಸಿನಿಮಾ ನೋಡಿ ಗೆಲ್ಲಿಸಿ" ಎಂದು ನಿರ್ಮಾಪಕ ಹೇಮಂತ್ ರಾವ್ ಮನವಿ ಮಾಡಿದ್ದಾರೆ.

ಮೂರು ದಿನಕ್ಕೆ 15 ಸಾವಿರ ಜನ ಸಿನಿಮಾ ವೀಕ್ಷಿಸಿದ್ದಾರೆ. ಸರಾಸರಿ ಒಂದು ಟಿಕೆಟ್ ದರ 150 ರೂಪಾಯಿ ಎಂದುಕೊಂಡರೂ ಈಗಾಗಲೇ ಸಿನಿಮಾ 20 ಲಕ್ಷಕ್ಕೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ.

sacnilk.com ವರದಿ

ಸಿನಿಮಾ ಟ್ರೇಡಿಂಗ್ ವೆಬ್‌ಸೈಟ್ sacnilk. com ಕೂಡ 'ಅಜ್ಞಾತವಾಸಿ' ಚಿತ್ರದ 3 ದಿನಗಳ ಕಲೆಕ್ಷನ್ ಬಗ್ಗೆ ಮಾಹಿತಿ ನೀಡಿದೆ. ವಿಶ್ವದಾದ್ಯಂತ ಸಿನಿಮಾ ಮೊದಲ 3 ದಿನಕ್ಕೆ 28 ಲಕ್ಷ ರೂ. ಗಳಿಸಿರುವುದಾಗಿ ವರದಿ ಮಾಡಿದೆ.

'ಅಜ್ಞಾತವಾಸಿ' ಓಟಿಟಿ

ಅಂದಹಾಗೆ 'ಅಜ್ಞಾತವಾಸಿ' ಸಿನಿಮಾ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಜೀ ಸಂಸ್ಥೆಯ ಪಾಲಾಗಿದೆ ಎನ್ನಲಾಗ್ತಿದೆ. ಸಾಮಾನ್ಯವಾಗಿ ಯಾವುದೇ ಸಿನಿಮಾ ತೆರೆಕಂಡ 40 ದಿನಗಳ ಬಳಿಕ ಓಟಿಟಿಗೆ ಬರುತ್ತದೆ. ಜೀ ಕನ್ನಡ ವಾಹಿನಿ ಹಾಗೂ ಜೀ-5 ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಏಕಕಾಲಕ್ಕೆ ಸಿನಿಮಾ ಪ್ರದರ್ಶನ ಆರಂಭವಾಗುವ ಸಾಧ್ಯತೆಯಿದೆ.

More from Filmibeat

English summary
Agnyathavasi collection; From 3 days, approximately 15,000 people have seen Agnyathavasi, Hemanth Rao tweet
Read more about: hemanth rao sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X