ಡಾರ್ಲಿಂಗ್ ಪ್ರಭಾಸ್ ಹೆಸರಿನಲ್ಲಿದ್ದ ₹160.76 ಕೋಟಿಯ ದಾಖಲೆಯನ್ನು ಮುರಿದ ಅಜಯ್ ದೇವಗನ್..!
ಯಾವುದೇ ಚಿತ್ರವಾದರು ಕೂಡ ಬಿಡುಗಡೆಯಾದ ನಂತರ ಚಿತ್ರಮಂದಿರ ತುಂಬಬೇಕು, ಚಿತ್ರ ಗೆಲ್ಲಬೇಕೆಂದರೆ ಯುವ ಸಮೂಹ ಚಿತ್ರಮಂದಿರಕ್ಕೆ ಬರಬೇಕು. ಮನೆ ಮಂದಿಯೆಲ್ಲ ಜೊತೆಯಾಗಿ ಬಂದು ಚಿತ್ರವನ್ನು ನೋಡಬೇಕು. ಆಗಲೇ ಆ ಚಿತ್ರ ಗೆಲ್ಲಲು ಸಾಧ್ಯ. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯಲು ಸಾಧ್ಯ. ಆದರೆ ಈಗೀಗ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ಅಂಗೈಯಲ್ಲಿಯೇ ಮನರಂಜನೆ ಇರುವಾಗ ಚಿತ್ರಮಂದಿರಕ್ಕೆ ಯಾಕೆ ಹೋಗಬೇಕೆನ್ನುವುದು ಅನೇಕರ ವಾದ.
ಹಾಗಂಥ.. ಎಲ್ಲ ಚಿತ್ರವನ್ನು ಎಲ್ಲರೂ ಓಟಿಟಿಯಲ್ಲಿ ನೋಡುವುದಿಲ್ಲ. ಅಲ್ಲೊಂದು.. ಇಲ್ಲೊಂದು.. ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತವೆ. ಬಾಕ್ಸಾಫೀಸ್‌ನಲ್ಲಿ ಹಣವನ್ನು ಕೂಡ ಗಳಿಸುತ್ತವೆ. ಇದಕ್ಕೆ ಸದ್ಯ ಅಜಯ್ ದೇವಗನ್ ಅಭಿನಯದ ರೇಡ್ 2 ಚಿತ್ರ ಸದ್ಯದ ಉದಾಹರಣೆ.

ಹೌದು, ಚಿತ್ರವೊಂದು ತೆರೆಗೆ ಬಂದು ವಾರದೊಳಗೆ ಎತ್ತಂಗಡಿಯಾಗುವ ಈ ದಿನಗಳಲ್ಲಿ ರೇಡ್ 2 ಚಿತ್ರ ಚಿತ್ರಮಂದಿರಗಳಲ್ಲಿ 25 ದಿನ ಪ್ರದರ್ಶನವನ್ನು ಕಂಡಿದೆ. ಹಲವು ದಾಖಲೆಗಳನ್ನು ಕೂಡ ಮುರಿದಿದೆ. ಶಾರುಖ್ ಖಾನ್- ಆಮಿರ್ ಖಾನ್ ಮತ್ತು ಸಲ್ಮಾನ್ ಖಾನ್ ಚಿತ್ರಗಳನ್ನು ಹಿಂದಿಕ್ಕುವುದಲ್ಲದೇ ಪ್ರಭಾಸ್ ಅಭಿನಯದ ಚಿತ್ರದ ದಾಖಲೆಯನ್ನು ಕೂಡ ರೇಡ್ 2 ಚಿತ್ರ ಮುರಿದಿದೆ.
ಹೌದು, ಬಾಲಿವುಡ್ ಚಿತ್ರಗಳ ಅಂಕಿ- ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ರೇಡ್ 2 ಈ 26 ದಿನಗಳಲ್ಲಿ ಭಾರತದಲ್ಲಿ ₹ 162.85 ಕೋಟಿಯನ್ನು ಗಳಿಸಿದೆ. ಈ ಮೂಲಕ ಪ್ರಭಾಸ್ ಅಭಿನಯದ ಆದಿಪುರುಷ್ ಚಿತ್ರದ ಗಳಿಕೆಯನ್ನು ಹಿಂದಿಕ್ಕಿದೆ. 'ಬಾಲಿವುಡ್ ಹಂಗಾಮಾ'ದಲ್ಲಿ ವರದಿಯಾದಂತೆ ಆದಿಪುರುಷ್ ಚಿತ್ರ ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮುನ್ನ ₹160.76 ಕೋಟಿಯನ್ನು ಭಾರತದಲ್ಲಿ ಕೊಳ್ಳೆ ಹೊಡೆದಿತ್ತು. 26 ದಿನದಲ್ಲಿ ರೇಡ್ 2 ಈ ಗಡಿಯನ್ನು ದಾಟಿದೆ.
ಇನ್ನು ಕೇವಲ ಭಾರತದ ಗಳಿಕೆ ಮಾತ್ರವಲ್ಲ ವರ್ಲ್ಡ್ ವೈಡ್ ಗಳಿಕೆಯಲ್ಲಿ ಕೂಡ ಆದಿಪುರುಷ್ ಚಿತ್ರವನ್ನು ರೇಡ್ 2 ಹಿಂದಿಕ್ಕಿದೆ. ಕೊಯಿ ಮೊಯಿ ವರದಿಯ ಪ್ರಕಾರ ಆದಿಪುರುಷ್ ಚಿತ್ರದ ವರ್ಲ್ಡ್ ವೈಡ್ ಕಲೆಕ್ಷನ್ ₹226.48 ಕೋಟಿಯಾಗಿತ್ತು. ಸದ್ಯ ರೇಡ್ 2 ವಿಶ್ಯದಾಂದ್ಯತದ ಗಳಿಕೆ ₹228.79 ಕೋಟಿಯಾಗಿದೆ. ಇನ್ನು, ಚಿತ್ರ ಇನ್ನು ಹಲವು ಚಿತ್ರಮಂದಿರಗಳಲ್ಲಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ಚಿತ್ರದ ಗಳಿಕೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಿದ್ದರೆ ರೇಡ್ 2 ಈ ನಾಲ್ಕು ವಾರಗಳಲ್ಲಿ ಗಳಿಸಿದ ಹಣವೆಷ್ಟು ? ಇಲ್ಲಿದೆ ಅಂಕಿ- ಅಂಶ
ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ರೇಡ್ 2 ಚಿತ್ರದ ನಾಲ್ಕು ವಾರದ ಗಳಿಕೆ ಈ ಕೆಳಗಿನಂತೆ ಇದೆ
ಮೊದಲ ವಾರದ ಗಳಿಕೆ - ₹ 95.75 ಕೋಟಿ
ಎರಡನೇ ವಾರದ ಗಳಿಕೆ - ₹ 40.6 ಕೋಟಿ
ಮೂರನೇ ವಾರದ ಗಳಿಕೆ -₹ 20.5 ಕೋಟಿ
ಮೂರು ವಾರದ ಒಟ್ಟು ಗಳಿಕೆ - ₹ 156.85 ಕೋಟಿ
23ನೇ ದಿನದ ಗಳಿಕೆ - ₹1 ಕೋಟಿ
24ನೇ ದಿನದ ಗಳಿಕೆ - ₹1.85 ಕೋಟಿ
25ನೇ ದಿನದ ಗಳಿಕೆ - ₹2.4 ಕೋಟಿ
26ನೇ ದಿನದ ಗಳಿಕೆ - ₹76 ಲಕ್ಷ* { ಅಂದಾಜು }
ಒಟ್ಟು ಗಳಿಕೆ - ₹162.86 ಕೋಟಿ
ಒಟ್ನಲ್ಲಿ ಸದ್ಯ ರೇಡ್ 2 ಚಿತ್ರ ಮಕಾಡೆ ಮಲಗಿದ್ದ ಬಾಲಿವುಡ್‌ಗೆ ಹೊಸ ಹುರುಪನ್ನು ನೀಡಿದೆ. ಜೂನ್ 6ರಂದು ಹೌಸ್‌ಫುಲ್ 5 ಚಿತ್ರ ಬಿಡುಗಡೆಯಾಗಲಿದ್ದು ರೇಡ್ 2 ಬಾಕ್ಸಾಫೀಸ್‌ನಲ್ಲಿ ಇನ್ನು ಎಷ್ಟು ಹಣ ದೋಚಬಹುದು ಎನ್ನುವ ಕುತೂಹಲ ಈಗ ಚಿತ್ರಪ್ರೇಮಿಗಳಲ್ಲಿದೆ. ₹200 ಕೋಟಿಯ ಗಡಿಯನ್ನು ರೇಡ್ 2 ದಾಟುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ಕೊಯಿ ಮೊಹಿ ವೆಬ್ ಸೈಟ್, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಕನ್ನಡ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











