De De Pyaar De 2 Box Office Day5 ; ಬಾಕ್ಸಾಫೀಸ್‌ನಲ್ಲಿ ಅಜಯ್ ದೇವಗನ್,ಮಾಧವನ್ ಜಾದೂ-5ನೇ ದಿನ 17.65% ಏರಿಕೆ

ಈಗೀಗ ಯಾವ ಭಾಷೆಯಲ್ಲಿ ನೋಡಿದರೂ ಕೂಡ ಸಿಕ್ವೆಲ್‌ಗಳ ಟ್ರೆಂಡ್ ಶುರುವಾಗಿದೆ. ಎಲ್ಲರಲ್ಲಿಯೂ ಈಗ ತಮ್ಮದೇ ಆದ ಫ್ರಾಂಚೈಸಿಯನ್ನು ತೆರೆಯುವ ಬಯಕೆ. ತಮ್ಮದೇ ಆದ ಯೂನಿವರ್ಸ್‌ಗೆ ಪ್ರೇಕ್ಷಕರನ್ನು ಕರೆದೊಯ್ಯುವ ಆಸೆ. ಆದರೆ .. ಅದು ಸುಲಭ ಅಲ್ಲ. ಯಾಕೆಂದರೆ ಮೊದಲ ಭಾಗ ಗೆದ್ದ ಹಿನ್ನೆಲೆ ಎರಡನೇ ಭಾಗದ ಮೇಲೆ ನಿರೀಕ್ಷೆಗಳು ಹೆಚ್ಚಿರುತ್ತವೆ. ಎರಡನೇ ಭಾಗ ಗೆದ್ದರೆ ಮೂರನೇ ಭಾಗದ..

ಮೇಲಿನ ನಿರೀಕ್ಷೆ ಇನ್ನೂ ಹೆಚ್ಚಾಗುತ್ತೆ. ಅಪ್ಪಿ.. ತಪ್ಪಿ.. ಚೂರು ಯಾಮಾರಿದರೂ ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತೆ. ಚಿತ್ರ ಪಾತಾಳಕ್ಕೆ ಬೀಳುವ ಸಾಧ್ಯತೆ ಇರುತ್ತೆ. ಕೇವಲ ಸ್ಟಾರ್‌ ವ್ಯಾಲ್ಯೂ ಎನ್‌ ಕ್ಯಾಶ್ ಮಾಡಿಕೊಂಡು ಇಂದಿನ ಕಾಲದಲ್ಲಿ ಕ್ಯಾಶ್ ಎಣಿಸುವುದು ತುಂಬಾನೇ ಕಷ್ಟ. ಇದಕ್ಕೆ ಕೈಗನ್ನಡಿ ಎಂಬಂತೆ ''ವಾರ್ 2''.. ''ಧಡಕ್ 2''.. ''ಸರ್ದಾರ್ 2''.. ''ಕೇಸರಿ 2''..

Ajay Devgn s De De Pyaar De 2 Roars Back Day 5 Collection Registers Crucial Growth 50 CR Awaits

ಹೀಗೆ ಹಲವು ಚಿತ್ರಗಳು ಸೋತಿವೆ. ಪ್ರೇಕ್ಷಕರ ನಿರೀಖ್ಷೆಯ ಮಟ್ಟ ತಲುಪಲಾರದೇ ನಿರಾಸೆಯನ್ನು ಮಾಡಿವೆ. ಈ ಸಾಲಿಗೆ ''ದೇ ದೇ ಪ್ಯಾರ್ ದೇ 2'' ಕೂಡ ಸೇರಿಕೊಳ್ಳುತ್ತಾ ಅಥವಾ ಗೆಲುವಿನ ದಡ ತಲುಪುತ್ತಾ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ಅಜಯ್ ದೇವಗನ್ ಮತ್ತು ಆರ್ ಮಾಧವನ್ ಮ್ಯಾಜಿಕ್ ಬಾಕ್ಸಾಫೀಸ್‌ನಲ್ಲಿ ಕೆಲಸ ಮಾಡುತ್ತಿದೆ. ಇದಕ್ಕೆ ಪುರಾವೆ ಎನ್ನುವಂತೆ ''ದೇ ದೇ ಪ್ಯಾರ್ ದೇ 2'' ಈ 5 ದಿನದಲ್ಲಿ ₹ 44 ಕೋಟಿ ಗಳಿಸಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ.

ಇನ್ನು ಸಾಮಾನ್ಯವಾಗಿ ಸೋಮವಾರದ ನಂತರ ಚಿತ್ರ ಯಾವುದೇ ಇರಲಿ.. ಆ ಚಿತ್ರದ ಸ್ಟಾರ್ ಯಾರೇ ಇರಲಿ.. ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬರುವುದು ಸರ್ವೆ ಸಾಮಾನ್ಯ. ಆದರೆ.. ಅಚ್ಚರಿ ಎಂಬಂತೆ ನಿನ್ನೆ ಐದನೇ ದಿನ ( ಮಂಗಳವಾರ ) ಚಿತ್ರದ ಗಳಿಕೆ ನಾಲ್ಕನೇ ದಿನಕ್ಕಿಂತ ( ಸೋಮವಾರ ) ಹೆಚ್ಚಾಗಿದೆ. ಸೋಮವಾರ ₹ 4.25 ಕೋಟಿ ಗಳಿಸಿದ್ದ ಚಿತ್ರ ನಿನ್ನೆ ( ಮಂಗಳವಾರ-ನವೆಂಬರ್ 18 ) ಅಂದಾಜು ₹ 5 ಕೋಟಿ ಹಣವನ್ನು ದೋಚಿದೆ ಎಂದು ಸ್ಯಾಕ್ನಿಲ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

Ajay Devgn s De De Pyaar De 2 Roars Back Day 5 Collection Registers Crucial Growth 50 CR Awaits

''ಸ್ಯಾಕ್ನಿಲ್'' ಪ್ರಕಾರ ''ದೇ ದೇ ಪ್ಯಾರ್ ದೇ 2'' ಚಿತ್ರದ ಐದು ದಿನದ ಗಳಿಕೆ ಈ ಕೆಳಗಿನಂತೆ ಇದೆ

ಮೊದಲ ದಿನ ( ಶುಕ್ರವಾರ ) : ₹8.75 ಕೋಟಿ
ಎರಡನೇ ದಿನ ( ಶನಿವಾರ ) : ₹12.25 ಕೋಟಿ
ಮೂರನೇ ದಿನ ( ಭಾನುವಾರ ) : ₹13.75 ಕೋಟಿ
ನಾಲ್ಕನೇ ದಿನ ( ಸೋಮವಾರ) : ₹ 4.25 ಕೋಟಿ
ಐದನೇ ದಿನ ( ಮಂಗಳವಾರ ) : ₹5 ಕೋಟಿ * ಅಂದಾಜು


ಒಟ್ಟು ಗಳಿಕೆ - ₹44 ಕೋಟಿ

ಒಟ್ನಲ್ಲಿ ಸದ್ಯ ವಾರಾಂತ್ಯದಲ್ಲಿ ''ದೇ ದೇ ಪ್ಯಾರ್ ದೇ 2'' ಚಿತ್ರದ ಗಳಿಕೆಯಲ್ಲಿ ಚೇತರಿಕೆ ಕಂಡು ಬಂದಿದೆ. ₹ 50 ಕೋಟಿಯ ಗಡಿಯತ್ತ ಚಿತ್ರ ಬಂದು ತಲುಪಿದೆ. ಇನ್ನು ಈ ವಾರ ಫರ್ಹಾನ್ ಅಖ್ತರ್ ಅಭಿನಯದ ''120 ಬಹದ್ದೂರ್'' .. ವಿವೇಕ್ ಓಬೆರಾಯ್.. ರಿತೇಶ್ ದೇಶಮುಖ್ ಮತ್ತು ಅಪ್ತಾಬ್ ಶಿವದಾಸನಿ ಅವರ ಬ್ಲಾಕ್ ಬಸ್ಟರ್ ಫ್ರಾಂಚೈಸಿ ''ಮಸ್ತಿ 4''.. ಬಿಡುಗಡೆಯಾಗುತ್ತಿವೆ. ಇದರ ನಡುವೆ ನವೆಂಬರ್ 21ರಿಂದ ಅಮೆಜಾನ್‌ನಲ್ಲಿ ಮನೋಜ್ ಬಾಜ್‌ಪೈಯಿ ಅಭಿನಯದ ''ದಿ ಫ್ಯಾಮಿಲಿ ಮ್ಯಾನ್ 3'' ಕೂಡ ಪ್ರಸಾರವಾಗಲಿದೆ. ಈ ಎಲ್ಲಾ ಚಿತ್ರಗಳಿಂದ ''ದೇ ದೇ ಪ್ಯಾರ್ ದೇ 2'' ಗಳಿಕೆಯಲ್ಲಿ ಕುಸಿತ ಕಂಡು ಬರಲಿದೆಯಾ..? ನೂರು ಕೋಟಿಯ ಗಡಿಯನ್ನು ಚಿತ್ರ ತಲುಪುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Ajay Devgn's latest film, 'De De Pyaar De 2,' shows resilience! Get the detailed Day 5 Box Office report: ₹44 crore collected and the crucial surge needed to hit the ₹50 CR milestone.
Read more about: ajay devgn bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X