Son Of Sardaar 2 BoxOffice Day1;ಅಜಯ್ ದೇವಗನ್‌ಗೆ ಕ್ಯಾರೇ ಎನ್ನದ ಪ್ರೇಕ್ಷಕರು,ಮೊದಲ ದಿನವೇ ಮುಗ್ಗರಿಸಿದ ಸರ್ದಾರ್

ಈಗೀಗ ಸುಮಾರು ಸಿನಿಮಾಗಳು ಬರುತ್ತಿವೆ, ಹೋಗುತ್ತಿವೆ. ಆದರೆ ಗೆಲುವು ಮಾತ್ರ ಬಹುತೇಕರ ಕೈಗೆ ಸಿಗುತ್ತಿಲ್ಲ. ಹೇಗಾದರೂ ಮಾಡಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದುತರಲು ಚಿತ್ರತಂಡಗಳು ಹರಸಾಹಸ ಮಾಡುತ್ತಿವೆ. ನಾನಾ ಕಸರತ್ತುಗಳನ್ನು ಮಾಡುತ್ತಿವೆ. ಆದರೆ.. ಅಲ್ಲೊಂದು.. ಇಲ್ಲೊಂದು ಸಿನಿಮಾಗಳು ಮಾತ್ರ ಗೆಲ್ಲುತ್ತಾವೆ. ಪವಾಡಗಳನ್ನು ಮಾಡುತ್ತಾವೆ. ಮಿಕ್ಕಂತೆ ಫಲಿತಾಂಶ ಮಾತ್ರ ಶೂನ್ಯ. ಇದು ಕೇವಲ ಕನ್ನಡ ಚಿತ್ರರಂಗದ ಕಥೆ ಮಾತ್ರ ಅಲ್ಲ, ಎಲ್ಲ ಭಾಷೆಯ ಕಥೆ ಕೂಡ ಒಂದೇ ತರ ಇದೆ.

ಇನ್ನು ಮೊದಲಾದರೆ ಹೊಸಬರು ಮಾತ್ರ ಗೆಲ್ಲಲು ಹೆಣಗುತ್ತಿದ್ದರು. ಹೊಸಬರ ಪ್ರಯತ್ನ-ಪ್ರಯೋಗಗಳು ಸ್ಟಾರ್‌ಗಳ ಬಿಗ್ ಬಜೆಟ್ ಕಮರ್ಷಿಯಲ್ ಚಿತ್ರಗಳ ಮುಂದೆ ಕಳೆದು ಹೋಗುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹೊಸಬರ ಮುಂದೆ ಸೂಪರ್ ಸ್ಟಾರ್‌ಗಳು ಮಂಕಾಗುತ್ತಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಹಣ ಗಳಿಸಲು ಪರದಾಡುತ್ತಿದ್ದಾರೆ. ಉದಾಹರಣೆಗೆ ಅಜಯ್ ದೇವಗನ್.

Ajay Devgn s Star Power Fails Son of Sardaar 2 Day 1 Box Office Collection a Muted 6 75 Crore

ಹೌದು, ಈಗೇನಿದ್ದರೂ ಸಿಕ್ವೆಲ್‌ಗಳ ಕಾಲ. ಆ ಭಾಷೆ ಈ ಭಾಷೆ ಅಂತಲ್ಲ. ಎಲ್ಲ ಭಾಷೆಯಲ್ಲಿ ಕೂಡ ಈ ಸಿಕ್ವೆಲ್ ಯುಗ ಆರಂಭವಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ನಿನ್ನೆ [ ಆಗಸ್ಟ್ 1 ] ಅಜಯ್ ದೇವಗನ್ ಅಭಿನಯದ ''ಸನ್ ಆಫ್ ಸರ್ದಾರ್ 2'' ಚಿತ್ರ ತೆರೆಗೆ ಬಂದಿದೆ. ಆದರೆ.. ಪ್ರೇಕ್ಷಕರು ಮಾತ್ರ ಈ ಚಿತ್ರಕ್ಕೆ ಕ್ಯಾರೇ ಎನ್ನಲಿಲ್ಲ.

''ಸ್ಯಾಕ್ನಿಲ್'' ವೆಬ್ ಸೈಟ್ ಪ್ರಕಾರ ''ಸನ್‌ ಆಫ್ ಸರ್ದಾರ್ 2'' ನಿನ್ನೆ ಕೇವಲ ₹ 6.75 ಕೋಟಿ ಮಾತ್ರ ಗಳಿಸಿದೆ. ಅಜಯ್ ದೇವಗನ್ ಅವರ ವರ್ಚಸ್ಸಿಗೆ ಹೇಗೆ ನೋಡಿದರೂ ಕೂಡ ಈ ಗಳಿಕೆ ಕಡಿಮೆಯೇ.

ಇನ್ನು, ಬಾಲಿವುಡ್‌ನಲ್ಲಿ ಸದ್ಯ ''ಸೈಯಾರ'' ಅಲೆ ಇನ್ನೂ ಇದೆ. ಮತ್ತೊಂದು ಕಡೆ ನಮ್ಮ ಕನ್ನಡದ ನಿರ್ಮಾಣ ಸಂಸ್ಥೆ ''ಹೊಂಬಾಳೆ'' ನಿರ್ಮಾಣದ ''ಮಹಾವತಾರ್ ನರಸಿಂಹ'' ಚಿತ್ರದ ಅಬ್ಬರ ಇದೆ. ಈ ಹಿನ್ನೆಲೆ.. ಗಳಿಕೆ ಕಡಿಮೆಯಾಗಿದೆ ಎನ್ನುವ ವಾದವನ್ನು ಒಪ್ಪಬಹುದಾದರೂ ಚಿತ್ರವನ್ನು ನೋಡಿರುವ ಪ್ರೇಕ್ಷಕರು ಈ ಚಿತ್ರವನ್ನು ಸಾರಾಸಗಟವಾಗಿ ತಳ್ಳಿ ಹಾಕಿದ್ದಾರೆ. ವಿಮರ್ಷಕರು ಕೂಡ ಚಿತ್ರದ ಕೈ ಬಿಟ್ಟಿದ್ದಾರೆ.

ಹೀಗಾಗಿ ಮೊದಲ ದಿನ ₹ 6.75ಕೋಟಿ ತೀರಾ ಸಾಧಾರಣ ಓಪನಿಂಗ್ ಪಡೆದ ''ಸನ್ ಆಫ್ ಸರ್ದಾರ್ 2'' ಚೇತರಿಸಿಕೊಳ್ಳುವುದು ಕಷ್ಟ ಎನ್ನುವ ಮಾತು ಸದ್ಯ ಬಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ.

ajay-devgns-star-power-fails-son-of-sardaar-2-day-1-box-office-collection-a-muted-6-75-crore

ಅಂದ್ಹಾಗೇ 2022ರ ನಂತರ ಅಜಯ್ ದೇವಗನ್ ಅಭಿನಯದ 9 ಚಿತ್ರಗಳು ತೆರೆಗೆ ಬಂದಿವೆ. ಆದರೆ ಈ 9 ಚಿತ್ರಗಳಲ್ಲಿ ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಂ ಅಗೇನ್, ಮತ್ತು ಈ ವರ್ಷ ತೆರೆಗೆ ಬಂದ ''ರೇಡ್ 2'' ಚಿತ್ರವನ್ನು ಹೊರತು ಪಡಿಸಿದರೆ ಅಜಯ್ ದೇವಗನ್ ಅಭಿನಯದ ಬೇರೆ ಯಾವ ಚಿತ್ರ ಕೂಡ ಮೊದಲ ದಿನ ₹16 ಕೋಟಿಯ ಗಡಿಯನ್ನು ಕೂಡ ಪಾರು ಮಾಡಿಲ್ಲ.

''ಸನ್‌ ಆಫ್ ಸರ್ದಾರ್‌'' 2 ಈ 16 ಕೋಟಿಯ ಗಡಿಯನ್ನು ದಾಟುತ್ತೆ, ''ಸೈಯಾರ'' ಅಲೆಯಲ್ಲಿ ತೇಲುತ್ತಿರುವ ಬಾಲಿವುಡ್‌ಗೆ ಮತ್ತಷ್ಟು ಹುರುಪು ತುಂಬುತ್ತೆ ಎಂದು ಎಲ್ಲ ಅಂದುಕೊಂಡಿದ್ದರು. ಆದರೆ ಮೊದಲ ದಿನವೇ ನಿರೀಕ್ಷೆ ಹುಸಿಯಾಗಿದೆ.

ಸದ್ಯ ಮೊದಲ ದಿನ ₹ 6.75ಕೋಟಿ ಹಣವನ್ನು ಗಳಿಸಿರುವ ''ಸನ್‌ ಆಫ್ ಸರ್ದಾರ್‌ 2'' ಇಂದು ಮತ್ತು ನಾಳೆ ಕೂಡ ಬಾಕ್ಸಾಫೀಸ್‌ನಲ್ಲಿ ಪರದಾಡಿದರೆ ಅಜಯ್ ದೇವಗನ್ ವೃತ್ತಿ ಬದುಕಿನ ಕಳಪೆ ಚಿತ್ರವಾಗಿ ಹೊರ ಹೊಮ್ಮಲಿದೆ. ವಾರಾಂತ್ಯದ ಗಳಿಕೆಯ ಮೇಲಿಗ ಎಲ್ಲರ ಕಣ್ಣಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Find out why Ajay Devgn's highly anticipated comedy 'Son of Sardaar 2' had a lackluster opening day, collecting only ₹6.75 crore. Dive into the box office report and see if the film can turn its fortunes around.
Read more about: ajay devgn bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X