Ajey BoxOffice Day 2 ;ಪ್ರೇಕ್ಷಕರ ಬರ ಎದುರಿಸುತ್ತಿರುವ ಫೈರ್ ಬ್ರಾಂಡ್ ಸಿಎಂ ಯೋಗಿ ಆದಿತ್ಯನಾಥ್ ಜೀವನಾಧಾರಿತ ಚಿತ್ರ
1972ರ ಜೂನ್ 5ರಂದು ಉತ್ತರಾಖಂಡ್ ಗೆ ಸೇರಿದ ಪೌರಿ ಗರ್ವಾಲ್ ನ ಪಾಂಚೇರ್ ನಲ್ಲಿ ಜನ್ಮ ಪಡೆದವರು ಯೋಗಿ. ಇವರ ಮೂಲ ಹೆಸರು ಅಜಯ್ ಮೋಹನ್ ಬಿಶ್ತ್. ತಮ್ಮ 22ರ ಹರೆಯದಲ್ಲಿ ಮನೆಯಿಂದ ಹೊರ ಬಂದು ಸನ್ಯಾಸತ್ವ ಸ್ವೀಕರಿಸಿದ ಇವರು ಆ ನಂತರ ಗೋರಖ್‌ಪುರದ ಪ್ರಸಿದ್ಧ ಗೋರಖ್‌ನಾಥ್ ಮಠದಲ್ಲಿ ಮಹಂತ್ ಅವೈದ್ಯನಾಥ್ ಅವರ ಶಿಷ್ಯರಾದರು. ಯೋಗಿ ಆದಿತ್ಯನಾಥ್ ಎಂದು ತಮ್ಮ ಹೆಸರು ಬದಲಿಸಿಕೊಂಡರು.
ಇನ್ನೂ ಇವರ ರಾಜಕೀಯ ಜೀವನ ಶುರುವಾಗಿದ್ದು 1996-98ರ ಆಸು ಪಾಸು. 1998ರಲ್ಲಿ ಗೋರಖ್ ಪುರ್ ನಲ್ಲಿ ಚುನಾವಣೆಗೆ ನಿಂತ ಆದಿತ್ಯನಾಥ್ ನೇರ ಸಂಸತ್ತಿಗೆ ಪ್ರವೇಶ ಗಿಟ್ಟಿಸಿದ್ದರು. ಅಲ್ಲಿಂದ ಮುಂದೆ ಅವರನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಾಗಲೇ ಇಲ್ಲ. ಐದು ಬಾರಿ ಭಾರೀ ಮತಗಳ ಅಂತರದಿಂದ ಗೋರಖ್ ಪುರ್ ಎಂಪಿ ಸ್ಥಾನವನ್ನು ಕೈವಶ ಮಾಡಿಕೊಂಡಿದ್ದರು ಆದಿತ್ಯನಾಥ್.

ಇಂಥಾ ಯೋಗಿ ಆದಿತ್ಯನಾಥ್ ಅವರ ಜೀವನಾಧಾರಿತ ಚಿತ್ರ ''ಅಜೇಯ್'' ಕಳೆದ ಶುಕ್ರವಾರ (ಸೆಪ್ಟೆಂಬರ್ 21) ತೆರೆಗೆ ಬಂದಿದೆ. ಆದರೆ.. ಹಿಂದುತ್ವದ ಮುಖ. ಅಭಿವೃದ್ದಿಯ ಚಿಂತಕ ಯೋಗಿ ಆದಿತ್ಯನಾಥ್ ಹೋದಲ್ಲಿ.. ಬಂದಲ್ಲಿ.. ಜೈಘೋಷ ಕೂಗುವ ಜನ ಮಾತ್ರ ಚಿತ್ರಮಂದಿರದ ಆವರಣದಲ್ಲಿ ಕಾಣಿಸುತ್ತಿಲ್ಲ. ಯೋಗಿ ಆದಿತ್ಯ ನಾಥ್ ಅವರ ಬದುಕನ್ನು ಬೆಳ್ಳಿ ಪರದೆಯ ಮೇಲೆ ಕಣ್ತುಂಬಿಕೊಳ್ಳುವ ಸುವರ್ಣ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುತ್ತಿಲ್ಲ. ಇದಕ್ಕೆ ಬಾಕ್ಸಾಫೀಸ್‌ನ ಅಂಕಿ ಅಂಶಗಳೇ ಸಾಕ್ಷಿ.
ಹೌದು.. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಅಜೇಯ್ ಚಿತ್ರದ ಎರಡು ದಿನದ ಲೆಕ್ಕವನ್ನು ಹಂಚಿಕೊಂಡಿದೆ. ಆ ಪ್ರಕಾರ ಮೊದಲ ದಿನ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು ಕೇವಲ ₹ 25 ಲಕ್ಷ ಮಾತ್ರ. ಇನ್ನು ನಿನ್ನೆ (ಸೆಪ್ಟೆಂಬರ್ 20) ಈ ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡು ಬಂದಿದೆ. ಆದರೆ.. ಅದು ಕೂಡ ₹10 ಲಕ್ಷ ಮಾತ್ರ. ಈ ಮೂಲಕ ಎರಡು ದಿನದಲ್ಲಿ ₹60 ಲಕ್ಷ ಹಣವನ್ನು ''ಅಜೇಯ್'' ಚಿತ್ರ ದೋಚಿದೆ.

ಸ್ಯಾಕ್ನಿಲ್ ಪ್ರಕಾರ ''ಅಜೇಯ್'' ಚಿತ್ರದ ಮೊದಲ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ [ಶುಕ್ರವಾರ] ₹ 0.25 ಲಕ್ಷ
ಎರಡನೇ ದಿನ [ಶನಿವಾರ] ₹ 0.35 ಲಕ್ಷ *ಅಂದಾಜು
ಒಟ್ಟು ಗಳಿಕೆ ₹ 0.60 ಲಕ್ಷ
ಹೀಗೆ ಮೊದಲ ಎರಡು ದಿನದಲ್ಲಿ ₹ 0.60 ಲಕ್ಷ ಗಳಿಸಿದ ಈ ಚಿತ್ರಕ್ಕೆ ''ಜಾಲಿ ಎಲ್‌ಎಲ್‌ಬಿ 3'' ತಲೆ ನೋವಾಗಿದೆ. ಯೋಗಿಯ ಆತ್ಮಕಥೆಗೆ ಜೈಕಾರ ಹಾಕುವುದನ್ನು ಮರೆತು ಅನೇಕರು ''ಜಾಲಿ''ಗೆ ಜೈಕಾರ ಹಾಕುತ್ತಿದ್ದಾರೆ. ಒಟ್ನಲ್ಲಿ ಸದ್ಯ ''ಅಜೇಯ್'' ಚಿತ್ರದ ಮೊದಲ ಎರಡು ದಿನದ ಗಳಿಕೆ ನಿರಾಶಾದಾಯಕವಾಗಿದೆ. ಇಂದು(ಸೆಪ್ಟೆಂಬರ್ 21) ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡು ಬರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. ಒಂದು ವೇಳೆ ಇಂದು ಈ ಚಿತ್ರದ ಗಳಿಕೆಯಲ್ಲಿ ಸುಧಾರಣೆ ಕಂಡು ಬರದಿದ್ದರೆ ₹1 ಕೋಟಿಯ ಗಡಿಯನ್ನು ಕೂಡ ''ಅಜೇಯ್'' ಬಾಕ್ಸಾಫೀಸ್‌ನಲ್ಲಿ ದಾಟುವುದು ಅನುಮಾನ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











