Akhanda 2 Day Boxoffice: ನೆಗೆಟಿವ್ ಟಾಕ್ ನಡುವೆ 'ಅಖಂಡ- 2' ಮೊದಲ ದಿನ ಗಳಿಸಿದ್ದೆಷ್ಟು?

ಬಾಲಯ್ಯ ನಟನೆಯ 'ಅಖಂಡ- 2' ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿದೆ. ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಗುರುವಾರವೇ ಚಿತ್ರದ ಪ್ರೀಮಿಯರ್ ಶೋಗಳು ನಡೆದಿತ್ತು. ಬಳಿಕ ಮೊದಲ ದಿನದ ಬುಕ್ಕಿಂಗ್ ಜೋರಾಗಿತ್ತು. ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿದ್ದರು. ಆದರೆ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಆದರೂ ಬಾಕ್ಸಾಫೀಸ್ ಕಲೆಕ್ಷನ್ ಜೋರಾಗಿದೆ.

ಬೊಯಪಾಟಿ ಶ್ರೀನು ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಅಖಂಡ- 2' ಬಹಳ ನಿರೀಕ್ಷೆ ಹುಟ್ಟಾಕ್ಕಿತ್ತು. ಅದಕ್ಕೆ ತಕ್ಕಂತೆ ಅಡ್ವಾನ್ಸ್ ಬುಕ್ಕಿಂಗ್ ನಡೆದಿತ್ತು. ಆದರೆ ಮೊದಲ ದಿನ ನೆಗೆಟಿವ್ ಟಾಕ್ ಸಿಕ್ಕಿರುವುದರಿಂದ 2ನೇ ದಿನ ಗಳಿಕೆ ಏನಾಗುತ್ತದೆ ಎನ್ನುವ ಕುತೂಹಲ ಮೂಡಿದೆ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ಪ್ರೀಮಿಯರ್ ಶೋ ಹಾಗೂ ಮೊದಲ ದಿನ ಸಿನಿಮಾ ಎಷ್ಟು ಗಳಿಕೆ ಮಾಡಿದೆ ಎನ್ನುವ ಬಗ್ಗೆ ಚರ್ಚೆ ನಡೀತಿದೆ. ನಿರ್ಮಾಪಕರು ಕೂಡ ಈಗಾಗಲೇ ಸುದ್ದಿಗೋಷ್ಠಿ ನಡೆಸಿ ಸಂತಸ ವ್ಯಕ್ತಪಡಿಸಿದ್ದಾರೆ.

Akhanda-2 Box Office Balakrishna Breaks His Own Record Despite Mixed Reviews

ಇದು ಪಕ್ಕಾ ಬಾಲಕೃಷ್ಣ ಸ್ಟೈಲ್ ಸಿನಿಮಾ. ಲಾಜಿಕ್ ಪಕ್ಕಕ್ಕಿಟ್ಟು ನೋಡಬೇಕು. ಆದರೆ ಒಂದಷ್ಟು ಎಲಿವೇಷನ್ ಸೀನ್ಸ್ ಮಾತ್ರ ಚೆನ್ನಾಗಿದ್ದು ಇನ್ನುಳಿದಂತೆ 'ಅಖಂಡ'-2 ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗುವುದಿಲ್ಲ. ಅಧಿಕೃತವಾಗಿ ಸಿನಿಮಾ ಕಲೆಕ್ಷನ್ ಬಗ್ಗೆ ಮಾಹಿತಿ ಸಿಕ್ಕಿಲ್ಲ. www.sacnilk.com ವರದಿ ಪ್ರಕಾರ ಗುರುವಾರ ಪ್ರೀಮಿಯರ್ ಶೋಗಳಿಂದ ಅಖಂಡ- 2' ಸಿನಿಮಾ 8 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿತ್ತು. ಮೊದಲ ದಿನವಾದ ಶುಕ್ರವಾರ 22 ಕೋಟಿ ರೂ. ಸೇರಿ ಒಟ್ಟು 30 ಕೋಟಿ ರೂ. ಗಳಿಸಿದೆ.

ಭಾರತದಲ್ಲಿ ನೆಟ್ 30 ಕೋಟಿ ರೂ. ಆಗಿದ್ರೆ ವಿಶ್ವದಾದ್ಯಂತ ಗ್ರಾಸ್ ಕಲೆಕ್ಷನ್ 45 ಕೋಟಿ ರೂ. ದಾಟಿರಬಹುದು ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಬಂದಿದ್ದ ಬಾಲಯ್ಯ ನಟನೆಯ 'ಡಾಕು ಮಹಾರಾಜ್' ಸಿನಿಮಾ ಮೊದಲ ದಿನ 25 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿತ್ತು. ಹಾಗಾಗಿ ತಮ್ಮದೇ ಸಿನಿಮಾ ದಾಖಲೆ ಮುರಿದು ಬಾಲಕೃಷ್ಣ ಸದ್ದು ಮಾಡ್ತಿದ್ದಾರೆ.

Akhanda-2 Box Office Balakrishna Breaks His Own Record Despite Mixed Reviews

ಉತ್ತರ ಭಾರತದಲ್ಲಿ 800 ಸ್ಕ್ರೀನ್‌ಗಳಲ್ಲಿ 'ಅಖಂಡ- 2' ಸಿನಿಮಾ ಬಿಡುಗಡೆಯಾಗಿದೆ. ಅಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ. ವಿದೇಶಗಳಲ್ಲಿ ಕೂಡ ಚಿತ್ರಕ್ಕೆ ಒಳ್ಳೆ ರಿಪೋರ್ಟ್ ಇದೆ. ಕರ್ನಾಟಕದಲ್ಲಿ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಪೈಪೋಟಿ ಕೊಡುತ್ತಿದೆ. ಉತ್ತರ ಭಾರತದಲ್ಲಿ ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ 'ಅಖಂಡ- 2' ಆರ್ಭಟಕ್ಕೆ ಬ್ರೇಕ್ ಹಾಕಿರುವುದು ಸುಳ್ಳಲ್ಲ.

3 ವರ್ಷಗಳ ಹಿಂದೆ 'ಅಖಂಡ' ಸಿನಿಮಾ ಬಂದು ಗೆದ್ದಿತ್ತು. ಉತ್ತರ ಭಾರತದಲ್ಲಿ ಕೂಡ ಸಿನಿಮಾ ಸದ್ದು ಮಾಡಿತ್ತು. ಹಾಗಾಗಿ ದೊಡ್ಡಮಟ್ಟದಲ್ಲಿ ಸೀಕ್ವೆಲ್ ಪ್ರೇಕ್ಷಕರ ಮುಂದೆ ತರಲಾಗಿದೆ. 150ರಿಂದ 200 ಕೋಟಿ ರೂ. ಬಜೆಟ್‌ನಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಬಾಲಯ್ಯ 40 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಹಾಗಾಗಿ ಸಿನಿಮಾ ದೊಡ್ಡಮಟ್ಟದಲ್ಲಿ ಕಲೆಕ್ಷನ್ ಮಾಡಬೇಕಿದೆ. ಓಟಿಟಿ, ಟಿವಿ ರೈಟ್ಸ್‌ನಿಂದ ಒಳ್ಳೆ ಆದಾಯ ಬಂದಿದೆ. ವಿತರಕರು, ಪ್ರದರ್ಶಕರು ಸೇಫ್ ಆಗಬೇಕು ಅಂದ್ರೆ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಬೇಕು.

ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ನೆಗೆಟಿವ್ ಟಾಕ್ ಹೆಚ್ಚಾಗಿದೆ. ಹಾಗಾಗಿ ವೀಕೆಂಡ್ ಬಳಿಕ ಕಥೆಯೇನು? ಎನ್ನುವ ಮಾತುಗಳು ಕೇಳಿಬರ್ತಿದೆ. ಅದನ್ನೆಲ್ಲಾ ಮೀರಿ 'ಅಖಂಡ- 2' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುತ್ತಾ ಕಾದು ನೋಡಬೇಕಿದೆ.

More from Filmibeat

Read more about: balakrishna tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X