Akhanda-2 Box office Day 2; ಮುಗ್ಗರಿಸಿದರೂ ಜಗ್ಗದ 'ಅಖಂಡ'; 2ನೇ ದಿನದ ಕಲೆಕ್ಷನ್ ಎಷ್ಟು?

ತೆಲುಗು ಸಿನಿಮಾ 'ಅಖಂಡ- 2' ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ನೆಗೆಟಿವ್ ಟಾಕ್ ಬಂದು ಚಿತ್ರಕ್ಕೆ ಹಿನ್ನಡೆ ಆಗಿದೆ. ಆದರೂ ಕಲೆಕ್ಷನ್ ಮಾತ್ರ ಅಷ್ಟೇನು ಕುಸಿದಿಲ್ಲ. ವೀಕೆಂಡ್ ಆಗಿರುವುದರಿಂದ ಜನ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಪ್ರೀಮಿಯರ್ ಶೋ ಹಾಗೂ ಮೊದಲ 2 ದಿನದ ಕಲೆಕ್ಷನ್ ಸೇರಿ ಭಾರತದಲ್ಲೇ ಈಗಾಗಲೇ ಸಿನಿಮಾ 46 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗ್ತಿದೆ.

3 ವರ್ಷಗಳ ಹಿಂದೆ 'ಅಖಂಡ' ಸಿನಿಮಾ ಮ್ಯಾಜಿಕ್ ಅನ್ನು ಸೀಕ್ವೆಲ್ ಕ್ರಿಯೇಟ್ ಮಾಡಿಲ್ಲ. ಅದೇ ಕಾರಣಕ್ಕೆ ಪ್ರೇಕ್ಷಕರಿಗೆ ನಿರಾಸೆಯಾಗಿದೆ. ಯಾವುದೇ ನಿರೀಕ್ಷೆ ಇಲ್ಲದೇ ಬಂದಿದ್ದ ಆ ಸಿನಿಮಾ ಗೆದ್ದಿತ್ತು. ಆದರೆ 2ನೇ ಭಾಗದ ವಿಚಾರದಲ್ಲಿ ನಿರೀಕ್ಷೆ ಎವರೆಸ್ಟ್ ಎತ್ತರಕ್ಕಿತ್ತು. ಅದನ್ನು ತಲುಪುವಲ್ಲಿ ಸಿನಿಮಾ ಎಡವಿದೆ. ಬಾಲಯ್ಯನ ಅಭಿಮಾನಿಗಳಿಗೆ ಮಾತ್ರ ಸಿನಿಮಾ ಇಷ್ಟವಾಗುತ್ತಿದೆ.

Akhanda-2 Box Office Report Mixed Talk Strong Weekend Push Balayya s Film to 46 Cr Net

ಎಲಿವೇಷನ್ಸ್ ಸೀನ್ಸ್ ಬಿಟ್ಟು ಇನ್ನುಳಿದಂತೆ 'ಅಖಂಡ- 2' ಸಿನಿಮಾ ಅಷ್ಟಾಗಿ ಪ್ರೇಕ್ಷಕರನ್ನು ರಂಜಿಸುವುದಿಲ್ಲ. ಅದೇ ದೊಡ್ಡ ಹಿನ್ನಡೆ ಆಗಿದೆ. ಕೆಲ ಸನ್ನಿವೇಶಗಳಿಗೆ ಲಾಜಿಕ್ ಇಲ್ಲ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲದರ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಪ್ರೀಮಿಯರ್ ಶೋಗಳು ಹಾಗೂ ಮೊದಲ ದಿನದ ಗಳಿಕೆ ಸೇರಿ 59 ಕೋಟಿ ರೂ. ಕಲೆಕ್ಷನ್ ಆಗಿರುವುದಾಗಿ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಿತ್ತು.

2ನೇ ದಿನದ ಕಲೆಕ್ಷನ್ ವಿಚಾರಕ್ಕೆ ಬಂದರೆ ಡಲ್ ಆಗಿರುವುದು ಗೊತ್ತಾಗುತ್ತಿದೆ. ಮೊದಲ ದಿನಕ್ಕೆ ಹೋಲಿಸಿದರೆ ಕಮ್ಮಿ ಇರಬಹುದು. ಆದರೂ 2ನೇ ದಿನ 'ಅಖಂಡ- 2' ಗಳಿಕೆ ಉತ್ತಮವಾಗಿದೆ ಎಂದು ಹೇಳಲಾಗ್ತಿದೆ. sacnilk.com ವರದಿ ಪ್ರಕಾರ 2ನೇ ದಿನ ಸಿನಿಮಾ 15.50 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ.

Akhanda-2 Box Office Report Mixed Talk Strong Weekend Push Balayya s Film to 46 Cr Net

ಗುರುವಾರ ಪ್ರೀಮಿಯರ್ ಶೋಗಳಿಂದ 8 ಕೋಟಿ ರೂ. ಹಾಗೂ ಶುಕ್ರವಾರ ನೆಟ್‌ ಕಲೆಕ್ಷನ್ 30.5 ಕೋಟಿ ರೂ, ಆಗಿರುವುದಾಗಿ ವರದಿಯಾಗಿತ್ತು. ಆ ಮೂಲಕ 3 ದಿನಕ್ಕೆ 46 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದಂತಾಗಿದೆ. ಇನ್ನು ವಿಶ್ವದಾದ್ಯಂತ 3 ದಿನಕ್ಕೆ ಗ್ರಾಸ್ ಕಲೆಕ್ಷನ್ 90 ಕೋಟಿ ರೂ. ಆಗಿರುವ ನಿರೀಕ್ಷೆಯಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಉತ್ತರ ಭಾರತದಲ್ಲಿ ಕೂಡ 'ಅಖಂಡ- 2' ಆರ್ಭಟ ಜೋರಾಗಿದೆ. ಚಿತ್ರದ ಧರ್ಮ ಹಾಗೂ ಅಧರ್ಮದ ಕಥೆಯನ್ನು ಬೊಯಪಾಟಿ ಶ್ರೀನು ಹೇಳಿದ್ದಾರೆ.

ಭಾರತದಲ್ಲಿ ಚೀನಾದವರು ವಿಧ್ವಂಸ ಸೃಷ್ಟಿಸಲು ಮುಂದಾಗುವುದು, ಅದಕ್ಕೆ ಇಲ್ಲಿನವರೆ ಬೆಂಬಲ ಸೂಚಿಸುವುದು ಅವರ ವಿರುದ್ಧ ಶಿವಶಕ್ತಿ ಇರುವ 'ಅಖಂಡ' ಸಮರ ಸಾರುವ ಕಥೆ ಚಿತ್ರದಲ್ಲಿದೆ. ದ್ವಿಪಾತ್ರದಲ್ಲಿ ನಟಿಸಿ ಬಾಲಯ್ಯ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಕೆಲವರು ಫಸ್ಟ್ ಹಾಫ್ ಸೂಪರ್, ಸೆಕೆಂಡ್ ಹಾಫ್ ಬೋರಿಂಗ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಭಾನುವಾರವಾದ ಇಂದು ಸಿನಿಮಾ ದೊಡ್ಡಮಟ್ಟದಲ್ಲಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ಅಸಲಿ ಬಾಕ್ಸಾಫೀಸ್ ಪರೀಕ್ಷೆ ನಾಳೆ(ಸೋಮವಾರ) ಶುರುವಾಗಲಿದೆ.

ಬಾಲಯ್ಯ ಹಾಗೂ ಬೊಯಪಾಟಿ ಶ್ರೀನು ಕಾಂಬಿನೇಷನ್ ಸಿನಿಮಾಗಳೆಲ್ಲಾ ಗೆದ್ದಿದೆ. 'ಅಖಂಡ- 2' ಕೂಡ ಗೆಲ್ಲುವ ನಿರೀಕ್ಷೆ ಹುಟ್ಟಾಕ್ಕಿದೆ. ಆದರೆ ಎಷ್ಟರಮಟ್ಟಿಗೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತದೆ ಎನ್ನುವುದನ್ನು ಮುಂದೆ ಕಾದು ನೋಡಬೇಕಿದೆ. ಇದಕ್ಕೂ ಮುನ್ನ 'ಸಿಂಹ', 'ಲೆಜೆಂಡ್' ಹಾಗೂ 'ಅಖಂಡ' ಚಿತ್ರಗಳಿಗೆ ಈ ಜೋಡಿ ಒಟ್ಟಾಗಿತ್ತು. 'ಅಖಂಡ' ಪಾರ್ಟ್‌-3 ಮಾಡುವ ಬಗ್ಗೆ ಕೂಡ ಚರ್ಚೆ ನಡೀತಿದೆ.

ವಿಶೇಷ ಸೂಚನೆ: ಈ ಆರ್ಟಿಕಲ್‌ಗೆ ಸಂಬಂಧಿಸಿದ ಮಾಹಿತಿಯನ್ನು https://www.sacnilk.com/, ನಿರ್ಮಾಣ ಸಂಸ್ಥೆಗಳು ಹಾಗೂ ಸಾಮಾಜಿಕ ಮಾಧ್ಯಮ ಮಾಧ್ಯಮದ ವಿವರಗಳ ಆಧಾರದ ಮೇಲೆ ಸಂಗ್ರಹಿಸಲಾಗಿದೆ. ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಬಹಿರಂಗಪಡಿಸಿದ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

Read more about: balakrishna tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X