Akhanda-2 Day 3 collection: ಮಿಶ್ರಪ್ರತಿಕ್ರಿಯೆ ಸಿಕ್ರು 'ಅಖಂಡ-2' ಆರ್ಭಟ; 3 ದಿನಕ್ಕೆ ಗಳಿಸಿದ್ದೆಷ್ಟು?

ಬಾಕ್ಸಾಫೀಸ್‌ ಮತ್ತೆ ರಂಗೇರಿದೆ. ಡಿಸೆಂಬರ್‌ನಲ್ಲಿ ದೊಡ್ಡ ದೊಡ್ಡ ಚಿತ್ರರಂಗಳು ಬಂದು ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿವೆ. ಬಾಲಿವುಡ್ ಸಿನಿಮಾ 'ಧುರಂಧರ್', ಕನ್ನಡದ 'ಡೆವಿಲ್' ಜೊತೆಗೆ ತೆಲುಗಿನ 'ಅಖಂಡ- 2' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಪ್ರೇಕ್ಷಕರನ್ನು ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ. ಸ್ಟಾರ್‌ಗಳ ಸಿನಿಮಾ ಅಂದ್ರೆ ಟಾಕ್ ಏನೇ ಇದ್ರು ಫಸ್ಟ್ ವೀಕೆಂಡ್ ಹೌಸ್‌ಫುಲ್ ಆಗಿಬಿಡುತ್ತದೆ.

ಬಾಲಕೃಷ್ಣ ನಟನೆಯ 'ಅಖಂಡ'- 2 ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿರುವುದು ಗೊತ್ತೇಯಿದೆ. ಆದರೂ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಈಗಾಗಲೇ ವಿಶ್ವದಾದ್ಯಂತ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಗುರುವಾರದ ಪ್ರೀಮಿಯರ್ ಶೋಗಳು ಹಾಗೂ ಶುಕ್ರವಾರದ ಕಲೆಕ್ಷನ್ ಸೇರಿ 59 ಕೋಟಿ ರೂ. ಗ್ರಾಸ್ ಕಲೆ ಹಾಕಿರುವುದಾಗಿ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಿತ್ತು. ಶನಿವಾರ ಹಾಗೂ ಭಾನುವಾರ ಕೂಡ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.

Akhanda-2 Roars at the Box Office 100 Crore Mark in 3 Days Despite Mixed Reviews

ಹೈದರಾಬಾದ್ ಹಾಗೂ ವಿಜಯವಾಡದಲ್ಲಿ 'ಅಖಂಡ-2' ಆರ್ಭಟ ಜೋರಾಗಿದೆ. ಇನ್ನುಳಿದಂತೆ ಬೆಂಗಳೂರು, ಚೆನ್ನೈನಲ್ಲಿ ಕೂಡ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಸೋಮವಾರ ಕೂಡ ಗಂಟೆಗೆ 3 ಸಾವಿರ ಟಿಕೆಟ್ ಬುಕ್‌ಮೈ ಶೋನಲ್ಲಿ ಬುಕ್ ಆಗ್ತಿದೆ. ಈಗಾಗಲೇ 3 ದಿನಕ್ಕೆ ಬರೀ ಬುಕ್‌ಮೈ ಶೋನಲ್ಲಿ 10 ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಕ್ ಆಗಿದೆ. ಆ ಮೂಲಕ 'ಅಖಂಡ- 2' ಸಿನಿಮಾ ದಾಖಲೆ ಬರೆದು ಮುನ್ನುಗ್ಗುತ್ತಿದೆ.

'ಅಖಂಡ- 2' ಸಿನಿಮಾ ಪ್ರೀಮಿಯರ್ ಶೋ ಹಾಗೂ 3 ದಿನ ಸೇರಿ ಒಟ್ಟು 61 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ www.sacnilk ವೆಬ್‌ಸೈಟ್ ವರದಿ ಮಾಡಿದೆ. ಇತ್ತೀಚೆಗೆ ಸಕ್ಸಸ್ ಮೀಟ್ ಮಾಡಿ ಚಿತ್ರತಂಡ ಸಂತಸ ಹಂಚಿಕೊಂಡಿದ್ದಾರೆ. ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಕೂಡ ದೊಡ್ಡ ಮೊತ್ತಕ್ಕೆ ಬಿಕರಿಯಾಗಿತ್ತು. ಹಾಗಾಗಿ ನಿರ್ಮಾಪಕರು ಈಗಾಗಲೇ ಸೇಫ್ ಆಗಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.

3 ದಿನಕ್ಕೆ 100 ಕೋಟಿ ರೂ.

ಬರೀ ಭಾರತದಲ್ಲಿ 3 ದಿನಕ್ಕೆ 61 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದ್ದರೆ ವಿಶ್ವದಾದ್ಯಂತ ಗ್ರಾಸ್ ಕಲೆಕ್ಷನ್ 100 ಕೋಟಿ ರೂ. ದಾಟಿರುವ ಅಂದಾಜಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ. ಬೊಯಪಾಟಿ ಶ್ರೀನು ಹಾಗೂ ಬಾಲಯ್ಯ ಕಾಂಬೋ ಮತ್ತೊಮ್ಮೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವಂತೆ ಮಾಡಿದೆ.

ಹಿಂದಿಯಲ್ಲಿ ನೀರಸ ಪ್ರತಿಕ್ರಿಯೆ

3 ವರ್ಷಗಳ ಹಿಂದೆ ಬಂದಿದ್ದ 'ಅಖಂಡ' ಚಿತ್ರಕ್ಕೆ ಉತ್ತರ ಭಾರತದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಓಟಿಟಿಗೆ ಬಂದಮೇಲೆ ಹಿಂದಿ ಪ್ರೇಕ್ಷಕರು ಹಾಡಿ ಹೊಗಳಿದ್ದರು. ಹಾಗಾಗಿ ಈ ಬಾರಿ ಉತ್ತರ ಭಾರತದ ಪ್ರೇಕ್ಷಕರನ್ನು ಮನಸ್ಸಿನಲ್ಲಿಟ್ಟುಕೊಂಡು ಸಿನಿಮಾ ಮಾಡಿದ್ದರು. ಮುಂಬೈ, ಉತ್ತರ ಪ್ರದೇಶ ಸೇರಿದಂತೆ ಹಲವೆಡೆ ಪ್ರಚಾರ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಸಿನಿಮಾ ಹಿಂದಿ ಬೆಲ್ಟ್‌ನಲ್ಲಿ ಅಷ್ಟಾಗಿ ಸದ್ದು ಮಾಡ್ತಿಲ್ಲ.

ಡಿಸೆಂಬರ್ ಧಮಾಕ

ವರ್ಷದ ಕೊನೆ ತಿಂಗಳಲ್ಲಿ ತೆರೆಗೆ ಬರುವ ಚಿತ್ರಗಳು ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿವೆ. ಅದರಲ್ಲೂ ಡಿಸೆಂಬರ್ ಮೊದಲ ವಾರ ಪ್ರೇಕ್ಷಕರ ಮುಂದೆ ಬರುವ ಚಿತ್ರಗಳು ಜಾದೂ ಮಾಡ್ತಿವೆ. 'ಪುಷ್ಪ-1' ಹಾಗೂ 'ಪುಷ್ಪ-2', 'ಅಖಂಡ-1' ಹಾಗೂ 'ಅಖಂಡ-2' ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಡಿಸೆಂಬರ್ 5ಕ್ಕೆ ತೆರೆಗೆ ಬಂದಿದ್ದ 'ಧುರಂಧರ್' ಕೂಡ ಸಂಚಲನ ಸೃಷ್ಟಿಸಿದೆ. ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ದಾಖಲೆ ಬರೆಯಲು ಮುಂದಾಗಿದ್ದಾರೆ. ಭಾನುವಾರ ಕೂಡ 59 ಕೋಟಿ ನೆಟ್ ಕಲೆಕ್ಷನ್ ಮಾಡಿ ರಣ್‌ವೀರ್ ಸಿಂಗ್ ಸಿನಿಮಾ ಅಚ್ಚರಿ ಮೂಡಿಸಿದೆ.

More from Filmibeat

Read more about: balakrishna tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X