Bhooth Bangla BoxOffice Day 4;ಸೋಮವಾರದ ಪರೀಕ್ಷೆಲಿ ಅಕ್ಷಯ್ ಕುಮಾರ್ ಜಸ್ಟ್ ಪಾಸ್,ಭೂತ್ ಬಂಗ್ಲಾ 4ನೇ ದಿನ ಗಳಿಸಿದ್ದೆಷ್ಟು?
ಯಾವುದೇ ಚಿತ್ರವಾದರು ಕೂಡ ಬಿಡುಗಡೆಯಾದ ನಂತರ ಚಿತ್ರಮಂದಿರ ತುಂಬಬೇಕು, ಚಿತ್ರ ಗೆಲ್ಲಬೇಕೆಂದರೆ ಯುವ ಸಮೂಹ ಚಿತ್ರಮಂದಿರಕ್ಕೆ ಬರಬೇಕು. ಮನೆ ಮಂದಿಯೆಲ್ಲ ಜೊತೆಯಾಗಿ ಬಂದು ಚಿತ್ರವನ್ನು ನೋಡಬೇಕು. ಆಗಲೇ ಆ ಚಿತ್ರ ಗೆಲ್ಲಲು ಸಾಧ್ಯ. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯಲು ಸಾಧ್ಯ. ಆದರೆ ಈಗೀಗ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ.
ಅಂಗೈಯಲ್ಲಿಯೇ ಮನರಂಜನೆ ಇರುವಾಗ ಚಿತ್ರಮಂದಿರಕ್ಕೆ ಯಾಕೆ ಹೋಗಬೇಕೆನ್ನುವುದು ಅನೇಕರ ವಾದ. ಹಾಗಂಥ.. ಎಲ್ಲ ಚಿತ್ರವನ್ನು ಎಲ್ಲರೂ ಓಟಿಟಿಯಲ್ಲಿ ನೋಡುವುದಿಲ್ಲ. ಅಲ್ಲೊಂದು.. ಇಲ್ಲೊಂದು.. ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತವೆ. ಬಾಕ್ಸಾಫೀಸ್‌ನಲ್ಲಿ ಹಣವನ್ನು ಕೂಡ ಗಳಿಸುತ್ತವೆ. ಇದಕ್ಕೆ ಸದ್ಯ ಅಕ್ಷಯ್ ಕುಮಾರ್ ಅಭಿನಯದ ''ಭೂತ್ ಬಂಗ್ಲಾ'' ಅತ್ಯುತ್ತಮ ಉದಾಹರಣೆ.

ಹೌದು, ಕಳೆದ ಶುಕ್ರವಾರ (ಏಪ್ರಿಲ್ 17) ತೆರೆಗೆ ಬಂದ ''ಭೂತ್ ಬಂಗ್ಲಾ'' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಬಾಕ್ಸಾಫೀಸ್‌ನಲ್ಲಿ ಧಾರಾಕಾರವಾಗಿ ಹಣದ ಮಳೆಯಾಗದಿದ್ದರೂ ಕೂಡ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಚಿತ್ರ ಯಶಸ್ವಿಯಾಗುತ್ತಿದೆ.
ಇನ್ನು ಸಾಮಾನ್ಯವಾಗಿ ಚಿತ್ರ ಯಾವುದೇ ಇರಲಿ.. ಆ ಚಿತ್ರದ ಸ್ಟಾರ್ ಯಾರೇ ಇರಲಿ.. ಸೋಮವಾರ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬಂದೇ ಬರುತ್ತೆ. ''ಭೂತ್ ಬಂಗ್ಲಾ'' ಚಿತ್ರದ ವಿಚಾರದಲ್ಲಿಯೂ ಇದೇ ಆಗಿದ್ದು ಸೋಮವಾರ ಅಂದರೆ ನಿನ್ನೆ ( ಏಪ್ರಿಲ್ 20) 70.7 % ಕುಸಿತ ಕಂಡು ಬಂದಿದೆ.
ಹಾಗಂಥ ಚಿತ್ರ ಒಂದೆರಡು ಕೋಟಿಯನ್ನೇನು ಗಳಿಸಿಲ್ಲ. ಬದಲಿಗೆ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ₹6.75 ಕೋಟಿಯನ್ನು ಚಿತ್ರ ಗಳಿಸಿದೆ. ಅಕ್ಷಯ್ ಕುಮಾರ್ ಪಾಲಿಗೆ ಇದು ಸಮಾಧಾನದ ವಿಷಯ.
ಯಾಕೆಂದರೆ ಇವರ ಹಿಂದಿನ ''ಜಾಲಿ ಎಲ್ ಎಲ್ ಬಿ 3'' ಚಿತ್ರದ ಗಳಿಕೆಯಲ್ಲಿ ಸೋಮವಾರ 73.8% ಕುಸಿತ ಕಂಡು ಬಂದಿತ್ತು. ಸೋಮವಾರ ₹5.50 ಕೋಟಿಯನ್ನು ಗಳಿಸಿತ್ತು. ''ಜಾಲಿ ಎಲ್‌ಎಲ್‌ಬಿ 3''ಗೆ ಹೋಲಿಸಿದರೆ ''ಭೂತ್ ಬಂಗ್ಲಾ'' ಒಂದು ಹೆಜ್ಜೆ ಮುಂದೆ ಇದೆ.

ಸ್ಯಾಕ್ನಿಲ್ ಪ್ರಕಾರ ''ಭೂತ್ ಬಂಗ್ಲಾ'' ಚಿತ್ರದ 4 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಪೇಯ್ಡ್ ಪ್ರೀಮಿಯರ್ - ಗುರುವಾರ - ₹3.75 ಕೋಟಿ
ಮೊದಲ ದಿನ - ಶುಕ್ರವಾರ - ₹12.25 ಕೋಟಿ
ಎರಡನೇ ದಿನ - ಶನಿವಾರ - ₹19 ಕೋಟಿ
ಮೂರನೇ ದಿನ- ಭಾನುವಾರ- ₹23 ಕೋಟಿ
ನಾಲ್ಕನೇ ದಿನ - ಸೋಮವಾರ- ₹6.75 ಕೋಟಿ
ಒಟ್ಟು ಗಳಿಕೆ -₹64.75 ಕೋಟಿ(ಕೇವಲ ಭಾರತದಲ್ಲಿ)Net Collections
ಹೀಗೆ ನಾಲ್ಕು ದಿನದಲ್ಲಿ 10,984 ಪ್ರದರ್ಶನ ಕಂಡಿರುವ ''ಭೂತ್ ಬಂಗ್ಲಾ'' ಕೇವಲ ಭಾರತದಲ್ಲಿ₹64.75 ಕೋಟಿಯನ್ನು ದೋಚಿದ್ದು, ವಿದೇಶದಲ್ಲಿ ಇಲ್ಲಿಯವರೆಗೆ ಅಂದರೆ ಈ ನಾಲ್ಕು ದಿನದಲ್ಲಿ ಚಿತ್ರ ₹29 ಕೋಟಿಯನ್ನು ಗಳಿಸಿದೆ. ಈ ಮೂಲಕ ಒಟ್ಟಾರೆಯಾಗಿ (ಭಾರತ + ಓವರ್ ಸೀಸ್ ) ₹106.34 ಕೋಟಿ ( Gross) ಹಣವನ್ನು ಚಿತ್ರ ಗಳಿಸಿದೆ ಎಂದು ''ಸ್ಯಾಕ್ನಿಲ್ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
ಸದ್ಯ ''ಭೂತ್ ಬಂಗ್ಲಾ'' ಸೋಮವಾರದ ಅಗ್ನಿ ಪರೀಕ್ಷೆಯಲ್ಲಿ ಸಾಧಾರಣ ಅಂಕದೊಂದಿಗೆ ಪಾಸ್ ಆಗಿದ್ದು ಈ ವಾರ ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ವಾರಾಂತ್ಯದಲ್ಲಿ ಗಳಿಕೆಯಲ್ಲಿ ಏರಿಕೆ ಕಂಡು ಬರುತ್ತಾ ಅಥವಾ ಕೇವಲ ಒಂದಂಕಿಗೆ ಗಳಿಕೆ ಸೀಮಿತವಾಗುತ್ತಾ ಎನ್ನುವುದನ್ನು ಕೂಡ ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications