Bhooth Bangla Box Office Day 9 ; ಅಕ್ಷಯ್ ಕುಮಾರ್ ಅಬ್ಬರ,100 ಕೋಟಿ ಕ್ಲಬ್ ಸೇರಿದ ಭೂತ್ ಬಂಗ್ಲಾ

ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಬಾಲಿವುಡ್‌ನ ಕಿಲಾಡಿ ಅಕ್ಷಯ್ ಕುಮಾರ್ ಇದಕ್ಕೆ ಸದ್ಯದ ಉದಾಹರಣೆ. ಹೌದು, ಹಿಂದೆ ಒಂದಾದ ಮೇಲೊಂದು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡುತ್ತಾ, ಆಕಾಶಕ್ಕೆ ಏಣಿ ಹಾಕಿ ಕುಂತಿದ್ದ ಅಕ್ಕಿ ಈಗ ಇದೇ ಬಾಲಿವುಡ್‌ ಪಾಲಿಗೆ ಅನ್‌ಲಕ್ಕಿಯಾಗಿದ್ದಾರೆ. ಸೋತು ಸುಣ್ಣವಾಗಿದ್ದಾರೆ.

ಮೊದಲೆಲ್ಲಾ ಇವರ ಚಿತ್ರಗಳನ್ನು ಮುಗಿಬಿದ್ದು ನೋಡುತ್ತಿದ್ದ ಪ್ರೇಕ್ಷಕರೇ ಈಗ ಇವರ ಚಿತ್ರಗಳು ಬಂದರೆ ಸಾಕು ಮುಖ ತಿರುಗಿಸುತ್ತಿದ್ದಾರೆ. ಇದಕ್ಕೆ ಕಾರಣಗಳೇನು ಎನ್ನುವುದು ಖುದ್ದು ಅಕ್ಷಯ್ ಕುಮಾರ್ ಅವರಿಗೆ ಗೊತ್ತಿರಲಿಕ್ಕಿಲ್ಲವಾದರೂ ಅಕ್ಷಯ್ ಕುಮಾರ್ ಸೋಲನ್ನು ಒಪ್ಪಿಕೊಂಡಿಲ್ಲ. ಬದಲಿಗೆ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ''ಭೂತ್ ಬಂಗ್ಲಾ '' ಇದಕ್ಕೆ ಸದ್ಯದ ಉದಾಹರಣೆ.

Akshay Kumar s Century Bhooth Bangla Scares Up 100 Crore Priyadarshan Magic Reigns

ಹೌದು. '' ಭೂತ್ ಬಂಗ್ಲಾ'' .. ಸತತ ಸೋಲುಗಳಿಂದ ಹೈರಾಣಾದರೂ ಗೆಲ್ಲುವ ಭರವಸೆಯಲ್ಲಿ ಅಕ್ಷಯ್ ಕುಮಾರ್ ಮಾಡಿದ ಮತ್ತೊಂದು ಪ್ರಯತ್ನ. ಸದ್ಯ.. ಈ ಪ್ರಯತ್ನಕ್ಕೆ ಜನ ಮನ್ನಣೆ ಸಿಗುತ್ತಿದೆ. ಅಕ್ಷಯ್ ಕುಮಾರ್ ಪಾಲಿಗೆ ''ಭೂತ್ ಬಂಗ್ಲಾ'' ಆಶಾಕಿರಣದಂತೆ ಕಂಡಿದೆ.

ಯಾಕೆಂದರೆ.. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಭೂತ್ ಬಂಗ್ಲಾ ನಿನ್ನೆ (ಏಪ್ರಿಲ್ 25) ಅಂದರೆ 09ನೇ ದಿನ ₹10.75 ಕೋಟಿಯನ್ನು ದೋಚಿದೆ. ಇಷ್ಟೇ ಅಲ್ಲ ಕೇವಲ 09 ದಿನದಲ್ಲಿ ಕೇವಲ ಭಾರತದಲ್ಲಿ ₹100.9 ಕೋಟಿಯನ್ನು ಕೊಳ್ಳೆ ಹೊಡೆದಿದೆ.

ಸ್ಯಾಕ್ನಿಲ್ ಪ್ರಕಾರ ''ಭೂತ್ ಬಂಗ್ಲಾ'' ಚಿತ್ರದ 9 ದಿನದ ಗಳಿಕೆ ಈ ಕೆಳಗಿನಂತೆ ಇದೆ

ದಿನ ಕಲೆಕ್ಷನ್
Day 0 ಪೇಯ್ಡ್ ಪ್ರಿವ್ಯೂ ₹3.75 ಕೋಟಿ
Day 1 1ನೇ ಶುಕ್ರವಾರ ₹12.25 ಕೋಟಿ
Day 2 1ನೇ ಶನಿವಾರ ₹19.00 ಕೋಟಿ
Day 3 1ನೇ ಭಾನುವಾರ ₹23.00 ಕೋಟಿ
Day 4 1ನೇ ಸೋಮವಾರ ₹6.75 ಕೋಟಿ
Day 5 1ನೇ ಮಂಗಳವಾರ ₹8.00 ಕೋಟಿ
Day 6 1ನೇ ಬುಧವಾರ ₹6.15 ಕೋಟಿ
Day 7 1ನೇ ಗುರುವಾರ ₹5.50 ಕೋಟಿ

ಮೊದಲ ವಾರದ ಒಟ್ಟು ₹84.40 ಕೋಟಿ

Day 8 2ನೇ ಶುಕ್ರವಾರ ₹5.75 ಕೋಟಿ
Day 9 2ನೇ ಶನಿವಾರ ₹10.75 ಕೋಟಿ

Total ಒಟ್ಟು ಗಳಿಕೆ ₹100.9 ಕೋಟಿ (Total India Net Collection)

Akshay Kumar s Century Bhooth Bangla Scares Up 100 Crore Priyadarshan Magic Reigns

ನಿಜಾ.. ಅಕ್ಷಯ್ ಕುಮಾರ್ ಹೆಸರಿಗೆ ಸಿಕ್ಕಿರುವ ಈ ಬೆಲೆ ತುಂಬಾನೇ ಕಡಿಮೆ. ಈಗಾಗಲೇ ಅಕ್ಷಯ್ ಕುಮಾರ್ ಅಬ್ಬರಕ್ಕೆ ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಇನ್ನೂ ರಭಸವಾಗಿ ಹರಿಯಬೇಕಿತ್ತು. ಭಾರತದಲ್ಲಿಯೇ ₹150 ಕೋಟಿಯ ಗಡಿಯನ್ನು ''ಭೂತ್ ಬಂಗ್ಲಾ'' ದಾಟಬೇಕಿತ್ತು.

ಆದರೆ ..ಆಗಲೇ ಹೇಳಿದಂತೆ ಕೊರೊನಾ ನಂತರ ಅಕ್ಷಯ್ ಕುಮಾರ್ ಅಕ್ಷರಶ ಕಂಗಾಲಾಗಿದ್ದಾರೆ. ಇವರ ಹಿಂದಿನ ಚಿತ್ರಗಳಾದ ''ಕೇಸರಿ 2''.. ''ಖೇಲ್ ಖೇಲ್‌ ಮೇ''.. ''ರಕ್ಷಾ ಬಂಧನ್''.. ''ಸಾಮ್ರಾಟ್ ಪೃಥ್ವಿರಾಜ್''.. ''ಸ್ಕೈಪೋರ್ಸ್‌''.. ''ಮಿಷನ್ ರಾಣಿಗಂಜ್''.. ''ಜಾಲಿ ಎಲ್‌ ಎಲ್‌ಬಿ 3'' ಈ ಎಲ್ಲಾ ಚಿತ್ರಗಳು 9 ದಿನವಾದರೂ ಕೂಡ ''ಭೂತ್ ಬಂಗ್ಲಾ '' ಚಿತ್ರಕ್ಕಿಂತ ಕಡಿಮೆ ಹಣವನ್ನು ಗಳಿಸಿದ್ದವು.

ಇನ್ನೂ ಕೊರೊನಾ ನಂತರ ಅಂದರೆ 2020ರ ಆಚೆ ಅಕ್ಷಯ್ ಕುಮಾರ್ ಇಲ್ಲಿಯವರೆಗೆ 18 ಚಿತ್ರಗಳನ್ನು ಮಾಡಿದ್ದಾರೆ. ಆ ಪೈಕಿ ಗೆದ್ದಿದ್ದು ''ಹೌಸ್‌ಫುಲ್ 5''.. ''ಸೂರ್ಯವಂಶಿ'' ಮತ್ತು ''ಓ ಮೈ ಗಾಡ್ 2'' ಚಿತ್ರಗಳು ಮಾತ್ರ. ಮಿಕ್ಕಂತೆ ಎಲ್ಲಾ ಚಿತ್ರಗಳು ಮಕಾಡೆ ಮಲಗಿವೆ. ಈ ಹಿನ್ನೆಲೆ ''ಭೂತ್ ಬಂಗ್ಲಾ''ದ ಈ ಸೆಂಚುರಿ ಅಕ್ಷಯ್ ಕುಮಾರ್ ಪಾಲಿಗೆ ತುಂಬಾನೇ ಮಹತ್ವದ್ದು.

ಅಕ್ಷಯ್ ಕುಮಾರ್ ಅಭಿನಯದ ಹಿಂದಿನ 17 ಚಿತ್ರಗಳ 9 ದಿನಗಳ ಕಲೆಕ್ಷನ್ (ಇಂಡಿಯಾ ನೆಟ್)

ಚಿತ್ರದ ಹೆಸರು 9 ದಿನಗಳ ಗಳಿಕೆ (ಭಾರತ - ನೆಟ್)
1 ಭೂತ್ ಬಂಗ್ಲಾ - 2026- ₹100.90 ಕೋಟಿ
2 ಜಾಲಿ ಎಲ್‌ಎಲ್‌ಬಿ 3 - 2025- ₹84.25 ಕೋಟಿ
3 ಹೌಸ್‌ಫುಲ್ 5 - 2025 - ₹142.75 ಕೋಟಿ
4 ಸ್ಕೈ ಫೋರ್ಸ್ - 2025 - ₹82.10 ಕೋಟಿ
5 ಕೇಸರಿ 2 - 2025 - ₹57.30 ಕೋಟಿ
6 ಖೇಲ್ ಖೇಲ್ ಮೇ - 2024- ₹20.05 ಕೋಟಿ
7 ಸರ್ಫಿರಾ - 2024- ₹19.10 ಕೋಟಿ
8 ಬಡೇ ಮಿಯಾನ್ ಚೋಟೆ ಮಿಯಾನ್- 2024- ₹53.80 ಕೋಟಿ
9 ಮಿಷನ್ ರಾಣಿಗಂಜ್ - 2023- ₹25.05 ಕೋಟಿ
10 ಒಎಂಜಿ 2 - 2023 - ₹101.58 ಕೋಟಿ
11 ಸೆಲ್ಫೀ - 2023- ₹15.25 ಕೋಟಿ
12 ರಾಮ್ ಸೇತು - 2022 - ₹64.50 ಕೋಟಿ
13 ರಕ್ಷಾ ಬಂಧನ- 2022 - ₹40.50 ಕೋಟಿ
14 ಸಾಮ್ರಾಟ್ ಪೃಥ್ವಿರಾಜ್ -2022 -₹62.35 ಕೋಟಿ
15 ಬಚ್ಚನ್ ಪಾಂಡೆ - 2022- ₹50.15 ಕೋಟಿ
16 ಸೂರ್ಯವಂಶಿ - 2021- ₹137.84 ಕೋಟಿ
17 ಬೆಲ್ ಬಾಟಮ್ - 2021- ₹19.50 ಕೋಟಿ

ಒಟ್ನಲ್ಲಿ ಸದ್ಯ ''ಭೂತ್ ಬಂಗ್ಲಾ'' ಚಿತ್ರ ಬಾಕ್ಸಾಫೀಸ್‌ನಲ್ಲಿ 9 ದಿನಗಳಲ್ಲಿ ಶತಕ ಬಾರಿಸಿದೆ. ಇಂದು (ಏಪ್ರಿಲ್ 26) ಭಾನುವಾರವಾದ ಹಿನ್ನೆಲೆ ಚಿತ್ರದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಬಾಲಿವುಡ್ ಟ್ರೇಡ್ ವಿಶ್ಲೇಷಕರ ಪ್ರಕಾರ ಈಗಾಗಲೇ ಭೂತ್ ಬಂಗ್ಲಾ ಗೆಲುವಿನ ಹಾದಿಯಲ್ಲಿದೆ. ಈ ವಾರದ ಗಳಿಕೆಯ ಮೇಲೆ ಭೂತ್ ಬಂಗ್ಲಾ ಹಿಟ್ಟಾ-ಸೂಪರ್ ಹಿಟ್ಟಾ ಎನ್ನುವುದು ಗೊತ್ತಾಗಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Bhooth Bangla Day 9: Akshay’s century is here! The film officially joins the ₹100 Crore Club after a massive Saturday surge. Click for the latest box office breakdown and occupancy reports.
Read more about: akshay kumar bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X