Welcome To The Jungle BO Day 3 ; ಅಕ್ಷಯ್ ಕುಮಾರ್ ಅಬ್ಬರ, ಭಾನುವಾರವೂ ಜಂಗಲ್‌ನಲ್ಲಿ ಜನಸಾಗರ-ಇಂದಿನಿಂದ ಅಸಲಿ ಅಗ್ನಿಪರೀಕ್ಷೆ

ಚಿತ್ರರಂಗ ಮಾತ್ರ ಅಲ್ಲ ಯಾವುದೇ ಕ್ಷೇತ್ರವಾದರು ಕೂಡ ಅಲ್ಲಿ ಗೆಲುವು ಮತ್ತು ಸೋಲು ಮಾಮೂಲು. ಆದರೆ .. ಗೆದ್ದಾಗ ಹಿರಿಹಿರಿ ಹಿಗ್ಗುವ ಅನೇಕರು ಸೋತಾಗ ಕುಗ್ಗಿ ಹೋಗುತ್ತಾರೆ. ತಮ್ಮ ಮೇಲೆ ತಾವೇ ನಂಬಿಕೆ ಕಳೆದುಕೊಳ್ಳುತ್ತಾರೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಸೋಲೇ ಗೆಲುವಿನ ಸೋಪಾನ ಎಂದು ನಿರಂತರ ಪ್ರಯತ್ನ ಮಾಡುತ್ತಾರೆ.

ಆದರೂ ಕೂಡ ಒಮ್ಮೊಮ್ಮೆ ಅದೆಷ್ಟೇ ಪ್ರಯತ್ನವನ್ನು ಮಾಡಿದರೂ ಕೂಡ ಗೆಲುವು ಎನ್ನುವುದು ಸಿಗದೇ ಮತ್ತೆ ಸತಾಯಿಸುತ್ತೆ. ಇಂಥಹದ್ದೊಂದು ಸೋಲಿನ ಕಮರಿಗೆ ಬಿದ್ದು ಒದ್ದಾಡುತ್ತಿದ್ದ ಅಕ್ಷಯ್ ಕುಮಾರ್ ಸದ್ಯ ಮೈಕೊಡವಿ ಎದ್ದು ನಿಂತಿದ್ಧಾರೆ. ಒಂದಾದ ಮೇಲೊಂದರಂತೆ ಬಾಲಿವುಡ್‌ಗೆ ಎರಡು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಅದು ಕೇವಲ 3 ತಿಂಗಳ ಅಂತರದಲ್ಲಿ ಎನ್ನುವುದೇ ವಿಶೇಷ.

Akshay Kumar s Welcome To The Jungle Explodes On Day 3

ಹೌದು, ಅಕ್ಷಯ್ ಕುಮಾರ್ ಅಭಿನಯದ ''ಭೂತ್ ಬಂಗ್ಲಾ'' ಕಳೆದ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿತ್ತು.ಕೇವಲ ಭಾರತದಲ್ಲಿಯೇ ₹169 ಕೋಟಿಯನ್ನು ಗಳಿಸಿತ್ತು. ವರ್ಲ್ಡ್ ವೈಡ್ ಲೆಕ್ಕ ತೆಗೆದುಕೊಂಡರೆ ಗಳಿಕೆ ₹250 ಕೋಟಿಗೂ ಅಧಿಕ ಇತ್ತು. ಈಗ ''ವೆಲ್ಕಮ್ ಟು ದಿ ಜಂಗಲ್'' ಸರದಿ. ಇದಕ್ಕೆ ಪುರಾವೆಯೇ ಚಿತ್ರದ ಗಳಿಕೆ.

ಮೊದಲ ದಿನ (ಜೂನ್ 26) ₹15.25 ಕೋಟಿಯನ್ನು ಗಳಿಸಿದ್ದ ಚಿತ್ರದ ಗಳಿಕೆ ಎರಡನೇ ದಿನ (ಜೂನ್ 27) 30% ಏರಿಕೆ ಕಂಡಿತ್ತು. ₹20 ಕೋಟಿಯನ್ನು ಗಳಿಸಿತ್ತು. ನಿನ್ನೆ ಮೂರನೇ ದಿನ (ಜೂನ್ 28) ಚಿತ್ರದ ಗಳಿಕೆ ಇನ್ನೂ ಹೆಚ್ಚಾಗಿದೆ. ಬಾಕ್ಸಾಫೀಸ್‌ನ ಅಂಕಿ ಅಂಶ ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ₹24.75 ಕೋಟಿಯನ್ನು ಕೇವಲ ಭಾರತದಲ್ಲೇ ''ವೆಲ್ಕಮ್ ಟು ದಿ ಜಂಗಲ್'' ಕೊಳ್ಳೆ ಹೊಡೆದಿದೆ. ಈ ಮೂಲಕ 3 ದಿನದಲ್ಲಿ ₹63.75 ಕೋಟಿಯನ್ನು ಚಿತ್ರ ಗಳಿಸಿದೆ.

ಸ್ಯಾಕ್ನಿಲ್ ಪ್ರಕಾರ ''ವೆಲ್ಕಮ್ ಟು ದಿ ಜಂಗಲ್'' ಚಿತ್ರದ ಮೊದಲ ಮೂರು ದಿನದ ಗಳಿಕೆ ಈ ಕೆಳಗಿನಂತಿದೆ.

ದಿನ ಭಾರತದ ಒಟ್ಟು ನಿವ್ವಳ ಗಳಿಕೆ (India Net)
ಪೇಯ್ಡ್ ಪ್ರೀಮಿಯರ್ (ಗುರುವಾರ) ₹3.75 ಕೋಟಿ
ಮೊದಲನೇ ದಿನ (ಶುಕ್ರವಾರ) ₹15.25 ಕೋಟಿ
ಎರಡನೇ ದಿನ (ಶನಿವಾರ) ₹20.00 ಕೋಟಿ
ಮೂರನೇ ದಿನ (ಭಾನುವಾರ) ₹24.75 ಕೋಟಿ
ಒಟ್ಟು ಮೊತ್ತದ ಕಲೆಕ್ಷನ್ ₹63.75 ಕೋಟಿ

ಹೀಗೆ ಮೂರು ದಿನದಲ್ಲಿ ₹63.75 ಕೋಟಿಯನ್ನು ಕೊಳ್ಳೆ ಹೊಡೆದಿರುವ ''ವೆಲ್ಕಮ್ ಟು ದಿ ಜಂಗಲ್'' ಈ ವರ್ಷ ಮೊದಲ ವಾರಾಂತ್ಯದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ''ಧುರಂಧರ್ 2'' ಮತ್ತು ''ಬಾರ್ಡರ್ 2'' ನಂತರದ ಸ್ಥಾನವನ್ನು ಅಲಂಕರಿಸಿದೆ.

akshay-kumar-s-welcome-to-the-jungle-explodes-on-day-3

2026ರ ಬಾಲಿವುಡ್ ಚಿತ್ರಗಳ ಟಾಪ್ ಓಪನಿಂಗ್ ವೀಕೆಂಡ್ ಕಲೆಕ್ಷನ್ ಪಟ್ಟಿ

ಶ್ರೇಣಿ ಚಲನಚಿತ್ರದ ಹೆಸರು ಓಪನಿಂಗ್ ವೀಕೆಂಡ್ ಗಳಿಕೆ (ಭಾರತದ ನಿವ್ವಳ ಕಲೆಕ್ಷನ್)
1 ಧುರಂಧರ್ 2 ₹466 ಕೋಟಿ (4 ದಿನಗಳಲ್ಲಿ)
2 ಬಾರ್ಡರ್ 2 ₹129.89 ಕೋಟಿ
3 ಭೂತ್ ಬಾಂಗ್ಲಾ ₹65.65 ಕೋಟಿ
4 ವೆಲ್‌ಕಮ್ ಟು ದಿ ಜಂಗಲ್ ₹63.75 ಕೋಟಿ
5 ಕಾಕ್‌ಟೇಲ್ 2 ₹47.50 ಕೋಟಿ

ಚಿತ್ರತಂಡ ಕೊಟ್ಟಿರುವ ಲೆಕ್ಕ ಎಷ್ಟು..?

ಇನ್ನು ಕನ್ನಡದಲ್ಲಿ ಚಿತ್ರದ ಗಳಿಕೆಯ ಕುರಿತು ನಿರ್ಮಾಪಕರು ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ. ಆದರೆ, ಬಾಲಿವುಡ್ ಇದಕ್ಕೆ ತದ್ವಿರುದ್ದ. ಪೈಪೋಟಿಯ ಮೇಲೆ ಇಲ್ಲಿ ತಮ್ಮ ಚಿತ್ರದ ಗಳಿಕೆಯ ಲೆಕ್ಕವನ್ನು ಹಲವರು ಕೊಡುತ್ತಾರೆ.

ಇದಕ್ಕೆ ಪುರಾವೆ ಎಂಬಂತೆ ''ವೆಲ್ಕಮ್ ಟು ದಿ ಜಂಗಲ್'' ಅಂಕಿ ಅಂಶಗಳನ್ನು ನಿರ್ಮಾಣ ಸಂಸ್ಥೆ ಹಂಚಿಕೊಂಡಿದ್ದು ಆ ಪ್ರಕಾರ ಮೂರೇ ದಿನದಲ್ಲಿ ಈ ಚಿತ್ರ ₹65.83 ಕೋಟಿಯನ್ನು ಭಾರತದಲ್ಲಿ ಗಳಿಸಿದೆ. ಪೇಯ್ಡ್ ಪ್ರೀಮಿಯರ್ ಗಳಿಕೆಯನ್ನು ಚಿತ್ರತಂಡ ಇಲ್ಲಿ ಕೂಡಿಸಿಲ್ಲ. ಇನ್ನು ಹೊರ ದೇಶದ ಲೆಕ್ಕ ಕೂಡ ಸೇರಿಸಿದರೆ ಮೊದಲ ವಾರಾಂತ್ಯದ ಗಳಿಕೆ ₹94.63 ಕೋಟಿ ಆಗಿದೆ.

ನಿರ್ಮಾಣ ಸಂಸ್ಥೆ ಹಂಚಿಕೊಂಡ ಗಳಿಕೆಯ ವಿವರ ಈ ಕೆಳಗಿನಂತಿದೆ

ದಿನ ಭಾರತದ ಒಟ್ಟು ನಿವ್ವಳ ಗಳಿಕೆ (NBOC India)
ಮೊದಲನೇ ದಿನ (ಶುಕ್ರವಾರ) ₹19.40 ಕೋಟಿ
ಎರಡನೇ ದಿನ (ಶನಿವಾರ) ₹21.02 ಕೋಟಿ
ಮೂರನೇ ದಿನ (ಭಾನುವಾರ) ₹25.41 ಕೋಟಿ
ಭಾರತದ ಒಟ್ಟು ಮೊತ್ತದ ಕಲೆಕ್ಷನ್ (Total) ₹65.83 ಕೋಟಿ

ಇಂದಿನಿಂದ ಶುರು ಅಸಲಿ ಅಗ್ನಿ ಪರೀಕ್ಷೆ

ಒಟ್ನಲ್ಲಿ ಮೊದಲ ವಾರಾಂತ್ಯ ''ವೆಲ್ಕಮ್ ಟು ದಿ ಜಂಗಲ್'' ಭರ್ಜರಿ ಗಳಿಕೆಯನ್ನು ಮಾಡಿದೆ. ಯಾವುದೇ ಆಫರ್ ಅಥವಾ ಡಿಸ್ಕೌಂಟ್ ಸ್ಕೀಮ್ ಅನೌನ್ಸ್ ಮಾಡದೇ ₹60 ಕೋಟಿ + ಹಣ ಗಳಿಸಿದೆ. ಎಲ್ಲರ ಕಣ್ಣೀಗ ಇಂದಿನಿಂದ ಮುಂಬರುವ ಗುರುವಾರದ ಗಳಿಕೆಯ ಮೇಲಿದೆ. ಈ ನಾಲ್ಕು ದಿನ ಎರಡಂಕಿಯ ಗಳಿಕೆ ಆದರೆ ಚಿತ್ರ ಗೆದ್ದಂತೆಯೇ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Akshay Kumar’s Welcome to the Jungle rules the box office! Sunday collections skyrocket to push the 3-day total past ₹63 crore. Read more!
Read more about: akshay kumar bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X