ಅಕ್ಷಯ್ ಕುಮಾರ್ ಅಬ್ಬರದ ಎದುರು ಕಂಗಾಲಾದ ಕಮಲ್ ಹಾಸನ್..!
ಯಾವುದೇ ಚಿತ್ರವಾದರು ಕೂಡ ಬಿಡುಗಡೆಯಾದ ನಂತರ ಚಿತ್ರಮಂದಿರ ತುಂಬಬೇಕು, ಚಿತ್ರ ಗೆಲ್ಲಬೇಕೆಂದರೆ ಯುವ ಸಮೂಹ ಚಿತ್ರಮಂದಿರಕ್ಕೆ ಬರಬೇಕು. ಮನೆ ಮಂದಿಯೆಲ್ಲ ಜೊತೆಯಾಗಿ ಬಂದು ಚಿತ್ರವನ್ನು ನೋಡಬೇಕು. ಆಗಲೇ ಆ ಚಿತ್ರ ಗೆಲ್ಲಲು ಸಾಧ್ಯ. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯಲು ಸಾಧ್ಯ. ಆದರೆ ಈಗೀಗ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ಅಂಗೈಯಲ್ಲಿಯೇ ಮನರಂಜನೆ ಇರುವಾಗ ಚಿತ್ರಮಂದಿರಕ್ಕೆ ಯಾಕೆ ಹೋಗಬೇಕೆನ್ನುವುದು ಅನೇಕರ ವಾದ.
ಹಾಗಂಥ.. ಎಲ್ಲ ಚಿತ್ರವನ್ನು ಎಲ್ಲರೂ ಓಟಿಟಿಯಲ್ಲಿ ನೋಡುವುದಿಲ್ಲ. ಅಲ್ಲೊಂದು.. ಇಲ್ಲೊಂದು.. ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತವೆ. ಬಾಕ್ಸಾಫೀಸ್‌ನಲ್ಲಿ ಹಣವನ್ನು ಕೂಡ ಗಳಿಸುತ್ತವೆ. ಇದಕ್ಕೆ ಸದ್ಯ ಅಕ್ಷಯ್ ಕುಮಾರ್ ಅಭಿನಯದ ಹೌಸ್‌ಫುಲ್ 5 ಚಿತ್ರ ಅತ್ಯುತ್ತಮ ಉದಾಹರಣೆ.

ಹೌದು, ಹೌಸ್‌ಫುಲ್ 5.. ಕಳೆದ ಶುಕ್ರವಾರ ತೆರೆಗೆ ಬಂದ ಚಿತ್ರ. ಅಕ್ಷಯ್ ಕುಮಾರ್ ಅಭಿನಯದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮತ್ತು ವಿಮರ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದರೂ ಕೂಡ ಹೌಸ್‌ಫುಲ್ 5 ಹೌಸ್ ಫುಲ್ ಪ್ರದರ್ಶನಗೊಳ್ಳುತ್ತಿದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಹೌಸ್‌ಫುಲ್ 5 ಚಿತ್ರ ಕೇವಲ ನಾಲ್ಕೇ ದಿನದಲ್ಲಿ 100 ಕೋಟಿಯ ಗಡಿಯನ್ನು ದಾಟಿದೆ ಎಂದು ಸ್ಯಾಕ್ನಿಲ್ ವೆಬ್ ಸೈಟ್ ವರದಿ ಮಾಡಿದೆ.
ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಹೌಸ್‌ಫುಲ್ 5 ಚಿತ್ರದ ನಾಲ್ಕು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ದಿನ ಗಳಿಕೆ
ಮೊದಲನೇ ದಿನ { ಶುಕ್ರವಾರ } ₹ 24ಕೋಟಿ
ಎರಡನೇ ದಿನ { ಶನಿವಾರ } ₹ 31ಕೋಟಿ
ಮೂರನೇ ದಿನ {ಭಾನುವಾರ} ₹ 32.5ಕೋಟಿ
ನಾಲ್ಕನೇ ದಿನ {ಸೋಮವಾರ} ₹13 ಕೋಟಿ
ಒಟ್ಟು ಗಳಿಕೆ ₹ 100.5ಕೋಟಿ
ಇನ್ನು ಸಾಮಾನ್ಯವಾಗಿ ಸೂಪರ್ ಸ್ಟಾರ್‌ಗಳ ಚಿತ್ರಗಳು ಒಟ್ಟಿಗೆ ತೆರೆಗೆ ಬಂದರೆ ಕುತೂಹಲ ಇರುತ್ತೆ. ಯಾರ ಚಿತ್ರ ಎಷ್ಟು ಗಳಿಕೆ ಮಾಡಬಹುದು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿರುತ್ತೆ. ಅದರಲ್ಲಿಯೂ ದಕ್ಷಿಣ ಮತ್ತು ಉತ್ತರದ ಸ್ಟಾರ್‌ಗಳು ಮುಖಾಮುಖಿಯಾದಾಗ ಈ ಕುತೂಹಲ ಇನ್ನು ಹೆಚ್ಚಿರುತ್ತೆ. ವ್ಯಾಪಾರ ಹಂಚಿಹೋಗುವ ಭಯವೂ ಇರುತ್ತೆ. ಹೌಸ್‌ಫುಲ್ 5 ಮತ್ತು ಥಗ್ ಲೈಫ್ ಚಿತ್ರದ ವಿಚಾರದಲ್ಲಿ ಇದೇ ತರಹದ ವಾತಾವರಣ ಇತ್ತು. ಎರಡು ಚಿತ್ರಗಳಲ್ಲಿ ಯಾವ ಚಿತ್ರ ಹೆಚ್ಚು ಗಳಿಸಬಹುದು ಎಂಬ ಚರ್ಚೆ ಚಿತ್ರಗಳ ಬಿಡುಗಡೆಗೆ ಮೊದಲು ನಡೆದಿತ್ತು. ಇದಕ್ಕೀಗ ಉತ್ತರ ಸಿಕ್ಕಿದ್ದು ಬಾಕ್ಸಾಫೀಸ್‌ನಲ್ಲಿ ಅಕ್ಷಯ್ ಕುಮಾರ್ ಅಬ್ಬರದ ಎದುರು ಕಮಲ್ ಹಾಸನ್ ಕಂಗಾಲಾಗಿದ್ಧಾರೆ.
ಹೌದು, ಒಂದು ಕಡೆ ಹೌಸ್‌ಫುಲ್ 5 ಕೇವಲ ನಾಲ್ಕು ದಿನದಲ್ಲಿ ₹ 100.5 ಕೋಟಿ ಹಣವನ್ನು ಗಳಿಸಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ಅದೇ ಮತ್ತೊಂದು ಕಡೆ ಹೌಸ್‌ಫುಲ್ 5 ಬಿಡುಗಡೆಯಾಗುವ ಒಂದು ದಿನದ ಮೊದಲು ಬಿಡುಗಡೆಯಾದ ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಬಾಕ್ಸಾಫೀಸ್‌ನಲ್ಲಿ ತೆವಳುತ್ತಾ ಸಾಗಿದೆ. ಬಿಡುಗಡೆಯಾಗಿ ಐದು ದಿನ ಕಳೆದರೂ ಕೂಡ ಈ ಚಿತ್ರ ಇನ್ನೂ 50 ಕೋಟಿಯ ಗಡಿಯನ್ನು ಕೂಡ ತಲುಪಿಲ್ಲ ಎಂದು ಸ್ಯಾಕ್ನಿಲ್ ವೆಬ್ ಸೈಟ್ ವರದಿ ಮಾಡಿದೆ.
ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಥಗ್‌ಲೈಫ್ ಚಿತ್ರದ ಐದು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ದಿನ ಗಳಿಕೆ
ಮೊದಲನೇ ದಿನ { ಗುರುವಾರ } ₹ 15.5ಕೋಟಿ
ಎರಡನೇ ದಿನ { ಶುಕ್ರವಾರ} ₹ 7.15 ಕೋಟಿ
ಮೂರನೇ ದಿನ {ಶನಿವಾರ} ₹ 7.75ಕೋಟಿ
ನಾಲ್ಕನೇ ದಿನ {ರವಿವಾರ} ₹6.5 ಕೋಟಿ
ಐದನೇ ದಿನ {ಸೋಮವಾರ} ₹3.25 ಕೋಟಿ
ಒಟ್ಟು ಗಳಿಕೆ ₹40.16 ಕೋಟಿ
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











