Jolly LLB 3 Box Office Day 1 ; ಜಾಲಿ..ಜಾಲಿ..ಫುಲ್ ಜಾಲಿ.. ಸೋಲಿನ ಸರಪಳಿ ತುಂಡರಿಸಿದ ಅಕ್ಷಯ್ ಕುಮಾರ್ ..!
ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಬಾಲಿವುಡ್‌ನ ಕಿಲಾಡಿ ಅಕ್ಷಯ್ ಕುಮಾರ್ ಇದಕ್ಕೆ ಸದ್ಯದ ಉದಾಹರಣೆ. ಹೌದು, ಹಿಂದೆ ಒಂದಾದ ಮೇಲೊಂದು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡುತ್ತಾ, ಆಕಾಶಕ್ಕೆ ಏಣಿ ಹಾಕಿ ಕುಂತಿದ್ದ ಅಕ್ಕಿ ಈಗ ಇದೇ ಬಾಲಿವುಡ್ ಪಾಲಿಗೆ ಅನ್‌ಲಕ್ಕಿಯಾಗಿದ್ದಾರೆ. ಸೋತು ಸುಣ್ಣವಾಗಿದ್ದಾರೆ.
ಮೊದಲೆಲ್ಲಾ ಇವರ ಚಿತ್ರಗಳನ್ನು ಮುಗಿಬಿದ್ದು ನೋಡುತ್ತಿದ್ದ ಪ್ರೇಕ್ಷಕರೇ ಈಗ ಇವರ ಚಿತ್ರಗಳು ಬಂದರೆ ಸಾಕು ಮುಖ ತಿರುಗಿಸುತ್ತಿದ್ದಾರೆ. ಇದಕ್ಕೆ ಕಾರಣಗಳೇನು ಎನ್ನುವುದು ಖುದ್ದು ಅಕ್ಷಯ್ ಕುಮಾರ್ ಅವರಿಗೆ ಗೊತ್ತಿರಲಿಕ್ಕಿಲ್ಲವಾದರೂ ಅಕ್ಷಯ್ ಕುಮಾರ್ ಸೋಲನ್ನು ಒಪ್ಪಿಕೊಂಡಿಲ್ಲ. ಬದಲಿಗೆ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ''ಜಾಲಿ ಎಲ್ಎಲ್‌ಬಿ-3'' ಇದಕ್ಕೆ ಸದ್ಯದ ಉದಾಹರಣೆ.

ಹೌದು. '' ''ಜಾಲಿ ಎಲ್ಎಲ್‌ಬಿ-3'''' .. ಸತತ ಸೋಲುಗಳಿಂದ ಹೈರಾಣಾದರೂ ಗೆಲ್ಲುವ ಭರವಸೆಯಲ್ಲಿ ಅಕ್ಷಯ್ ಕುಮಾರ್ ಮಾಡಿದ ಮತ್ತೊಂದು ಪ್ರಯತ್ನ. ಸದ್ಯ.. ಈ ಪ್ರಯತ್ನಕ್ಕೆ ಜನ ಮನ್ನಣೆ ಸಿಗುತ್ತಿದೆ. ಮೊದಲ ದಿನ ಅಕ್ಷಯ್ ಕುಮಾರ್ ಪಾಲಿಗೆ ''ಜಾಲಿ ಎಲ್ಎಲ್‌ಬಿ-3'' ಆಶಾಕಿರಣದಂತೆ ಕಂಡಿದೆ.
ಯಾಕೆಂದರೆ.. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಈ ಚಿತ್ರ ಮೊದಲ ದಿನ ₹ 12.75 ಕೋಟಿ ಹಣವನ್ನು ಗಳಿಸಿದೆ. ನಿಜಾ.. ಅಕ್ಷಯ್ ಕುಮಾರ್ ಹೆಸರಿಗೆ ಸಿಕ್ಕಿರುವ ಈ ಬೆಲೆ ತುಂಬಾನೇ ಕಡಿಮೆ.
ಆದರೆ ..ಆಗಲೇ ಹೇಳಿದಂತೆ ಕೊರೊನಾ ನಂತರ ಅಕ್ಷಯ್ ಕುಮಾರ್ ಅಕ್ಷರಶ ಕಂಗಾಲಾಗಿದ್ದಾರೆ. ಇವರ ಹಿಂದಿನ ಚಿತ್ರಗಳಾದ ''ಕೇಸರಿ 2''.. ''ಖೇಲ್ ಖೇಲ್ ಮೇ''.. ''ರಕ್ಷಾ ಬಂಧನ್''.. ''ಸಾಮ್ರಾಟ್ ಪೃಥ್ವಿರಾಜ್''.. ''ಸ್ಕೈಪೋರ್ಸ್''.. ಈ ಎಲ್ಲಾ ಚಿತ್ರಗಳು ಮೊದಲ ದಿನ ''ಜಾಲಿ ಎಲ್‌ಎಲ್‌ಬಿ-3'' ಚಿತ್ರಕ್ಕಿಂತ ಕಡಿಮೆ ಹಣವನ್ನು ಗಳಿಸಿದ್ದವು.
ಕೊರೊನಾ ನಂತರ ಅಕ್ಷಯ್ ಕುಮಾರ್ ಅಭಿನಯದ ಹತ್ತು ಚಿತ್ರಗಳ ಮೊದಲ ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಸೂರ್ಯವಂಶಿ - ₹26.29 ಕೋಟಿ
ಹೌಸ್‌ಫುಲ್ 5 - ₹24 ಕೋಟಿ
ಬಡೇ ಮಿಯಾ ಚೋಟೆ ಮಿಯಾ- ₹15.65 ಕೋಟಿ
ರಾಮ್ ಸೇತು - ₹15.25 ಕೋಟಿ
ಬಚ್ಚನ್ ಪಾಂಡೆ - ₹13.25 ಕೋಟಿ
*ಜಾಲಿ ಎಲ್ಎಲ್‌ಬಿ 3 - ₹12.50ಕೋಟಿ
ಸ್ಕೈ ಪೋರ್ಸ್ - ₹12.25 ಕೋಟಿ
ಸಾಮ್ರಾಟ್ ಪೃಥ್ವಿರಾಜ್-₹10.7ಕೋಟಿ
ರಕ್ಷಾ ಬಂಧನ್-₹8.2ಕೋಟಿ
ಕೇಸರಿ 2- ₹7.75ಕೋಟಿ

ಹೀಗೆ ''ಜಾಲಿ ಎಲ್‌ಎಲ್‌ಬಿ 3'' ಮೂಲಕ ಕೊರೊನಾ ನಂತರ ಅಕ್ಷಯ್ ಕುಮಾರ್ ಆರನೇ ಬಾರಿ ಮೊದಲ ದಿನ ಹೆಚ್ಚು ಹಣವನ್ನು ಗಳಿಸಿದ್ದಾರೆ. ನಿಜಾ. ಮೊದಲ ದಿನ ಅತೀ ಹೆಚ್ಚು ಹಣ ಗಳಿಸಿದ ಮೇಲಿನ ಅಕ್ಷಯ್ ಕುಮಾರ್ ಅವರ ಈ ಚಿತ್ರಗಳಲ್ಲಿ ''ಸೂರ್ಯವಂಶಿ'' ಮತ್ತು ''ಹೌಸ್ ಫುಲ್ 5'' ಮಾತ್ರ ಗೆದ್ದಿವೆ. ಇನ್ನುಳಿದ 3 ಚಿತ್ರಗಳು ಮೊದಲ ದಿನ ಒಳ್ಳೆಯ ಗಳಿಕೆಯನ್ನು ಕಂಡರೂ ಕೂಡ ಆ ನಂತರ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿವೆ.
ಆದರೆ.. ''ಜಾಲಿ'' ವಿಚಾರದಲ್ಲಿ ಈ ಟ್ರ್ಯಾಕ್ ರೆಕಾರ್ಡ್ ಬದಲಾಗುವ ಸಾಧ್ಯತೆ ಇದೆ. ಯಾಕೆಂದರೆ ನಿನ್ನೆ ಮೊದಲ ದಿನ (ಸೆಪ್ಟೆಂಬರ್ 19) ಚಿತ್ರಕ್ಕೆ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ವಿಮರ್ಷಕರು ಮಾತ್ರವಲ್ಲ ಪ್ರೇಕ್ಷಕರು ಕೂಡ ಈ ಕೋರ್ಟ್‌ರೂಮ್ ಡ್ರಾಮಾ ಮೆಚ್ಚಿ ನಾಲ್ಕೊಳ್ಳೆಯ ಮಾತುಗಳನ್ನಾಡಿದ್ದಾರೆ. ಈ ಹಿನ್ನೆಲೆ ಇಂದು ಮತ್ತು ನಾಳೆ ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡು ಬರುವ ಎಲ್ಲಾ ಸಾಧ್ಯತೆಗಳಿವೆ. ಟ್ರೇಡ್ ವಿಶ್ಲೇಷಕರ ಪ್ರಕಾರ ಇಂದು ಚಿತ್ರದ ಗಳಿಕೆ ₹15 ಕೋಟಿಗಿಂತ ಹೆಚ್ಚಾಗುವ ಸಾಧ್ಯತೆ ಇದೆ.
ಹಾಗೊಂದು ವೇಳೆ ಇಂದು ಮತ್ತು ನಾಳೆ ಚಿತ್ರದ ಗಳಿಕೆ ಏರಿಕೆಯಾದರೆ ಸೋಮವಾರದ ಪರೀಕ್ಷೆಯಲ್ಲಿ ಕೂಡ ಈ ಜಾಲಿ ಪಾಸಾದರೆ ಅಕ್ಷಯ್ ಕುಮಾರ್ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳುವ ಸಾಧ್ಯತೆ ಇದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











