Alpha Box Office Day 3 ; ಆದಿತ್ಯ ಚೋಪ್ರಾಗೆ ಮುಖಭಂಗ, YRF ಸ್ಪೈ ಯುನಿವರ್ಸ್‌ನಲ್ಲಿ ಹೀನಾಯ ಪ್ರದರ್ಶನ ಕಂಡ ಆಲಿಯಾ ಭಟ್ ಆಲ್ಫಾ

ಒಂದು ಚಿತ್ರ ಗೆಲ್ಲಬೇಕು ಅಂದರೆ ಅದರಲ್ಲಿ ಹತ್ತಾರು ಅಂಶಗಳಿರಬೇಕು. ಚೆಂದದ ಕಥೆ ಅದಕ್ಕೆ ಪೂರಕವಾದ ಚಿತ್ರಕಥೆ, ಸಂಭಾಷಣೆ, ಸಂಗೀತ, ತಂತ್ರಜ್ಞರ ಕೈ ಚಳಕ ಎಲ್ಲವೂ ಒಂದಕ್ಕೊಂದು ಕೂಡಿ ಬರಬೇಕು. ಅದಿಲ್ಲದೇ ಕೇವಲ ಸ್ಟಾರ್ ವ್ಯಾಲ್ಯೂ ಮಾತ್ರ ಸಾಕು ಚಿತ್ರ ಗೆಲ್ಲುತ್ತೆ ಎನ್ನುವ ಭ್ರಮೆಯಲ್ಲಿ ಇರುವ ಬರುವ ಸೂಪರ್ ಸ್ಟಾರ್‌ಗಳನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ಆ ಚಿತ್ರವನ್ನು ಪ್ರೇಕ್ಷಕರು ಕಣ್ಣೆತ್ತಿ ಕೂಡ ನೋಡಲಾರರು. ಇದಕ್ಕೆ ''ಆಲ್ಫಾ'' ಸದ್ಯದ ಉದಾಹರಣೆ.

ಹೌದು, ''ಆಲ್ಫಾ''.. ಅಲ್ಲೊಂದು.. ಇಲ್ಲೊಂದು.. ಗೆಲುವನ್ನು ಹೊರತು ಪಡಿಸಿದರೆ, ಸತತ ಸೋಲುಗಳಿಂದ ಈ ವರ್ಷ ಕೂಡ ಬಸವಳಿದ ಬಾಲಿವುಡ್‌ಗೆ ಹೊಸ ಚೈತನ್ಯ ತುಂಬಬೇಕಿದ್ದ ಸಿನಿಮಾ. ಆದರೆ.. ಅತಿಯಾದ ನಂಬಿಕೆ.. ಹಳಸಲು ಕಥೆ.. ಪ್ರೇಕ್ಷಕರು ಎಂತಹ ಸಿನಿಮಾ ಮಾಡಿದರು ನೋಡುತ್ತಾರೆ ಎನ್ನುವ ಉಡಾಫೆ.. ''ಆಲ್ಫಾ'' ಚಿತ್ರವನ್ನು ಸದ್ಯ ಪ್ರಪಾತಕ್ಕೆ ನೂಕಿದೆ. ಗೂಡಾಚಾರಿಗಳ ಕಥೆಯನ್ನು ನಮ್ಮಷ್ಟು ಸೊಗಸಾಗಿ ಯಾರು ಹೇಳಲಾರರು ಎಂದು ಹಿಂದೆ ಎಲ್ಲ ಬೀಗುತ್ತಿದ್ದ ಯಶ್ ರಾಜ್ ಸಂಸ್ಥೆಗೆ ಈ ಮೂಲಕ ಮತ್ತೊಂದು ಆಘಾತವಾಗಿದೆ.

alia-sharvari-s-alpha-settles-for-weakest-weekend-opening-ever-at-33-cr

ಮೊದಲ ಮೂರು ದಿನ ''ಆಲ್ಫಾ'' ಗಳಿಸಿದ್ದೆಷ್ಟು ..?

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಪ್ರಕಾರ ''ಆಲ್ಫಾ'' ಮೊದಲ ಮೂರು ದಿನದ ಹೇಳಿಕೊಳ್ಳುವಂತಹ ಸಾಧನೆಯನ್ನೇನು ಮಾಡಿಲ್ಲ. ಕೇವಲ ₹34 ಕೋಟಿಯನ್ನು ಮಾತ್ರ ಭಾರತದಲ್ಲಿ ಈ ಚಿತ್ರ ಗಳಿಸಿದೆ.


''ಸ್ಯಾಕ್ನಿಲ್'' ಪ್ರಕಾರ ''ಆಲ್ಫಾ'' ಚಿತ್ರದ ಮೊದಲ ಮೂರು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ದಿನ ಭಾರತದ ನೆಟ್ ಗಳಿಕೆ
ಮೊದಲ ದಿನ - (ಶುಕ್ರವಾರ) ₹9.25 ಕೋಟಿ
ಎರಡನೇ ದಿನ - (ಶನಿವಾರ) ₹11.50 ಕೋಟಿ
ಮೂರನೇ ದಿನ -(ಭಾನುವಾರ) ₹13.25 ಕೋಟಿ

ಒಟ್ಟು ಭಾರತದ ಗಳಿಕೆ ₹34.00 ಕೋಟಿ (ನೆಟ್)

ನಿಜ. ''ಆಲ್ಫಾ''.. ಯಶ್ ರಾಜ್ ಸಂಸ್ಥೆಯಡಿ ಮಾಡಲಾದ ಹೊಸ ಪ್ರಯತ್ನ. ಈ ಹಿಂದೆ ವೈ.ಆರ್.ಎಫ್ ನಿರ್ಮಾಣದ ಸ್ಫೈ ಯುನಿವರ್ಸ್‌ಗೆ ಹೋಲಿಸಿಕೊಂಡರೆ ಇಲ್ಲಿ ಮಹಿಳೆಯರದ್ದೇ ಅಬ್ಬರ ಇದೆ. ಆದರೆ.. ಕೊನೆಯಲ್ಲಿ ಬಾಕ್ಸಾಫೀಸ್‌ನಲ್ಲಿ ಲೆಕ್ಕಕ್ಕೆ ಬರುವುದು ಅಂಕಿ-ಅಂಶಗಳೆ.

ಇನ್ನು ಆಲಿಯಾ ಭಟ್ ಸ್ಟಾರ್ ಪವರ್ ಕಡಿಮೆ ಇಲ್ಲ. ಹಿಂದೆ ''ಗಂಗೂಬಾಯಿ ಕಾಠಿಯಾವಾಡಿ'' ಮತ್ತು ''ರಾಜಿ''ಯಂತಹ ಚಿತ್ರಗಳನ್ನು ತಮ್ಮ ಹೆಗಲ ಮೇಲೆ ಹೊತ್ತು ಗೆಲುವಿನ ದಡ ತಲುಪಿಸಿದ್ದರು ಆಲಿಯಾ ಭಟ್. ಚಿತ್ರದ ಮತ್ತೊಬ್ಬ ಕಥಾನಾಯಕಿ ಶರ್ವರಿ ಕೂಡ ಅಸಾಮಾನ್ಯ ಪ್ರತಿಭೆ. ಚಿತ್ರದಿಂದ ಚಿತ್ರಕ್ಕೆ ಇವರ ಕ್ರೇಜ್ ಹೆಚ್ಚುತ್ತಲೇ ಇದೆ. ಆದಾಗ್ಯೂ ಕೂಡ ''ಆಲ್ಫಾ'' ಕೇವಲ ಮೊದಲ ಮೂರು ದಿನದ ಆಟ ಕೇವಲ ₹34 ಕೋಟಿಗೆ ಮುಗಿಸಿದೆ. ಬಾಕ್ಸಾಫೀಸ್ ಪಂಡಿತರಿಗೆ ಸಹಜವಾಗಿಯೇ ''ಆಲ್ಫಾ''ನ ಈ ಪ್ರದರ್ಶನದಿಂದ ನಿರಾಸೆಯಾಗಿದೆ.

alia-sharvari-s-alpha-settles-for-weakest-weekend-opening-ever-at-33-cr

ಕಳಪೆ ಓಪನಿಂಗ್ ಪಡೆದ ಮೊದಲ ಚಿತ್ರ ''ಆಲ್ಫಾ''

ಅಂದ್ಹಾಗೇ ತಮ್ಮ ಈ ಸ್ಪೈ ಯುನಿವರ್ಸ್‌ನ ಭಾಗವಾಗಿ ಯಶ್ ರಾಜ್ ಸಂಸ್ಥೆ ಇಲ್ಲಿಯವರೆಗೆ ಆರು ಚಿತ್ರಗಳನ್ನು ಮಾಡಿದೆ. ''ಆಲ್ಫಾ'' ಏಳನೇಯದ್ದು. ಈ 7ರಲ್ಲಿ ಅತೀ ಕಳಪೆ ಓಪನಿಂಗ್ ಪಡೆದ, ಮೊದಲ ವಾರಾಂತ್ಯದಲ್ಲಿ ಅತ್ಯಂತ ಕಡಿಮೆ ಹಣ ಗಳಿಸಿದ ಚಿತ್ರ ಎನ್ನುವ ಕುಖ್ಯಾತಿಗೆ ''ಆಲ್ಫಾ'' ಪಾತ್ರವಾಗಿದೆ.

ವೈಆರ್‌ಎಫ್ ಸ್ಪೈ ಸಿನಿಮಾಗಳ ಮೊದಲ ವೀಕೆಂಡ್ ಕಲೆಕ್ಷನ್

1. ಪಠಾಣ್: ₹280.75 ಕೋಟಿ (ಬುಧವಾರ ರಿಲೀಸ್)
2. ವಾರ್ 2: ₹175.75 ಕೋಟಿ (ಗುರುವಾರ ರಿಲೀಸ್)
3. ವಾರ್: ₹166.25 ಕೋಟಿ (ಬುಧವಾರ ರಿಲೀಸ್)
4. ಟೈಗರ್ ಜಿಂದಾ ಹೈ: ₹114.93 ಕೋಟಿ(ಶುಕ್ರವಾರ ರಿಲೀಸ್)
5. ಏಕ್ ಥಾ ಟೈಗರ್: ₹100.57 ಕೋಟಿ(ಬುಧವಾರ ರಿಲೀಸ್)
6. ಟೈಗರ್ 3: ₹44.50 ಕೋಟಿ (ಭಾನುವಾರ ರಿಲೀಸ್)
7. ಆಲ್ಫಾ: ₹34.00 ಕೋಟಿ (ಶುಕ್ರವಾರ ರಿಲೀಸ್)

ಮುಂದಿದೆ ಕಲ್ಲು ಮುಳ್ಳಿನ ಹಾದಿ

ಮಾಧ್ಯಮಗಳಲ್ಲಿ ವರದಿಯಾದಂತೆ ''ಆಲ್ಫಾ'' ಚಿತ್ರಕ್ಕೆ 130 ಕೋಟಿ + ಹಣ ಸುರಿಯಲಾಗಿದೆ. ಆದರೆ, ಗಳಿಕೆ ಸಾಧಾರಣವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರಕ್ಕೆ ಪ್ರೇಕ್ಷಕರ ಪ್ರೀತಿಯೂ ಸಿಕ್ಕಿಲ್ಲ. ವಿಮರ್ಶಕರು ಕೂಡ ಜೈ ಎಂದಿಲ್ಲ. ಈ ಮಿಶ್ರ ಪ್ರತಿಕ್ರಿಯೆ ಚಿತ್ರದ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ. ಇಂದು (ಜುಲೈ 6) ವಾರದ ದಿನವಾದ ಹಿನ್ನೆಲೆ ಚಿತ್ರದ ಗಳಿಕೆಯಲ್ಲಿ ಭಾರೀ ಕುಸಿತ ಕಂಡು ಬರುವ ಸಾಧ್ಯತೆಯೂ ಇದೆ. ಒಂದು ವೇಳೆ ಈ ಕುಸಿತ 50% ಮೇಲಿದ್ದರೆ ''ಆಲ್ಫಾ'' ಮತ್ತೆ ಚೇತರಿಸಿಕೊಳ್ಳುವುದು ಅಸಾಧ್ಯ.

ಒಟ್ನಲ್ಲಿ ಚಿತ್ರದಲ್ಲಿ ಎಷ್ಟೇ ಪ್ರತಿಭಾವಂತರು ಇರಲಿ. ಆದರೆ ಚಿತ್ರದ ಕಥೆಯಲ್ಲಿ ಹೊಸತನ ಇರದಿದ್ದರೆ ಪ್ರೇಕ್ಷಕರನ್ನು ಚಿತ್ರಮಂದಿರದವರೆಗೆ ಎಳೆದು ತರುವುದು ಅಸಾಧ್ಯ. ಈ ಮಾತನ್ನು ಸದ್ಯ ''ಆಲ್ಫಾ'' ಸಾಬೀತು ಮಾಡಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
A shock for the YRF Spy Universe! Alia Bhatt & Sharvari's 'Alpha' opens to a soft ₹33 Cr weekend. Is this the franchise's biggest box office misfire yet?
Read more about: alia bhat bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X