ಆಲಿಯಾ ಭಟ್‌ಗೆ ಅಜಯ್ ದೇವಗನ್ ಅಡ್ಡಗಾಲು ; ಧಮಾಲ್ ಶುರುವಾಗುವ ಮುನ್ನ ಆಲ್ಫಾಗೆ ಮರಳಿ ಬರುತ್ತಾ ಬಂಡವಾಳ
ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಆದರೆ, ಹೀಗೆ ಚಿತ್ರರಂಗಕ್ಕೆ ಬರುವ ಎಲ್ಲರಿಗೆ ಇಲ್ಲಿ ಗೆಲುವು ಸಿಗುವುದಿಲ್ಲ. ತೀರಾ ಅಪರೂಪಕ್ಕೆ ಎಂಬಂತೆ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಗೆಲ್ಲುತ್ತಾರೆ. ಆ ಪೈಕಿ ಆಲಿಯಾ ಭಟ್ ಕೂಡ ಒಬ್ಬರು.
ಹೌದು, ಖ್ಯಾತ ನಿರ್ದೇಶಕ ಮಹೇಶ್ ಭಟ್ ಮಗಳು ಎಂಬ ಕಾರಣಕ್ಕೆ ಆಲಿಯಾಗೆ ಚಿತ್ರರಂಗದ ಬಾಗಿಲು ಸುಲಭವಾಗಿ ಏನೋ ತೆರೆಯಿತು. ಆದರೆ. ಆ ನಂತರ ಆಲಿಯಾ ನೆಲೆಯೂರಿದ್ದು, ಬೆಳೆದಿದ್ದು ತನ್ನ ಸ್ವಂತ ಬಲದಿಂದಲೇ. ಇದನ್ನು ಯಾರು ಅಲ್ಲಗೆಳೆಯಲು ಸಾಧ್ಯ ಇಲ್ಲ. ಉಡ್ತಾ ಪಂಜಾಬ್..ಗಂಗೂಭಾಯಿ ಕಾಠಿಯಾವಾಡಿ.. ರಾಜಿ.. ಇವರ ಅಭಿನಯ ಸಾಮರ್ಥ್ಯಕ್ಕೆ ಹಿಡಿದ ಅತ್ಯುತ್ತಮ ಕೈಗನ್ನಡಿಗಳು.

English summary
Alpha Box Office Collection Day 5: Alia Bhatt's actioner eyes the ₹50 cr club after a surprise Tuesday surge. Will the Dhamaal 4 release halt its run?


Click it and Unblock the Notifications