ಅಂದು ಮಗ ಇಂದು ಮೊಮ್ಮಗ ; ಮೊದಲ ಪ್ರಯತ್ನದಲ್ಲಿ ಸೋತ ಅಮಿತಾಬ್ ಬಚ್ಚನ್ ಕುಟುಂಬದ ಕುಡಿ ಅಗಸ್ತ್ಯ

ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಆದರೆ, ಹೀಗೆ ಚಿತ್ರರಂಗಕ್ಕೆ ಬರುವ ಎಲ್ಲರಿಗೆ ಇಲ್ಲಿ ಗೆಲುವು ಸಿಗುವುದಿಲ್ಲ. ತೀರಾ ಅಪರೂಪಕ್ಕೆ ಎಂಬಂತೆ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಗೆಲ್ಲುತ್ತಾರೆ. ಮಿಕ್ಕಂತೆ ಕೆಲವರು ಎಡವುತ್ತಾರೆ. ಮತ್ತೆ ಮತ್ತೆ ಪ್ರಯತ್ನ ಮಾಡುತ್ತಾರೆ. ಇನ್ನೂ ಕೆಲವರು....

ಬಂದ ದಾರಿಗೆ ಸುಂಕ ಇಲ್ಲ ಎಂದು ಮನೆಗೆ ಮರಳುತ್ತಾರೆ. ಇದರಲ್ಲಿ ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯಾ ನಂದಾ ಯಾವ ಸಾಲಿನಲ್ಲಿ ಸೇರುತ್ತಾರೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ಮೊದಲ ಪ್ರಯತ್ನದಲ್ಲಿ ಅಗಸ್ತ್ಯಾಗೆ ಸೋಲಾಗಿದೆ. ''ಧುರಂಧರ್'' ಅಲೆಯ ಎದುರು ಅಗಸ್ತ್ಯಾನ ಮೊದಲ ಚಿತ್ರ ''ಇಕ್ಕೀಸ್‌'' ಬಾಕ್ಸಾಫೀಸ್‌ನಲ್ಲಿ ಕೊಚ್ಚಿಕೊಂಡು ಹೋಗಿದೆ.

The War Within Agastya Nanda s Ikkis Gasps for Air as 30 Crore Dream Slips Away on Day 10

ಹೌದು, ಅಸಲಿಗೆ ''ಇಕ್ಕೀಸ್'' ಕಳೆದ ವರ್ಷಾಂತ್ಯದಲ್ಲಿ ಅಂದರೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತೆರೆಗೆ ಬರಬೇಕಿತ್ತು. ಆದರೆ.. ''ಧುರಂಧರ್'' ಅಬ್ಬರಕ್ಕೆ ಬೆದರಿದ ಚಿತ್ರತಂಡ ಒಂದು ವಾರ ಚಿತ್ರದ ಬಿಡುಗಡೆಯನ್ನು ಮುಂದೂಡಿತ್ತು. ಹೊಸ ವರುಷ.. ಹೊಸ ಹರುಷ ತರುತ್ತೆ.. ''ಧುರಂಧರ್'' ಕ್ರೇಜ್ ಕಡಿಮೆಯಾಗಿರುತ್ತೆ ಎಂಬ ಲೆಕ್ಕಾಚಾರದಲ್ಲಿ ಚಿತ್ರವನ್ನು ಜನವರಿ 1ರಂದು ಬಿಡುಗಡೆ ಮಾಡಿತ್ತು. ಆದರೆ ಈ ಲೆಕ್ಕಾಚಾರ ಕೂಡ ಬುಡಮೇಲಾಗಿದೆ.

ಹಾಗೇ ನೋಡಿದರೆ ಮೊದಲ ದಿನ (ಜನವರಿ 1 ) ''ಇಕ್ಕಿಸ್'' ಭರವಸೆಯನ್ನು ಮೂಡಿಸಿತ್ತು. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿಯಂತೆ ₹ 7.00 ಕೋಟಿಯನ್ನು ಗಳಿಸಿತ್ತು. ಹೊಸ ಹುಡುಗನ ಚಿತ್ರಕ್ಕೆ ಇದು ಉತ್ತಮವಾದ ಆರಂಭ ಎಂದೇ ಟ್ರೇಡ್ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದರು. ಆದರೆ, ಆ ವಾರಾಂತ್ಯದ ನಂತರ ಶುರುವಾದ ಕುಸಿತದಲ್ಲಿ ಮತ್ತೆ ಚೇತರಿಕೆ ಕಂಡು ಬರಲೇ ಇಲ್ಲ. ಪರಿಣಾಮ ಈ ಹತ್ತು ದಿನದಲ್ಲಿ ''ಇಕ್ಕೀಸ್'' ಕೇವಲ ₹ 27.44 ಕೋಟಿಯನ್ನಷ್ಟೇ ಗಳಿಸಿದೆ. ₹30 ಕೋಟಿಯ ಗಡಿಯನ್ನು ತಲುಪುವುದು ಕಷ್ಟ ಎನ್ನುವ ವಾತಾವರಣ ಸದ್ಯ ನಿರ್ಮಾಣವಾಗಿದೆ.

The War Within Agastya Nanda s Ikkis Gasps for Air as 30 Crore Dream Slips Away on Day 10

''ಸ್ಯಾಕ್ನಿಲ್'' ಪ್ರಕಾರ ''ಇಕ್ಕಿಸ್'' ಚಿತ್ರದ ಮೊದಲ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ [ಗುರುವಾರ]₹ 7 ಕೋಟಿ
ಎರಡನೇ ದಿನ [ಶುಕ್ರವಾರ]₹3.5 ಕೋಟಿ
ಮೂರನೇ ದಿನ [ಶನಿವಾರ]₹ 4.65 ಕೋಟಿ
ನಾಲ್ಕನೇ ದಿನ [ಭಾನುವಾರ]₹5 ಕೋಟಿ
ಐದನೇ ದಿನ [ಸೋಮವಾರ]₹1.35 ಕೋಟಿ
ಆರನೇ ದಿನ [ಮಂಗಳವಾರ]₹1.6 ಕೋಟಿ
ಏಳನೇ ದಿನ [ಬುಧವಾರ]₹1.15 ಕೋಟಿ
ಎಂಟನೇ ದಿನ [ಗುರುವಾರ] ₹1.25ಕೋಟಿ
ಒಂಬತ್ತನೇ ದಿನ [ಶುಕ್ರವಾರ]₹85ಲಕ್ಷ
ಹತ್ತನೇ ದಿನ [ ಶನಿವಾರ] ₹1.9 ಕೋಟಿ

ಒಟ್ಟು ಗಳಿಕೆ - ₹ 27.44 ಕೋಟಿ

ಹೀಗೆ ಹತ್ತು ದಿನದಲ್ಲಿ ₹27.44 ಕೋಟಿಯನ್ನು ''ಇಕ್ಕೀಸ್'' ಗಳಿಸಿದ್ದು ಬಹುತೇಕ ಕಡೆ ಈಗಾಗಲೇ ಚಿತ್ರಮಂದಿರದಿಂದ ಚಿತ್ರ ಎತ್ತಂಗಡಿಯಾಗಿದೆ. ಇನ್ನು ಈ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಲವು ಚಿತ್ರಗಳು ತೆರೆಗೆ ಬರುತ್ತಿವೆ. ಈ ಹಿನ್ನೆಲೆ 30 ಕೋಟಿಯ ಗಡಿಯನ್ನು ಈ ಚಿತ್ರ ತಲುಪುವುದು ಕಷ್ಟ ಎನ್ನುವ ಮಾತು ಸದ್ಯ ಬಾಲಿವುಡ್‌ನಲ್ಲಿ ಕೇಳಿ ಬರುತ್ತಿವೆ.

ಅಂದ್ಹಾಗೇ ಸರಿಯಾಗಿ 26 ವರ್ಷದ ಹಿಂದೆ ಅಮಿತಾಬ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ''ರೆಫ್ಯೂಜಿ'' ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದ್ದರು. ಅಭಿಷೇಕ್ ಬಚ್ಚನ್ ಅವರಂತೆಯೇ ಕರೀನಾ ಕಪೂರ್ ಅವರಿಗೆ ಕೂಡ ಇದು ಮೊದಲ ಪ್ರಯತ್ನವಾಗಿತ್ತು. ಕಾಕತಾಳೀಯ ಎಂಬಂತೆ ''ರೆಫ್ಯೂಜಿ'' ಕಥೆ ಕೂಡ ಗಡಿಯ ಸುತ್ತ ಸುತ್ತಿತ್ತು. ಈಗ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದ ಅವರ ''ಇಕ್ಕೀಸ್'' ಕೂಡ ಯುದ್ಧದ ಹಿನ್ನೆಲೆಯಲ್ಲಿಯೇ ಸಾಗುತ್ತೆ. ಭಾವನಾತ್ಮಕವಾಗಿ ಕಥೆ ಅರಳುತ್ತೆ. ಆದರೂ ಕೂಡ ಆಗ ಅಭಿಷೇಕ್ ಬಚ್ಚನ್ ಸೋತಂತೆ ಅಗಸ್ತ್ಯ ತಮ್ಮ ಮೊದಲ ಪ್ರಯತ್ನದಲ್ಲಿ ಈಗ ಸೋತಿದ್ದಾರೆ. ಈ ಮೂಲಕ ಅಮಿತಾಬ್ ಬಚ್ಚನ್ ಕುಟುಂಬದ ಕುಡಿಗಳಿಗೆ ಮೊದಲ ಚಿತ್ರದಲ್ಲಿ ಸೋಲಿನ ದರ್ಶನವಾದಂತಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Ikkis Day 10: Agastya Nanda fails the first test as his war drama hits a wall. See the full box office breakdown and why the Bachchan scion is struggling to reach ₹30 Cr.
Read more about: bollywood amitabh bachchan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X