Assi Box Office Collection Day 4 ; ತಾಪ್ಸಿ ಪನ್ನು ತಪಸ್ಸಿಗೆ ಸಿಕ್ತಾ ಫಲ ? 4 ದಿನದಲ್ಲಿ 'ಅಸ್ಸಿ' ಗಳಿಸಿದ್ದೆಷ್ಟು ?

ಕಾಲ ಬದಲಾಗಿದೆ. ಅದಕ್ಕೆ ತಕ್ಕಂತೆ ಪ್ರೇಕ್ಷಕರ ಅಭಿರುಚಿ ಕೂಡ ಬದಲಾಗಿದೆ. ಇವತ್ತು ಹೊಸಬರು ಹಳಬರು ಎನ್ನುವುದು ಮುಖ್ಯವಲ್ಲ. ಚಿತ್ರದ ಕೇಂದ್ರಬಿಂದು ನಾಯಕನಾ..? ನಾಯಕಿನಾ..? ಎನ್ನುವುದು ಕೂಡ ಮುಖ್ಯ ಅಲ್ಲ. ಪ್ರೇಕ್ಷಕರಿಗೆ ಕಥೆ ಆಪ್ತವಾದರೆ ಸಾಕು. ಆ ಚಿತ್ರವನ್ನು ಹೊತ್ತು ಮೆರೆಸುತ್ತಾರೆ. ಗೆಲುವಿನ ದಡಕ್ಕೆ ತಲುಪಿಸುತ್ತಾರೆ.

ನಿಜಾ ಗೆಲ್ಲುವ ಅರ್ಹತೆ ಇದ್ದರೂ ಕೂಡ ಕೆಲ ಒಮ್ಮೆ ಚಿತ್ರಮಂದಿರಗಳಲ್ಲಿ ಚಿತ್ರಗಳು ಸೋತಿವೆ. ಆದರೆ ಇಂತಹ ಚಿತ್ರಗಳಿಗೆ ಸಿಗಬೇಕಾದ ಜನಮನ್ನಣೆ ಸಿಕ್ಕಿಯೇ ಸಿಕ್ಕಿದೆ. ಅದು ಓಟಿಟಿಯಲ್ಲಿರಬಹುದು.. ಯೂಟ್ಯೂಬ್‌ನಲ್ಲಿರಬಹುದು ಅಥವಾ ಕಿರುತೆರೆಯಲ್ಲಿಯೇ ಇರಬಹುದು.

Assi Monday Meltdown Taapsee Pannu s Sunday Spark Fails to Ignite as Collections Crash 60

ತಾಪ್ಸಿ ಪನ್ನು ಅಭಿನಯದ ''ಅಸ್ಸಿ'' ಈ ಪೈಕಿ ಯಾವ ಸಾಲಿನಲ್ಲಿ ಸೇರುತ್ತೆ..? ಸೇರುತ್ತಾ ಸೇರಲ್ವಾ ? ಚಿತ್ರಮಂದಿರಗಳಲ್ಲಿ ಸೋಲುತ್ತಾ..? ಓಟಿಟಿಯಲ್ಲಿ ಗೆಲ್ಲುತ್ತಾ..? ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ಮೊದಲ ದಿನಕ್ಕೆ ಹೋಲಿಸಿದರೆ ''ಅಸ್ಸಿ'' ಚಿತ್ರದ ಎರಡನೇ ಮತ್ತು ಮೂರನೇ ದಿನದ ಗಳಿಕೆಯಲ್ಲಿ ಏರಿಕೆ ಕಂಡು ಬಂದಿದೆ. ನಾಲ್ಕನೇ ದಿನ ಸೋಮವಾರ ಸಹಜವಾಗಿ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬಂದಿದೆ. ಬಾಕ್ಸಾಫೀಸ್ ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ "ಸ್ಯಾಕ್ನಿಲ್ " ಪ್ರಕಾರ ಅನುಭವ್ ಸಿನ್ಹಾ ನಿರ್ದೇಶನದ ''ಅಸ್ಸಿ'' 4 ದಿನದಲ್ಲಿ ₹4.95 ಕೋಟೆಯನ್ನು ಗಳಿಸಿದೆ.

ಸ್ಯಾಕ್ನಿಲ್ ಪ್ರಕಾರ '' ಅಸ್ಸಿ'' ಚಿತ್ರದ 4 ದಿನದ ಗಳಿಕೆ ಈ ಕೆಳಗಿನಂತೆ ಇದೆ

ಮೊದಲ ದಿನ [ ಶುಕ್ರವಾರ ] ₹1 ಕೋಟಿ
ಎರಡನೇ ದಿನ [ ಶನಿವಾರ ] ₹1.6 ಕೋಟಿ
ಮೂರನೇ ದಿನ [ಭಾನುವಾರ] ₹1.6 ಕೋಟಿ
ನಾಲ್ಕನೇ ದಿನ [ಸೋಮವಾರ] ₹75 ಲಕ್ಷ *ಅಂದಾಜು

ಒಟ್ಟು ಗಳಿಕೆ - ₹ 4.95 ಕೋಟಿ

assi-monday-meltdown-taapsee-pannu-s-sunday-spark-fails-to-ignite-as-collections-crash-60

ಅಸ್ಸಿ VS ಥಪ್ಪಡ್ VS ಮುಲ್ಕ್

ಅಂದ್ಹಾಗೇ ''ಅಸ್ಸಿ'' ಅನುಭವ್ ಸಿನ್ಹಾ ಜೊತೆ ತಾಪ್ಸಿ ಪನ್ನು ಮಾಡಿರುವ ಮೂರನೇ ಪ್ರಯತ್ನ. ಈ ಹಿಂದೆ ''ಥಪ್ಪಡ್'' ಮತ್ತು ''ಮುಲ್ಕ್'' ಚಿತ್ರಗಳನ್ನು ತಾಪ್ಸಿ ಇದೇ ಅನುಭವ ಸಿನ್ಹಾ ಜೊತೆ ಮಾಡಿದ್ದರು. ಆ ಪೈಕಿ 2018ರಲ್ಲಿ ಬಂದಿದ್ದ ''ಮುಲ್ಕ್'' ಬಾಕ್ಸಾಫೀಸ್‌ನಲ್ಲಿ ಮೊದಲ ನಾಲ್ಕು ದಿನದಲ್ಲಿ ₹9.36 ಕೋಟಿಯನ್ನು ದೋಚಿತ್ತು.

ಇನ್ನು 2020ರಲ್ಲಿ ಬಂದ ''ಥಪ್ಪಡ್'' ''ಸ್ಯಾಕ್ನಿಲ್'' ಪ್ರಕಾರ ನಾಲ್ಕು ದಿನದಲ್ಲಿ ಹತ್ ಹತ್ರ 18 ಕೋಟಿಯನ್ನು ಕೊಳ್ಳೆ ಹೊಡೆದಿತ್ತು. ಈ ಎರಡು ಚಿತ್ರಗಳಿಗೆ ಹೋಲಿಸಿದರೆ ಸದ್ಯ ''ಅಸ್ಸಿ'' ಬಾಕ್ಸಾಫೀಸ್‌ನ ರೇಸ್‌ನಲ್ಲಿ ಹಿಂದೆ ಇದೆ. ವಿಮರ್ಷಕರಿಂದ ಮತ್ತು ಪ್ರೇಕ್ಷಕರಿಂದ ''ಅಸ್ಸಿ'' ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸದ್ಯ ಸಿಕ್ಕಿದೆ. ಯಾರಿಗೆ ಗೊತ್ತು ಮುಂಬರುವ ದಿನಗಳಲ್ಲಿ ''ಅಸ್ಸಿ'' ಗಳಿಕೆಯಲ್ಲಿ ಏರಿಕೆ ಕಂಡು ಬಂದರು ಬರಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಮಾರ್ಚ್ 19ರವರೆಗೆ ಮೈದಾನ ಖಾಲಿ ಇದೆ. ಈ ಅಂಶ ''ಅಸ್ಸಿ'' ಸಹಕಾರಿಯಾದರೂ ಆಗಬಹುದು.

ಒಟ್ನಲ್ಲಿ ಸದ್ಯ ''ಅಸ್ಸಿ'' ನಾಲ್ಕು ದಿನದಲ್ಲಿ ₹4.95 ಕೋಟಿಯನ್ನು ಗಳಿಸಿದೆ. ತಾಪ್ಸಿ ಮತ್ತು ಅನುಭವ್ ಸಿನ್ಹಾ ಪಾಲಿಗೆ ಈ ವಾರ ತುಂಬಾನೇ ಮಹತ್ವದ್ದಾಗಿದ್ದು ಮೌತ್ ಪಬ್ಲಿಸಿಟಿ ಈ ಚಿತ್ರಕ್ಕೆ ಸಹಕಾರಿಯಾಗುತ್ತಾ..? ಈ ವಾರಾಂತ್ಯದಲ್ಲಿ ಚಿತ್ರ ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ತಾಪ್ಸಿ ಪನ್ನು ತಪಸ್ಸಿಗೆ ಫಲ ಸಿಕ್ತಾ, ಇಲ್ವಾ..? ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Taapsee Pannu’s Assi Box Office Report: Explore the day 4 collections as Monday sees a significant dip following a steady weekend. With a total of ₹4.74 Cr, can Anubhav Sinha’s latest film find its footing against O’Romeo and Border 2
Read more about: taapsee pannu bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X