Jolly LLB 3 Box Office Day 7 ; ಬಾಕ್ಸಾಫೀಸ್‌ನಲ್ಲಿ ಜಾಲಿ ಜಾದೂ, ಒಂದು ವಾರದಲ್ಲಿ ₹100 ಕೋಟಿ ಲೂಟಿ ಆಯ್ತಾ ?
ಚಿತ್ರರಂಗ ಮಾತ್ರ ಅಲ್ಲ ಯಾವುದೇ ಕ್ಷೇತ್ರವಾದರು ಕೂಡ ಅಲ್ಲಿ ಗೆಲುವು ಮತ್ತು ಸೋಲು ಮಾಮೂಲು. ಆದರೆ .. ಗೆದ್ದಾಗ ಹಿರಿಹಿರಿ ಹಿಗ್ಗುವ ಅನೇಕರು ಸೋತಾಗ ಕುಗ್ಗಿ ಹೋಗುತ್ತಾರೆ. ತಮ್ಮ ಮೇಲೆ ತಾವೇ ನಂಬಿಕೆ ಕಳೆದುಕೊಳ್ಳುತ್ತಾರೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಸೋಲೇ ಗೆಲುವಿನ ಸೋಪಾನ ಎಂದು ನಿರಂತರ ಪ್ರಯತ್ನ ಮಾಡುತ್ತಾರೆ.
ಆದರೂ ಕೂಡ ಒಮ್ಮೊಮ್ಮೆ ಅದೆಷ್ಟೇ ಪ್ರಯತ್ನವನ್ನು ಮಾಡಿದರೂ ಕೂಡ ಗೆಲುವು ಎನ್ನುವುದು ಸಿಗದೇ ಮತ್ತೆ ಸತಾಯಿಸುತ್ತೆ. ಇಂಥಹದ್ದೊಂದು ಸೋಲಿನ ಕಮರಿಗೆ ಬಿದ್ದು ಒದ್ದಾಡುತ್ತಿರುವ ಅಕ್ಷಯ್ ಕುಮಾರ್ ಸದ್ಯ ಕಳೆದು ಹೋದ ತಮ್ಮ ''ಸ್ಟಾರ್‌ಡಮ್''ನ ಮರಳಿ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಈ ಬಾರಿ ತಮ್ಮ ಈ ಪ್ರಯತ್ನದಲ್ಲಿ ಅಕ್ಷಯ್ ಕುಮಾರ್ ಎಷ್ಟು ಯಶಸ್ವಿಯಾಗುತ್ತಾರೆ ಎನ್ನುವುದಕ್ಕೆ ಸ್ಪಷ್ಟ ಉತ್ತರ ಕೆಲ ದಿನಗಳಲ್ಲಿ ಸಿಗಲಿದೆಯಾದರೂ "ಜಾಲಿ ಎಲ್ ಎಲ್ ಬಿ 3" ಸೋಲುಗಳಿಂದ ಹೈರಾಣಾಗಿದ್ದ ಅಕ್ಷಯ್ ಕುಮಾರ್ ಅವರಲ್ಲಿ ಸದ್ಯ ಹೊಸ ಹುರುಪನ್ನಂತೂ ತುಂಬಿದೆ.
ಹೌದು, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಚಿತ್ರಮಂದಿರದಲ್ಲಿ ಒಂದು ವಾರ ಪೂರೈಸಿರುವ ''ಜಾಲಿ ಎಲ್‌ಎಲ್‌ಬಿ 3'' ₹ 74 ಕೋಟಿಯನ್ನೂ ಗಳಿಸಿದೆ. ನಿಜಾ ಚಿತ್ರದ ಗಳಿಕೆ ಹಾಗೇ ನೋಡಿದರೆ ನಿರಾಶಾದಾಯಕವಾಗಿ ಇದೆಯಾದರೂ ಕೂಡ ಹಾಕಿದ ಬಂಡವಾಳಕ್ಕೆ ಈ ಚಿತ್ರ ಮೋಸ ಮಾಡಿಲ್ಲ. ನಿರ್ಮಾಪಕರಿಗೆ ನಷ್ಟದ ಕೂಪಕ್ಕೆ ದೂಕಿಲ್ಲ ಎನ್ನುವ ಮಾತು ಸದ್ಯ ಮುಂಬೈನಲ್ಲಿ ಕೇಳಿ ಬರುತ್ತಿದೆ.

ಯಾಕೆಂದರೆ ''ಜಾಲಿ ಎಲ್‌ಎಲ್‌ಬಿ 3'' ಚಿತ್ರದ ವಿಕ್ಕಿಪೀಡಿಯಾದಲ್ಲಿಯೇ ಉಲ್ಲೇಖವಾದಂತೆ ಈ ಚಿತ್ರಕ್ಕೆ ಖರ್ಚಾಗಿದ್ದು ₹ 120 ಕೋಟಿ ಮಾತ್ರ. ಇನ್ನೂ ಇದೇ ವಿಕ್ಕಿಪೀಡಿಯಾ ಪ್ರಕಾರ ಚಿತ್ರದ ಗಳಿಕೆ ₹90 ಕೋಟಿಯಾಗಿದೆ. ಈ ಲೆಕ್ಕಾಚಾರದ ಸತ್ಯ-ಮಿಥ್ಯ ನಮಗೆ ಗೊತ್ತಿಲ್ಲವಾದರೂ ಚಿತ್ರದ ನಾನಾ ಹಕ್ಕುಗಳು ಕೂಡ ಈಗಾಗಲೇ ಬಿಕರಿಯಾಗಿವೆ. ಈ ಹಿನ್ನೆಲೆ ''ಜಾಲಿ ಎಲ್ ಎಲ್ ಬಿ 3'' ನಿರ್ಮಾಪಕರ ಕೈ ಹಿಡಿದಿದೆ ಎನ್ನುವ ಅಭಿಪ್ರಾಯ ಸದ್ಯ ವ್ಯಕ್ತವಾಗುತ್ತಿದೆ.
''ಸ್ಯಾಕ್ನಿಲ್'' ಪ್ರಕಾರ ಜಾಲಿ ಎಲ್‌ಎಲ್‌ಬಿ 3 ಚಿತ್ರದ ಒಂದು ವಾರದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ [ಶುಕ್ರವಾರ] ₹ 12.5 ಕೋಟಿ
ಎರಡನೇ ದಿನ [ಶನಿವಾರ] ₹ 20.00 ಕೋಟಿ
ಮೂರನೇ ದಿನ[ಭಾನುವಾರ] ₹ 21.00 ಕೋಟಿ
ನಾಲ್ಕನೇ ದಿನ [ಸೋಮವಾರ] ₹5.5 ಕೋಟಿ
ಐದನೇ ದಿನ [ಮಂಗಳವಾರ] ₹ 6.5 ಕೋಟಿ
ಆರನೇ ದಿನ [ಬುಧವಾರ] ₹ 4.5 ಕೋಟಿ
ಏಳನೇ ದಿನ [ಗುರುವಾರ] ₹ 4 ಕೋಟಿ
ಒಟ್ಟು ಗಳಿಕೆ ₹ 74 ಕೋಟಿ
ಇನ್ನೂ ಆಗಲೇ ಹೇಳಿದಂತೆ ಅಕ್ಷಯ್ ಕುಮಾರ್ ಸೋಲಿನ ಸುಳಿಯಲ್ಲಿ ಸಿಲುಕಿದ್ದರು. ಆದರೆ.. ಕಳೆದ ಕೆಲ ವರ್ಷಗಳಲ್ಲಿ ಬಂದ ಚಿತ್ರಗಳ ಅಂಕಿ ಅಂಶಗಳನ್ನು ಪರಿಗಣಿಸಿದರೆ ''ಜಾಲಿ ಎಲ್‌ಎಲ್‌ಬಿ-3'' ಅಕ್ಷಯ್ ಕುಮಾರ್ ಅಭಿನಯದ ಹಲವು ಚಿತ್ರಗಳನ್ನು ಹಿಂದಿಕ್ಕಿದೆ. ಕೊರೊನಾ ನಂತರ ಅತೀ ಹೆಚ್ಚು ಹಣ ಗಳಿಸಿದ ಆರನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
koimoi.com ಪ್ರಕಾರ ಕೊರೊನಾ ನಂತರ ಮೊದಲ ವಾರ ಅತೀ ಹೆಚ್ಚು ಹಣ ಗಳಿಸಿದ ಅಕ್ಷಯ್ ಕುಮಾರ್ ಅಭಿನಯದ ಚಿತ್ರಗಳು
ಹೌಸ್‌ಫುಲ್ 5: ₹198.41 ಕೋಟಿ
ಸೂರ್ಯವಂಶಿ: ₹195.04 ಕೋಟಿ
ಓಎಮ್‌ಜಿ 2: ₹150 ಕೋಟಿ
ಸ್ಕೈಪೋರ್ಸ್ 2: ₹134.93 ಕೋಟಿ
ಕೇಸರಿ 2 : ₹94.48 crores
*ಜಾಲಿ ಎಲ್ ಎಲ್ ಬಿ 3 : ₹74 ಕೋಟಿ
ಸಾಮ್ರಾಟ್ ಪೃಥ್ವಿರಾಜ್ : ₹68 ಕೋಟಿ
ಬಡೇ ಮಿಯಾ ಚೋಟೆ ಮಿಯಾ : ₹66 ಕೋಟಿ
ರಾಮ್ ಸೇತು :₹64 ಕೋಟಿ
ಬಚ್ಚನ್ ಪಾಂಡೆ : ₹50.25 ಕೋಟಿ
ಹೀಗೆ ಸದ್ಯ ''ಜಾಲಿ ಎಲ್‌ಎಲ್‌ಬಿ 3'' ಚಿತ್ರ ಸದ್ಯ ಆರನೇ ಸ್ಥಾನದಲ್ಲಿದ್ದು ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮುನ್ನ ಈ ಚಿತ್ರ ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ಭಾರತದ ಬಾಕ್ಸಾಫೀಸ್‌ನಲ್ಲಿ ₹100 ಕೋಟಿಯ ಗಡಿಯನ್ನು ಈ ಚಿತ್ರ ದಾಟುತ್ತಾ ಎನ್ನುವುದಕ್ಕೆ ಉತ್ತರ ಕೂಡ ಶೀಘ್ರದಲ್ಲಿ ಸಿಗಲಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











