ಕೇವಲ ಎರಡೇ ದಿನದಲ್ಲಿ ₹20 ಕೋಟಿ ಲೂಟಿ, ''ಬಾಘಿ 4'' ಚಿತ್ರದ ಗೆಲುವಿನ ಕುರಿತು ಎ.ಹರ್ಷ ಪ್ರತಿಕ್ರಿಯೆ

ಪ್ರೇಕ್ಷಕರ ನಾಡಿ ಮಿಡಿತ ಮತ್ತು ಯಾವ ನಟರಿಗೆ ಎಂಥಾ ಕಥೆ ಬೇಕೆಂಬುದನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡವರಲ್ಲಿ ಕನ್ನಡ ಚಿತ್ರರಂಗದ ಡ್ಯಾನ್ಸ್ ಮಾಸ್ಟರ್ ಕಂ ಡೈರೆಕ್ಟರ್ ಎ. ಹರ್ಷ ಕೂಡ ಒಬ್ಬರು. ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸಲೇಬೇಕೆಂಬ ಉದ್ದೇಶದಿಂದಲೇ ತಮ್ಮ ಪ್ರತಿ ಚಿತ್ರವನ್ನು ರೂಪಿಸುತ್ತಾ ಬಂದ ಹರ್ಷ ಈ ಹಿಂದೆಯೇ ತಮ್ಮ ನಿರ್ದೇಶನದ ಸಾಮರ್ಥ್ಯವನ್ನು ಸಾಬೀತು ಮಾಡಿದ್ಧಾರೆ.

''ಗೆಳೆಯ''.. ''ಬಿರುಗಾಳಿ''.. ''ಚಿಂಗಾರಿ''.. ''ಭಜರಂಗಿ''.. ''ವಜ್ರಕಾಯ''.. ''ಜೈ ಮಾರುತಿ 800''.. ''ಅಂಜನಿಪುತ್ರ''.. ''ಸೀತಾರಾಮ ಕಲ್ಯಾಣ''.. ''ಭಜರಂಗಿ 2''.. ''ವೇದಾ'' ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ. ಕೇವಲ ಕನ್ನಡ ಮಾತ್ರ ಅಲ್ಲ ಪಕ್ಕದ ಆಂಧ್ರದಲ್ಲಿ ಗೋಪಿಚಂದ್ ಅವರಿಗೆ ''ಭೀಮಾ'' ಚಿತ್ರವನ್ನು ನಿರ್ದೇಶಿಸಿದ ಹೆಗ್ಗಳಿಕೆ ಕೂಡ ಹರ್ಷ ಅವರದ್ದೇ.

Baaghi 4 Box Office A Harsha s Exclusive Interview with Filmibeat Kannada on His Bollywood Triumph

ಇಂಥಾ ಹರ್ಷ ಸದ್ಯ ಬಾಲಿವುಡ್‌ಗೆ ಹೋಗಿದ್ದಾರೆ. ಬಾಲಿವುಡ್‌ನ ಆಕ್ಷನ್ ಕಿಂಗ್ ಟೈಗರ್ ಶ್ರಾಫ್‌ಗೆ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಹರ್ಷ ಮತ್ತು ಟೈಗರ್ ಶ್ರಾಫ್ ಕಾಂಬಿನೇಷನ್‌ನ ''ಬಾಘಿ 4'' ಚಿತ್ರ ವಿಶ್ವದೆಲ್ಲೆಡೆ ತೆರೆಗೆ ಬಂದಿದೆ. ಬಾಕ್ಸಾಫೀಸ್‌ನ್ನು ಕೊಳ್ಳೆ ಹೊಡೆಯುವದರ ಜೊತೆಯಲ್ಲಿ ಪ್ರೇಕ್ಷಕರ ಹೃದಯವನ್ನು ಕೂಡ ಗೆಲ್ಲುತ್ತಿದೆ.

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ಪ್ರಕಾರ ಈ ಚಿತ್ರ ಈಗಾಗಲೇ ಈ ಎರಡು ದಿನದಲ್ಲಿ ₹ 21.25 ಕೋಟಿ ಹಣವನ್ನು ದೋಚಿದೆ. ಇನ್ನೂ ಯಾರಿಗೇ ಇರಲಿ. ಈ ತರಹದ ಒಂದು ಆರಂಭ ಖುಷಿಯನ್ನು ನೀಡಿಯೇ ನೀಡುತ್ತೆ. ಅದರಲ್ಲಿಯೂ ಹಿಂದಿಯಲ್ಲಿ ತಾವು ಮಾಡಿದ ಮೊದಲ ಪ್ರಯತ್ನಕ್ಕೆ ಇಂಥಹದ್ದೊಂದು ಆರಂಭ ಮತ್ತು ಪ್ರತಿಕ್ರಿಯೆ ಸಿಕ್ಕಾಗ ದಕ್ಷಿಣದ ಹಲವು ನಿರ್ದೇಶಕರ ಸಂಭ್ರಮ ವರ್ಣಿಸಲು ಅಸಾಧ್ಯ. ಇದಕ್ಕೆ ಉದಾಹರಣೆಯಂತೆ ಇರುವ ಹರ್ಷ ಸದ್ಯ ಸಂಭ್ರಮದ ಅಲೆಯಲ್ಲಿದ್ದಾರೆ. ಈ ಸಕ್ಸಸ್‌ನ ಎಂಜಾಯ್ ಮಾಡುತ್ತಿದ್ದಾರೆ. ಇದರ ನಡುವೆ ಬಿಡುವು ಮಾಡಿಕೊಂಡು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಎ.ಹರ್ಷ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಚಿತ್ರದ ಗೆಲುವಿನ ಕುರಿತು ಮಾತನಾಡಿದ್ದಾರೆ.

ಈ ಕುರಿತು ಮಾತನಾಡಿರುವ ಎ.ಹರ್ಷ ''ಬಾಘಿ 4'' ಚಿತ್ರಕ್ಕೆ ಒಳ್ಳೆಯ ಓಪನಿಂಗ್ ಸಿಗುತ್ತೆ ಎನ್ನುವ ನಂಬಿಕೆ ನನಗೆ ಇತ್ತು. ಆದರೆ ಈ ರೀತಿ ಮೊದಲ ದಿನವೇ ಎರಡಂಕಿಯ ಗಡಿಯನ್ನು ದಾಟುತ್ತೆ ಎನ್ನುವ ನಿರೀಕ್ಷೆ ನನಗೆ ಇರಲಿಲ್ಲ. ಕೇವಲ ನನಗೆ ಮಾತ್ರವಲ್ಲ ಚಿತ್ರತಂಡದಲ್ಲಿಯೇ ಮೊದಲ ದಿನದ ಗಳಿಕೆ ₹10 ಕೋಟಿಗೂ ಅಧಿಕವಾಗುತ್ತೆ ಎಂದು ಯಾರು ಅಂದುಕೊಂಡಿರಲಿಲ್ಲ. ವಿಶೇಷ ಅಂದರೆ ''ಬಾಲಿವುಡ್ ಹಂಗಾಮಾ''ಗೆ ನೀಡಿದ ಸಂದರ್ಶನದಲ್ಲಿಯೇ ಖುದ್ದು ಟೈಗರ್ ಶ್ರಾಫ್ ಮೊದಲ ದಿನದ ಗಳಿಕೆ ₹8 ರಿಂದ ₹9 ಕೋಟಿಯಾಗಬಹುದೆಂದು ಭರವಸೆಯನ್ನು ವ್ಯಕ್ತಪಡಿಸಿದ್ದರು. ಆದರೆ ಅದಕ್ಕಿಂತ ಹೆಚ್ಚಿನ ಗಳಿಕೆಯನ್ನು ಚಿತ್ರ ಮಾಡಿದೆ, ನಮ್ಮ ನಿರ್ಮಾಣ ಸಂಸ್ಥೆಯ ಲೆಕ್ಕದ ಪ್ರಕಾರ ಚಿತ್ರದ ಮೊದಲ ದಿನದ ಗಳಿಕೆ ₹13 ಕೋಟಿಗೂ ಅಧಿಕವಾಗಿದೆ'' ಎಂದು ಹೇಳಿದ್ದಾರೆ.

ಚಿತ್ರಕ್ಕೆ ಸಿಕ್ತಿರುವ ಪ್ರತಿಕ್ರಿಯೆಯಿಂದ ನಮ್ಮ ಚಿತ್ರದ ನಾಯಕ ಟೈಗರ್ ಶ್ರಾಫ್ ತುಂಬಾ ಖುಷಿಯಾಗಿದ್ದಾರೆ. ಮುಖ್ಯವಾಗಿ ಚಿತ್ರದ ಕಥೆಯನ್ನು ನೀಡಿ ಹಣವನ್ನು ಕೂಡ ಹೂಡಿರುವ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಕೂಡ ತುಂಬಾ ಖುಷಿಯಾಗಿದ್ದಾರೆ, ಒಬ್ಬ ನಿರ್ದೇಶಕನಿಗೆ ಇದಕ್ಕಿಂತ ಇನ್ನೇನು ಬೇಕು ಎಂದು ಹೇಳಿರುವ ಹರ್ಷ, ''ಬಾಘಿ 4'' ನಂತರ ಈಗ 5,6, 7 ಹೀಗೆ ಫ್ರಾಂಚೈಸಿಯನ್ನು ಮುಂದುವರೆಸುವ ಧೈರ್ಯ ಅವರಲ್ಲಿ ಇನ್ನೂ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

Baaghi 4 Box Office A Harsha s Exclusive Interview with Filmibeat Kannada on His Bollywood Triumph

ಇನ್ನು ನಮ್ಮಲ್ಲಿ ಅಂದರೆ ದಕ್ಷಿಣದಲ್ಲಿ ನಾವು ಮಾಸ್ ಕಥೆಯನ್ನು ನಿರಂತರವಾಗಿ ಹೇಳುತ್ತಲೇ ಇರುತ್ತೇವೆ, ಆದರೆ ಇಲ್ಲಿ ಮಾಸ್ ಸಿನಿಮಾ ಸ್ವಲ್ಪ ಹೊಸದು ಎಂದು ಹೇಳಿರುವ ಹರ್ಷ ನಮ್ಮ ಚಿತ್ರ ''ಬಾಘಿ 4''ನಲ್ಲಿರುವ ಮಾಸ್ ಅಂಶಗಳನ್ನು ಪ್ರೇಕ್ಷಕರು ತುಂಬಾ ಇಷ್ಟ ಪಡುತ್ತಿದ್ದಾರೆ. ಹೀಗಾಗಿ ಮೊದಲ ಪ್ರಯತ್ನದಲ್ಲಿ ಈ ತರಹದ ಪ್ರತಿಕ್ರಿಯೆ ಸಿಕ್ಕಿರುವುದು ವ್ಯೆಯಕ್ತಿಕವಾಗಿ ನನಗೆ ತುಂಬಾ ಖುಷಿ ನೀಡಿದೆ ಎಂದು ಹೇಳಿದ್ಧಾರೆ.

ಮುಂದುವರೆದು ನಿರ್ದೇಶನದ ವಿಚಾರದಲ್ಲಿ ನನಗೆ ತುಂಬಾ ಒಳ್ಳೆಯ ಪ್ರತಿಕ್ರಿಯೆ ಕೇವಲ ಪ್ರೇಕ್ಷಕರಿಂದ ಮಾತ್ರ ಅಲ್ಲ ವಿಮರ್ಷಕರಿಂದ ಕೂಡ ಬಂದಿದೆ ಎಂದು ಹೇಳಿರುವ ಹರ್ಷ, ಇಲ್ಲಿಯವರೆಗೆ ಟೈಗರ್ ಅವರನ್ನು ಕೇವಲ ಆಕ್ಷನ್ ಸ್ಟಾರ್‌ ಆಗಿ ಮಾತ್ರ ಕೆಲವರು ಬಳಿಸಿಕೊಂಡಿದ್ದರು ಆದರೆ ನಮ್ಮ ಚಿತ್ರದಲ್ಲಿ ಆಕ್ಷನ್ ಜೊತೆಯಲ್ಲಿ ಭಾವನಾತ್ಮಕವಾದ ದೃಶ್ಯಗಳಿವೆ. ಆ ದೃಶ್ಯಗಳಲ್ಲಿ ಟೈಗರ್ ಅದ್ಭುತವಾಗಿ ಅಭಿನಯಿಸಿದ್ದಾರೆ ಕೂಡ. ಆಕ್ಷನ್ ಹೊರತಾಗಿ ಅವರ ಈ ಅಭಿನಯದ ಕುರಿತು ಹಲವರು ಮಾತನಾಡುತ್ತಿರುವುದು ನನಗೆ ನಿರ್ದೇಶಕನಾಗಿ ಖುಷಿಯನ್ನು ನೀಡಿದೆ ಎಂದು ಕೂಡ ಹೇಳಿದ್ದಾರೆ.

Take a Poll

ಇನ್ನು ಎಲ್ಲರಿಗೆ ಗೊತ್ತಿರುವಂತೆ ಕಳೆದ ವಾರ (ಸೆಪ್ಟೆಂಬರ್ 5) ಕೇವಲ ''ಬಾಘಿ 4'' ಮಾತ್ರ ಬಿಡುಗಡೆಯಾಗಿಲ್ಲ. ಹಲವು ಚಿತ್ರಗಳು ಬಿಡುಗಡೆಯಾಗಿವೆ. ಹಾಲಿವುಡ್‌ನ ''ಕಾಂಜುರಿಂಗ್ ಲಾಸ್ಟ್ ರೈಟ್ಸ್''.. ತೆಲುಗಿನಲ್ಲಿ ''ಘಾಟಿ''.. ಮಲಯಾಳಂನಲ್ಲಿ ''ಲೋಕಾ'' (ಹಿಂದಿ ಡಬ್)..ಹಿಂದಿಯಲ್ಲಿ ''ಬೆಂಗಾಲ್ ಫೈಲ್ಸ್‌'' ಚಿತ್ರಗಳು ಕೂಡ ಬಿಡುಗಡೆಯಾಗಿವೆ. ಈ ಎಲ್ಲಾ ಚಿತ್ರಗಳ ನಡುವೆ ಪ್ರೇಕ್ಷಕರು ತಮ್ಮ ಚಿತ್ರವನ್ನು ನೋಡಲು ಬರುತ್ತಿರುವುದು ಕೂಡ ಹರ್ಷ ಅವರ ಹರ್ಷವನ್ನು ಇನ್ನೂ ಹೆಚ್ಚಿಸಿದೆ.

ಇದೆಲ್ಲದರ ನಡುವೆ ಗುಜರಾತಿಯ ಒಂದು ಚಿತ್ರದ ಕುರಿತು ಕೂಡ ಒಳ್ಳೆಯ ಮಾತುಗಳು ಇಲ್ಲಿ ಕೇಳಿ ಬರುತ್ತಿವೆ. ಆದರೂ ''ಬಾಘಿ 4'' ಪ್ರೇಕ್ಷಕರನ್ನು ಸೆಳೆಯುತ್ತಿದೆ. ಹೀಗಾಗಿ ಇಡೀ ತಂಡಕ್ಕೆ ಈ ಚಿತ್ರ ಮತ್ತು ಅದರ ಫಲಿತಾಂಶ ಖುಷಿ ನೀಡಿದೆ ಎಂದು ಹರ್ಷ ನಿಮ್ಮ ''ಫಿಲ್ಮಿಬೀಟ್‌ ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ಧಾರೆ.

ಇನ್ನು ಇದೇ ಸಮಯದಲ್ಲಿ ಹೊಸ ಕಥೆ ಬರೆದು ಹೊಸ ಚಿತ್ರವನ್ನು ಹೇಗಾದರೂ ಮಾಡಿ ನಿರ್ದೇಶನ ಮಾಡಬಹುದು ಆದರೆ ಈ ಫ್ರಾಂಚೈಸಿಯ ಚಿತ್ರಗಳನ್ನು ನಿರ್ದೇಶನ ಮಾಡುವುದು ತುಂಬಾ ಕಷ್ಟ ಎಂದು ಹೇಳಿರುವ ಹರ್ಷ, ಪ್ರಾಂಚೈಸಿಯ ಕಥೆಗಳನ್ನೊಂದಿರುವ ಚಿತ್ರಗಳಿಗೆ ಅದ್ರದ್ದೇ ಆದ ಬೇಡಿಕೆಗಳಿರುತ್ತವೆ. ಒತ್ತಡಗಳಿರುತ್ತಾವೆ. ಅದೆಲ್ಲವವನ್ನು ನಿಭಾಯಿಸಿಕೊಂಡು ಹೋಗುವುದು ತುಂಬಾ ಕಷ್ಟ. ಈ ಚಿತ್ರದ ಕಥೆ ನಮ್ಮ ನಿರ್ಮಾಪಕರದ್ದೇ ಆಗಿದ್ದರಿಂದ ನಾನು ನಿರ್ದೇಶನ ಮಾಡಿಕೊಂಡು ಹೋದೆ ಆದರೂ ಕೂಡ ಗೆಲ್ಲುವ ಒತ್ತಡ ಇದ್ದೇ ಇತ್ತು ಎಂದು ಹೇಳಿದ್ದಾರೆ.

ಸದ್ಯ ''ಬಾಘಿ-4'' ಚಿತ್ರಕ್ಕೆ ಉತ್ತಮವಾದ ಪ್ರತಿಕ್ರಿಯೆ ಸಿಗುತ್ತಿದೆ. ನಾಳೆ (ಸೆಪ್ಟೆಂಬರ್ 8) ರಜಾ ದಿನ ಮುಕ್ತಾಯವಾಗುವ ಹಿನ್ನೆಲೆ ಧಾಂ ಧೂಂ ಎಂದು ಚಿತ್ರ ಗಳಿಕೆ ಮಾಡದೇ ಇದ್ದರೂ ಕೂಡ ವಾರದ ಮೊದಲ ದಿನ ಉತ್ತಮವಾದ ಗಳಿಕೆಯನ್ನು ಚಿತ್ರ ಮಾಡುವ ನಿರೀಕ್ಷೆ ಇದೆ. ಇನ್ನೂ ಚಿತ್ರದ ಒಟ್ಟಾರೆ ಗಳಿಕೆಯ ಕುರಿತು ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾತನಾಡುವಾಗ ಎ.ಹರ್ಷ ಚಿತ್ರ ನೂರು ಕೋಟಿಯ ಗಡಿಯನ್ನಂತೂ ಅನಾಯಾಸವಾಗಿ ದಾಟುತ್ತೆ, 200 ಕೋಟಿಗೂ ಅಧಿಕ ಹಣ ಗಳಿಸುತ್ತೆ ಎನ್ನುವ ನಿರೀಕ್ಷೆ ನನಗೆ ಇದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ ಸದ್ಯ ಸ್ಯಾಂಡಲ್‌ವುಡ್ ನಿರ್ದೇಶಕ ಎ ಹರ್ಷ ಬಾಲಿವುಡ್‌ನಲ್ಲಿ ಸದ್ದು ಮಾಡಲು ಶುರು ಮಾಡಿದ್ದಾರೆ. ''ಬಾಘಿ 4'' ಚಿತ್ರದ ಈ ಯಶಸ್ಸು ಮುಂಬರುವ ದಿನಗಳಲ್ಲಿ ಹರ್ಷ ಅವರಿಗೆ ಇನ್ನೂ ಹಲವು ಅವಕಾಶಗಳಿಗೆ ದಾರಿ ಮಾಡಿ ಕೊಟ್ಟರೂ ಕೊಡಬಹುದು. Any Ways ''ಬಾಘಿ-4'' ಚಿತ್ರದ ಬಾಕ್ಸಾಫೀಸ್‌ ಗಳಿಕೆಗೆ ಹರ್ಷ ಮಾಸ್ಟರ್ ಅವರಿಗೆ ನಿಮ್ಮ ಕಡೆಯಿಂದ ಕೂಡ ಒಂದು ಅಭಿನಂದನೆ ಇರಲಿ. ಹರ್ಷ ಆದಷ್ಟು ಬೇಗ ಮತ್ತೆ ಕನ್ನಡ ಚಿತ್ರವನ್ನು ನಿರ್ದೇಶನ ಮಾಡುವಂತಾಗಲಿ.

More from Filmibeat

English summary
In an exclusive interview with Filmibeat Kannada, director A. Harsha reveals his emotional reaction to the overwhelming success of his Bollywood debut, Baaghi 4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X