Baaghi 4 BoxOffice Day1; ಟೈಗರ್ ಶ್ರಾಫ್ ಅಬ್ಬರದಿಂದ ಬಾಲಿವುಡ್‌ನಲ್ಲಿ 'ಹರ್ಷ' ?ಫಸ್ಟ್ ಡೇ ಗಳಿಸಿದ್ದೆಷ್ಟು ಬಾಘಿ4?

'ರಕ್ತ'ದ ಕಲೆಗಳಿಗೆ ಬಾಕ್ಸಾಫೀಸ್‌ನಲ್ಲಿ 'ಬೆಲೆ' ಇದೆ ಎಂದು ಯಾರಾದರೂ ರುಜುವಾತು ಮಾಡಿದರೆ ಸಾಕು, ಬಣ್ಣದ ಲೋಕದಲ್ಲಿರುವ ಬಹುತೇಕರು ರಕ್ತದೋಕುಳಿಯನ್ನಾಡಲು ಮುಂದಾಗುತ್ತಾರೆ. ನೀರಿನಂತೆ ಬೆಳ್ಳಿತೆರೆಯಲ್ಲಿ ರಕ್ತವನ್ನು ಚಿಮ್ಮಿಸುತ್ತಾರೆ. ಉದಾಹರಣೆಗೆ ''ಅನಿಮಲ್''.. ''ಕಿಲ್''..'' ಮಾರ್ಕೋ''. ಕೇವಲ ಈ ಚಿತ್ರಗಳು ಮಾತ್ರವಲ್ಲ ಬೇರೆ ಬೇರೆ ಭಾಷೆಯಲ್ಲಿ ಇಂತಹ ಹಲವು ಚಿತ್ರಗಳು ಕಳೆದ ಕೆಲ ವರ್ಷಗಳಲ್ಲಿ ಬಂದಿವೆ.

ಆ ಪೈಕಿ ಬಹುತೇಕ ಚಿತ್ರಗಳು ಗೆಲ್ಲುವಲ್ಲಿ ಯಶಸ್ವಿ ಕೂಡ ಆಗಿವೆ. ಹೀಗಾಗಿಯೇ ಪ್ರೇಕ್ಷಕರಿಗೆ ಈ ರಕ್ತಪಾತದ ಕಥಾವಸ್ತುಗಳೇ ಇಷ್ಟ ಎಂದುಕೊಂಡು ಹಲವರು ತಮ್ಮ ಕೈಗೆ ರಕ್ತ ಅಂಟಿಸಿಕೊಂಡು ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಓಡಾಡುತ್ತಿದ್ದಾರೆ. ಪ್ರೇಕ್ಷಕರು ಕೂಡ ಇವರ ಬೆನ್ನು ತಟ್ಟುತ್ತಿದ್ದಾರೆ. ಇದಕ್ಕೆ ''ಬಾಘಿ 4'' ಸದ್ಯದ ಉದಾಹರಣೆ.

Baaghi 4 Box Office Day 1 Tiger Shroff Starrer Opens to Bumper 12 Crore But Failed To Beat Baaghi 3

ಹೌದು, ''ಬಾಘಿ 4'' ಬೆಳ್ಳಿತೆರೆಯಲ್ಲಿ ಅನಾವರಣವಾದ ಮತ್ತೊಂದು ರಕ್ತಚರಿತ್ರೆ. ಕನ್ನಡದ ನಿರ್ದೇಶಕ ಹರ್ಷ ನಿರ್ದೇಶನ ಟೈಗರ್ ಶ್ರಾಫ್ ಅಭಿನಯದ ಈ ಚಿತ್ರ ನಿನ್ನೆ (ಸೆಪ್ಟೆಂಬರ್ 5) ಬಿಡುಗಡೆಯಾಗಿದೆ. ವಿಶೇಷ ಅಂದರೆ ಈ ಚಿತ್ರಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಪ್ರೇಕ್ಷಕರಿಂದ ಸಿಕ್ಕಿದೆ. ಮೊದಲ ದಿನವೇ ಚಿತ್ರದ ಗಳಿಕೆ ಎರಡಂಕಿಯನ್ನು ದಾಟಿದೆ.

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಬಾಘಿ 4'' ಮೊದಲ ದಿನ ₹12.00 ಕೋಟಿ ಹಣವನ್ನು ಗಳಿಸಿದೆ. ಇನ್ನೂ ಎಂದಿನಂತೆ ಉತ್ತರಕ್ಕಿಂತ ದಕ್ಷಿಣ ಭಾರತೀಯ ಚಿತ್ರಪ್ರೇಮಿಗಳಲ್ಲಿಯೇ ಉತ್ಸಾಹ ಹೆಚ್ಚು ಕಂಡು ಬಂದಿದ್ದು ಚೆನ್ನೈನಲ್ಲಿ 45.00%.. ಹೈದರಾಬಾದ್‌ನಲ್ಲಿ 24.75%.. ಮತ್ತು ಬೆಂಗಳೂರಿನಲ್ಲಿ 31.00 ಆಕ್ಯುಪೆನ್ಸಿ ಕಂಡು ಬಂದಿದೆ. ಉತ್ತರ ಭಾರತದಲ್ಲಿ ಲಕ್ನೋ ಮತ್ತು ಜೈಪುರದಲ್ಲಿ ಅತೀ ಹೆಚ್ಚು ಆಕ್ಯುಪೆನ್ಸಿ ದರ ಕಂಡು ಬಂದಿದೆ.

ಇನ್ನು ಮೊದಲ ದಿನ ''ಬಾಘಿ-4'' ₹12 ಕೋಟಿ ಗಳಿಸುತ್ತೆ ಎನ್ನುವ ವಿಶ್ವಾಸ ಬಾಲಿವುಡ್‌ನ ಟ್ರೇಡ್ ಪಂಡಿತರಿಗೆಯೇ ಇರಲಿಲ್ಲ. ಹೆಚ್ಚೆಂದರೆ ಮೊದಲ ದಿನ ಚಿತ್ರ 8-9 ಕೋಟಿ ಹಣವನ್ನು ಗಳಿಸಬಹುದು ಎಂದು ಹಲವರು ಅಂದುಕೊಂಡಿದ್ದರು. ಆದರೆ ಈ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ ಬಾಘಿ 4 ಮೊದಲ ದಿನವೇ 12 ಕೋಟಿಯನ್ನು ಗಳಿಸಿದೆ. ಈ ಮೂಲಕ ಹಲವರನ್ನು ಅಚ್ಚರಿಗೆ ದೂಡಿದೆ.

ಆದರೆ ಇಂದು ಈ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬರುವ ಸಾಧ್ಯತೆ ಇದೆ. ಯಾಕೆಂದರೆ.. ನಿನ್ನೆ (ಸೆಪ್ಟೆಂಬರ್ 5) ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಇನ್ನು ವಿಮರ್ಷಕರಲ್ಲಿ ಕೂಡ ಈ ಚಿತ್ರಕ್ಕೆ ಸಂಬಂಧಿಸಿದಂತೆ ಎರಡು ಬಣಗಳಾಗಿವೆ. ಈ ಹಿನ್ನೆಲೆ ಇಂದು ಮತ್ತು ನಾಳೆಯ ಗಳಿಕೆ ಟೈಗರ್ ಶ್ರಾಫ್ ಮತ್ತು ನಿರ್ದೇಶಕ ಎ.ಹರ್ಷ ಪಾಲಿಗೆ ನಿರ್ಣಾಯಕವಾಗಲಿದೆ.

baaghi-4-box-office-day-1-tiger-shroff-starrer-opens-to-bumper-12-crore-but-failed-to-beat-baaghi-3

ಬಾಘಿ 4 VS ಬಾಘಿ 3

ಅಂದ್ಹಾಗೇ ಮೊದಲ ದಿನ ''ಬಾಘಿ-4'' ₹12 ಕೋಟಿಯನ್ನೇನೋ ಗಳಿಸಿದೆ. ಆದರೆ ಟೈಗರ್ ಶ್ರಾಫ್ ತಮ್ಮ ಹಿಂದಿನ ''ಬಾಘಿ 3'' ಚಿತ್ರದ ಗಳಿಕೆಯನ್ನು ಹಿಂದಿಕ್ಕುವಲ್ಲಿ ವಿಫಲರಾಗಿದ್ದಾರೆ. ''ಸ್ಯಾಕ್ನಿಲ್'' ವರದಿಯ ಪ್ರಕಾರ 2020ರಲ್ಲಿ ತೆರೆಗೆ ಬಂದಿದ್ದ ''ಬಾಘಿ 3'' ಮೊದಲ ದಿನ ₹17.50ಕೋಟಿಯನ್ನು ಗಳಿಸಿತ್ತು.ಎರಡನೇ ದಿನ ₹16.03 ಕೋಟಿಯನ್ನು ದೋಚಿತ್ತು. ಈ ಹಿನ್ನೆಲೆ ಇಂದು ''ಬಾಘಿ 4'' ಚಿತ್ರದ ಗಳಿಕೆಯಲ್ಲಿ ಏರಿಕೆಯಾಗುತ್ತಾ ಎನ್ನುವ ಕುತೂಹಲ ಇದೆ. ಈ ವಾರಾಂತ್ಯದ ಗಳಿಕೆ ಈ ಚಿತ್ರದ ಮುಂದಿನ ಭವಿಷ್ಯವನ್ನು ನಿರ್ಧಾರ ಮಾಡಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ

More from Filmibeat

English summary
The box office story of Baaghi 4 is a tale of two numbers. Find out how Tiger Shroff's film secured a strong ₹12 crore opening and yet fell short of the franchise's biggest record.
Read more about: a harsha bollywood tiger shroff
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X