Baaghi 4 Box Office Day 4 ;ಕಳಚುತ್ತಾ ಟೈಗರ್ ಶ್ರಾಫ್ ಸೋಲಿನ ಸರಪಳಿ ? ಹೊಸ ದಾಖಲೆ ಬರೆಯಲು ₹24 ಕೋಟಿ ಮಾತ್ರ ಬಾಕಿ

ಬಾಲಿವುಡ್‌ ನ ಹ್ಯಾಂಡ್ಸಮ್ ಹುಡುಗರಲ್ಲಿ ಟೈಗರ್ ಶ್ರಾಫ್ ಕೂಡ ಒಬ್ಬರು. ಜಾಕಿ ಶ್ರಾಫ್ ಮಗನಾದರೂ ಕೂಡ ತಮ್ಮದೇ ಛಾಪು ಮೂಡಿಸುವಲ್ಲಿ ಯಶಸ್ವಿಯಾದ ಟೈಗರ್ ಇಲ್ಲಿಯವರೆಗೆ ಮಾಡಿದ್ದು ಸಾಹಸ ಪ್ರಧಾನ ಚಿತ್ರಗಳನ್ನೇ. ಇಂಥಾ ಟೈಗರ್ ಅದ್ಯಾಕೋ ಕಳೆದ ಕೆಲ ದಿನಗಳಿಂದ‌ ಮಂಕಾಗಿದ್ದರು. ಇದಕ್ಕೆ ಕೈಗನ್ನಡಿ ಎಂಬಂತೆ ಕೊರೊನಾ ನಂತರ ಮಾಡಿದ ಚಿತ್ರಗಳೆಲ್ಲವೂ ಹೇಳಿಕೊಳ್ಳುವಂತಹ ಸದ್ದು ಮಾಡಲಿಲ್ಲ.

ಅದರಲ್ಲಿಯೂ "ಗಣಪತ್" ಎಂಬ ಸಿನಿಮಾ ಬಂದಿದ್ದೂ ಹೋಗಿದ್ದೂ ಕೂಡ ಗೊತ್ತಾಗಲಿಲ್ಲ. ಹೀಗಾಗಿಯೇ ಬಾಲಿವುಡ್ ನ ಟೈಗರ್ ಇನ್ನೇನು ಬೋನಿನಲ್ಲಿ ಇರಬೇಕಷ್ಟೇ ಎಂದು ಎಲ್ಲರೂ ಮಾತನಾಡಿಕೊಂಡಿದ್ದರು. ಹೀಗೆ ಮಾತನಾಡಿಕೊಂಡ ಎಲ್ಲರಿಗೆ ಈಗ ಟೈಗರ್ ಶ್ರಾಫ್ "ಬಾಘಿ 4 " ಮೂಲಕ ಉತ್ತರ ನೀಡಿದ್ದಾರೆ.

Baaghi 4 Box Office Day 4 Tiger Shroff s Biggest Post-COVID Hit Just 24 Crore Away

ಹೌದು.. ಟೈಗರ್ ಶ್ರಾಫ್ ಅವರ ಒಂದು ದಶಕದ ಸಿನಿ ಜರ್ನಿಯಲ್ಲಿ "ಬಾಘಿ" ಕೊಡುಗೆ ದೊಡ್ಡದು. ಇಲ್ಲಿಯವರೆಗೆ "ಬಾಘಿ" ಯ ಮೂರು ಸರಣಿಯನ್ನು ಮಾಡಿರುವ ಟೈಗರ್ ಇದೀಗ ನಮ್ಮ ಕನ್ನಡಿಗ ಎ.ಹರ್ಷ ಸಾರಥ್ಯದಲ್ಲಿ "ಬಾಘಿ 4" ಚಿತ್ರವನ್ನು ಮಾಡಿದ್ದಾರೆ. ವಿಶೇಷ ಅಂದರೆ ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಕೂಡ ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಚಿತ್ರದ ಗಳಿಕೆಯೇ ಸಾಕ್ಷಿ.

ಹೌದು, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಬಾಘಿ-4'' ಇಲ್ಲಿಯವರೆಗೆ ಅಂದರೆ ಐದು ದಿನದಲ್ಲಿ (ಸೆಪ್ಟೆಂಬರ್5 ರಿಂದ ಸೆಪ್ಟೆಂಬರ್ 9) ₹ 39.75 ಕೋಟಿಯನ್ನು ಗಳಿಸಿದೆ. ಇನ್ನೂ ಸದ್ಯ ''ಬಾಘಿ-4'' ಎದುರು ಎದುರಾಳಿಗಳಿಲ್ಲ.

Baaghi 4 Box Office Day 4 Tiger Shroff s Biggest Post-COVID Hit Just 24 Crore Away

ತೀರಾ ಇತ್ತೀಚೆಗೆ ಬಿಡುಗಡೆಯಾದ ''ಪರಮ ಸುಂದರಿ'' ಮಕಾಡೆ ಮಲಗಿದೆ. ಸೌತ್ ಚಿತ್ರಗಳಿಂದ ಕಾಂಪಿಟೇಷನ್ ಇದೆಯಾದರೂ ಕೂಡ ಟೈಗರ್ ಶ್ರಾಫ್ ಅವರ ''ಬಾಘಿ'' ಅವತಾರವನ್ನು ಹಿಂದೆ ಮೆಚ್ಚಿಕೊಂಡವರ ಒಂದು ವರ್ಗ ಈ ''ಬಾಘಿ 4'' ಚಿತ್ರವನ್ನು ನೋಡುವ ಉತ್ಸಾಹವನ್ನು ತೋರಿಸುತ್ತಿದೆ. ಈ ಹಿನ್ನೆಲೆ ಕೊರೊನಾ ನಂತರದ ದಿನಗಳಲ್ಲಿ ತೆರೆಗೆ ಬಂದ ಟೈಗರ್ ಶ್ರಾಫ್ ಅಭಿನಯದ ಬೇರೆ ಎಲ್ಲ ಚಿತ್ರಗಳನ್ನು ''ಬಾಘಿ 4'' ಹಿಂದಿಕ್ಕುತ್ತೆ ಎನ್ನುವ ಮಾತು ಸದ್ಯ ಬಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ.

ಅಂದ್ಹಾಗೇ ಟೈಗರ್ ಶ್ರಾಫ್ ಈ ಹಿಂದೆ ಅಂದರೆ 2024ರಲ್ಲಿ ''ಬಡೇ ಮಿಯಾ ಚೋಟೆ ಮಿಯಾ'' ಚಿತ್ರ ಮಾಡಿದ್ದರು. ಅಕ್ಷಯ್ ಕುಮಾರ್ ಕೂಡ ಈ ಚಿತ್ರದಲ್ಲಿದ್ದರು. ಆದರೂ ಕೂಡ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಸೋಲನ್ನು ಕಂಡಿತ್ತು. ಮೊದಲ ವಾರ ''ಸ್ಯಾಕ್ನಿಲ್'' ಪ್ರಕಾರ ₹ 49.9 ಕೋಟಿ ಗಳಿಸಿತ್ತು. koimoi.com ಪ್ರಕಾರ ಮೊದಲ ವಾಋ ವರ್ಲ್ಡ್ ವೈಡ್ ಗಳಿಕೆಯ ಲೆಕ್ಕ ಹಾಕಿದರೆ ಈ ಚಿತ್ರದ ಗಳಿಕೆ ₹66 ಕೋಟಿಯಾಗಿತ್ತು.

ಸದ್ಯ ''ಬಾಘಿ 4'' ಸ್ಯಾಕ್ನಿಲ್ ಪ್ರಕಾರ ಭಾರತದಲ್ಲಿ ₹ 39.75 ಕೋಟಿಯನ್ನು ಗಳಿಸಿದೆ. koimoi.com ಪ್ರಕಾರ ವಿಶ್ವದೆಲ್ಲೆಡೆ ಈ ಚಿತ್ರದ ಗಳಿಕೆ ₹ 42.54 ಕೋಟಿಯಾಗಿದೆ. ಈ ಹಿನ್ನೆಲೆ ಇನ್ನೂ ₹ 23.46 ಕೋಟಿ ಗಳಿಸಿದರೆ ಕೊರೊನಾ ನಂತರದ ದಿನಗಳಲ್ಲಿ ಟೈಗರ್ ಶ್ರಾಫ್ ವೃತ್ತಿ ಬದುಕಿನಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರ ಎನ್ನುವ ಹೆಗ್ಗಳಿಕೆಗೆ ''ಬಾಘಿ-4'' ಪಾತ್ರವಾಗಲಿದೆ. ನಿಜಕ್ಕೂ ಹರ್ಷ ಮತ್ತು ಟೈಗರ್ ಶ್ರಾಫ್ ಕಾಂಬಿನೇಷನ್‌ನ ''ಬಾಘಿ 4'' ಟೈಗರ್ ವೃತ್ತಿ ಬದುಕಿಗೆ ತಿರುವು ನೀಡುವಂತಹ ಚಿತ್ರವಾಗುತ್ತಾ ? ನೂರು ಕೋಟಿಯ ಗಡಿಯನ್ನು ಚಿತ್ರ ದಾಟುತ್ತಾ ? ಉತ್ತರ ಕೆಲವೇ ದಿನಗಳಲ್ಲಿ ಸಿಗಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ

More from Filmibeat

English summary
Can Tiger Shroff's Baaghi 4 break the record? The film's Day 4 box office collection brings it within striking distance of becoming his biggest hit since the pandemic. Read the full story here
Read more about: a harsha tiger shroff
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X