Baaghi 4 Box Office ; ಒಂದು ವಾರದಲ್ಲಿ ₹40ಕೋಟಿ ದೋಚಿದ ಬಾಘಿ 4, ಹಾಫ್ ಸೆಂಚುರಿ ಹೊಡೆಯುತ್ತಾ ?

ಪ್ರಯೋಗಕ್ಕೆ ಸಾವಿದೆ.ಆದರೆ ಪ್ರಯತ್ನಕ್ಕಲ್ಲ. ಈ ಮಾತನ್ನು ನಂಬುವ ಹಲವಾರು ಜನ ಚಿತ್ರರಂಗದಲ್ಲಿ ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಕೆಲವರು ತಮ್ಮ ಪ್ರಯತ್ನಕ್ಕೆ ಫಲ ಸಿಗದಿದ್ದಾಗ ನಿರಾಸೆಯಾಗುತ್ತಾರೆ. ನಿರಾಸೆಗೊಂಡು ಚಿತ್ರರಂಗದ ಸಹವಾಸ ಬೇಡ ಎಂದು ದೂರವಾಗುತ್ತಾರೆ. ಇನ್ನೂ ಕೆಲವರು ಎಷ್ಟೇ ಸೋತರು ಕೂಡ ಕುಗ್ಗದೇ ತಮ್ಮ ಪ್ರಯತ್ನವನ್ನು ಮುಂದುವರೆಸುತ್ತಾರೆ.

ಇದಕ್ಕೆ ಉದಾಹರಣೆಯಂತೆ ಸದ್ಯ ಇರುವ ಟೈಗರ್ ಶ್ರಾಫ್ ಮತ್ತೊಮ್ಮೆ ತಮ್ಮಲ್ಲಿರುವ ಸಾಹಸ ಕಲೆಯನ್ನು ನಂಬಿ ಚಿತ್ರವನ್ನು ಮಾಡಿದ್ದಾರೆ. ಎಲ್ಲರಿಗೆ ಗೊತ್ತಿರುವಂತೆ ಆ ಚಿತ್ರದ ಹೆಸರು "ಬಾಘಿ 4". ಸದ್ಯ ಈ ಚಿತ್ರ ಚಿತ್ರಮಂದಿರಗಳಲ್ಲಿ ಒಂದು ವಾರ ಪೂರೈಸಿದ್ದು, ಸೋಲಿನ ಸುಳಿಯಲ್ಲಿ ಸಿಲುಕಿರುವ ಟೈಗರ್ ಶ್ರಾಫ್ ಕಣ್ಣಿಗೆ ಸದ್ಯ ಈ ಚಿತ್ರ ಆಶಾಕಿರಣದಂತೆ ಕಾಣುತ್ತಿದೆ.

Baaghi 4 Box Office Tiger Shroff s Action Thriller Blazes Past 50 Crore Mark in First Week

ಹೌದು, ಬಾಕ್ಸಾಫೀಸ್ ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ಪ್ರಕಾರ ಈ ಚಿತ್ರ ಈ ಒಂದು ವಾರದಲ್ಲಿ ₹ 44.5 ಕೋಟಿಯನ್ನು ಭಾರತದಲ್ಲಿ ಗಳಿಸಿದೆ. ನಿಜಾ.. ದಿನದಿಂದ ದಿನಕ್ಕೆ ಗಳಿಕೆಯಲ್ಲಿ ಕುಸಿತ ಕಂಡು ಬಂದಿದೆ. ಆದರೆ ಸದ್ಯ ''ಲೋಕಾ'' ಹೊರತು ಪಡಿಸಿದರೆ ಈ ಚಿತ್ರಕ್ಕೆ ಬೇರೆ ಎದುರಾಳಿಗಳಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಕಂಡು ಬಂದ ಈ ಕುಸಿತ ಇನ್ನೂ ಕೋಟಿಗಳ ಲೆಕ್ಕದಲ್ಲೇ ಇದೆ. ಲಕ್ಷಕ್ಕೆ ಈ ಚಿತ್ರದ ಗಳಿಕೆ ಇಳಿದಿಲ್ಲ. ಈ ಹಿನ್ನೆಲೆ ₹50ಕೋಟಿಯ ಗಡಿಯನ್ನು ಅನಾಯಾಸವಾಗಿ ಈ ಸಿನಿಮಾ‌ ದಾಟಲಿದೆ, ಇಷ್ಟೇ ಅಲ್ಲ ಚಿತ್ರದ ನಿರ್ಮಾಪಕರಿಗೆ ಹಾಕಿದ ಬಂಡವಾಳದಲ್ಲಿ ಶೇಕಡಾ 70% ಹಣವನ್ನು ಈ ಚಿತ್ರ ಮರಳಿ ತಂದು ಕೊಡಲಿದೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.

Baaghi 4 Box Office Tiger Shroff s Action Thriller Blazes Past 50 Crore Mark in First Week

ಟೈಗರ್ ಶ್ರಾಫ್ ನೆಮ್ಮದಿಯ ನಿಟ್ಟುಸಿರು ಬಿಡಲು ಇದಕ್ಕಿಂತ ಇನ್ನೇನು ಕಾರಣ ಬೇಕು. ಯಾಕೆಂದರೆ ಇವರ ಹಿಂದಿನ ಚಿತ್ರ ''ಗಣಪತ್'' ಹೇಳ ಹೆಸರಿಲ್ಲದೇ ಬಾಕ್ಸಾಫೀಸ್ ನಲ್ಲಿ ಮಕಾಡೆ‌ ಮಲಗಿತ್ತು. ಇವತ್ತು ಕೂಡ ಇಂತಹದ್ದೊಂದು ಚಿತ್ರ ಬಂದಿತ್ತು ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ.

ಸ್ಯಾಕ್ನಿಲ್ ಪ್ರಕಾರ ''ಬಾಘಿ 4'' ಚಿತ್ರದ ಒಂದು ವಾರದ ಗಳಿಕೆ ಈ ಕೆಳಗಿನಂತೆ ಇದೆ

Day 1 [ಶುಕ್ರವಾರ] ₹ 12 Cr ಕೋಟಿ
Day 2 [ಶನಿವಾರ] ₹ 9.25 ಕೋಟಿ
Day 3 [ಭಾನುವಾರ]₹ 10ಕೋಟಿ
Day 4 [ಸೋಮವಾರ]₹4.5 ಕೋಟಿ
Day 5 [ಮಂಗಳವಾರ]₹4 ಕೋಟಿ
Day 6 [ಬುಧವಾರ] ₹2.65 ಕೋಟಿ
Day 7 [ಗುರುವಾರ] ₹2.1 ಕೋಟಿ


ಒಟ್ಟು ಗಳಿಕೆ ₹ 44.5 ಕೋಟಿ

ಹೀಗೆ ಸದ್ಯ ಬಾಕ್ಸಾಫೀಸ್‌ನಲ್ಲಿ ₹ 44.5 ಕೋಟಿಯನ್ನು ಕೊಳ್ಳೆ ಹೊಡೆದಿರುವ ''ಬಾಘಿ 4'' ಈ ಸೋಮವಾರದವರೆಗೆ ₹50 ಕೋಟಿ ಕೊಳ್ಳೆ ಹೊಡೆಯುತ್ತಾ ಎನ್ನುವ ಪ್ರಶ್ನೆ ಸದ್ಯಕ್ಕೆ ಹಲವರನ್ನು ಕಾಡುತ್ತಿದೆ. ಇನ್ನೂ ''ಭಾಘಿ-4'' ಚಿತ್ರಕ್ಕೆ ₹80 ಕೋಟಿ ಹಣ ಖರ್ಚಾಗಿದೆ ಎಂದು Koimoi.com ವರದಿಯನ್ನು ಮಾಡಿದೆ. ಈ ಹಣವನ್ನು ಹರ್ಷ ನಿರ್ಮಾಪಕರಿಗೆ ಮರಳಿ ತಂದುಕೊಡುವಲ್ಲಿ ಯಶಸ್ವಿಯಾಗುತ್ತಾರಾ ಎನ್ನುವುದನ್ನು ಕೂಡ ಸದ್ಯ ಕಾದು ನೋಡಬೇಕಿದೆ. " ಬಾಘಿ 4' ಎದುರು ಬಂದ '' ದಿ ಬೆಂಗಾಳ್ ಫೈಲ್ಸ್ '' ಚಿತ್ರದ ಗಳಿಕೆ ಇದಕ್ಕಿಂತ ಇನ್ನೂ ಶೋಚನಿಯವಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ

More from Filmibeat

English summary
Tiger Shroff's "Baaghi 4" continues its fight at the box office, surpassing ₹50 crore. Discover the film's day-by-day collections and the challenges it faces in its first week of release.
Read more about: bollywood a harsha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X