ಚಿತ್ರಮಂದಿರಗಳಲ್ಲಿ 'ಅಖಂಡ- 2' ಆರ್ಭಟ ಮುಗೀತು; ಎಷ್ಟು ಕೋಟಿ ನಷ್ಟ ಗೊತ್ತಾ?

ಭಾರೀ ನಿರೀಕ್ಷೆಯೊಂದಿಗೆ ತೆರೆಗೆ ಬಂದಿದ್ದ 'ಅಖಂಡ- 2' ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಸಿನಿಮಾ ಬಿಡುಗಡೆಯಾಗಿ 25 ದಿನ ಕಳೆದಿದೆ. ಫಸ್ಟ್ ವೀಕೆಂಡ್ ಭರ್ಜರಿ ಕಲೆಕ್ಷನ್ ಮಾಡಿದ್ದ ಸಿನಿಮಾ ಬಳಿಕ ಕುಂಟುತ್ತಾ ಸಾಗಿತ್ತು. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್ ಜೋರಾಗಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಮುಗ್ಗರಿಸಿತ್ತು.

3 ವರ್ಷಗಳ ಹಿಂದೆ ಬಂದಿದ್ದ 'ಅಖಂಡ' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಹಾಗಾಗಿ ಸೀಕ್ವೆಲ್ ಬಗ್ಗೆ ನಿರೀಕ್ಷೆ ಹೆಚ್ಚಾಗಿತ್ತು. ಅದಕ್ಕೆ ತಕ್ಕಂತೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿತ್ತು. ಬಾಲಯ್ಯ, ಬೋಯಪಾಟಿ ಶ್ರೀನುಗೆ ಭಾರೀ ಸಂಭಾವನೆ ಕೊಟ್ಟಿದ್ದರು. ಹಾಗಾಗಿ ಸಹಜವಾಗಿಯೇ ಸಿನಿಮಾ ಬಜೆಟ್ ಹೆಚ್ಚಾಗಿತ್ತು. ಆದರೆ ಅಂತಿಮವಾಗಿ ಸಿನಿಮಾ ವಿತರಕರಿಗೆ ನಷ್ಟ ಉಂಟುಮಾಡಿದೆ ಎನ್ನುವ ಚರ್ಚೆ ಶುರುವಾಗಿದೆ.

Balakrishna s Akhanda 2 Struggles at Box Office Distributors Face Heavy Losses

ಈ ಹಿಂದೆ ಬಾಲಕೃಷ್ಣ ಹಾಗೂ ಬೊಯಪಾಟಿ ಶ್ರೀನು ಕಾಂಬಿನೇಷನ್‌ನಲ್ಲಿ ಬಂದಿದ್ದ 3 ಸಿನಿಮಾಗಳು ಹಿಟ್ ಆಗಿತ್ತು. 'ಸಿಂಹ', 'ಲೆಜೆಂಡ್' ಹಾಗೂ 'ಅಖಂಡ' ಚಿತ್ರಗಳು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಬಳಿಕ ಇದೀಗ ಬಂದ ಸೀಕ್ವೆಲ್ ಮಾತ್ರ ಕೈಕೊಟ್ಟಿದೆ. ರಾಮ್ ಆಚಂಟ, ಗೋಪಿ ಆಚಂಟ ಹಾಗೂ ಇಶಾನ್ ಸಕ್ಸೆನಾ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎಸ್. ತಮನ್ ಸಂಗೀತ ಚಿತ್ರಕ್ಕಿದೆ. ದ್ವಿಪಾತ್ರಗಳಲ್ಲಿ ಬಾಲಯ್ಯ ಅಬ್ಬರಿಸಿ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಬಿಲ್ಡಪ್ ಜಾಸ್ತಿ ಆಗಿ ಲಾಜಿಕ್ ಇಲ್ಲದ ಸನ್ನಿವೇಶಗಳು ಕೆಲವರ ಬೇಸರಕ್ಕೆ ಕಾರಣವಾಗಿತ್ತು.

120 ಕೋಟಿ ರೂ. ಕಲೆಕ್ಷನ್

ಡಿಸೆಂಬರ್ 12ರಂದು ತೆರೆಗೆ ಬಂದಿದ್ದ 'ಅಖಂಡ'-2 ಸಿನಿಮಾ ಚಿತ್ರಮಂದಿರಗಳಲ್ಲಿ ಬಹುತೇಕ ಪ್ರದರ್ಶನ ಮುಗಿಸಿದೆ. ಈ ವಾರವೇ ಓಟಿಟಿಗೆ ಬರುವ ಲೆಕ್ಕಾಚಾರ ಶುರುವಾಗಿದೆ. 23 ದಿನಕ್ಕೆ ಸಿನಿಮಾ 120 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಸಿನಿಮಾ ಬಜೆಟ್ 200 ಕೋಟಿ ರೂ. ದಾಟಿದ್ದು ನಿರ್ಮಾಪಕರಿಗೆ ನಷ್ಟ ಎದುರಾಗಿದೆ ಎಂದು ಫಿಲ್ಮ್‌ ನಗರ್‌ನಲ್ಲಿ ಚರ್ಚೆ ನಡೀತಿದೆ.

Balakrishna s Akhanda 2 Struggles at Box Office Distributors Face Heavy Losses

ನೆಟ್ ಕಲೆಕ್ಷನ್

120 ಕೋಟಿ ರೂ. ಗ್ರಾಸ್ ಕೆಲಕ್ಷನ್ ಆಗಿದ್ದರೂ ನೆಟ್ ಕಲೆಕ್ಷನ್ 93 ಕೋಟಿ ರೂ. ಎಂದು sacnilk.com ವರದಿ ಮಾಡಿದೆ. ಹಾಗಾಗಿ 'ಅಖಂಡ'-2 ಸಿನಿಮಾ ಭಾರೀ ನಷ್ಟ ಎದುರಿಸುವುದು ಗೊತ್ತಾಗುತ್ತಿದೆ. ವಿತರಕರು 40 ಕೋಟಿ ರೂ.ಗೂವರೆಗೂ ನಷ್ಟ ಅನುಭವಿಸಿದ್ದಾರೆ ಎಂದು ಬಾಕ್ಸಾಫೀಸ್ ಪಂಡಿತರು ಅಂದಾಜಿಸುತ್ತಿದ್ದಾರೆ.

ಓಟಿಟಿ ರೈಟ್ಸ್

ಇನ್ನು 'ಅಖಂಡ- 2' ಸಿನಿಮಾ ಓಟಿಟಿ ರೈಟ್ಸ್ 80 ಕೋಟಿ ರೂ.ಗೂ ಮಾರಾಟವಾಗಿದೆ ಎನ್ನುವ ಊಹಾಪೋಹ ಇದೆ. ಹಾಗಾಗಿ ನಿರ್ಮಾಪಕರು ಸೇಫ್ ಆಗಿರಬಹುದು. ಸಿನಿಮಾ ನಂಬಿ ಹಣ ಹಾಕಿದ ವಿತರಕರು ಈಗ ನಷ್ಟಕ್ಕೆ ಸಿಲುಕುವಂತಾಗಿದೆ. ಜನವರಿ 9ರಂದು ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸುವ ಸಾಧ್ಯತೆಯಿದೆ.

ಸಕ್ಸಸ್ ಮೀಟ್ ಕ್ಯಾನ್ಸಲ್

ಡಿಸೆಂಬರ್ 24ರಂದು ಕರ್ನೂಲ್‌ನಲ್ಲಿ 'ಅಖಂಡ'-2 ಸಕ್ಸಸ್‌ಮೀಟ್ ಮಾಡುತ್ತಾರೆ ಎಂದು ಗುಲ್ಲಾಗಿತ್ತು. ಆದರೆ ಸಿನಿಮಾ ಸೋಲುಂಡ ಕಾರಣ ಕಾರ್ಯಕ್ರಮ ರದ್ದು ಮಾಡಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಚರ್ಚೆ ಆಗ್ತಿದೆ. ಅಧಿಕೃತವಾಗಿ ಚಿತ್ರತಂಡ ಸಿನಿಮಾ ಕಲೆಕ್ಷನ್ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಮೊದಲ ದಿನ 59 ಕೋಟಿ ರೂ. ಗ್ರಾಸ್ ಕಲೆಕ್ಷನ್ ಬಗ್ಗೆ ಚಿತ್ರತಂಡ ಘೋಷಿಸಿತ್ತು.

ವಿಶೇಷ ಸೂಚನೆ: ಈ ಆರ್ಟಿಕಲ್‌ಗೆ ಸಂಬಂಧಿಸಿದ ಮಾಹಿತಿಯನ್ನು https://www.sacnilk.com/, ನಿರ್ಮಾಣ ಸಂಸ್ಥೆಗಳು ಹಾಗೂ ಸಾಮಾಜಿಕ ಮಾಧ್ಯಮ ಮಾಧ್ಯಮದ ವಿವರಗಳ ಆಧಾರದ ಮೇಲೆ ಸಂಗ್ರಹಿಸಲಾಗಿದೆ. ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಬಹಿರಂಗಪಡಿಸಿದ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

Read more about: balakrishna tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X