KVN ಸಂಸ್ಥೆಗೆ 'KD' ತಂದುಕೊಡದ ಗೆಲುವು 'ಬಾಲನ್' ತಂದುಕೊಟ್ಟ; 2 ದಿನಕ್ಕೆ ಬಂಡವಾಳ ವಾಪಸ್

ದೊಡ್ಡ ದೊಡ್ಡ ಸಿನಿಮಾಗಳನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡ್ತಿದೆ. ಆದರೆ ಗೆಲುವು ಮಾತ್ರ ಮರೀಚಿಕೆ ಎನ್ನುವಂತಾಗಿತ್ತು. 'ಟಾಕ್ಸಿಕ್' ಹಾಗೂ 'ಜನ ನಾಯಗನ್' ಸಿನಿಮಾಗಳು ಅಂದುಕೊಂಡ ಸಮಯಕ್ಕೆ ಬಿಡುಗಡೆ ಆಗದೇ ಇರುವುದು ಹಿನ್ನಡೆ ಆಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಿದ್ದ 'ಕೆಡಿ' ಸಿನಿಮಾ ಕೈಹಿಡಿಯಲಿಲ್ಲ. ಆದರೆ ಮಲಯಾಳಂ ಸಿನಿಮಾ 'ಬಾಲನ್: ದಿ ಬಾಯ್' ಗೆದ್ದಿದೆ.

ಹೌದು.. ಕೆವಿಎನ್ ಪ್ರೊಡಕ್ಷನ್ಸ್ ಈಗಾಗಲೇ ಪರಭಾಷೆಗಳಲ್ಲಿ ಚಿತ್ರ ನಿರ್ಮಾಣ ಆರಂಭಿಸಿದೆ. ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಿಗೆ ಹೂಡಿಕೆ ಮಾಡ್ತಿದೆ. ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಮಲಯಾಳಂ ಸಿನಿಮಾ 'ಬಾಲನ್: ದಿ ಬಾಯ್' ಈ ವಾರ ತೆರೆಕಂಡು ಭರ್ಜರಿ ಪ್ರತಿಕ್ರಿಯೆ ಪಡೆದಿದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸದ್ದು ಮಾಡ್ತಿದೆ. ಎರಡೇ ದಿನನಲ್ಲಿ ಸಿನಿಮಾ ಹಾಕಿದ ಬಜೆಟ್ ವಾಪಸ್ ತಂದುಕೊಟ್ಟಿದೆ ಎನ್ನುವ ಚರ್ಚೆ ನಡೀತಿದೆ.

Balan The Boy Day 2 Boxoffice Chidambaram thriller collects 4 crore in two days

ದೊಡ್ಡ ಸ್ಟಾರ್‌ಕಾಸ್ಟ್, ಭಾರೀ ಬಜೆಟ್ ಬೇಕಿಲ್ಲ. ಒಳ್ಳೆ ಕಥೆ, ಚಿತ್ರಕಥೆ ಅದಕ್ಕೆ ತಕ್ಕಂತೆ ಕಲಾವಿದರ ನಟನೆ ಬೇಕು ಅಷ್ಟೆ. ಇದೇ ಕಾರಣಕ್ಕೆ ನೂರಾರು ಕೋಟಿ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳು ಮಾಡದ ಚಮತ್ಕಾರ ನಾಲ್ಕೈದು ಕೋಟಿ ರೂ. ಸಣ್ಣ ಸಿನಿಮಾಗಳು ಮಾಡುತ್ತವೆ. ಅದಕ್ಕೆ ಹೊಸ ಸೇರ್ಪಡೆ 'ಬಾಲನ್: ದಿ ಬಾಯ್' ಹಾಗೂ ತೆಲುಗಿನ 'ಮಾ ಇಂಟಿ ಬಂಗಾರಂ'. ಸಮಂತಾ ನಿರ್ಮಿಸಿ ನಟಿಸಿರುವ 'ಮಾ ಇಂಟಿ ಬಂಗಾರಂ' ಚಿತ್ರಕ್ಕೂ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ.

'ಬಾಲನ್: ದಿ ಬಾಯ್' ಕಲೆಕ್ಷನ್

ಗುರುವಾರವೇ 'ಬಾಲನ್: ದಿ ಬಾಯ್' ಸಿನಿಮಾ ಪ್ರೀಮಿಯರ್ ಶೋ ಶುರುವಾಗಿತ್ತು. ಶುಕ್ರವಾರ ಭಾರತದಲ್ಲೇ ಸಿನಿಮಾ 1.82 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ sacnilk.com ವೆಬ್‌ಸೈಟ್ ವರದಿ ಮಾಡಿತ್ತು. 2ನೇ ದಿನ 2.35 ಕೋಟಿ ರೂ. ಬಾಚಿರುವುದಾಗಿ ಹೇಳಲಾಗ್ತಿದೆ. ಅಂದ್ರೆ ಮೊದಲ ದಿನಕ್ಕಿಂತ 2ನೇ ದಿನ ಗಳಿಕೆ ಹೆಚ್ಚಾಗಿದೆ. 3ನೇ ದಿನವಾದ ಇಂದು(ಭಾನುವಾರ) ಈ ಥ್ರಿಲ್ಲರ್ ಸಿನಿಮಾ ಮತ್ತಷ್ಟು ಹೆಚ್ಚುವ ಸುಳಿವು ಸಿಕ್ತಿದೆ. ಒಟ್ಟು 2 ದಿನಕ್ಕೆ 4.17 ಕೋಟಿ ರೂ. ಗಳಿಕೆ ಕಂಡಂತಾಗಿದೆ.

ಥ್ರಿಲ್ಲರ್ ಸಿನಿಮಾ ಕರಾಮತ್ತು

ಈ ಹಿಂದೆ 'ಮಂಜುಮ್ಮೆಲ್ ಬಾಯ್ಸ್' ರೀತಿಯ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟಿದ್ದ ಚಿದಂಬರಂ ಇದೀಗ 'ಬಾಲನ್: ದಿ ಬಾಯ್' ಚಿತ್ರ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಬಿಡುಗಡೆಗೂ ಮೊದ್ಲೆ ಸಿನಿಮಾ ಕೊಂಚಮಟ್ಟಿಗೆ ನಿರೀಕ್ಷೆ ಮೂಡಿಸಿತ್ತು. ಅದಕ್ಕೆ ತಕ್ಕಂತೆ ರೆಸ್ಪಾನ್ಸ್ ಸಿಕ್ಕಿತ್ತು. ನಿಧಾನವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X