Bharat Bhhagya Viddhaata BO Day 2 ; ಫ್ರೀ ಟಿಕೆಟ್ ಕೊಟ್ಟರೂ ಬಾರದ ಪ್ರೇಕ್ಷಕರು, ಕಂಗನಾ ಕಂಗಾಲು

ಚಿತ್ರಕ್ಕೆ ಮತ್ತು ಪಾತ್ರಕ್ಕೆ ತನು-ಮನ ಅರ್ಪಿಸುವುದಲ್ಲದೇ ಪ್ರಬಲ ಶಕ್ತಿಗಳ ಮುಂದೆ ತನ್ನ ವ್ಯಕ್ತಿತ್ವಕ್ಕೆ ಮಸಿ ತಗುಲದಂತೆ ಬಾಲಿವುಡ್ ನಲ್ಲಿ ಸ್ಟಾರ್ ಪಟ್ಟವನ್ನು ಅಲಂಕರಿಸಿದವರು ಕಂಗನಾ ರಣಾವತ್. ಇಂಥಾ ಕಂಗನಾ ಬಾಲಿವುಡ್‌ನ ಕಿರಿಕ್ ರಾಣಿ ಕೂಡ ಹೌದು. ಕುಂತಲ್ಲಿ, ನಿಂತಲ್ಲಿ, ಹೋದಲ್ಲಿ, ಬಂದಲ್ಲಿ, ಕೇವಲ ವಿವಾದಗಳಿಂದನೇ ಕಂಗನಾ ಸುದ್ದಿಯಾಗುತ್ತಿದ್ದಾರೆಯೇ ಹೊರತು ತಮ್ಮ ಚಿತ್ರಗಳಿಂದ ಕಂಗನಾ ಸುದ್ದಿಯಾಗುತ್ತಿಲ್ಲ. ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿಲ್ಲ. ಇದಕ್ಕೆ ''ಭಾರತ್ ಭಾಗ್ಯ ವಿಧಾತ'' ಚಿತ್ರದ ಬಾಕ್ಸಾಫೀಸ್‌ ಗಳಿಕೆಯೇ ಸದ್ಯದ ಕೈಗನ್ನಡಿ.

ಹೌದು, ''ಭಾರತ್ ಭಾಗ್ಯ ವಿಧಾತ''.. ಕಂಗನಾ ರಣಾವತ್ ತುಂಬು ಪ್ರೀತಿಯಿಂದ ಮಾಡಿದ ಮತ್ತೊಂದು ಸಿನಿಮಾ. ಕಳೆದ ವರ್ಷ ''ಎಮರ್ಜೆನ್ಸಿ'' ಚಿತ್ರದ ಸೋಲಿಂದ ಭಾರೀ ಮುಖಭಂಗ ಅನುಭವಿಸಿದ್ದ ಕಂಗನಾ ಪಾಲಿಗೆ ಈ ಚಿತ್ರ ಗೆಲ್ಲಲೇಬೇಕಿತ್ತು.'' ಭಾರತ್ ಭಾಗ್ಯ ವಿಧಾತ'' ಕೂಡ ಭಾರಿ ನಿರೀಕ್ಷೆಯ ಜೊತೆ ತೆರೆಗೆ ಕೂಡ ಬಂತು. ಆದರೆ.. ಪ್ರೇಕ್ಷಕರ ಪ್ರೀತಿ ಮಾತ್ರ ಈ ಚಿತ್ರಕ್ಕೆ ಸಿಕ್ತಿಲ್ಲ. ಇದಕ್ಕೆ ಪುರಾವೆ ಎಂಬಂತೆ ಮೊದಲ ದಿನ ಕೇವಲ ₹1 ಕೋಟಿಯನ್ನು ದೋಚುವ ಮೂಲಕ ನಿರಾಸೆ ಮೂಡಿಸಿದ ''ಭಾರತ್ ಭಾಗ್ಯ ವಿಧಾತ'' ಎರಡನೇ ದಿನ ₹1.45 ಕೋಟಿಯನ್ನು ಮಾತ್ರ ಗಳಿಸಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶ ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ.

Bharat Bhhagya Viddhaata Day 2 Kangana s Film Struggles Despite BOGO Push

ನಿಜಾ, ಮೊದಲ ದಿನದ ಗಳಿಕೆಗೆ ಹೋಲಿಸಿದರೆ, ಎರಡನೇ ದಿನದ ಗಳಿಕೆಯಲ್ಲಿ 45.0% ಏರಿಕೆ ಕಂಡು ಬಂದಿದೆ. ಎರಡು ದಿನದಲ್ಲಿ ₹2.45 ಕೋಟಿಯನ್ನು ಚಿತ್ರ ಗಳಿಸಿದಂತಾಗಿದೆ. ಆದರೆ, ಈ ಚೇತರಿಕೆ ಹಿಂದೆ ಚಿತ್ರತಂಡದ ತಂತ್ರ ಇತ್ತಷ್ಟೇ.

ಕೈ ಹಿಡಿಯದ ಆಫರ್

ಹೌದು, ಅಸಲಿಗೆ ಪ್ರೇಕ್ಷಕರನ್ನು ಸೆಳೆಯಲು, ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಲು, ಚಿತ್ರತಂಡ ಒಂದು ಟಿಕೆಟ್ ಖರೀದಿಸಿದರೆ ಇನ್ನೊಂದು ಉಚಿತ ಎನ್ನುವ ಘೋಷಣೆ ಮಾಡಿತ್ತು. ಕಂಗನಾ ರಣಾವತ್ ಅವರಂತಹ ಸ್ಟಾರ್ ನಟಿ ಚಿತ್ರದಲ್ಲಿದ್ದರೂ ಮಾಡಲಾದ ಈ ಸರ್ಕಸ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೀಡಾಯ್ತು.

ಇನ್ನು ಸಾಮಾನ್ಯವಾಗಿ ಇಂತಹ ಆಫರ್ ಗಳನ್ನು ವಾರದ ಮಧ್ಯದಲ್ಲಿ ನೀಡಲಾಗುತ್ತೆ. ಆದರೆ.. ''ಭಾರತ್ ಭಾಗ್ಯ ವಿಧಾತ'' ಚಿತ್ರಕ್ಕೆ ಬಿಡುಗಡೆಯಾದ ಎರಡನೇ ದಿನವೇ ಬೈ 1 ಗೆಟ್ 1 ಆಫರ್ ನೀಡಲಾದ ಹಿನ್ನೆಲೆ ಹಲವರು ವ್ಯಂಗ್ಯವಾಡಿದ್ದರು.

ಆದರೂ ಕೂಡ ಚಿತ್ರತಂಡಕ್ಕೆ ಈ ಆಫರ್ ಕೈ ಹಿಡಿಯುತ್ತೆ ಎನ್ನುವ ವಿಶ್ವಾಸ ಇತ್ತು. ಆದರೆ ಅಂತಹ ಹೇಳಿಕೊಳ್ಳುವಂತಹ ಲಾಭ, ಗಳಕೆ, ಈ ಆಫರ್ ದಿಂದ ಆಗಲಿಲ್ಲ ಎನ್ನುವುದೇ ವಾಸ್ತವ.

bharat-bhhagya-viddhaata-day-2-kangana-s-film-struggles-despite-bogo-push

ಟಿಕೆಟ್ ಕಿಟಕಿಯಲ್ಲಿ ತೀವ್ರ ಪೈಪೋಟಿ

''ಭಾರತ್ ಭಾಗ್ಯ ವಿಧಾತ'' ಚಿತ್ರದ ಜೊತೆಗೆ ದಿಲ್ಜಿತ್ ದೋಸಾಂಜ್ ಅವರ ''ಮೈ ವಾಪಸ್ ಆವುಂಗಾ'', ಮನೋಜ್ ಬಾಜಪೇಯಿ ಅವರ ''ಗವರ್ನರ್'' ಮತ್ತು ವಿಕ್ರಮ್ ಭಟ್ ಅವರ ''ಹಾಂಟೆಡ್ 3ಡಿ: ಎಕೋಸ್ ಆಫ್ ದಿ ಪಾಸ್ಟ್'' ಸೇರಿದಂತೆ ಹಲವು ಚಿತ್ರಗಳು ಒಟ್ಟಿಗೆ ತೆರೆಕಂಡಿವೆ. ಈ ಪೈಕಿ ಇರುವುದರಲ್ಲಿ ''ಹಾಂಟೆಡ್ 3ಡಿ'' ಪ್ರೇಕ್ಷಕರನ್ನು ಚೂರು ಸೆಳೆಯುತ್ತಿದೆ. ಮಿಕ್ಕಂತೆ ಭಾರತದಲ್ಲಿ ಸದ್ಯ ''ಅಬ್ಸೆಷನ್'' ಅಲೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ''ಭಾರತ್ ಭಾಗ್ಯ ವಿಧಾತ'' ನೋಡುವ ಯಾವ ಆಸಕ್ತಿ ಪ್ರೇಕ್ಷಕರಲ್ಲಿ ಕಂಡು ಬರುತ್ತಿಲ್ಲ. ಚಿತ್ರದ ಹಿನ್ನೆಡೆಗೆ ಇವೆಲ್ಲವೂ ಪ್ರಮುಖ ಕಾರಣ

ಒಟ್ನಲ್ಲಿ ಮೊದಲ ಎರಡು ದಿನ ''ಭಾರತ್ ಭಾಗ್ಯ ವಿಧಾತ'' ಚಿತ್ರಕ್ಕೆ ಬಾಕ್ಸಾಫೀಸ್‌ನಲ್ಲಿ ತಣ್ಣನೆಯ ಪ್ರತಿಕ್ರಿಯೆ ಸಿಕ್ಕಿದೆ. ಇಂದಿನ (ಜೂನ್ 14 ) ಗಳಿಕೆಯ ಮೇಲೆ ಚಿತ್ರದ ಮುಂದಿನ ಭವಿಷ್ಯ ನಿಂತಿದೆ. ಇಂದು (ಜೂನ್ 14) ಕೂಡ ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡು ಬರದೇ ಇದ್ದರೆ ''ಭಾರತ್ ಭಾಗ್ಯ ವಿಧಾತ'' ಚಿತ್ರದ ಮೂಲಕ ಕಂಗನಾ ಖಾತೆಗೆ ಮತ್ತೊಂದು ಸೋಲು ಜಮೆಯಾದಂತೆ ಆಗಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Bharat Bhhagya Viddhaata Day 2 box office collection: Kangana Ranaut's drama witnesses a 45% spike, bringing its total net earnings to ₹2.45 crore.
Read more about: kangana ranaut bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X