Bhooth Bangla Box Office Day 7 ; ಭೂತ್ ಬಂಗ್ಲಾದಲ್ಲಿ ಹಣದ ಸದ್ದು, ಒಂದು ವಾರದಲ್ಲಿ ಗಳಿಸಿದ್ದೆಷ್ಟು ಅಕ್ಷಯ್ ಕುಮಾರ್ ಸಿನಿಮಾ?
ಕೊರೊನಾ ಎಂಬ ಪೀಡೆ ವಕ್ಕರಿಸಿಕೊಳ್ಳುವ ಮುನ್ನ ಒಂದಾದ ಮೇಲೊಂದು ಗೆಲುವನ್ನೂ ಕಂಡವರು ಅಕ್ಷಯ್ ಕುಮಾರ್. ಆದರೆ.. ಕೊರೊನಾ ಕರಿನೆರಳು ಸರಿದ ಬಳಿಕ, ಅಕ್ಷಯ್ ಕುಮಾರ್ ಮಾಡಿದ್ದೆಲ್ಲವೂ ಪರಮ ತೋಪು ಸಿನಿಮಾಗಳೇ.
ಹೀಗಾಗಿ ಕಳೆದ ಎರಡು ಮೂರು ವರ್ಷಗಳಿಂದ ಅಕ್ಷಯ್ ಕುಮಾರ್ ಕುರಿತು ಹಲವರು ನಾನಾ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಫ್ಲಾಪ್ ಕುಮಾರ್ ಎಂದು ಕರೆಯಲು ಶುರು ಮಾಡಿದ್ದಾರೆ. ಅಕ್ಷಯ್ ಕುಮಾರ್ ಜೊತೆ ಚಿತ್ರ ಮಾಡಿದರೆ ನಷ್ಟ ಆಗುವುದು ಪಕ್ಕಾ ಎಂದು ನಿರ್ಮಾಪಕರನ್ನು ಹೆದರಿಸುತ್ತಿದ್ದಾರೆ.

ಸಹಜವಾಗಿ ಈ ಎಲ್ಲಾ ಮಾತುಗಳಿಂದ ಮತ್ತು ಎದುರಾದ ನಿರಂತರ ಸೋಲುಗಳಿಂದ ಅಕ್ಷಯ್ ಕುಮಾರ್ ಕೂಡ ನೊಂದುಕೊಂಡಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ತಮ್ಮ ಬಗ್ಗೆ ಕೇಳಿ ಬಂದ ಮಾತುಗಳಿಂದ ಬೇಸತ್ತು ನಾನೆಲ್ಲಿಯೂ ಓಡಿ ಹೋಗಲ್ಲ. ನಾನು ಇನ್ನೂ ಸತ್ತಿಲ್ಲ ಎಂದು ಖುದ್ದು ಅಕ್ಷಯ್ ಕುಮಾರ್ ಈ ಹಿಂದೆ ಹೇಳಿದ್ದರು. ಇಂದಲ್ಲ ನಾಳೆ ಮತ್ತೆ ಗೆಲ್ಲುತ್ತೇನೆ ಎಂದು ಭರವಸೆಯನ್ನು ಕೂಡ ವ್ಯಕ್ತಪಡಿಸಿದ್ದರು.
ಅಕ್ಷಯ್ ಕುಮಾರ್ ಅವರ ಈ ನಂಬಿಕೆ ಸದ್ಯ ಹುಸಿಯಾಗಿಲ್ಲ. ಸತತ ಸೋಲುಗಳಿಂದ ಹೈರಾಣಾಗಿದ್ದ ಅಕ್ಷಯ್ ಕುಮಾರ್ ಸದ್ಯ ಮತ್ತೆ ಗೆಲುವಿನ ಲಯಕ್ಕೆ ಮರಳಿದಂತೆ ಇದೆ. ಇಂತಹದ್ದೊಂದು ಸೂಚನೆಯನ್ನು ಸದ್ಯ ''ಭೂತ್ ಬಂಗ್ಲಾ'' ಚಿತ್ರ ನೀಡುತ್ತಿದೆ.
ಹೌದು, ಕಳೆದ ವಾರ (ಏಪ್ರಿಲ್ 17) ತೆರೆಗೆ ಬಂದ ''ಭೂತ್ ಬಂಗ್ಲಾ''ದಲ್ಲಿ ಸದ್ಯ ಹಣದ ಸದ್ದು ಕೇಳಿ ಬರುತ್ತಿದೆ.ಬಾಕ್ಸಾಫೀಸ್‌ನ ಅಂಕಿ-ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ನಿನ್ನೆ ಅಂದರೆ ಗುರುವಾರ (ಏಪ್ರಿಲ್ 23) ₹5.15 ಕೋಟಿಯನ್ನು ಗಳಿಸಿದ್ದು, ಈ ಒಂದು ವಾರದಲ್ಲಿ ಈ ಹಾರರ್ ಕಾಮಿಡಿ ಚಿತ್ರ ಕೇವಲ ಭಾರತದಲ್ಲಿ ₹84.05 ಕೋಟಿ (Net) ಹಣವನ್ನು ದೋಚಿದೆ.
ಸ್ಯಾಕ್ನಿಲ್ ಪ್ರಕಾರ ''ಭೂತ್ ಬಂಗ್ಲಾ'' ಚಿತ್ರದ ಮೊದಲ ವಾರದ ಗಳಿಕೆ ಈ ಕೆಳಗಿನಂತೆ ಇದೆ.
ಪೇಯ್ಡ್ ಪ್ರೀಮಿಯರ್ - ಗುರುವಾರ - ₹3.75 ಕೋಟಿ
ಮೊದಲ ದಿನ - ಶುಕ್ರವಾರ - ₹12.25 ಕೋಟಿ
ಎರಡನೇ ದಿನ - ಶನಿವಾರ - ₹19 ಕೋಟಿ
ಮೂರನೇ ದಿನ- ಭಾನುವಾರ- ₹23 ಕೋಟಿ
ನಾಲ್ಕನೇ ದಿನ - ಸೋಮವಾರ- ₹6.75 ಕೋಟಿ
ಐದನೇ ದಿನ - ಮಂಗಳವಾರ - ₹8.00 ಕೋಟಿ
ಆರನೇ ದಿನ - ಬುಧವಾರ - ₹6.15 ಕೋಟಿ
ಏಳನೇ ದಿನ - ಗುರುವಾರ -₹5.15 ಕೋಟಿ
ಮೊದಲ ವಾರದ ಗಳಿಕೆ - ₹84.05 ಕೋಟಿ (ಕೇವಲ ಭಾರತದಲ್ಲಿ-NET)

ಹೀಗೆ ಒಂದು ವಾರದಲ್ಲಿ ಕೇವಲ ಭಾರತದಲ್ಲಿ ₹84.5 ಕೋಟಿಯನ್ನು ದೋಚಿರುವ ''ಭೂತ್ ಬಂಗ್ಲಾ'', ವಿದೇಶದಲ್ಲಿ ಇಲ್ಲಿಯವರೆಗೆ ಅಂದರೆ ಈ ಒಂದು ವಾರದಲ್ಲಿ ₹35.50 ಕೋಟಿಯನ್ನು ಗಳಿಸಿದೆ. ಈ ಮೂಲಕ ಒಟ್ಟಾರೆಯಾಗಿ (ಭಾರತ + ಓವರ್ ಸೀಸ್ ) ₹135.45 ಕೋಟಿ (Gross-₹99.95 + ₹35.50) ಹಣವನ್ನು ಚಿತ್ರ ಗಳಿಸಿದೆ ಎಂದು ''ಸ್ಯಾಕ್ನಿಲ್ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
ಸದ್ಯ ''ಭೂತ್ ಬಂಗ್ಲಾ'' ಒಂದು ವಾರ ಯಶಸ್ವಿ ಪ್ರದರ್ಶನ ಕಂಡಿದ್ದು, ವಾರಾಂತ್ಯದಲ್ಲಿ ಚಿತ್ರದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ಬೇರೆ ಯಾವ ದೊಡ್ಡ ಚಿತ್ರಗಳು ಬಿಡುಗಡೆಯಾಗದ ಹಿನ್ನೆಲೆ ''ಭೂತ್ ಬಂಗ್ಲಾ'' ಎದುರು ಮೈದಾನ ಖಾಲಿ ಇದೆ. ಇದು ಚಿತ್ರಕ್ಕೆ ಸಹಕಾರಿಯಾಗಲಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications