Bhooth Bangla BO Day 50 ; ಭೂತ್ ಬಂಗ್ಲಾಗೆ 50ರ ಸಂಭ್ರಮ, ಅಕ್ಷಯ್ ಕುಮಾರ್ ನಂಬಿದ್ದಕ್ಕೆ ನಿರ್ಮಾಪಕರಿಗೆ ಆದ ಲಾಭ ಎಷ್ಟು ?

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವೊಂದು ಐವತ್ತು.. ನೂರು ದಿನ ಅಲ್ಲ ಬದಲಿಗೆ 25 ವಾರ 50 ವಾರದ ಪ್ರದರ್ಶನವನ್ನ ಕಾಣುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಅಂಗೈಯಲ್ಲಿಯೇ ಇವತ್ತು ಮನರಂಜನೆ ಇದೆ. ಸಾಲದಕ್ಕೆ ಪೈರಸಿ ಬೇರೆ. ಇಂತಹ ಕಾಲದಲ್ಲಿ.. ಚಿತ್ರವೊಂದು ಎರಡು ವಾರ ಚಿತ್ರಮಂದಿರದಲ್ಲಿ ಉಳಿಯುವುದು ಕಷ್ಟ ಎಂಬ ವಾತಾವರಣ ಇದೆ.

ಇನ್ನೂ ಹೊಸಬರ ಕಥೆ ಕೇಳುವುದಕ್ಕೂ .. ಹೇಳುವುದಕ್ಕೂ ಇದು ಸಮಯ ಅಲ್ಲ. ಆ ಭಾಷೆ ಈ ಭಾಷೆ ಅಂತಲ್ಲ. ಬಹುತೇಕ ಎಲ್ಲ ಭಾಷೆಯಲ್ಲಿ ಈ ಕಥೆ ಮತ್ತು ವ್ಯಥೆ ಒಂದೇ ರೀತಿ ಇದೆ. ಸಂದರ್ಭ.. ಸನ್ನಿವೇಶ ಹೀಗಿರುವಾಗ ಅಕ್ಷಯ್ ಕುಮಾರ್ ಅಭಿನಯದ ''ಭೂತ್ ಬಂಗ್ಲಾ'' ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.

Bhooth Bangla Box Office 50 Days Akshay Kumar Hits Phenomenal 181 47 Crore In India

ವಿಶೇಷ ಅಂದರೆ 50 ದಿನಗಳಾದರು ಕೂಡ ಪ್ರೇಕ್ಷಕರಲ್ಲಿ ಚಿತ್ರ ನೋಡಬೇಕೆಂಬ ಆಸಕ್ತಿ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ನಿನ್ನೆ 51ನೇ ದಿನವೂ 196 ಪ್ರದರ್ಶನವನ್ನು ಚಿತ್ರ ಕಂಡಿದೆ. 51ನೇ ದಿನ 10 ಲಕ್ಷ ಗಳಿಸಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ. ಈ ಮೂಲಕ 51 ದಿನದಲ್ಲಿ ಚಿತ್ರ ₹181.47 ಕೋಟಿಯನ್ನು ''ಭೂತ್ ಬಂಗ್ಲಾ'' ಗಳಿಸಿದಂತಾಗಿದೆ.

ಸ್ಯಾಕ್ನಿಲ್ ಪ್ರಕಾರ ''ಭೂತ್ ಬಂಗ್ಲಾ'' ಚಿತ್ರದ 51 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ದಿನ / ವಾರ ಭಾರತದ ನೆಟ್ ಕಲೆಕ್ಷನ್
ಪೇಯ್ಡ್ ಪ್ರಿವ್ಯೂವ್ ₹3.75 Cr
ಮೊದಲನೇ ದಿನ (ಶುಕ್ರವಾರ) ₹12.25 Cr
2ನೇ ದಿನ (ಶನಿವಾರ) ₹19.00 Cr
3ನೇ ದಿನ (ಭಾನುವಾರ) ₹23.00 Cr
4ನೇ ದಿನ (ಸೋಮವಾರ) ₹6.75 Cr
5ನೇ ದಿನ (ಮಂಗಳವಾರ) ₹8.00 Cr
6ನೇ ದಿನ (ಬುಧವಾರ) ₹6.15 Cr
7ನೇ ದಿನ (ಗುರುವಾರ) ₹5.50 Cr
1ನೇ ವಾರದ ಒಟ್ಟು ಗಳಿಕೆ ₹84.40 Cr
8ನೇ ದಿನ (ಶುಕ್ರವಾರ) ₹5.75 Cr
9ನೇ ದಿನ (ಶನಿವಾರ) ₹10.75 Cr
10ನೇ ದಿನ (ಭಾನುವಾರ) ₹12.50 Cr
11ನೇ ದಿನ (ಸೋಮವಾರ) ₹3.50 Cr
12ನೇ ದಿನ (ಮಂಗಳವಾರ) ₹4.35 Cr
13ನೇ ದಿನ (ಬುಧವಾರ) ₹3.40 Cr
14ನೇ ದಿನ (ಗುರುವಾರ) ₹3.50 Cr
2ನೇ ವಾರದ ಒಟ್ಟು ಗಳಿಕೆ ₹43.75 Cr
15ನೇ ದಿನ (ಶುಕ್ರವಾರ) ₹4.50 Cr
16ನೇ ದಿನ (ಶನಿವಾರ) ₹4.35 Cr
17ನೇ ದಿನ (ಭಾನುವಾರ) ₹5.50 Cr
18ನೇ ದಿನ (ಸೋಮವಾರ) ₹1.75 Cr
19ನೇ ದಿನ (ಮಂಗಳವಾರ) ₹2.25 Cr
20ನೇ ದಿನ (ಬುಧವಾರ) ₹1.75 Cr
21ನೇ ದಿನ (ಗುರುವಾರ) ₹1.75 Cr
3ನೇ ವಾರದ ಒಟ್ಟು ಗಳಿಕೆ ₹21.85 Cr
22ನೇ ದಿನ (ಶುಕ್ರವಾರ) ₹1.75 Cr
23ನೇ ದಿನ (ಶನಿವಾರ) ₹3.00 Cr
24ನೇ ದಿನ (ಭಾನುವಾರ) ₹4.00 Cr
25ನೇ ದಿನ (ಸೋಮವಾರ) ₹1.35 Cr
26ನೇ ದಿನ (ಮಂಗಳವಾರ) ₹1.70 Cr
27ನೇ ದಿನ (ಬುಧವಾರ) ₹1.25 Cr
28ನೇ ದಿನ (ಗುರುವಾರ) ₹1.25 Cr
4ನೇ ವಾರದ ಒಟ್ಟು ಗಳಿಕೆ ₹14.30 Cr
29ನೇ ದಿನ (ಶುಕ್ರವಾರ) ₹0.75 Cr
30ನೇ ದಿನ (ಶನಿವಾರ) ₹1.40 Cr
31ನೇ ದಿನ (ಭಾನುವಾರ) ₹1.90 Cr
32ನೇ ದಿನ (ಸೋಮವಾರ) ₹0.70 Cr
33ನೇ ದಿನ (ಮಂಗಳವಾರ) ₹0.90 Cr
34ನೇ ದಿನ (ಬುಧವಾರ) ₹0.80 Cr
35ನೇ ದಿನ (ಗುರುವಾರ) ₹0.70 Cr
5ನೇ ವಾರದ ಒಟ್ಟು ಗಳಿಕೆ ₹7.15 Cr
36ನೇ ದಿನ (ಶುಕ್ರವಾರ) ₹0.55 Cr
37ನೇ ದಿನ (ಶನಿವಾರ) ₹1.00 Cr
38ನೇ ದಿನ (ಭಾನುವಾರ) ₹1.35 Cr
39ನೇ ದಿನ (ಸೋಮವಾರ) ₹0.50 Cr
40ನೇ ದಿನ (ಮಂಗಳವಾರ) ₹0.65 Cr
41ನೇ ದಿನ (ಬುಧವಾರ) ₹0.55 Cr
42ನೇ ದಿನ (ಗುರುವಾರ) ₹0.85 Cr
6ನೇ ವಾರದ ಒಟ್ಟು ಗಳಿಕೆ ₹5.45 Cr
43ನೇ ದಿನ (ಶುಕ್ರವಾರ) ₹0.55 Cr
44ನೇ ದಿನ (ಶನಿವಾರ) ₹0.80 Cr
45ನೇ ದಿನ (ಭಾನುವಾರ) ₹1.10 Cr
46ನೇ ದಿನ (ಸೋಮವಾರ) ₹0.50 Cr
47ನೇ ದಿನ (ಮಂಗಳವಾರ) ₹0.60 Cr
48ನೇ ದಿನ (ಬುಧವಾರ) ₹0.50 Cr
49ನೇ ದಿನ (ಗುರುವಾರ) ₹0.35 Cr
7ನೇ ವಾರದ ಒಟ್ಟು ಗಳಿಕೆ ₹4.40 Cr
50ನೇ ದಿನ (ಶುಕ್ರವಾರ) ₹0.07 Cr
51ನೇ ದಿನ (ಶನಿವಾರ) ₹0.10 Cr
ಭಾರತದ ಒಟ್ಟು ನೆಟ್ ಕಲೆಕ್ಷನ್ ₹181.47 Cr

ಸತತ ಸೋಲುಗಳ ನಂತರ ಗೆದ್ದ ಅಕ್ಷಯ್ ಕುಮಾರ್

ಅಂದ್ಹಾಗೇ ಅಕ್ಷಯ್ ಕುಮಾರ್ ಪಾಲಿಗೆ ಈ ಗಳಿಕೆ ಮತ್ತು ಈ ಗೆಲುವು ತುಂಬಾನೇ ಮಹತ್ವದ್ದು. ಯಾಕೆಂದರೆ.. ಕೊರೊನಾ ನಂತರ ಅಕ್ಷಯ್ ಕುಮಾರ್ ಗೆದ್ದಿದ್ದು ಕಡಿಮೆ ಸೋತಿದ್ದೇ ಹೆಚ್ಚು. ಕೊರೊನಾ ನಂತರ ಅಂದರೆ 2020ರ ಆಚೆ ಅಕ್ಷಯ್ ಕುಮಾರ್ ಇಲ್ಲಿಯವರೆಗೆ 18 ಚಿತ್ರಗಳನ್ನು ಮಾಡಿದ್ದಾರೆ. ಆ ಪೈಕಿ ಗೆದ್ದಿದ್ದು ''ಹೌಸ್‌ಫುಲ್ 5''.. ''ಸೂರ್ಯವಂಶಿ''.. ''ಜಾಲಿ ಎಲ್‌ಎಲ್‌ಬಿ 3'' ಮತ್ತು ''ಓ ಮೈ ಗಾಡ್ 2'' ಚಿತ್ರಗಳು ಮಾತ್ರ.

ಮಿಕ್ಕಂತೆ ಎಲ್ಲಾ ಚಿತ್ರಗಳು ಮಕಾಡೆ ಮಲಗಿವೆ. ಈ ಹಿನ್ನೆಲೆ ''ಭೂತ್ ಬಂಗ್ಲಾ''ದ ಈ 181.47 ಕೋಟಿಯ ಗಳಿಕೆ ಅಕ್ಷಯ್ ಕುಮಾರ್ ಪಾಲಿಗೆ ತುಂಬಾನೇ ವಿಶೇಷವಾದದ್ದು. ಈ ಚಿತ್ರದ ಮೂಲಕ ಹಲವು ವರ್ಷಗಳ ನಂತರ ಅಕ್ಷಯ್ ಕುಮಾರ್ ಗೆಲುವಿನ ನಗೆ ಬೀರಿದಂತೆ ಆಗಿದೆ.

ಅಕ್ಷಯ್ ಕುಮಾರ್ ಅಭಿನಯದ 18 ಚಿತ್ರಗಳ ಬಾಕ್ಸಾಫೀಸ್ ಫಲಿತಾಂಶ ಈ ಕೆಳಗಿನಂತೆ ಇದೆ

ವರ್ಷ ಚಿತ್ರದ ಹೆಸರು ಭಾರತದ ನೆಟ್ ಕಲೆಕ್ಷನ್ ಬಾಕ್ಸ್ ಆಫೀಸ್ ವರ್ಡಿಕ್ಟ್
2026 ಭೂತ್ ಬಂಗ್ಲಾ (ಇನ್ನೂ ಚಿತ್ರಮಂದಿರಗಳಲ್ಲಿದೆ) ₹181.47 Cr ಸೂಪರ್ ಹಿಟ್
2025 ಜಾಲಿ ಎಲ್‌ಎಲ್‌ಬಿ 3 ₹185.00 Cr ಹಿಟ್
2025 ಹೌಸ್‌ಫುಲ್ 5 ₹160.72 Cr ಹಿಟ್
2025 ಕೇಸರಿ ಚಾಪ್ಟರ್ 2 ₹142.50 Cr ಎವರೇಜ್
2025 ಸ್ಕೈ ಫೋರ್ಸ್ ₹131.44 Cr ಎವರೇಜ್
2024 ಬಡೇ ಮಿಯಾ ಚೋಟೆ ಮಿಯಾ ₹59.17 Cr ಡಿಸಾಸ್ಟರ್
2024 ಖೇಲ್ ಖೇಲ್ ಮೇನ್ ₹40.36 Cr ಫ್ಲಾಪ್
2024 ಸರ್ಫಿರಾ ₹22.13 Cr ಡಿಸಾಸ್ಟರ್
2023 ಓ ಎಂ ಜಿ 2 ₹150.18 Cr ಸೂಪರ್ ಹಿಟ್
2023 ಮಿಷನ್ ರಾಣಿಗಂಜ್ ₹33.74 Cr ಫ್ಲಾಪ್
2023 ಸೆಲ್ಫಿ ₹16.85 Cr ಡಿಸಾಸ್ಟರ್
2022 ರಾಮ್ ಸೇತು ₹71.87 Cr ಫ್ಲಾಪ್
2022 ಸಾಮ್ರಾಟ್ ಪೃಥ್ವಿರಾಜ್ ₹68.05 Cr ಡಿಸಾಸ್ಟರ್
2022 ಬಚ್ಚನ್ ಪಾಂಡೆ ₹49.98 Cr ಡಿಸಾಸ್ಟರ್
2022 ರಕ್ಷಾ ಬಂಧನ್ ₹44.39 Cr ಫ್ಲಾಪ್
2021 ಸೂರ್ಯವಂಶಿ ₹195.51 Cr ಸೂಪರ್ ಹಿಟ್
2021 ಬೆಲ್‌ಬಾಟಮ್ ₹32.10 Cr ಡಿಸಾಸ್ಟರ್ (ಶೇ. 50 ರಷ್ಟು ವೀಕ್ಷಕರ ಮಿತಿಯ ನಿಯಮವಿದ್ದಾಗ ಬಿಡುಗಡೆಯಾಗಿತ್ತು)

ಭೂತ್ ಬಂಗ್ಲಾ ಬಜೆಟ್ ಮತ್ತು ಗಳಿಕೆ : ಲಾಭ ಎಷ್ಟು ?

ಇನ್ನು ''ಭೂತ್ ಬಂಗ್ಲಾ'' ಚಿತ್ರಕ್ಕೆ ''Koimoi'' ವರದಿಯ ಪ್ರಕಾರ ₹120.00 ಕೋಟಿ ಸುರಿಯಲಾಗಿದೆ. ಈ ಹಣ ಈಗಾಗಲೇ ಮರಳಿ ಬಂದಿದ್ದು ಕೇವಲ ಭಾರತದಲ್ಲಿಯೇ ₹181 ಕೋಟಿಯನ್ನು ಗಳಿಸುವ ಮೂಲಕ 60 ಕೋಟಿ ಲಾಭ ನಿರ್ಮಾಪಕರಿಗೆ ಈ ''ಭೂತ್ ಬಂಗ್ಲಾ''ದಿಂದ ಆಗಿದೆ. ಇದು ಕೇವಲ ಭಾರತದ ಲೆಕ್ಕಾಚಾರ. ಹೊರ ದೇಶದ ಗಳಿಕೆ, ಸ್ಯಾಟ್ ಲೈಟ್ ಹಕ್ಕು, ಆಡಿಯೋ ರೈಟ್ಸ್, ಇವೆಲ್ಲದರಿಂದ ಬಂದ ಹಣವನ್ನು ಇಲ್ಲಿ ಕೂಡಿಸಿದರೆ ನಿರ್ಮಾಪಕರಿಗಾದ ಲಾಭ 100 ಕೋಟಿಗೂ ಅಧಿಕ ಎನ್ನುವುದು ಬಾಲಿವುಡ್‌ ಪಂಡಿತರ ಲೆಕ್ಕಾಚಾರ.

ಒಟ್ನಲ್ಲಿ ಚಿತ್ರವೊಂದು ಚಿತ್ರಮಂದಿರಗಳಲ್ಲಿ ನಾಲ್ಕು ವಾರ ಪ್ರದರ್ಶನ ಕಾಣುವುದೇ ಕಷ್ಟ ಎನ್ನುವ ಸಮಯದಲ್ಲಿ ''ಭೂತ್ ಬಂಗ್ಲಾ'' ಚಿತ್ರ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. 181 ಕೋಟಿಯನ್ನು ಕೇವಲ ಭಾರತದಲ್ಲಿ ಗಳಿಸಿದೆ. ಈ ವಾರ ಬಹುತೇಕ ಕಡೆ ''ಭೂತ್ ಬಂಗ್ಲಾ'' ಚಿತ್ರಮಂದಿರದಿಂದ ಬಹುತೇಕ ಎತ್ತಂಗಡಿಯಾಗಲಿದ್ದು ''ಸೂರ್ಯವಂಶಿ'' ಚಿತ್ರದ ಗಳಿಕೆಯನ್ನು ''ಭೂತ್ ಬಂಗ್ಲಾ'' ಹಿಂದಿಕ್ಕುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Bhooth Bangla completes 50 historic days! Akshay Kumar hits ₹181.47 cr nett in India. Check out the ₹120 cr budget, massive net profits, and final box office verdict.
Read more about: akshay kumar bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X