Bhooth Bangla BoxOffice Day25 ; ಬಾಕ್ಸ್ ಆಫೀಸ್‌ನಲ್ಲಿ 'ಭೂತ್ ಬಂಗ್ಲಾ'ಅಬ್ಬರ, 25 ದಿನವಾದರೂ ತಗ್ಗದ ಅಕ್ಷಯ್ ಕುಮಾರ್ ಕ್ರೇಜ್‌

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವೊಂದು ಐವತ್ತು.. ನೂರು ದಿನ ಅಲ್ಲ ಬದಲಿಗೆ 25 ವಾರ 50 ವಾರದ ಪ್ರದರ್ಶನವನ್ನ ಕಾಣುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಅಂಗೈಯಲ್ಲಿಯೇ ಇವತ್ತು ಮನರಂಜನೆ ಇದೆ. ಸಾಲದಕ್ಕೆ ಪೈರಸಿ ಬೇರೆ. ಇಂತಹ ಕಾಲದಲ್ಲಿ.. ಚಿತ್ರವೊಂದು ಎರಡು ವಾರ ಚಿತ್ರಮಂದಿರದಲ್ಲಿ ಉಳಿಯುವುದು ಕಷ್ಟ ಎಂಬ ವಾತಾವರಣ ಇದೆ.

ಇನ್ನೂ ಹೊಸಬರ ಕಥೆ ಕೇಳುವುದಕ್ಕೂ .. ಹೇಳುವುದಕ್ಕೂ ಇದು ಸಮಯ ಅಲ್ಲ. ಆ ಭಾಷೆ ಈ ಭಾಷೆ ಅಂತಲ್ಲ. ಬಹುತೇಕ ಎಲ್ಲ ಭಾಷೆಯಲ್ಲಿ ಈ ಕಥೆ ಮತ್ತು ವ್ಯಥೆ ಒಂದೇ ರೀತಿ ಇದೆ. ಸಂದರ್ಭ.. ಸನ್ನಿವೇಶ ಹೀಗಿರುವಾಗ ಅಕ್ಷಯ್ ಕುಮಾರ್ ಅಭಿನಯದ ''ಭೂತ್ ಬಂಗ್ಲಾ'' ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.

Bhooth Bangla Box Office Akshay Kumar s Horror-Comedy Hits 160 Cr Milestone in 25 Days

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ಪ್ರಕಾರ ''ಭೂತ್ ಬಂಗ್ಲಾ'' ನಿನ್ನೆ(ಮೇ11) ಅಂದರೆ 25ನೇ ದಿನ ಭಾರತದ ಬಾಕ್ಸಾಫೀಸ್‌ನಲ್ಲಿ ₹1.35 ಕೋಟಿಯನ್ನು ಗಳಿಸಿದೆ. ಈ ಮೂಲಕ 25 ದಿನದಲ್ಲಿ ಕೇವಲ ಭಾರತದಲ್ಲಿ ಈ ಚಿತ್ರ ₹160.10 ಕೋಟಿಯನ್ನು ಕೊಳ್ಳೆ ಹೊಡೆದಿದೆ.

ಸ್ಯಾಕ್ನಿಲ್ ಪ್ರಕಾರ ''ಭೂತ್ ಬಂಗ್ಲಾ'' ಚಿತ್ರದ 25 ದಿನದ ಗಳಿಕೆ ಈ ಕೆಳಗಿನಂತೆ ಇದೆ

ದಿನ ಭಾರತದ ಒಟ್ಟು ಗಳಿಕೆ (Net)
ಪ್ರಿವ್ಯೂ ಪ್ರದರ್ಶನ (Day 0) ₹3.75 ಕೋಟಿ
ಮೊದಲನೇ ದಿನ (1ನೇ ಶುಕ್ರವಾರ) ₹12.25 ಕೋಟಿ
ಎರಡನೇ ದಿನ (1ನೇ ಶನಿವಾರ) ₹19.00 ಕೋಟಿ
ಮೂರನೇ ದಿನ (1ನೇ ಭಾನುವಾರ) ₹23.00 ಕೋಟಿ
ನಾಲ್ಕನೇ ದಿನ (1ನೇ ಸೋಮವಾರ) ₹6.75 ಕೋಟಿ
ಐದನೇ ದಿನ (1ನೇ ಮಂಗಳವಾರ) ₹8.00 ಕೋಟಿ
ಆರನೇ ದಿನ (1ನೇ ಬುಧವಾರ) ₹6.15 ಕೋಟಿ
ಏಳನೇ ದಿನ (1ನೇ ಗುರುವಾರ) ₹5.50 ಕೋಟಿ
ಮೊದಲ ವಾರದ ಒಟ್ಟು ಗಳಿಕೆ ₹84.40 ಕೋಟಿ
ಎಂಟನೇ ದಿನ (2ನೇ ಶುಕ್ರವಾರ) ₹5.75 ಕೋಟಿ
ಒಂಬತ್ತನೇ ದಿನ (2ನೇ ಶನಿವಾರ) ₹10.75 ಕೋಟಿ
ಹತ್ತನೇ ದಿನ (2ನೇ ಭಾನುವಾರ) ₹12.50 ಕೋಟಿ
ಹನ್ನೊಂದನೇ ದಿನ (2ನೇ ಸೋಮವಾರ) ₹3.50 ಕೋಟಿ
ಹನ್ನೆರಡನೇ ದಿನ (2ನೇ ಮಂಗಳವಾರ) ₹4.35 ಕೋಟಿ
ಹದಿಮೂರನೇ ದಿನ (2ನೇ ಬುಧವಾರ) ₹3.40 ಕೋಟಿ
ಹದಿನಾಲ್ಕನೇ ದಿನ (2ನೇ ಗುರುವಾರ) ₹3.50 ಕೋಟಿ
ಎರಡನೇ ವಾರದ ಒಟ್ಟು ಗಳಿಕೆ ₹43.75 ಕೋಟಿ
ಹದಿನೈದನೇ ದಿನ (3ನೇ ಶುಕ್ರವಾರ) ₹4.50 ಕೋಟಿ
ಹದಿನಾರನೇ ದಿನ (3ನೇ ಶನಿವಾರ) ₹4.35 ಕೋಟಿ
ಹದಿನೇಳನೇ ದಿನ (3ನೇ ಭಾನುವಾರ) ₹5.50 ಕೋಟಿ
ಹದಿನೆಂಟನೇ ದಿನ (3ನೇ ಸೋಮವಾರ) ₹1.75 ಕೋಟಿ
ಹತ್ತೊಂಬತ್ತನೇ ದಿನ (3ನೇ ಮಂಗಳವಾರ) ₹2.25 ಕೋಟಿ
ಇಪ್ಪತ್ತನೇ ದಿನ (3ನೇ ಬುಧವಾರ) ₹1.75 ಕೋಟಿ
ಇಪ್ಪತ್ತೊಂದನೇ ದಿನ (3ನೇ ಗುರುವಾರ) ₹1.75 ಕೋಟಿ
ಮೂರನೇ ವಾರದ ಒಟ್ಟು ಗಳಿಕೆ ₹21.85 ಕೋಟಿ
ಇಪ್ಪತ್ತೆರಡನೇ ದಿನ (4ನೇ ಶುಕ್ರವಾರ) ₹1.75 ಕೋಟಿ
ಇಪ್ಪತ್ತಮೂರನೇ ದಿನ (4ನೇ ಶನಿವಾರ) ₹3.00 ಕೋಟಿ
ಇಪ್ಪತ್ತನಾಲ್ಕನೇ ದಿನ (4ನೇ ಭಾನುವಾರ) ₹4.00 ಕೋಟಿ
ಇಪ್ಪತ್ತೈದನೇ ದಿನ (4ನೇ ಸೋಮವಾರ) ₹1.35 ಕೋಟಿ
ಒಟ್ಟು ಭಾರತದ ನೆಟ್ ಕಲೆಕ್ಷನ್ ₹160.10 ಕೋಟಿ

ಹಲವು ವರ್ಷಗಳ ನಂತರ ಗೆದ್ದ ಅಕ್ಷಯ್ ಕುಮಾರ್

ಅಂದ್ಹಾಗೇ ಅಕ್ಷಯ್ ಕುಮಾರ್ ಪಾಲಿಗೆ ಈ ಗಳಿಕೆ ಮತ್ತು ಈ ಗೆಲುವು ತುಂಬಾನೇ ಮಹತ್ವದ್ದು. ಯಾಕೆಂದರೆ.. ಕೊರೊನಾ ನಂತರ ಅಕ್ಷಯ್ ಕುಮಾರ್ ಗೆದ್ದಿದ್ದು ಕಡಿಮೆ ಸೋತಿದ್ದೇ ಹೆಚ್ಚು. ಕೊರೊನಾ ನಂತರ ಅಂದರೆ 2020ರ ಆಚೆ ಅಕ್ಷಯ್ ಕುಮಾರ್ ಇಲ್ಲಿಯವರೆಗೆ 18 ಚಿತ್ರಗಳನ್ನು ಮಾಡಿದ್ದಾರೆ. ಆ ಪೈಕಿ ಗೆದ್ದಿದ್ದು ''ಹೌಸ್‌ಫುಲ್ 5''.. ''ಸೂರ್ಯವಂಶಿ'' ಮತ್ತು ''ಓ ಮೈ ಗಾಡ್ 2'' ಚಿತ್ರಗಳು ಮಾತ್ರ.

ಮಿಕ್ಕಂತೆ ಎಲ್ಲಾ ಚಿತ್ರಗಳು ಮಕಾಡೆ ಮಲಗಿವೆ. ಈ ಹಿನ್ನೆಲೆ ''ಭೂತ್ ಬಂಗ್ಲಾ''ದ ಈ 160 ಕೋಟಿಯ ಗಳಿಕೆ ಅಕ್ಷಯ್ ಕುಮಾರ್ ಪಾಲಿಗೆ ತುಂಬಾನೇ ವಿಶೇಷವಾದದ್ದು. ಈ ಚಿತ್ರದ ಮೂಲಕ ಹಲವು ವರ್ಷಗಳ ನಂತರ ಅಕ್ಷಯ್ ಕುಮಾರ್ ಗೆಲುವಿನ ನಗೆ ಬೀರಿದಂತೆ ಆಗಿದೆ.

ವರ್ಲ್ಡ್ ವೈಡ್ ಗಳಿಕೆ ಎಷ್ಟು ?

ಇನ್ನೂ ವರ್ಲ್ಡ್‌ವೈಡ್ ಗಳಿಕೆಯ ಲೆಕ್ಕ ಹಾಕಿದರೆ ''ಸ್ಯಾಕ್ನಿಲ್'' ಪ್ರಕಾರ ₹243.12 ಕೋಟಿಯನ್ನು ''ಭೂತ್ ಬಂಗ್ಲಾ'' ಗಳಿಸಿದೆ. ಇನ್ನು ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್ ಲೆಕ್ಕಾಚಾರದ ಪ್ರಕಾರ ವರ್ಲ್ಡ್ ವೈಡ್ ಈ ಚಿತ್ರ ಈ 25 ದಿನದಲ್ಲಿ ₹253.4 ಕೋಟಿ ಗಳಿಸಿದೆ. ಸದ್ಯ 25 ದಿನಗಳನ್ನು ಪೂರೈಸಿರುವ ಈ ವಾರಾಂತ್ಯದ ನಂತರ ಎತ್ತಂಗಡಿಯಾಗುವ ಸಾಧ್ಯತೆ ಇದೆ. ಅಷ್ಟರಲ್ಲಿ ಇನ್ನೆಷ್ಟು ಕೋಟಿಯನ್ನು ಚಿತ್ರ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Bhooth Bangla Box Office Collection: Akshay Kumar and Priyadarshan’s horror-comedy reunion is a certified blockbuster! Discover how the film netted a massive ₹160.10 Cr in 25 days and why it continues to dominate the Indian box office. Is it heading for the ₹200 Cr club?
Read more about: akshay kumar bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X