6 ವರ್ಷ 15 ಫ್ಲಾಪ್ ; ಕೊನೆಗೂ ಗೆದ್ದ ಅಕ್ಷಯ್ ಕುಮಾರ್ - ಪ್ರಭಾಸ್ 'ರಾಜಾ ಸಾಬ್‌'ಗೆ ಸೆಡ್ಡು ಹೊಡೆದ 'ಭೂತ್ ಬಂಗ್ಲಾ'

ಚಿತ್ರರಂಗ ಮಾತ್ರ ಅಲ್ಲ ಯಾವುದೇ ಕ್ಷೇತ್ರವಾದರು ಕೂಡ ಅಲ್ಲಿ ಗೆಲುವು ಮತ್ತು ಸೋಲು ಮಾಮೂಲು. ಆದರೆ .. ಗೆದ್ದಾಗ ಹಿರಿಹಿರಿ ಹಿಗ್ಗುವ ಅನೇಕರು ಸೋತಾಗ ಕುಗ್ಗಿ ಹೋಗುತ್ತಾರೆ. ತಮ್ಮ ಮೇಲೆ ತಾವೇ ನಂಬಿಕೆ ಕಳೆದುಕೊಳ್ಳುತ್ತಾರೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಸೋಲೇ ಗೆಲುವಿನ ಸೋಪಾನ ಎಂದು ನಿರಂತರ ಪ್ರಯತ್ನ ಮಾಡುತ್ತಾರೆ.

ಆದರೂ ಕೂಡ ಒಮ್ಮೊಮ್ಮೆ ಅದೆಷ್ಟೇ ಪ್ರಯತ್ನವನ್ನು ಮಾಡಿದರೂ ಕೂಡ ಗೆಲುವು ಎನ್ನುವುದು ಸಿಗದೇ ಮತ್ತೆ ಸತಾಯಿಸುತ್ತೆ. ಇಂಥಹದ್ದೊಂದು ಸೋಲಿನ ಕಮರಿಗೆ ಬಿದ್ದು ಒದ್ದಾಡುತ್ತಿದ್ದರು ಅಕ್ಷಯ್ ಕುಮಾರ್.

Bhooth Bangla Day 19 Akshay Kumar Dethrones Prabhas The Raja Saab As 6th Biggest Horror-Comedy

ಹೌದು. ನಿಮಗೆ ಗೊತ್ತಿರಲಿ, ಕೊರೊನಾ ಎಂಬ ಪೀಡೆ ವಕ್ಕರಿಸಿಕೊಳ್ಳುವ ಮುನ್ನ ಒಂದಾದ ಮೇಲೊಂದು ಗೆಲುವನ್ನೂ ಕಂಡವರು ಅಕ್ಷಯ್ ಕುಮಾರ್. ಆದರೆ.. ಕೊರೊನಾ ಕರಿನೆರಳು ಸರಿದ ಬಳಿಕ, ಅಕ್ಷಯ್ ಕುಮಾರ್ ಮಾಡಿದ್ದೆಲ್ಲವೂ ಪರಮ ತೋಪು ಸಿನಿಮಾಗಳೇ.

ಉದಾಹರಣೆಗೆ ''ಕೇಸರಿ 2''.. ''ಖೇಲ್ ಖೇಲ್‌ ಮೇ''.. ''ರಕ್ಷಾ ಬಂಧನ್''.. ''ಸಾಮ್ರಾಟ್ ಪೃಥ್ವಿರಾಜ್''.. ''ಸ್ಕೈಪೋರ್ಸ್‌''.. ''ಮಿಷನ್ ರಾಣಿಗಂಜ್''.. ''ಜಾಲಿ ಎಲ್‌ ಎಲ್‌ಬಿ 3''.

ಹೀಗೆ ಕೊರೊನಾ ನಂತರ ಅಂದರೆ 2020ರ ಆಚೆ ಅಕ್ಷಯ್ ಕುಮಾರ್ ಇಲ್ಲಿಯವರೆಗೆ 18 ಚಿತ್ರಗಳನ್ನು ಮಾಡಿದ್ದಾರೆ. ಆದರೆ ಆ ಪೈಕಿ ಗೆದ್ದಿದ್ದು ''ಹೌಸ್‌ಫುಲ್ 5''.. ''ಸೂರ್ಯವಂಶಿ'' ಮತ್ತು ''ಓ ಮೈ ಗಾಡ್ 2'' ಚಿತ್ರಗಳು ಮಾತ್ರ. ಮಿಕ್ಕಂತೆ ಎಲ್ಲಾ ಚಿತ್ರಗಳು ಮಕಾಡೆ ಮಲಗಿವೆ.

ಈ ಹಿನ್ನೆಲೆ ಕಳೆದ ಎರಡು ಮೂರು ವರ್ಷಗಳಿಂದ ಅಕ್ಷಯ್ ಕುಮಾರ್ ಕುರಿತು ಹಲವರು ನಾನಾ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಫ್ಲಾಪ್ ಕುಮಾರ್ ಎಂದು ಕರೆಯಲು ಶುರು ಮಾಡಿದ್ದಾರೆ. ಅಕ್ಷಯ್ ಕುಮಾರ್‌ ಜೊತೆ ಚಿತ್ರ ಮಾಡಿದರೆ ನಷ್ಟ ಆಗುವುದು ಪಕ್ಕಾ ಎಂದು ನಿರ್ಮಾಪಕರನ್ನು ಹೆದರಿಸುತ್ತಿದ್ದಾರೆ.

Bhooth Bangla Day 19 Akshay Kumar Dethrones Prabhas The Raja Saab As 6th Biggest Horror-Comedy

ಸಹಜವಾಗಿ ಈ ಎಲ್ಲಾ ಮಾತುಗಳಿಂದ ಮತ್ತು ಎದುರಾದ ನಿರಂತರ ಸೋಲುಗಳಿಂದ ಅಕ್ಷಯ್ ಕುಮಾರ್ ಕೂಡ ನೊಂದುಕೊಂಡಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ತಮ್ಮ ಬಗ್ಗೆ ಕೇಳಿ ಬಂದ ಮಾತುಗಳಿಂದ ಬೇಸತ್ತು ನಾನೆಲ್ಲಿಯೂ ಓಡಿ ಹೋಗಲ್ಲ. ನಾನು ಇನ್ನೂ ಸತ್ತಿಲ್ಲ ಎಂದು ಖುದ್ದು ಅಕ್ಷಯ್ ಕುಮಾರ್ ಈ ಹಿಂದೆ ಹೇಳಿದ್ದರು. ಇಂದಲ್ಲ ನಾಳೆ ಮತ್ತೆ ಗೆಲ್ಲುತ್ತೇನೆ ಎಂದು ಭರವಸೆಯನ್ನು ಕೂಡ ವ್ಯಕ್ತಪಡಿಸಿದ್ದರು.

ಸದ್ಯ ಇವರ ಈ ನಂಬಿಕೆ ಹುಸಿಯಾಗಿಲ್ಲ. "ಭೂತ್ ಬಂಗ್ಲಾ" ಸೋಲುಗಳಿಂದ ಬಸವಳಿದಿದ್ದ ಅಕ್ಷಯ್ ಕುಮಾರ್ ಕೈ ಹಿಡಿದಿದೆ. ಕೊರೊನಾ ನಂತರ ಅಕ್ಷಯ್ ಕುಮಾರ್ ಖಾತೆಯಲ್ಲಿ ನಾಲ್ಕನೇ ಗೆಲುವು ಜಮೆಯಾಗಿದೆ. ಇಷ್ಟೇ ಅಲ್ಲ ಬಾಕ್ಸಾಫೀಸ್ ನ ಸಮರದಲ್ಲಿ ಪ್ರಭಾಸ್ ಅಭಿನಯದ "ದಿ ರಾಜಾ ಸಾಬ್ " ಚಿತ್ರವನ್ನು ಕೂಡ "ಭೂತ್ ಬಂಗ್ಲಾ" ಹಿಂದಿಕ್ಕಿದೆ.

ಹೌದು, ಬಾಕ್ಸಾಫೀಸ್ ಲೆಕ್ಕಾಚಾರ ಹಂಚಿಕೊಳ್ಳುವ ಸ್ಯಾಕ್ನಿಲ್ ಪ್ರಕಾರ ಪ್ರಭಾಸ್ ಅಭಿನಯದ "ದಿ ರಾಜಾ ಸಾಬ್" ಚಿತ್ರಮಂದಿರಗಳಲ್ಲಿ ದೇಶದೆಲ್ಲೆಡೆ 108,848 ಪ್ರದರ್ಶನ ಕಂಡಿತ್ತು.146.04 ಕೋಟಿಯನ್ನು ಮಾತ್ರ ಗಳಿಸಿತ್ತು.ಈ ಮೂಲಕ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾದ ಈ ಚಿತ್ರ ನಿರಾಸೆ ಮೂಡಿಸಿತ್ತು‌. ಪ್ರಭಾಸ್ ವೃತ್ತಿ ಬದುಕಿನ ಕಪ್ಪು ಚುಕ್ಕೆಗಳಲ್ಲೊಂದು ಎಂಬ ಕುಖ್ಯಾತಿಗೆ ಕೂಡ ಈ ಚಿತ್ರ ಪಾತ್ರವಾಗಿತ್ತು.

ಬಾಕ್ಸಾಫೀಸ್‌ನ ಸಮರದಲ್ಲಿ ಈಗ ''ದಿ ರಾಜಾ ಸಾಬ್'' ಚಿತ್ರದ ಈ ಗಳಿಕೆಯನ್ನು ''ಭೂತ್ ಬಂಗ್ಲಾ'' ಹಿಂದಿಕ್ಕಿದೆ. koimoi ವರದಿಯ ಪ್ರಕಾರ ''ಭೂತ್ ಬಂಗ್ಲಾ'' ₹148.66 ಕೋಟಿಯನ್ನು ದೋಚಿದೆ. ಈ ಮೂಲಕ ಹಾರರ್-ಕಾಮಿಡಿ ಜಾನರ್ ನಲ್ಲಿ ಅತೀ ಹೆಚ್ಚು ಹಣ ಗಳಿಸಿದ 6ನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

koimoi ಪ್ರಕಾರ ಹಾರರ್ ಕಾಮಿಡಿ ಜಾನರ್ ನಲ್ಲಿ ಅತೀ ಹೆಚ್ಚು ಹಣ ಗಳಿಸಿದ 10 ಚಿತ್ರಗಳ ಪಟ್ಟಿ ಈ ಕೆಳಗಿನಂತೆ ಇದೆ.

ಸಿನಿಮಾ ಹೆಸರು ಒಟ್ಟು ಗಳಿಕೆ (ಕೋಟಿಗಳಲ್ಲಿ)
ಸ್ತ್ರೀ 2 627.5
ಭೂಲ್ ಭುಲೈಯಾ 3 281.56
ಗೋಲ್‌ಮಾಲ್ ಅಗೇನ್ 205.72
ಭೂಲ್ ಭುಲೈಯಾ 2 185.57
ಥಮ್ಮ 157.05
ಭೂತ್ ಬಾಂಗ್ಲಾ 148.66 (19 ದಿನಗಳು)
ದಿ ರಾಜಾ ಸಾಬ್ 146.04
ಸ್ತ್ರೀ 129.67
ಮುಂಜ್ಯಾ 108
ಸರ್ವಂ ಮಾಯಾ 76.84

ಸದ್ಯ ''ಭೂತ್ ಬಂಗ್ಲಾ'' ಮುಂದೆ ಆಯುಷ್ಮಾನ್ ಖುರಾನ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ''ಥಮ್ಮ'' ಚಿತ್ರ ಇದೆ. ಟ್ರೇಡ್ ವಿಶ್ಲೇಷಕರ ಪ್ರಕಾರ ''ಭೂತ್ ಬಂಗ್ಲಾ'' ಈ ರೇಸ್‌ನಲ್ಲಿ ''ಥಮ್ಮ'' ಹಿಂದಿಕ್ಕಲಿದ್ದು 5ನೇ ಸ್ಥಾನಕ್ಕೆ ತೃಪ್ತಿ ಪಡಲಿದೆ. ''ಭೂಲ್ ಭುಲಯ್ಯಾ'' ಚಿತ್ರಕ್ಕಿಂತ ಕಡಿಮೆ ಹಣ ಗಳಿಸಲಿದೆ. ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮುನ್ನ ''ಭೂತ್ ಬಂಗ್ಲಾ'' ಎಷ್ಟು ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

English summary
Bhooth Bangla makes history! On Day 19, Akshay Kumar overtakes Prabhas’ The Raja Saab as the 6th highest-grossing Indian horror-comedy of all time.
Read more about: akshay kumar prabhas bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X