ನಾಲ್ಕು ವಾರ.. ನಾಲ್ಕು ಬಿಗ್ ಬಜೆಟ್ ಚಿತ್ರಗಳು.. ಬಾಕ್ಸಾಫೀಸ್ ಬ್ಲಾಸ್ಟ್!

ಒಮ್ಮೊಮ್ಮೆ ಒಟ್ಟೊಟ್ಟಿಗೆ ದೊಡ್ಡ ಸಿನಿಮಾಗಳು ಚಿತ್ರಮಂದಿರಕ್ಕೆ ಬಂದು ಬಿಡುತ್ತವೆ. ಕೆಲವೊಮ್ಮೆ ಸ್ಟಾರ್ ನಟರ ಸಿನಿಮಾಗಳಿಲ್ಲದೇ ಥಿಯೇಟರ್ ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ವರ್ಷ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುವ ನಿರೀಕ್ಷೆ ಇತ್ತು. ಆದರೆ ಲೆಕ್ಕ ಬದಲಾಗಿದೆ.

ಈ ವರ್ಷ ಬರಬೇಕಿದ್ದ ಚಿತ್ರಗಳು ಮುಂದಿನ ವರ್ಷಕ್ಕೆ ಪೋಸ್ಟ್‌ಪೋನ್ ಆಗಿವೆ. ಹಾಗಾಗಿ ಮುಂದಿನ ವರ್ಷ ಸಾಲು ಸಾಲಾಗಿ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿವೆ. ಅದರಲ್ಲೂ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳು ಒಂದೊಂದು ವಾರದ ಅಂತರದಲ್ಲಿ ತೆರೆಗಪ್ಪಳಿಸುವ ಸುಳಿವು ಸಿಕ್ತಿದೆ. ಈಗಾಗಲೇ ಎರಡು ಸಿನಿಮಾಗಳ ರಿಲೀಸ್ ಡೇಟ್ ಕೂಡ ಘೋಷಣೆ ಆಗಿದೆ.

Big-Budget Pan-India Films Set for Massive Box Office Clash in 2026

ದೊಡ್ಡ ಸಿನಿಮಾಗಳು ಒಂದೇ ದಿನ ತೆರೆಗೆ ಬಂದರೂ ಒಂದು ವಾರ ಹಿಂದೆ ಮುಂದೆ ಬಂದರೂ ಬಾಕ್ಸಾಫೀಸ್ ಕಲೆಕ್ಷನ್ ಮೇಲೆ ಪರಿಣಾಮ ಬೀರುತ್ತದೆ. ಕಳೆದ ವರ್ಷದ ಕೊನೆಗೆ ಕನ್ನಡದ 'ಮ್ಯಾಕ್ಸ್' ಹಾಗೂ 'ಯುಐ' ಚಿತ್ರಗಳು 5 ದಿನದ ಅಂತರದಲ್ಲಿ ಬಿಡುಗಡೆ ಆಗಿತ್ತು. 'ಮ್ಯಾಕ್ಸ್' ಬರುತ್ತಿದ್ದಂತೆ 'ಯುಐ' ಹವಾ ಕಮ್ಮಿ ಆಗಿತ್ತು. ವರ್ಷದ ಹಿಂದೆ 'ಸಲಾರ್' ಹಾಗೂ 'ಡಂಕಿ' ಚಿತ್ರಗಳು ಒಂದು ದಿನದ ಅಂತರದಲ್ಲಿ ಬಿಡುಗಡೆ ಆಗಿ ಬಾಕ್ಸಾಫೀಸ್‌ನಲ್ಲಿ ಕ್ಲ್ಯಾಶ್ ಏರ್ಪಟ್ಟಿತ್ತು.

ಎಲ್ಲಾ ಅಂದುಕೊಂಡಂತೆ ಆಗಿದ್ದೆ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಇವತ್ತು(ಏಪ್ರಿಲ್ 10) ಬಿಡುಗಡೆ ಆಗಬೇಕಿತ್ತು. ಅಭಿಮಾನಿಗಳು ಈ ವಿಚಾರದಲ್ಲಿ ಬೇಸರಗೊಂಡಿದ್ದಾರೆ. ಸಿನಿಮಾ ತಡವಾಗಿ ಸೆಟ್ಟೇರಿತ್ತು. ಹಾಗಾಗಿ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗುವ ಸುಳಿವು ಸಿಕ್ಕಿತ್ತು. ಕೊನೆಗೆ ಅದು ನಿಜವಾಗಿತ್ತು. ಬರೋಬ್ಬರಿ ಒಂದು ವರ್ಷ ತಡವಾಗಿ ಸಿನಿಮಾ ತೆರೆಗೆ ಬರಲಿದೆ. ಮುಂದಿನ ವರ್ಷ ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

'ಟಾಕ್ಸಿಕ್' ತೆರೆಕಂಡು 8 ದಿನಕ್ಕೆ ಅಂದರೆ ಮಾರ್ಚ್ 27ಕ್ಕೆ 'ಪೆದ್ದಿ' ಸಿನಿಮಾ ತೆರೆಗಪ್ಪಳಿಸಲಿದೆ. ಇತ್ತೀಚೆಗೆ ಟೀಸರ್ ಸಮೇತ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಬುಚ್ಚಿಬಾಬು ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಪೆದ್ದಿ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಲಿದೆ. ರಾಮನವಮಿ ಸಂಭ್ರಮದಲ್ಲಿ ರಿಲೀಸ್ ಆಗಿದ್ದ ಟೀಸರ್ 24 ಗಂಟೆಗಳಲ್ಲಿ 36 ಮಿಲಿಯನ್ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ.

Big-Budget Pan-India Films Set for Massive Box Office Clash in 2026

'ಟಾಕ್ಸಿಕ್' ಹಾಗೂ 'ಪೆದ್ದಿ' ಬೆನ್ನಲ್ಲೇ ಜ್ಯೂ. ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಜೋಡಿಯ ಸಿನಿಮಾ ತೆರೆಗೆ ಬರುತ್ತಿದೆ ಎನ್ನುವ ಗುಸುಗುಸು ಶುರುವಾಗಿದೆ. ಏಪ್ರಿಲ್ 9ಕ್ಕೆ ಸಿನಿಮಾ ತೆರೆಗೆ ಬರಬಹುದು ಎನ್ನುವ ಲೆಕ್ಕಾಚಾರ ಕೆಲವರದ್ದು. ಅದೇ ದಿನ ರಜನಿಕಾಂತ್ ನಟನೆಯ 'ಜೈಲರ್'-2 ಬಂದರೂ ಅಚ್ಚರಿ ಪಡಬೇಕಿಲ್ಲ ಎನ್ನುವ ಊಹಾಪೋಹ ಶುರುವಾಗಿದೆ.

ಏಪ್ರಿಲ್ 9 ಅಲ್ಲದೇ ಇದ್ದರೂ ಏಪ್ರಿಲ್ 14ಕ್ಕೆ 'ಜೈಲರ್'-2 ಬಿಡುಗಡೆ ಆಗುತ್ತದೆ ಎನ್ನುವ ವದಂತಿ ಶುರುವಾಗಿದೆ. ಈಗಾಗಲೇ 'ಜೈಲರ್' ಸೀಕ್ವೆಲ್ ಘೋಷಣೆ ಆಗಿದೆ. ನೆಲ್ಸನ್ ನಿರ್ದೇಶನದಲ್ಲಿ ಸನ್ ಪಿಕ್ಚರ್ಸ್ ಸಂಸ್ಥೆ ಚಿತ್ರ ನಿರ್ಮಾಣ ಮಾಡಲಿದೆ. ಅನಿರುದ್ದ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದು ಶಿವಣ್ಣ, ಮೋಹನ್ ಲಾಲ್ ಮತ್ತೆ ಅತಿಥಿ ಪಾತ್ರಗಳಲ್ಲಿ ಅಬ್ಬರಿಸಲಿದ್ದಾರೆ. ಮುಂದಿನ ವರ್ಷಕ್ಕಿಂತ ಮುನ್ನ ಈ ವರ್ಷವೇ ರಜನಿಕಾಂತ್ ಹಾಗೂ ತಾರಕ್ ಸಿನಿಮಾಗಳ ನಡುವೆ ಕ್ಲ್ಯಾಶ್‌ ಏರ್ಪಡುವ ಸಾಧ್ಯತೆಯಿದೆ.

ದೊಡ್ಡ ಚಿತ್ರಗಳ ಬಿಡುಗಡೆಗೆ ರಿಲೀಸ್ ಡೇಟ್ ಫಿಕ್ಸ್ ಮಾಡುವುದು ಸವಾಲಿನ ಕೆಲಸ. ಒಮ್ಮೆ ಫಿಕ್ಸ್ ಮಾಡಿದ ಮೇಲೆ ಬದಲಾಯಿಸಿದರೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಈ ವರ್ಷ ಆಗಸ್ಟ್ 15ಕ್ಕೆ 'ವಾರ್‌- 2' ಹಾಗೂ 'ಕೂಲಿ' ಚಿತ್ರಗಳು ಎದುರುಬದಿರಾಗುವ ಸಾಧ್ಯತೆಯಿದೆ. ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ಒಟ್ಟಿಗೆ ನಟಿಸುತ್ತಿರುವ 'ವಾರ್‌- 2' ಸೌತ್ ಸಿನಿದುನಿಯಾದಲ್ಲೂ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಆದರೆ ಆಗಸ್ಟ್ 15ಕ್ಕೆ 'ಕೂಲಿ' ಸಿನಿಮಾ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಣೆಯಾಗಿದೆ.

Big-Budget Pan-India Films Set for Massive Box Office Clash in 2026

ಅಯಾನ್ ಮುಖರ್ಜಿ ನಿರ್ದೇಶನದ 'ವಾರ್‌- 2' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಇನ್ನು 'ಕೂಲಿ' ಚಿತ್ರದಲ್ಲಿ ಉಪೇಂದ್ರ, ಆಮೀರ್ ಖಾನ್ ಸಹ ನಟಿಸಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಸಿನಿಮಾ ಆಗಿರುವುದರಿಂದ ನಿರೀಕ್ಷೆ ದುಪ್ಪಟ್ಟಾಗಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ಸ್ ವರ್ಕ್ ಆರಂಭಿಸಲಾಗಿದೆ. 'ವಾರ್‌- 2' ಒಂದು ವಾರ ಮುಂದೆ ಅಥವಾ ಹಿಂದೆ ತೆರೆಗೆ ಬಂದರೂ ಅಚ್ಚರಿ ಪಡಬೇಕಿಲ್ಲ.

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ. ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಂದಿದ್ದ ಟೀಸರ್ ಸೂಪರ್ ಹಿಟ್ ಆಗಿದೆ. 'KGF'- 2 ಬಳಿಕ ಯಶ್ ನಟನೆಯ ಸಿನಿಮಾ ಆಗಿವುದರಿಂದ ಅಕ್ಕಪಕ್ಕದ ಇಂಡಸ್ಟ್ರಿಯಲ್ಲೂ ಹವಾ ಎಬ್ಬಿಸಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಸ್ವತಃ ಯಶ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ಬಾರಿ ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಯಶ್ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ಏಕಕಾಲಕ್ಕೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಭಾರತದ ಭಾಷೆಗಳ ಜೊತೆಗೆ ಯೂರೋಪಿನ ಭಾಷೆಗಳಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆ. ಕಿಯಾರಾ ಅದ್ವಾನಿ, ನಯನತಾರ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

'ಟಾಕ್ಸಿಕ್' ಬಳಿಕ ಒಂದು ವಾರದ ಅಂತರದಲ್ಲಿ 'ಪೆದ್ದಿ' ಸಿನಿಮಾ ಬರೋದು ಖಚಿತವಾಗಿದೆ. ಸುಕುಮಾರ್ ಶಿಷ್ಯ ಬುಚ್ಚಿಬಾಬು ನಿರ್ದೇಶನದ ಸಿನಿಮಾ ಆಗಿರುವುದರಿಂದ ಕುತೂಹಲ ಮೂಡಿದೆ. ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದು ಕನ್ನಡ ನಟ ಶಿವಣ್ಣ ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸ್ಪೋರ್ಟ್ಸ್ ಬ್ಯಾಕ್‌ಡ್ರಾಪ್ ಸಿನಿಮಾವನ್ನು ಮುಂದಿನ ವರ್ಷ ರಾಮ್‌ಚರಣ್ ಹುಟ್ಟುಹಬ್ಬಕ್ಕೆ ತೆರೆಗೆ ತರುವ ಪ್ರಯತ್ನ ನಡೀತಿದೆ.

ತಾರಕ್ ಹಾಗೂ ಪ್ರಶಾಂತ್ ನೀಲ್ ಪ್ರಾಜೆಕ್ಟ್ ಬಹಳ ಹಿಂದೆ ಘೋಷಣೆ ಆಗಿತ್ತು. ಕಾರಣಾಂತರಗಳಿಂದ ಸಿನಿಮಾ ಶುರುವಾಗುವುದು ತಡವಾಯಿತು. ಏಪ್ರಿಲ್ 22ರಿಂದ ಜ್ಯೂ. ಎನ್‌ಟಿಆರ್ ಕೂಡ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಸದ್ಯಕ್ಕೆ 'ಡ್ರ್ಯಾಗನ್' ಎಂದು ಕರೆಯಲಾಗ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಹೇಳಿಕೇಳಿ ತಾರಕ್ ಅವರ ದೊಡ್ಡ ಅಭಿಮಾನಿ ನೀಲ್. ಹಾಗಾಗಿ 'KGF' ಮೀರಿಸುವ ಸಿನಿಮಾ ಬರಬಹುದು ಎಂದು ಕೆಲವರು ನಿರೀಕ್ಷಿಸುತ್ತಿದ್ದಾರೆ.

ನೆಲ್ಸನ್ ನಿರ್ದೇಶನದಲ್ಲಿ ರಜನಿಕಾಂತ್ ನಿರ್ದೇಶನದ 'ಜೈಲರ್' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಅಂದಾಜು 600 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಗಮನ ಸೆಳೆದಿತ್ತು. ಆ ಚಿತ್ರದ ಸೀಕ್ವೆಲ್ ಮಾಡುವಂತೆ ಬಹಳ ಜನ ಕೇಳುತ್ತಿದ್ದರು. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಘೋಷಣೆ ಆಗಿತ್ತು. ಸ್ಪೆಷಲ್ ಪ್ರೋಮೊ ಶೂಟ್ ಮಾಡಿ ಸಿನಿಮಾ ಬಗ್ಗೆ ಚಿತ್ರತಂಡ ಮಾಹಿತಿ ನೀಡಿತ್ತು.

ನೆಲ್ಸನ್ ಬಹಳ ಬೇಗ ಸಿನಿಮಾ ಮಾಡಿ ಮುಗಿಸುತ್ತಾರೆ. ಈಗಾಗಲೇ 'ಕೂಲಿ' ಸಿನಿಮಾ ಚಿತ್ರೀಕರಣ ಮುಗಿಸಿರುವ ತಲೈವಾ ಶೀಘ್ರದಲ್ಲೇ 'ಜೈಲರ್'-2 ಸೆಟ್‌ಗೆ ಹೋಗಲಿದ್ದಾರೆ. ಏಪ್ರಿಲ್ 14ರಂದು ತಮಿಳರ ಹೊಸ ವರ್ಷ. ತಮಿಳು ಪುತ್ತಾಂಡು ಆಚರಿಸಲಾಗುತ್ತದೆ. ಆ ವೀಕೆಂಡ್ ಪ್ರತಿವರ್ಷ ದೊಡ್ಡ ದೊಡ್ಡ ಸಿನಿಮಾ ರಿಲೀಸ್ ಮಾಡಲಾಗುತ್ತದೆ. ಮುಂದಿನ ವರ್ಷ 'ಜೈಲರ್' ಸೀಕ್ವೆಲ್ ಬರಬಹುದು ಎನ್ನುವ ಲೆಕ್ಕಾಚಾರ ನಡೀತಿದೆ. ಅದೇ ನಿಜವಾದರೆ 4 ವಾರಗಳ ಅಂತರದಲ್ಲಿ 4 ದೊಡ್ಡ ಸಿನಿಮಾಗಳು ಬಾಕ್ಸಾಫೀಸ್‌ ಶೇಕ್ ಮಾಡಲಿವೆ.

More from Filmibeat

English summary
2026 is gearing up for major box office battles as Yash's 'Toxic', Buchi Babu's 'Peddi', NTR-Prashanth Neel’s 'Dragon', and Rajinikanth’s 'Jailer-2' prepare for back-to-back releases;
Read more about: toxic jailer box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X