2026 First Half Box Office ; 6 ತಿಂಗಳು, 64 ಸಿನಿಮಾ, ಬಾಲಿವುಡ್‌ನಲ್ಲಿ ಗೆದ್ದವರು ಯಾರು? ಸೋತು ಕಂಗಾಲಾಗಿದ್ದು ಯಾರು?

ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ ಬಾಲಿವುಡ್‌ನವರು, ಮಾತಿಗೂ ಮುನ್ನ ನಮ್ಮ ಸಿನಿಮಾದ ಗಳಿಕೆ ನೂರು ಕೋಟಿಯ ಗಡಿ ದಾಟಿದೆ ಎಂಬ ಮಾತುಗಳನ್ನಾಡ್ತಿದ್ದರು. ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದರು. ಆದರೆ ಆ ನಂತರ ಲೆಕ್ಕ ತಪ್ಪಿತು. ಸಲೀಸಾಗಿ ನೂರು ಕೋಟಿಯನ್ನ ಗಳಿಸುತ್ತಿದ್ದ ಬಾಲಿವುಡ್‌ನಲ್ಲಿ ಐವತ್ತು ಕೋಟಿಗೂ ಹಾಹಾಕಾರ ಎದ್ದಿತು. ಕಳೆದ ಎರಡು ವರ್ಷ ಹೊರತು ಪಡಿಸಿದರೆ, ಕೊರೊನಾ ನಂತರ ಬಾಲಿವುಡ್ ಅನುಭವಿಸಿದ್ದು ಬಹುತೇಕ ನಷ್ಟನೇ.

ಇಂಥಾ ಬಾಲಿವುಡ್ ಪಾಲಿಗೆ ಈ ವರ್ಷದ ಆರಂಭ ಚೆನ್ನಾಗಿತ್ತು. ಮೊದಲ ಮೂರು ತಿಂಗಳಿನಲ್ಲಿ ಹಣದ ಮಳೆಯೇ ಹರಿಯಿತು. ಆದರೆ.. ಆ ನಂತರದ ಪ್ರದರ್ಶನ ಅಷ್ಟಕಷ್ಟೇ. ಹಾಗಿದ್ದರೆ ಈ ವರ್ಷದ ಮೊದಲ ಆರು ತಿಂಗಳಿನಲ್ಲಿ ಗೆಲುವಿನ ಲಯಕ್ಕೆ ಬಾಲಿವುಡ್ ಮರಳಿತಾ ? ಈ ಆರು ತಿಂಗಳಿನಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಗೆದ್ದ ಚಿತ್ರಗಳು ಯಾವುವು ? ಯಾರು ಗೆದ್ದರು? ಯಾರು ಸೋತರು ? ಎಂದು ತಿಳಿಯಲು ಮುಂದೆ ಓದಿ.

Bollywood Box Office 2026 Dhurandhar Crosses 1 800 Cr Full Hits amp amp Flops Report Inside

ಆರು ತಿಂಗಳಿನಲ್ಲಿ ಬಿಡುಗಡೆಯಾಗಿವೆ 60+ ಸಿನಿಮಾಗಳು

ಜನವರಿ 1ರಿಂದ ಜೂನ್ 19ರವರೆಗೆ ಹೆಚ್ಚು ಕಡಿಮೆ 64 ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ. ಆ ಪೈಕಿ ಈ ವರ್ಷ ಖಾತೆ ತೆರೆಯುವ ಜವಾಬ್ಧಾರಿಯನ್ನು ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಗೆ ಬಾಲಿವುಡ್ ವಹಿಸಿತ್ತು. ವರ್ಷದ ಮೊದಲ ದಿನವೇ ''ಇಕ್ಕೀಸ್'' ಬಿಡುಗಡೆ ಆಗಿತ್ತು. ಬೆಳ್ಳಿತೆರೆಯ ಮೇಲೀದು ಅಗಸ್ತ್ಯ ನಂದಾ ಮೊದಲ ಪ್ರಯತ್ನ. ಈ ಹಿನ್ನೆಲೆ ಚಿತ್ರದ ಮೇಲೆ ನಿರೀಕ್ಷೆ ಇತ್ತು. ಇನ್ನು ಅಗಸ್ತ್ಯಗೆ ಇದು ಮೊದಲ ಚಿತ್ರವಾದರೆ ಬಾಲಿವುಡ್‌ನ ದಂತಕತೆ ಧರ್ಮೇಂದ್ರ ಅವರ ಕೊನೆಯ ಚಿತ್ರ ಇದಾಗಿತ್ತು. ಹೀಗಾಗಿ ಚಿತ್ರ ನೋಡಲು ಭಾವನಾತ್ಮಕವಾದ ಕಾರಣವೂ ಇತ್ತು. ಆದರೆ, ಈ ಬಾರಿ ಶ್ರೀರಾಮ್ ರಾಘವನ್ ಮ್ಯಾಜಿಕ್ ನಡೆಯಲಿಲ್ಲ.

''ಇಕ್ಕೀಸ್'' ನಂತರ ''ರಾಹು-ಕೇತು''.. ''ಹ್ಯಾಪಿ ಪಟೇಲ್''.. ''ಗಂಧಿ ಟಾಕ್ಸ್''.. ''ಮಾಯಾಸಭಾ'' ..ಹೀಗೆ ಒಂದಾದ ಮೇಲೊಂದು ಬಂದ ಹತ್ತು ಸಿನಿಮಾಗಳು ಮಕಾಡೆ ಮಲಗಿದವು. ಆದರೆ, ಇದರ ನಡುವೆ ಬಂದ ''ಬಾರ್ಡರ್ 2'' ಬಾಲಿವುಡ್‌ಗೆ ಬೇಕಿದ್ದ ಬಲ ತುಂಬಿತು. ಬಾಕ್ಸಾಫೀಸ್‌ನಲ್ಲಿ ಅಕ್ಷರಶಃ ಅಬ್ಬರಿಸಿತು.

₹464.50 ಕೋಟಿಯನ್ನು ಬಾಕ್ಸಾಫೀಸ್‌ನಲ್ಲಿ ಕೊಳ್ಳೆ ಹೊಡೆಯಿತು. ''ಬಾರ್ಡರ್ 2'' ಬೆನ್ನಲ್ಲೇ ಬಂದ ರಾಣಿ ಮುಖರ್ಜಿಯ ''ಮರ್ದಾನಿ 3'' ಕೂಡ ಯಶ್ ರಾಜ್ ನಿರ್ಮಾಣ ಸಂಸ್ಥೆಗೆ ಲಾಭದಾಯಕ ವೆಂಚರ್ ಎಂದು ಮತ್ತೊಮ್ಮೆ ಸಾಬೀತು ಆಯ್ತು. ₹78.82 ಕೋಟಿಯನ್ನು ಗಳಿಸುವ ಗೆಲುವಿನ ದಡ ತಲುಪಿತು.

ಧುರಂಧರ್ ಸುನಾಮಿ

ಫೆಬ್ರವರಿಯಲ್ಲಿ ಶಾಹಿದ್ ಕಪೂರ್ ಅಭಿನಯದ, ವಿಶಾಲ್ ಭಾರದ್ವಾಜ್ ನಿರ್ದೇಶನದ "ಓ ರೋಮಿಯೋ'' ಸಮಾಧಾನಕರ ಬಹುಮಾನ ಪಡೆಯಿತು. ಈ ಚಿತ್ರ ಹೊರತು ಪಡಿಸಿದರೆ ಬೇರೆ ಯಾವ ಚಿತ್ರ ಕೂಡ ಪವಾಡ ಮಾಡಲಿಲ್ಲ. ಆದರೆ.. ಮಾರ್ಚ್‌ನಲ್ಲಿ ಬಾಲಿವುಡ್‌ ಹಿಂದೆಂದೂ ಕಂಡು ಕೇಳರಿಯದ ಸುನಾಮಿ ಅಪ್ಪಳಿಸಿತು. ಅದರ ಹೆಸರೇ ''ಧುರಂಧರ್ 2''.

bollywood-box-office-2026-dhurandhar-crosses-1-800-cr-full-hits-flops-report-inside

ಐತಿಹಾಸಿಕ ದಾಖಲೆ ಬರೆದ ''ಧುರಂಧರ್ 2''

ಮಾರ್ಚ್ 19ರಂದು ತೆರೆಗೆ ಬಂದ ''ಧುರಂಧರ್ 2'' ಐತಿಹಾಸಿಕ ದಾಖಲೆ ಬರೆಯಿತು. ವಿಶ್ವದೆಲ್ಲೆಡೆಯ ₹1,852.40 ಕೋಟಿಯನ್ನು ಕೊಳ್ಳೆ ಹೊಡೆಯಿತು. ನಿಜ. ''ದಂಗಲ್'' ದಾಖಲೆ ಮುರಿಯುವಲ್ಲಿ ''ಧುರಂಧರ್-2'' ವಿಫಲವಾಯ್ತು ಆದರೂ ಕೂಡ ಬಾಲಿವುಡ್‌ನ ಇತಿಹಾಸದಲ್ಲಿ ''ಧುರಂಧರ್'' ಹೆಸರು ಅಚ್ಚಳಿಯದೇ ಉಳಿಯಲಿರುವುದು ಮಾತ್ರ ಸತ್ಯ.

ಖುಲಾಯಿಸಿದ ಅಕ್ಷಯ್ ಕುಮಾರ್ ಅದೃಷ್ಟ, ಮರಾಠಿ ಕಿಂಗ್ ಆದ ರಿತೇಶ್

ಸತತ ಸೋಲುಗಳಿಂದ ಕಂಗಾಲಾಗಿದ್ದ ಅಕ್ಷಯ್ ಕುಮಾರ್ ಅದೃಷ್ಟ ಈ ವರ್ಷ ಖುಲಾಯಿಸಿತು. ಏಪ್ರಿಲ್ 17ರಂದು ತೆರೆಗೆ ಬಂದ ''ಭೂತ್ ಬಂಗ್ಲಾ'' ಬಾಕ್ಸಾಫೀಸ್‌ನಲ್ಲಿ ₹247.26 ಕೋಟಿಯನ್ನು ದೋಚಿತು. ಇನ್ನು ರಿತೇಶ್ ದೇಶಮುಖ್ ನಿರ್ದೇಶನದ ''ರಾಜಾ ಶಿವಾಜಿ'' ನೂರು ಕೋಟಿ ಗಡಿ ದಾಟಿದ ಮೊದಲ ಮತ್ತು ಮರಾಠಿ ಚಿತ್ರರಂಗದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯ್ತು.

2026ರಲ್ಲಿ ಗೆದ್ದ ಮತ್ತು ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳ ಪಟ್ಟಿ ಇಲ್ಲಿದೆ.

ಶ್ರೇಣಿ ಚಲನಚಿತ್ರದ ಹೆಸರು ನಿರ್ಮಾಣ ಸಂಸ್ಥೆ ವಿತರಕರು ವಿಶ್ವದಾದ್ಯಂತ ಒಟ್ಟು ಗಳಿಕೆ
1 ಧುರಂಧರ್: ದಿ ರಿವೆಂಜ್ ಜಿಯೋ ಸ್ಟುಡಿಯೋಸ್, ಬಿ62 ಸ್ಟುಡಿಯೋಸ್ ಜಿಯೋ ಸ್ಟುಡಿಯೋಸ್ ₹1,852.40 ಕೋಟಿ
2 ಬಾರ್ಡರ್ 2 ಟಿ-ಸಿರೀಸ್ ಫಿಲ್ಮ್ಸ್, ಜೆ. ಪಿ. ಫಿಲ್ಮ್ಸ್ ಎಎ ಫಿಲ್ಮ್ಸ್ ₹464.50 ಕೋಟಿ
3 ಭೂತ್ ಬಾಂಗ್ಲಾ ಬಾಲಾಜಿ ಮೋಷನ್ ಪಿಕ್ಚರ್ಸ್, ಕೇಪ್ ಆಫ್ ಗುಡ್ ಫಿಲ್ಮ್ಸ್ ಪೆನ್ ಮರುಧರ್ ₹247.26 ಕೋಟಿ
4 ರಾಜಾ ಶಿವಾಜಿ ಮುಂಬೈ ಫಿಲ್ಮ್ ಕಂಪನಿ, ಜಿಯೋ ಸ್ಟುಡಿಯೋಸ್ ಜಿಯೋ ಸ್ಟುಡಿಯೋಸ್ ₹130 ಕೋಟಿ #
5 ಓ ರೋಮಿಯೋ ನಾಡಿಯಾಡ್ವಾಲಾ ಗ್ರಾಂಡ್‌ಸನ್ ಎಂಟರ್‌ಟೈನ್‌ಮೆಂಟ್, ವಿಬಿ ಫಿಲ್ಮ್ಸ್ ಪೆನ್ ಮರುಧರ್ ₹92.86 ಕೋಟಿ
6 ಮರ್ದಾನಿ 3 ಯಶ್ ರಾಜ್ ಫಿಲ್ಮ್ಸ್ ಯಶ್ ರಾಜ್ ಫಿಲ್ಮ್ಸ್ ₹78.82 ಕೋಟಿ

2026ರಲ್ಲಿ ಹೀನಾಯವಾಗಿ ಸೋತ ಕೆಲ ನಿರೀಕ್ಷಿತ ಚಿತ್ರಗಳ ಪಟ್ಟಿ ಇಲ್ಲಿದೆ.

ಶ್ರೇಣಿ ಚಲನಚಿತ್ರದ ಹೆಸರು ನಿರ್ಮಾಣ ಸಂಸ್ಥೆ ವಿತರಕರು ವಿಶ್ವದಾದ್ಯಂತ ಒಟ್ಟು ಗಳಿಕೆ
1 ಇಕ್ಕೀಸ್ ಮ್ಯಾಡಾಕ್ ಫಿಲ್ಮ್ಸ್ ಜಿಯೋ ಸ್ಟುಡಿಯೋಸ್, ಯಶ್ ರಾಜ್ ಫಿಲ್ಮ್ಸ್ ₹36.95 ಕೋಟಿ
2 ಅಸ್ಸಿ ಟಿ-ಸಿರೀಸ್ ಫಿಲ್ಮ್ಸ್, ಬನಾರಸ್ ಮೀಡಿಯಾವರ್ಕ್ಸ್ പനോരമ ಸ್ಟುಡಿಯೋಸ್ ₹13.43 ಕೋಟಿ
3 ದೋ ದೀವಾನೇ ಶೆಹರ್ ಮೇ ಜೀ ಸ್ಟುಡಿಯೋಸ್, ಬನ್ಸಾಲಿ ಪ್ರೊಡಕ್ಷನ್ಸ್ ಪೆನ್ ಮರುಧರ್ ₹9.68 ಕೋಟಿ
4 ಭಾರತ್ ಭಾಗ್ಯ ವಿಧಾತ ಪೆನ್ ಸ್ಟುಡಿಯೋಸ್, ಮಣಿಕರ್ಣಿಕಾ ಫಿಲ್ಮ್ಸ್ ಪೆನ್ ಮರುಧರ್ ₹8.01 ಕೋಟಿ
5 ಹ್ಯಾಪಿ ಪಟೇಲ್: ಖತರ್ನಾಕ್ ಜಾಸೂಸ್ ಆಮೀರ್ ಖಾನ್ ಪ್ರೊಡಕ್ಷನ್ಸ್, ಜಾಜು ಪ್ರೊಡಕ್ಷನ್ಸ್ ಪಿವಿಆರ್ ಐನಾಕ್ಸ್ ಪಿಕ್ಚರ್ಸ್ ₹6.84 ಕೋಟಿ
6 ಏಕ್ ದಿನ್ ಆಮೀರ್ ಖಾನ್ ಪ್ರೊಡಕ್ಷನ್ಸ್ ಪಿವಿಆರ್ ಐನಾಕ್ಸ್ ಪಿಕ್ಚರ್ಸ್ ₹3.79 ಕೋಟಿ

ಸದ್ಯ ''ಕಾಕ್‌ಟೇಲ್ 2'' ಚಿತ್ರಕ್ಕೆ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಈ ಚಿತ್ರ ಹೊರತು ಪಡಿಸಿದರೆ ವಿಕ್ರಮ್ ಭಟ್ ನಿರ್ದೇಶನದ ''ಹಾಂಟೆಡ್ 3D'' ಗೆದ್ದಿದೆ. ಇಮ್ತಿಯಾಜ್ ಅಲಿ ನಿರ್ದೇಶನನದ ''ಮೇ ವಾಪಸ್ ಆವೂಂಗಾ'' ಚಿತ್ರದ ಗಳಿಕೆಯಲ್ಲಿ ಏಕಾಏಕಿ ಏರಿಕೆ ಕಂಡು ಬಂದಿದೆ.

ಒಟ್ನಲ್ಲಿ ಈ ವರ್ಷದ ಮೊದಲ ಆರು ತಿಂಗಳು ಬೆರಳಣಿಕೆಯ ಚಿತ್ರಗಳು ಮಾತ್ರ ಬಾಲಿವುಡ್‌ನಲ್ಲಿ ಗೆದ್ದಿವೆ. ಆ ಪೈಕಿ ''ಧುರಂಧರ್ 2'' ಚಿತ್ರದ್ದೇ ಸಿಂಹಪಾಲು ಇದೆ. ಮುಂಬರುವ ಆರು ದಿನಗಳಲ್ಲಿ ಸಲ್ಮಾನ್ ಖಾನ್ , ಶಾರುಖ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್, ಹೀಗೆ ಹಲವು ಸ್ಟಾರ್ ಗಳ ಸಿನಿಮಾ ತೆರೆಗೆ ಬರಲಿದ್ದು, ಮುಂದಿನ ಆರು ತಿಂಗಳು ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯುತ್ತಾ..? ಅಥವಾ ನಿಂತ ನೀರಾಗುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Who ruled the box office and who tanked? Explore the complete 2026 Bollywood verdict report, headlined by Dhurandhar's historic ₹1,800 Crore run.
Read more about: bollywood filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X