ಕಾಂತಾರ ರಣಬೇಟೆ ; ವರುಣ್ ಧವನ್, ಜಾನ್ವಿ ಕಪೂರ್, ಕರಣ್ ಜೋಹರ್‌ಗೆ 650 ವೋಲ್ಟ್ ಶಾಕ್ ನೀಡಿದ ರಿಷಬ್ ಶೆಟ್ಟಿ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರರಂಗ ಅಂದರೆ ಕೇವಲ ಬಾಲಿವುಡ್ ಮಾತ್ರ ಎಂಬಂತೆ ಬಿಂಬಿಸಲಾಗುತ್ತಿತ್ತು. ಅಹಂಕಾರ ಅಕ್ಷರಶಃ ಬಾಲಿವುಡ್‌ನವರ ನೆತ್ತಿಗೇರಿದ್ದ ಕಾಲ ಅದು. ಆದರೆ ಈಗ ಕಾಲ ಬದಲಾಗಿದೆ. ದಕ್ಷಿಣ ಚಿತ್ರಗಳ ಅಬ್ಬರದ ಮುಂದೆ ಹಿಂದಿ ಉದ್ಯಮದ ಚಿತ್ರಗಳು ತರಗೆಲೆಗಳಂತೆ ಚದುರಿ ದಿಕ್ಕಾಪಾಲಾಗುತ್ತಿವೆ. ಸ್ವಲ್ಪ ಯಾಮಾರಿದರೂ ಬಾಲಿವುಡ್ಡಿಗೇ ಬಾಲಿವುಡ್ಡೇ ಬಾಗಿಲು ಹಾಕಿಕೊಂಡು ಹೋಗಬೇಕಾದ ಅಪಾಯ ಇದೆ.

ಹೀಗಿರುವಾಗ ತೆರೆಗೆ ಬಂದಿರುವ ''ಕಾಂತಾರ-ಚಾಪ್ಟರ್ 1'' ಬಾಲಿವುಡ್‌ನ ಇನ್ನೂ ಬೆಚ್ಚಿ ಬೀಳಿಸಿದೆ. ಚಿಂತೆಯನ್ನು ಹೆಚ್ಚಿಸಿದೆ. ಹೌದು, ಎಲ್ಲರಿಗೆ ಗೊತ್ತಿರುವಂತೆ ಭಾರತದೆಲ್ಲೆಡೆ ಸದ್ಯ ಕಾಂತಾರ ಅಲೆ ಇದೆ. ಭಾಷೆಯ ಭೇದ ಭಾವ ಇಲ್ಲದೇ ಅನೇಕರು ಈ ಕಾಂತಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಭಕ್ತಿಯ ಅಲೆಯಲ್ಲಿ ತೇಲುತ್ತಿದ್ದಾರೆ.

bollywood-hit-hard-kantara-chapter-1-dominates-with-650-lead-as-sunny-sanskari-crosses-just-rs-30cr

ಇನ್ನು ಚಿತ್ರಕ್ಕೆ ಹಣ ಹೂಡಿರುವ ಹೊಂಬಾಳೆ ಸಂಸ್ಥೆಗೆ ಅಕ್ಷರಶಃ ಕುಬೇರ ವರ ಪ್ರಾಪ್ತಿಯಾಗಿದೆ. ಬಾಕ್ಸಾಫೀಸ್‌ನಲ್ಲಿ ಹಣದ ಮಳೆಯೇ ಬೀಳುತ್ತಿದೆ. ಆದರೆ.. ಮತ್ತೊಂದು ಕಡೆ ಬಾಲಿವುಡ್‌ನ ಪ್ರಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಕ್ಯಾಂಪ್‌ನಲ್ಲಿ ಬರದ ವಾತಾವರಣ ಇದೆ.

ಹೌದು, ಉತ್ತರ ಭಾರತದಲ್ಲಿ ''ಕಾಂತಾರ'' ಮೊದಲ ಭಾಗಕ್ಕೆ ಸಿಕ್ಕ ಪ್ರತಿಕ್ರಿಯೆ, ಆ ಸಂಭ್ರಮ .. ಮೂರು ವರ್ಷದ ಹಿಂದೆ ಚಿತ್ರ ಮಾಡಿದ್ದ ದಾಖಲೆ.. ಎಲ್ಲವನ್ನೂ ಮರೆತು ಬಾಲಿವುಡ್‌ನ ಪ್ರಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ತಮ್ಮ ನಿರ್ಮಾಣದಡಿ ಸಿದ್ದವಾದ "ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ" ಚಿತ್ರವನ್ನು ತೆರೆಗೆ ತಂದಿದ್ದರು.

ಆದರೆ ತಾವು ಮಾಡಿದ ಈ ತಪ್ಪಿಗೆ ಈಗ ಕರಣ್ ಜೋಹರ್‌ಗೆ ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ಬಂದಿದೆ. ಯಾಕೆಂದರೆ ''ಕಾಂತಾರ-ಚಾಪ್ಟರ್ 1'' ಎದುರು ಬಂದ ವರುಣ್ ಧವನ್ ಮತ್ತು ಜಾಹ್ನವಿ ಕಪೂರ್ ಅಭಿನಯದ ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಚಿತ್ರ ''ಕಾಂತಾರ''ದ ಅಬ್ಬರ ಮತ್ತು ದೈವದ ಚಮತ್ಕಾರದಿಂದ ಬಾಕ್ಸಾಫೀಸ್‌ನಲ್ಲಿ ಬೋರಲು ಬಿದ್ದಿದೆ.₹50 ಕೋಟಿಯ ಗಡಿಯನ್ನು ತಲುಪಲು ಕೂಡ ಪರದಾಡುತ್ತಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ನಾಲ್ಕು ದಿನದಲ್ಲಿ ಕೇವಲ ₹ 30 ಕೋಟಿಯನ್ನು ಮಾತ್ರ ಗಳಿಸಿದೆ.

ಸ್ಯಾಕ್ನಿಲ್ ಪ್ರಕಾರ ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಚಿತ್ರದ ನಾಲ್ಕು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ [ಗುರುವಾರ] ₹ 9.25 ಕೋಟಿ
ಎರಡನೇ ದಿನ [ಶುಕ್ರವಾರ] ₹ 5.5 ಕೋಟಿ
ಮೂರನೇ ದಿನ [ಶನಿವಾರ] ₹ 7.5 ಕೋಟಿ
ನಾಲ್ಕನೇ ದಿನ [ಭಾನುವಾರ] ₹ 7.75ಕೋಟಿ

ಒಟ್ಟು ಗಳಿಕೆ - ₹ 30 ಕೋಟಿ

bollywood-hit-hard-kantara-chapter-1-dominates-with-650-lead-as-sunny-sanskari-crosses-just-rs-30cr

ಹೀಗೆ ಬಾಕ್ಸಾಫೀಸ್‌ನಲ್ಲಿ ಪರದಾಡುತ್ತಿರುವ ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ನಾಲ್ಕು ದಿನದಲ್ಲಿ ಕೇವಲ₹ 30 ಕೋಟಿ ಗಳಿಸಿದ್ದರೆ ಮತ್ತೊಂದು ಕಡೆ ''ಕಾಂತಾರ-ಚಾಪ್ಟರ್ 1'' ಕೇವಲ ಹಿಂದಿಯಲ್ಲಿಯೇ ಈ ನಾಲ್ಕು ದಿನದಲ್ಲಿ ₹75 ಕೋಟಿ ಹಣವನ್ನು ದೋಚಿದೆ.

ಬಾಲಿವುಡ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ ''ಕಾಂತಾರ-ಅಧ್ಯಾಯ 1'' (ಹಿಂದಿ ವರ್ಷನ್) ಮೊದಲ ಮೂರು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ[ಗುರುವಾರ] ₹ 18.50 ಕೋಟಿ
ಎರಡನೇ ದಿನ[ಶುಕ್ರವಾರ] ₹ 13.50 ಕೋಟಿ
ಮೂರನೇ ದಿನ[ಶನಿವಾರ] ₹ 20 ಕೋಟಿ
ನಾಲ್ಕನೇ ದಿನ [ಭಾನುವಾರ] ₹23 ಕೋಟಿ


ಒಟ್ಟು ಗಳಿಕೆ - ₹ 75 ಕೋಟಿ

ಇನ್ನೂ ಹಿಂದಿಯಲ್ಲಿಯೇ ₹75 ಕೋಟಿ ಗಳಿಸಿರುವ ''ಕಾಂತಾರ'' ಚಿತ್ರದ ಎಲ್ಲಾ ಭಾಷೆಯ ಗಳಿಕೆಯನ್ನು ಲೆಕ್ಕ ಹಾಕಿದರೆ ''ಸ್ಯಾಕ್ನಿಲ್'' ವರದಿ ಪ್ರಕಾರ ಕೇವಲ ಭಾರತದಲ್ಲಿಯೇ ₹ 225.62 ಕೋಟಿಯನ್ನು ಚಿತ್ರ ಕೊಳ್ಳೆ ಹೊಡೆದಿದೆ. ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಚಿತ್ರಕ್ಕಿಂತ 650% ಹೆಚ್ಚಿನ ಹಣವನ್ನು ಗಳಿಸಿದೆ. ಈ ಮೂಲಕ ಕರಣ್ ಜೋಹರ್ ಮತ್ತು ತಂಡಕ್ಕೆ ರಿಷಬ್ ಮತ್ತು ತಂಡ 650 ವೋಲ್ಟ್‌ನ ಶಾಕ್ ನೀಡಿದೆ.

ಇಂದಿನಿಂದ [ಅಕ್ಟೋಬರ್ 6] ರಜಾ ದಿನಗಳು ಮುಕ್ತಾಯವಾದ ಹಿನ್ನೆಲೆ, ''ಕಾಂತಾರ-ಅಧ್ಯಾಯ 1''ರ ಮೇಲೆ ಎಲ್ಲರ ಕಣ್ಣಿದೆ. 1000 ಕೋಟಿಯ ಗಡಿಯನ್ನು ಈ ಚಿತ್ರ ತಲುಪುತ್ತಾ ಎನ್ನುವ ಕುತೂಹಲ ಇದೆ. ಮತ್ತೊಂದು ಕಡೆ ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' 50 ಕೋಟಿಯನ್ನಾದರು ಗಳಿಸುತ್ತಾ ಎನ್ನುವ ಪ್ರಶ್ನೆ ಸದ್ಯ ಬಾಲಿವುಡ್ ಪಂಡಿತರನ್ನು ಕಾಡುತ್ತಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
The Kantara Chapter 1 box office collection dominates the clash. See the full breakdown of how Rishab Shetty's film took a 650% lead over the Varun Dhawan-starrer Sunny Sanskari Ki Tulsi Kumari.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X