Border 2 Box Office Day 7 : 68ನೇ ವರ್ಷದಲ್ಲಿ ಅಬ್ಬರಿಸಿದ ಸನ್ನಿ ಡಿಯೋಲ್-ಬಾಲಿವುಡ್‌ನಲ್ಲಿ ಬಾರ್ಡರ್ 2 ಕ್ರಾಂತಿ
ಬಾಲಿವುಡ್‌ನಲ್ಲಿ ಕಳೆದ ವರ್ಷ ಅಕ್ಷರಶಃ ಬರಗಾಲದ ವಾತಾವರಣ ಇತ್ತು. ಛಾವಾ ಸೇರಿ ಕೆಲ ಬೆರಳಣಿಕೆಯ ಚಿತ್ರಗಳನ್ನು ಹೊರತು ಪಡಿಸಿದರೆ ಮಾಡಿದ ಎಲ್ಲ ಚಿತ್ರಗಳು ಒಂದಾದ ಮೇಲೊಂದರಂತೆ ದೊಪ್ಪನೆ ನೆಲಕ್ಕುರಳುತ್ತಿದ್ದವು. ಈ ಹಿನ್ನೆಲೆ ಆತಂಕ ಹಲವರಲ್ಲಿ ಮನೆ ಮಾಡಿತ್ತು. ಸಾಲದಕ್ಕೆ ದಕ್ಷಿಣ ಚಿತ್ರರಂಗದವರ ಅಬ್ಬರ. ಹಿಂದಿ ಮಾರುಕಟ್ಟೆಯಲ್ಲಿ ಸೌತ್ ಸ್ಟಾರ್‌ಗಳ ಅಬ್ಬರ ಕಂಡು ಬಾಲಿವುಡ್‌ನ ಬೆಚ್ಚಿ ಬಿದ್ದಿತ್ತು.
ಆದರೆ.. ಕಳೆದ ವರ್ಷಾಂತ್ಯದಲ್ಲಿ ಬಂದ ''ಧುರಂಧರ್'' ಮಲಗಿದ್ದ ಬಾಲಿವುಡ್‌ನ ಬಡಿದೆಬ್ಬಿಸಿತು. ಬಾಕ್ಸಾಫೀಸ್‌ನಲ್ಲಿ ಐತಿಹಾಸಿಕ ದಾಖಲೆ ಬರೆಯಿತು. ಸದ್ಯ ''ಧುರಂಧರ್'' ಮಾಡಿದ್ದ ಮ್ಯಾಜಿಕ್‌ನ್ನ ''ಬಾರ್ಡರ್ 2'' ಮಾಡುತ್ತಿದೆ. ವರ್ಷದ ಆರಂಭದಲ್ಲಿಯೇ ಬಾಲಿವುಡ್‌ಗೆ ಹೊಸ ಚೈತನ್ಯವನ್ನು ತುಂಬಿದೆ.

ಹೌದು, ಗಣರಾಜ್ಯೋತ್ಸವದ ಪ್ರಯುಕ್ತ ತೆರೆಗೆ ಬಂದ ಬಾರ್ಡರ್ 2 ಸದ್ಯ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ಪ್ರಕಾರ ನಿನ್ನೆ (ಜನವರಿ 29 ) ₹ 11.25 ಕೋಟಿಯನ್ನು ಗಳಿಸಿದೆ. ಈ ಮೂಲಕ ಒಂದು ವಾರದಲ್ಲಿ ₹ 224.25 ಕೋಟಿಯನ್ನು ಬಾರ್ಡರ್ 2 ಕೊಳ್ಳೆ ಹೊಡೆದಿದೆ.
''ಸ್ಯಾಕ್ನಿಲ್'' ಪ್ರಕಾರ ''ಬಾರ್ಡರ್ 2'' ಚಿತ್ರದ 7 ದಿನದ ಗಳಿಕೆ ಈ ಕೆಳಗಿನಂತೆ ಇದೆ
ಮೊದಲ ದಿನ ( ಶುಕ್ರವಾರ )₹ 30 ಕೋಟಿ
ಎರಡನೇ ದಿನ (ಶನಿವಾರ ) ₹ 36.5 ಕೋಟಿ
ಮೂರನೇ ದಿನ (ಭಾನುವಾರ) ₹54.5 ಕೋಟಿ
ನಾಲ್ಕನೇ ದಿನ (ಸೋಮವಾರ) ₹59 ಕೋಟಿ
ಐದನೇ ದಿನ (ಮಂಗಳವಾರ) ₹20ಕೋಟಿ
ಆರನೇ ದಿನ (ಬುಧವಾರ ) ₹13 ಕೋಟಿ
ಏಳನೇ ದಿನ (ಗುರುವಾರ) ₹11.25 ಕೋಟಿ
ಒಟ್ಟು ಗಳಿಕೆ - ₹ 224.25 ಕೋಟಿ

ಇನ್ನೂ ಸ್ಟಾರ್ ಯಾರೇ ಇರಲಿ.. ಆ ಚಿತ್ರ ಯಾವುದೇ ಇರಲಿ.. ವಾರದ ದಿನಗಳಲ್ಲಿ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬಂದೇ ಬರುತ್ತೆ. ''ಬಾರ್ಡರ್ 2'' ಚಿತ್ರದ ವಿಚಾರದಲ್ಲಿ ಕೂಡ ಇದೇ ಆಗಿದೆ. ಆದರೆ.. ಒಂದಂಕಿಗೆ ಚಿತ್ರದ ಗಳಿಕೆ ಕುಸಿದಿಲ್ಲ ಅನ್ನೋದು ವಿಶೇಷ.
''ಬಾರ್ಡರ್ 2'' ಚಿತ್ರದ ಗಳಿಕೆಯನ್ನು ಚಿತ್ರತಂಡ ಕೂಡ ಅಧಿಕೃತವಾಗಿ ಹಂಚಿಕೊಂಡಿದೆ. ಆ ಪ್ರಕಾರ ''ಬಾರ್ಡರ್ 2'' ಈ 7 ದಿನದಲ್ಲಿ ₹244.97 ಕೋಟಿ ಗಳಿಸಿದೆ. ಈ ಮೂಲಕ ''ಸ್ಯಾಕ್ನಿಲ್'' ಉಲ್ಲೇಖ ಮಾಡಿರುವುದಕ್ಕಿಂತ ಹೆಚ್ಚಿನ ಹಣವನ್ನು ಚಿತ್ರ ಗಳಿಸಿದೆ ಎಂಬ ಸಂದೇಶವನ್ನು ಚಿತ್ರತಂಡ ರವಾನೆ ಮಾಡಿದೆ.
ಆಕ್ಯುಪೆನ್ಸಿ ವಿಚಾರಕ್ಕೆ ಬಂದರೆ ಬೆಳಗಿನ ಪ್ರದರ್ಶನಕ್ಕಿಂತ ರಾತ್ರಿಯ ಪ್ರದರ್ಶನಕ್ಕೆ ಹೆಚ್ಚಿನ ಬೇಡಿಕೆ ಇದೆ. ರಾತ್ರಿ ಈ ಚಿತ್ರವನ್ನು ಹೆಚ್ಚೆಚ್ಚು ಜನ ನೋಡುತ್ತಿದ್ದು ಬೆಂಗಳೂರಿನಲ್ಲಿ ನಿನ್ನೆ 12.50% ಆಕ್ಯುಪೆನ್ಸಿ ಕಂಡು ಬಂದಿದೆ.
ಒಟ್ನಲ್ಲಿ ಸದ್ಯ ''ಬಾರ್ಡರ್ 2'' ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಬಾಲಿವುಡ್ ಪಂಡಿತರ ಪ್ರಕಾರ ಚಿತ್ರ ₹400 ಕೋಟಿಯ ಗಡಿಯನ್ನು ಅನಾಯಾಸವಾಗಿ ತಲುಪಲಿದ್ದು, ಸನ್ನಿ ಡಿಯೋಲ್ ಅವರ ಹಿಂದಿನ ಬ್ಲಾಕ್ ಬಸ್ಟರ್ ಚಿತ್ರ ''ಗದರ್ 2'' ದಾಖಲೆಯನ್ನು ''ಬಾರ್ಡರ್ 2'' ಮುರಿಯುವ ಸಾಧ್ಯತೆ ಇದೆ. ''ಧುರಂಧರ್'' ಅಲೆ ಕೂಡ ಕಡಿಮೆಯಾಗಿದ್ದು ಸದ್ಯ ಫೆಬ್ರವರಿ 14ರವರೆಗೆ ಯಾವ ದೊಡ್ಡ ಚಿತ್ರ ಕೂಡ ಬಾಲಿವುಡ್‌ನಲ್ಲಿ ಬಿಡುಗಡೆಯಾಗುತ್ತಿಲ್ಲ. ''ಬಾರ್ಡರ್ 2'' ಚಿತ್ರಕ್ಕೆ ಈ ವಿಚಾರ ಕೂಡ ಸಹಕಾರಿಯಾಗಲಿದೆ.
Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











