Border 2 Box Office Day 3 : ಬಾರ್ಡರ್ 2 ಧಗಧಗ-3 ದಿನದ ಸಮರದಲ್ಲಿ ಧುರಂಧರ್‌ನ ಹೊಡೆದುರುಳಿಸಿದ ಸನ್ನಿ ಡಿಯೋಲ್

ಒಂದು ಕಾಲದಲ್ಲಿ ದೇಶ ಪ್ರೇಮಕ್ಕೆ ಕೇರ್ ಆಫ್ ಅಡ್ರೆಸ್ ಆಗಿದ್ದವರು ಸನ್ನಿ ಡಿಯೋಲ್ . ''ಬಾರ್ಡರ್''.. ''ಗದರ್''.. ''ಇಂಡಿಯನ್''.. ಅಬ್ಬಬ್ಬಾ, ಒಂದಾ.. ಎರಡಾ.. ಸಾಲು ಸಾಲು ಚಿತ್ರಗಳಲ್ಲಿ ಭಾರತಾಂಬೆಯ ಮುದ್ದಿನ ಮಗನಂತಹ ಪಾತ್ರಗಳನ್ನೂ ನಿರ್ವಹಿಸಿ, ಜನರ ಹೃದಯಕ್ಕೆ ಹತ್ತಿರವಾದವರು ಸನ್ನಿ ಡಿಯೋಲ್. ಆದರೆ.. ಭಾರತಾಂಬೆಯ ಪ್ರೀತಿ ವಾತ್ಯಲದಲ್ಲಿಯೇ ಬೆಳೆದ ಸನ್ನಿ ಡಿಯೋಲ್ ಅಲ್ಲಲ್ಲಿ ಮೆರೆದರು. ಇನ್ನೂ ಕೆಲವೊಮ್ಮೆ ಮೈ ಮರೆತರು.

ಇದಕ್ಕೆ ಉದಾಹರಣೆ ಎಂಬಂತೆ ಸನ್ನಿ ಡಿಯೋಲ್ ಅಭಿನಯದ ''ಮಾ ತುಜೆ ಸಲಾಮ್'' ಗೆಲ್ಲಲಿಲ್ಲ. ಅತ್ಯಂತ ಆತ್ಮ ವಿಶ್ವಾಸದಿಂದ ಮಾಡಿದ್ದ ''ಕಾಫಿಲಾ'' ಕಾಸು ಮಾಡಲಿಲ್ಲ . ''ಹೀರೋಸ್‌'' ಎಂಬ ಚಿತ್ರ ಮಾಡಿದರೂ ಕೂಡ ಇವರ ಹೀರೋಗಿರಿಗೆ ಜನ ಮರುಳಾಗಲಿಲ್ಲ. ಸನ್ನಿ ಡಿಯೋಲ್ ಅವರನ್ನು ಹೊತ್ತು ಮೆರೆಸಲಿಲ್ಲ. ಆದರೆ ಇದೇ ಸನ್ನಿ ಡಿಯೋಲ್ ಜೆಪಿ ದತ್ತಾ ನಿರ್ದೇಶನದ ''ಬಾರ್ಡರ್‌'' ಚಿತ್ರದಲ್ಲಿ ಮೇಜರ್ ಕುಲ್‌ದೀಪ್ ಸಿಂಗ್ ಪಾತ್ರಕ್ಕೆ ಜೀವ ತುಂಬಿದಾಗ ಅನೇಕರು ಕಣ್ಣೀರಾದರು. ಈಗ ಇನ್ನೊಮ್ಮೆ ಕಣ್ಣೀರಾಗುತ್ತಿದ್ದಾರೆ.

Border 2 Box Office Day 3 Sunny Deol s Juggernaut Smashes 121 Cr with a Massive 49 Sunday Surge

ಹೌದು.. ಕಳೆದ ವಾರ ( ಜನವರಿ 23 ) ತೆರೆಗೆ ಬಂದ ''ಬಾರ್ಡರ್ 2'' ಬಾಕ್ಸಾಫೀಸ್‌ನಲ್ಲಿ ಅಕ್ಷರಶಃ ಅಬ್ಬರಿಸುತ್ತಿದೆ. ದಿನದಿಂದ ದಿನಕ್ಕೆ ಗಳಿಕೆಯಲ್ಲಿ ಏರಿಕೆಯಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ.

ಇದಕ್ಕೆ ಕೈಗನ್ನಡಿ ಎಂಬಂತೆ ಕೇವಲ ಮೂರು ದಿನದಲ್ಲಿ ನೂರು ಕೋಟಿಯ ಗಡಿಯನ್ನು ''ಬಾರ್ಡರ್ 2'' ದಾಟಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ನಿನ್ನೆ (ಜನರಿ 25 ) ಮೊದಲ ದಿನಕ್ಕೆ ಹೋಲಿಸಿದರೆ 49.32% ಗಳಿಕೆಯಲ್ಲಿ ಏರಿಕೆ ಕಂಡು ಬಂದಿದ್ದು ನಿನ್ನೆ ಒಂದೇ ದಿನ ₹ 54.5 ಕೋಟಿಯನ್ನು ಚಿತ್ರ ಕೊಳ್ಳೆ ಹೊಡೆದಿದೆ. ಈ ಮೂಲಕ ಮೂರು ದಿನದಲ್ಲಿ ₹ 121 ಕೋಟಿಯನ್ನು ಚಿತ್ರ ಗಳಿಸಿದೆ.

Border 2 Box Office Day 3 Sunny Deol s Juggernaut Smashes 121 Cr with a Massive 49 Sunday Surge

''ಸ್ಯಾಕ್ನಿಲ್'' ಪ್ರಕಾರ ''ಬಾರ್ಡರ್ 2'' ಚಿತ್ರದ ಮೊದಲ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ

ಮೊದಲ ದಿನ ( ಶುಕ್ರವಾರ )₹ 30 ಕೋಟಿ
ಎರಡನೇ ದಿನ (ಶನಿವಾರ ) ₹ 36.5 ಕೋಟಿ
ಮೂರನೇ ದಿನ (ಭಾನುವಾರ) ₹54.5 ಕೋಟಿ

ಒಟ್ಟು ಗಳಿಕೆ - ₹121 ಕೋಟಿ

ಅದೇ ಮತ್ತೊಂದು ಕಡೆ ''ಬಾಲಿವುಡ್‌ ಹಂಗಾಮ'' ವರದಿಯ ಪ್ರಕಾರ ''ಬಾರ್ಡರ್ 2'' ಚಿತ್ರದ ಗಳಿಕೆ ''ಸ್ಯಾಕ್ನಿಲ್'' ಉಲ್ಲೇಖ ಮಾಡಿರುವ ಗಳಿಕೆಗಿಂತ ಹೆಚ್ಚಿದೆ. ''ಬಾಲಿವುಡ್ ಹಂಗಾಮ'' ಪ್ರಕಾರ ಮೊದಲ ದಿನ ₹32.10 ಕೋಟಿಯನ್ನು ಗಳಿಸಿದ್ದ ''ಬಾರ್ಡರ್ 2'' ಎರಡನೇ ದಿನ ₹40.59 ಕೋಟಿಯನ್ನು ಗಳಿಸಿದೆ. ಈ ಮೂಲಕ ಎರಡು ದಿನದಲ್ಲಿ ₹72.69 ಕೋಟಿಯನ್ನು ಗಳಿಸಿದ್ದ ''ಬಾರ್ಡರ್ 2'' ನಿನ್ನೆ ಒಂದೇ ದಿನ ₹57.20 ಕೋಟಿಯನ್ನು ಗಳಿಸಿದೆ. ಈ ಮೂಲಕ ಮೂರು ದಿನದಲ್ಲಿ ₹129.89 ಕೋಟಿಯನ್ನು ಕೊಳ್ಳೆ ಹೊಡೆದಿದೆ.

''ಬಾಲಿವುಡ್ ಹಂಗಾಮಾ'' ಪ್ರಕಾರ ''ಬಾರ್ಡರ್ 2'' ಚಿತ್ರದ ಮೊದಲ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ

ಮೊದಲ ದಿನ ( ಶುಕ್ರವಾರ ) ₹32.10 ಕೋಟಿ
ಎರಡನೇ ದಿನ (ಶನಿವಾರ ) ₹40.59 ಕೋಟಿ
ಮೂರನೇ ದಿನ(ಭಾನುವಾರ) ₹57.20 ಕೋಟಿ

ಒಟ್ಟು ಗಳಿಕೆ - ₹129.89 ಕೋಟಿ

''ಬಾಲಿವುಡ್ ಹಂಗಾಮಾ''ದ ಈ ಲೆಕ್ಕಾಚಾರವನ್ನೇ ಚಿತ್ರತಂಡ ಕೂಡ ಒಪ್ಪಿಕೊಂಡಿದ್ದು ಭಾರತದಲ್ಲಿ ಚಿತ್ರದ ಮೂರು ದಿನದ ಗಳಿಕೆ ₹129.89 ಕೋಟಿ ಎಂದು ಅಧಿಕೃತವಾಗಿ ಘೋಷಿಸಿದೆ.

ಅಂದ್ಹಾಗೇ ಕಳೆದ ವರ್ಷಾಂತ್ಯದಲ್ಲಿ ಬಂದ ''ಧುರಂಧರ್'' ಮೊದಲ ಮೂರು ದಿನ 103 ಕೋಟಿಯನ್ನು ಗಳಿಸಿತ್ತು. ಈ ಗಳಿಕೆಯನ್ನು ''ಬಾರ್ಡರ್ 2'' ಹಿಂದಿಕ್ಕಿದೆ. ಮೂರು ದಿನದಲ್ಲಿ ₹129.89 ಕೋಟಿ ಕೊಳ್ಳೆ ಹೊಡೆದು ಸದ್ಯ ''ಧುರಂಧರ್'' ಬೆನ್ನತ್ತಿದೆ.

ಸದ್ಯ ಎದ್ದಿರುವ ಈ ಅಲೆ ಹೀಗೆ ಮುಂಬರುವ ದಿನಗಳಲ್ಲಿ ಕೂಡ ಮುಂದುವರೆದರೆ ''ಧುರಂಧರ್‌''ನಂತೆಯೇ ''ಬಾರ್ಡರ್ 2'' ಚರಿತ್ರೆ ಸೃಷ್ಟಿಸುವುದು ಖಚಿತ ಎನ್ನುವ ಮಾತುಗಳು ಸದ್ಯ ಹಿಂದಿ ಉದ್ಯಮದಲ್ಲಿ ಕೇಳಿ ಬರುತ್ತಿವೆ. ಇಂದು (ಜನವರಿ 26 ) ಗಣರಾಜ್ಯೋತ್ಸವದ ಹಿನ್ನೆಲೆ ಚಿತ್ರದ ಗಳಿಕೆ 200 ಕೋಟಿಯ ಗಡಿ ತಲುಪುವ ವಿಶ್ವಾಸ ಕೂಡ ಬಾಲಿವುಡ್‌ಗೆ ಇದೆ.

Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
History in the making! Border 2 scripts a historic opening weekend, collecting ₹121 crore in just 3 days. From Sunny Deol's powerhouse performance to a massive Sunday surge, get the full Day 3 box office breakdown and record-breaking stats.
Read more about: bollywood sunny deol
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X