Border 2 Box Office Day 1; ಬಾಕ್ಸಾಫೀಸ್‌ನಲ್ಲಿ ಬಾರ್ಡರ್ 2 ಧಮಾಕ-ಸನ್ನಿ ಡಿಯೋಲ್ ಅಬ್ಬರಕ್ಕೆ ಧುರಂಧರ್ ದಾಖಲೆ ಛಿದ್ರ
ಸನ್ನಿ ಡಿಯೋಲ್ ಯಾರಿಗೆ ತಾನೇ ಗೊತ್ತಿಲ್ಲ. ಒಂದ್ಕಾಲದ ಸೂಪರ್ ಸ್ಟಾರ್. 90ರ ದಶಕದಲ್ಲಿ ಒಂದಾದ ಮೇಲೊಂದರಂತೆ ಗೆಲುವುನ್ನು ಕಂಡ ಸನ್ನಿ ಡಿಯೋಲ್ ಅವರನ್ನು ಮೂರು ವರ್ಷದ ಹಿಂದೆ ಅನೇಕರು ಮರೆತೇ ಹೋಗಿದ್ದರು. ಬಾಲಿವುಡ್‌ನವರಿಗೆನೇ ಸನ್ನಿ ಡಿಯೋಲ್ ನೆನಪಿರಲಿಲ್ಲ. ಧಮೇಂದ್ರ ಮಗನಾದರೂ.. ಒಂದ್ಕಾಲದಲ್ಲಿ ಚಿನ್ನದ ಗಣಿ ತೆಗೆದಿದ್ದರೂ.. ಹಿಂದಿ ಚಿತ್ರರಂಗ ಸನ್ನಿ ಡಿಯೋಲ್ ಅವರನ್ನು ನಂಬಲಿಲ್ಲ. ಅವಕಾಶಗಳನ್ನು ಕೊಡಲಿಲ್ಲ.
ಆದರೆ ಅತ್ತೆಗೊಂದು ಕಾಲ.. ಸೊಸೆಗೊಂದು ಕಾಲ.. ''ಗದರ್ 2'' ಬಂದ ಮೇಲೆ ಎಲ್ಲವೂ ಬದಲಾಯ್ತು. ಸಾಲು ಸಾಲು ಅವಕಾಶಗಳು ಸನ್ನಿ ಅವರನ್ನು ಅರಸಿಕೊಂಡು ಹೋದವು. ಆ ಪೈಕಿ ''ಬಾರ್ಡರ್ 2'' ಕೂಡ ಒಂದು. ಸದ್ಯ ಈ ಚಿತ್ರ ನಿನ್ನೆ ( ಜನವರಿ 23 ) ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಿದೆ. ಮೊದಲ ದಿನವೇ ''ಧುರಂಧರ್'' ದಾಖಲೆಯನ್ನು ಮುರಿದಿದೆ.

ಹೌದು, ಸತತ ಸೋಲುಗಳಿಂದ ಕಂಗಾಲಾಗಿದ್ದ ಬಾಲಿವುಡ್‌ಗೆ ಕಳೆದ ವರ್ಷಾಂತ್ಯದಲ್ಲಿ ಬಂದ ''ಧುರಂಧರ್'' ಹೊಸ ಹುರುಪು ನೀಡಿತ್ತು. ಬಿಡುಗಡೆಯಾಗಿ 50 ದಿನವಾದರೂ ಇಂದಿಗೂ ಯಶಸ್ವಿ ಪ್ರದರ್ಶನ ಕಾಣ್ತಿರುವ ''ಧುರಂಧರ್'' ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಮೊದಲ ದಿನ ₹28 ಕೋಟಿಯನ್ನು ದೋಚಿತ್ತು.
ಈ ಗಳಿಕೆಯನ್ನು ''ಬಾರ್ಡರ್ 2'' ಹಿಂದಿಕ್ಕಿದೆ. ''ಸ್ಯಾಕ್ನಿಲ್'' ಪ್ರಕಾರ ಮೊದಲ ದಿನ ₹30 ಕೋಟಿಯನ್ನು ಈ ಚಿತ್ರ ಕೊಳ್ಳೆ ಹೊಡೆದಿದೆ. ಈ ಮೂಲಕ ವರ್ಷಾರಂಭದಲ್ಲಿಯೇ ಬಾಲಿವುಡ್‌ಗೆ ಗೆಲುವಿನ ಸೂಚನೆಯನ್ನು ಕೂಡ ''ಬಾರ್ಡರ್ 2'' ಚಿತ್ರ ನೀಡಿದೆ.
ಇನ್ನು ಮೊದಲ ದಿನ ''ಬಾರ್ಡರ್ 2'' ನೋಡಬೇಕೆನ್ನುವ ಆತುರ ಮತ್ತು ಕಾತುರ ಪ್ರೇಕ್ಷಕರಲ್ಲಿ ನಿನ್ನೆ (ಜನವರಿ 23) ಕಂಡು ಬಂದಿದೆ. ಬೆಳಗ್ಗೆ ಸಾಧಾರಣ ಓಪನಿಂಗ್ ಪಡೆದ ಈ ಚಿತ್ರವನ್ನು ರಾತ್ರಿ ಹೆಚ್ಚಿನ ಜನ ನೋಡಿದ್ದಾರೆ. ಬೆಳಿಗ್ಗೆ ಶೇ. 19.46 % ಮಧ್ಯಾಹ್ನ ಶೇ. 26.33 % ಸಂಜೆ ಶೇ. 34.55 % ರಾತ್ರಿ
ಇದ್ದ ಆಕ್ಯುಪೆನ್ಸಿ ರಾತ್ರಿ ಶೇ. 48.06 ರಷ್ಟು ಕಂಡು ಬಂದಿದೆ.
ಬೆಂಗಳೂರಿನಲ್ಲಿ ಮೊದಲ ದಿನ ''ಬಾರ್ಡರ್ 2'' ಚಿತ್ರ ನೋಡುವ ಉತ್ಸಾಹ 32.50% ಜನರಲ್ಲಿ ಕಂಡು ಬಂದರೆ ಹೈದರಾಬಾದ್‌ನಲ್ಲಿ 32.75% ಚೆನ್ನೈನಲ್ಲಿ 49.75% ಮುಂಬೈನಲ್ಲಿ 24.50% ಕೋಲ್ಕತ್ತಾದಲ್ಲಿ 47.00% ಆಕ್ಯುಪೆನ್ಸಿ ಕಂಡು ಬಂದಿದೆ. ಜೈಪುರನಲ್ಲಿ ಅತೀ ಹೆಚ್ಚು ಜನ ನಿನ್ನೆ (ಜನವರಿ 23) ''ಬಾರ್ಡರ್ 2'' ಚಿತ್ರವನ್ನು ನೋಡಿದ್ದಾರೆ.

ಇನ್ನು ''ಬಾರ್ಡರ್'' 2D ಫಾರ್ಮ್ಯಾಟ್‌ನಲ್ಲಿ ಮಾತ್ರ ಬಿಡುಗಡೆಯಾಗಿಲ್ಲ. ಬದಲಿಗೆ 4DX, IMAX 2D, ಡಾಲ್ಬಿ ಸ್ವರೂಪಗಳಲ್ಲಿ ಕೂಡ ಬಿಡುಗಡೆಯಾಗಿದೆ. ಈ ಪೈಕಿ 4DX ಫಾರ್ಮ್ಯಾಟ್‌ನಲ್ಲಿ ಚಿತ್ರವನ್ನು ಹೆಚ್ಚಿನ ಜನ ನೋಡಿದ್ದಾರೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
ಅಂದ್ಹಾಗೇ ಸನ್ನಿ ಡಿಯೋಲ್‌ಗೆ ಮರು ಜೀವ ನೀಡಿದ ''ಗದರ್ 2'' ಚಿತ್ರದ ದಾಖಲೆಯನ್ನು ಮುರಿಯುವಲ್ಲಿ ''ಬಾರ್ಡರ್ 2'' ವಿಫಲವಾಗಿದೆ. ''ಸ್ನಾಕ್ನಿಲ್'' ಅಂಕಿ ಅಂಶಗಳ ಪ್ರಕಾರ 2023ರಲ್ಲಿ ಬಂದಿದ್ದ ''ಗದರ್ 2'' ಮೊದಲ ದಿನ ₹ 40.1 ಕೋಟಿಯನ್ನು ಗಳಿಸಿತ್ತು.
ಒಟ್ನಲ್ಲಿ ಸದ್ಯ ''ಬಾರ್ಡರ್ 2'' ಚಿತ್ರಕ್ಕೆ ಮೊದಲ ದಿನ ಉತ್ತಮವಾದ ಓಪನಿಂಗ್ ಸಿಕ್ಕಿದೆ. ಪ್ರೇಕ್ಷಕರಿಂದ ಮತ್ತು ವಿಮರ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆ ಇಂದು (ಜನವರಿ 24 ) ಮತ್ತು ನಾಳೆ (ಜನವರಿ 25 ) ಚಿತ್ರದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಗಣರಾಜ್ಯೋತ್ಸವದ ಪ್ರಯುಕ್ತ ಸೋಮವಾರ (ಜನವರಿ 26) ಕೂಡ ರಜೆ ಇರುವ ಹಿನ್ನೆಲೆ ನಾಲ್ಕು ದಿನದಲ್ಲಿ ''ಬಾರ್ಡರ್ 2'' 100 ಕೋಟಿಯ ಗಡಿಯನ್ನು ಪಾರು ಮಾಡುತ್ತೆ ಲೆಕ್ಕಾಚಾರವನ್ನು ಸದ್ಯ ಬಾಲಿವುಡ್ ಪಂಡಿತರು ಹಾಕುತ್ತಿದ್ದಾರೆ.
Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











