Border 2 Box Office Day 2: ಸನ್ನಿ ಡಿಯೋಲ್ ಘರ್ಜನೆ, ಬಾಕ್ಸಾಫೀಸ್ ಗಡಗಡ - 2ನೇ ದಿನ ಬಂಪರ್ ಲಾಟರಿ

ಈ ಬಣ್ಣದ ಲೋಕನೇ ಹಂಗೆ. ಇಲ್ಲಿ ಯಾವತ್ತು ಏನಾಗುತ್ತೆ ? ಯಾರು ಗೆಲ್ಲುತ್ತಾರೆ ? ಯಾರು ಸೋಲುತ್ತಾರೆ ? ಎಂದು ಹೇಳಲು ಸಾಧ್ಯವೇ ಇಲ್ಲ. ಇಲ್ಲಿ ಇವತ್ತು ಸ್ಟಾರ್ ಆದವರು ನಾಳೆ ಟಾರ್ ರೋಡ್‌ನಲ್ಲಿ ಇದ್ದರೆ, ಟಾರ್ ರೋಡ್‌ನಲ್ಲಿ ಇದ್ದವರು ಏಕಾಏಕಿ ಕೆಲವೊಮ್ಮೆ ಸ್ಟಾರ್ ಆಗುತ್ತಾರೆ.ಸದ್ಯ ಇದಕ್ಕೆ ಉದಾಹರಣೆಗೆ ಸನ್ನಿ ಡಿಯೋಲ್ ಅವರನ್ನೇ ತೆಗೆದುಕೊಳ್ಳಿ.

ಹೌದು, ಸನ್ನಿ ಡಿಯೋಲ್ .. ಒಂದ್ಕಾಲದ ಸೂಪರ್ ಸ್ಟಾರ್. 90ರ ದಶಕದಲ್ಲಿ ಒಂದಾದ ಮೇಲೊಂದರಂತೆ ಗೆಲುವುನ್ನ ಕಂಡ ಸನ್ನಿ ಡಿಯೋಲ್ ಅವನ್ನ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮರೆತೆ ಹೋಗಿದ್ದರು. ಬಾಲಿವುಡ್‌ನವರಿಗೆನೇ ಸನ್ನಿ ಡಿಯೋಲ್ ನೆನಪಿರಲಿಲ್ಲ. ಧಮೇಂದ್ರ ಮಗನಾದರೂ.. ಒಂದ್ಕಾಲದಲ್ಲಿ ಚಿನ್ನದ ಗಣಿ ತೆಗೆದಿದ್ದರೂ.. ಹಿಂದಿ ಚಿತ್ರರಂಗ ಸನ್ನಿ ಡಿಯೋಲ್ ಅವರನ್ನ ನಂಬಲಿಲ್ಲ. ಅವಕಾಶಗಳನ್ನ ಕೊಡಲಿಲ್ಲ. ಇದರಿಂದ ಕೆಲ ವರ್ಷಗಳ ಹಿಂದೆ ಸನ್ನಿ ಅಕ್ಷರಶಃ ಕಂಗಾಲಾಗಿದ್ದರು.

Border 2 Explosion Sunny Deol Shatters with Massive Day 2 Jump 100 Crore Milestone in Sight

ಇಂಥಾ ಸನ್ನಿ ಡಿಯೋಲ್ ಅವರನ್ನ ಕೈ ಹಿಡಿದು ಮೇಲೆತ್ತಿದ್ದು, ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಇವರಿಗೆ ಬೆಲೆ ಬರುವಂತೆ ಮಾಡಿದ್ದು ಮತ್ತದೇ ''ಗದರ್‌'' ಸಿನಿಮಾ. 2000ನೇ ಇಸ್ವಿಯಲ್ಲಿ ಕೂಡ ಮುಳುಗುತ್ತಿದ್ದ ಸಮಯದಲ್ಲಿ ''ಗದರ್'' ಚಿತ್ರದ ಮೂಲಕ ಎದ್ದು ನಿಂತಿದ್ದ ಸನ್ನಿ ಡಿಯೋಲ್‌ 2023ರಲ್ಲಿ ''ಗದರ್ ''2 ಚಿತ್ರದ ಮೂಲಕ ಮತ್ತೆ ಮೈಕೊಡವಿ ಎದ್ದು ನಿಂತರು. ಸನ್ನಿ ಡಿಯೋಲ್ ಮುಖ ಚಹರೆ ಮರೆತ ಜನ ''ಗದರ್ 2'' ಚಿತ್ರವನ್ನ ಮುಗಿ ಬಿದ್ದು ನೋಡಿದರು. ಈಗ ''ಬಾರ್ಡರ್ 2'' ಸರದಿ.

ಹೌದು, ''ಬಾರ್ಡರ್ 2''.. ವರ್ಷದ ಆರಂಭದಲ್ಲಿ ಬಾಲಿವುಡ್‌ ಪಾಲಿಗೆ ಭಾಗ್ಯದ ಬಾಗಿಲು ತೆರೆಯುವಂತೆ ಮಾಡಿರುವ ಸಿನಿಮಾ. ದೇಶಭಕ್ತಿಯ ಕಥಾಹಂದರವನ್ನು ಹೊಂದಿರುವ ಈ ಚಿತ್ರ ನೋಡಲು ಸದ್ಯ ನೂಕು ನುಗ್ಗಲಿನ ವಾತಾವರಣ ಕಂಡು ಬಂದಿದೆ. ಮೊದಲ ದಿನಕ್ಕಿಂತ ಎರಡನೇ ದಿನದ ಗಳಿಕೆಯಲ್ಲಿ ಶೇಕಡಾ 21% ಏರಿಕೆ ಕಂಡು ಬಂದಿದೆ.

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಮೊದಲ ದಿನ (ಜನವರಿ 23 ) ₹ 30 ಕೋಟಿಯನ್ನು ಕೊಳ್ಳೆ ಹೊಡೆದಿದ್ದ ''ಬಾರ್ಡರ್ 2'' ನಿನ್ನೆ (ಜನವರಿ 24 ) ₹ 36.5 ಕೋಟಿಯನ್ನು ದೋಚಿದೆ. ಈ ಮೂಲಕ ಎರಡು ದಿನದಲ್ಲಿ ₹66.50 ಕೋಟಿಯನ್ನು ''ಬಾರ್ಡರ್ 2'' ಗಳಿಸಿದೆ.


''ಸ್ಯಾಕ್ನಿಲ್'' ಪ್ರಕಾರ ''ಬಾರ್ಡರ್ 2'' ಚಿತ್ರದ ಮೊದಲ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ

ಮೊದಲ ದಿನ ( ಶುಕ್ರವಾರ )₹ 30 ಕೋಟಿ
ಎರಡನೇ ದಿನ (ಶನಿವಾರ ) ₹ 36.5 ಕೋಟಿ

ಒಟ್ಟು ಗಳಿಕೆ - ₹66.50 ಕೋಟಿ

Border 2 Explosion Sunny Deol Shatters with Massive Day 2 Jump 100 Crore Milestone in Sight

ಅದೇ ಮತ್ತೊಂದು ಕಡೆ ''ಬಾಲಿವುಡ್‌ ಹಂಗಾಮ'' ವರದಿಯ ಪ್ರಕಾರ ''ಬಾರ್ಡರ್ 2'' ಚಿತ್ರದ ಗಳಿಕೆ ''ಸ್ಯಾಕ್ನಿಲ್'' ಉಲ್ಲೇಖ ಮಾಡಿರುವ ಗಳಿಕೆಗಿಂತ ಹೆಚ್ಚಿದೆ. ''ಬಾಲಿವುಡ್ ಹಂಗಾಮ'' ಪ್ರಕಾರ ಮೊದಲ ದಿನ ₹32.10 ಕೋಟಿಯನ್ನು ಗಳಿಸಿದ್ದ ''ಬಾರ್ಡರ್ 2'' ಎರಡನೇ ದಿನ ₹40.59 ಕೋಟಿಯನ್ನು ಗಳಿಸಿದೆ. ಈ ಮೂಲಕ ಎರಡು ದಿನದಲ್ಲಿ ₹72.69 ಕೋಟಿಯನ್ನು ''ಬಾರ್ಡರ್ 2'' ಗಳಿಸಿದೆ.


''ಬಾಲಿವುಡ್ ಹಂಗಾಮಾ'' ಪ್ರಕಾರ ''ಬಾರ್ಡರ್ 2'' ಚಿತ್ರದ ಮೊದಲ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ

ಮೊದಲ ದಿನ ( ಶುಕ್ರವಾರ )₹ ₹32.10 ಕೋಟಿ
ಎರಡನೇ ದಿನ (ಶನಿವಾರ ) ₹ ₹40.59 ಕೋಟಿ

ಒಟ್ಟು ಗಳಿಕೆ - ₹72.69 ಕೋಟಿ

''ಬಾಲಿವುಡ್ ಹಂಗಾಮಾ''ದ ಈ ಲೆಕ್ಕಾಚಾರವನ್ನೇ ಚಿತ್ರತಂಡ ಕೂಡ ಒಪ್ಪಿಕೊಂಡಿದ್ದು ಭಾರತದಲ್ಲಿ ಚಿತ್ರದ ಎರಡು ದಿನದ ಗಳಿಕೆ ₹72.69 ಕೋಟಿ ಎಂದು ಅಧಿಕೃತವಾಗಿ ಘೋಷಿಸಿದೆ. ಇನ್ನು ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ''ಬಾರ್ಡರ್ 2'' ಚಿತ್ರಕ್ಕೆ ಎಲ್ಲಿಲ್ಲದ ಬೇಡಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿಯೂ ಕೂಡ ಜನ ಮುಗಿ ಬಿದ್ದು ನೋಡುತ್ತಿದ್ದು ಓರಾಯನ್ ಮಾಲ್.. ಮಾಲ್ ಆಫ್ ಏಷ್ಯಾ.. ಲುಲು ಮಾಲ್.. ರಾಯಲ್ ಮೀನಾಕ್ಷಿ ಮಾಲ್.. ಮಂತ್ರಿ ಮಾಲ್.. ಗ್ಲೋಬಲ್ ಮಾಲ್.. ಹೀಗೆ ಹಲವು ಕಡೆ ಇಂದಿನ (ಜನವರಿ 25 ) ಪ್ರದರ್ಶನದ ಟಿಕೆಟ್‌ಗಳು ಬಹುತೇಕ ಸೋಲ್ಡ್ ಔಟ್ ಆಗಿವೆ.

Border 2 Explosion Sunny Deol Shatters with Massive Day 2 Jump 100 Crore Milestone in Sight

ಸದ್ಯ ಈ ವರ್ಷದ ಆರಂಭದಲ್ಲಿ ಬಂದ ಅಮಿತಾಬ್ ಬಚ್ಚನ್ ಮೊಮ್ಮಗನ ಸಿನಿಮಾ ''ಇಕ್ಕೀಸ್'' ಚಿತ್ರವನ್ನು ''ಬಾರ್ಡರ್ 2'' ಹಿಂದಿಕ್ಕಿದೆ. ಇಂದು (ಜನವರಿ 25 ) ಚಿತ್ರದ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು ಬಾಲಿವುಡ್ ಪಂಡಿತರ ಪ್ರಕಾರ ಇಂದು (ಜನವರಿ 25) ''ಬಾರ್ಡರ್ 2'' 100 ಕೋಟಿಯ ಗಡಿಯನ್ನು ದಾಟಲಿದೆ. ನಾಳೆ ಗಣರಾಜ್ಯೋತ್ಸವದ ಪ್ರಯುಕ್ತ ರಜೆ ಇರುವ ಹಿನ್ನೆಲೆ ನಾಳೆಯೂ ಪ್ರೇಕ್ಷಕರಿಂದ ಚಿತ್ರಮಂದಿರ ತುಂಬಿ ತುಳುಕುವ ಸಾಧ್ಯತೆ ಇದೆ.

Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Discover the Border 2 Day 2 Box Office collection report. Sunny Deol’s latest war movie witnesses huge growth on Saturday, surpassing major competitors. Get the latest updates on theater occupancy, total earnings, and the 100-crore race.
Read more about: bollywood sunny deol
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X