Border 2 Box Office Day 15 ; ಶಾರುಖ್,ಸಲ್ಮಾನ್,ಆಮಿರ್ ನಂತರ ಹೊಸ ದಾಖಲೆ ಬರೆದ ಸನ್ನಿ ಡಿಯೋಲ್-ಬಾರ್ಡರ್ 2 ಧಮಾಕ

''ಅದೃಷ್ಟ'' ಅನ್ನೋದು ಅಷ್ಟು ಸುಲಭವಾಗಿ ಯಾರ ಸ್ವತ್ತು ಆಗಲ್ಲ. ರಾತ್ರೋರಾತ್ರಿ ''ಆರಕ್ಕೇರಿದವರು'' ಮಾರನೇ ದಿನವೇ ''ಮೂರಕ್ಕಿಳಿದು'' ಬಿಡುತ್ತಾರೆ. ''ಲಕ್'' ಅನ್ನುವ ''ಕಿಕ್'' ಅಷ್ಟು ಸುಲಭಕ್ಕೆ ಯಾರಿಗೂ ಹತ್ತಲ್ಲ. ಕಿಕ್ಕೇರಿದರೆ ಸುಲಭವಾಗಿ ಇಳಿಯಲ್ಲ. ಇದಕ್ಕೆ ಸನ್ನಿ ಡಿಯೋಲ್ ಸದ್ಯದ ಉದಾಹರಣೆ.

ಹೌದು, ಸನ್ನಿ ಡಿಯೋಲ್ .. ಒಂದ್ಕಾಲದ ಸೂಪರ್ ಸ್ಟಾರ್. 90ರ ದಶಕದಲ್ಲಿ ಒಂದಾದ ಮೇಲೊಂದರಂತೆ ಗೆಲುವುನ್ನ ಕಂಡ ಸನ್ನಿ ಡಿಯೋಲ್ ಅವನ್ನ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮರೆತೆ ಹೋಗಿದ್ದರು. ಬಾಲಿವುಡ್‌ನವರಿಗೆನೇ ಸನ್ನಿ ಡಿಯೋಲ್ ನೆನಪಿರಲಿಲ್ಲ. ಧಮೇಂದ್ರ ಮಗನಾದರೂ.. ಒಂದ್ಕಾಲದಲ್ಲಿ ಚಿನ್ನದ ಗಣಿ ತೆಗೆದಿದ್ದರೂ.. ಹಿಂದಿ ಚಿತ್ರರಂಗ ಸನ್ನಿ ಡಿಯೋಲ್ ಅವರನ್ನ ನಂಬಲಿಲ್ಲ. ಅವಕಾಶಗಳನ್ನ ಕೊಡಲಿಲ್ಲ. ಇದರಿಂದ ಕೆಲ ವರ್ಷಗಳ ಹಿಂದೆ ಸನ್ನಿ ಅಕ್ಷರಶಃ ಕಂಗಾಲಾಗಿದ್ದರು.

Border 2 Stands Tall Sunny Deol s Epic Defies the Dip Inches Closer to the 300 Crore Milestone

ಇಂಥಾ ಸನ್ನಿ ಡಿಯೋಲ್ ಅವರನ್ನ ಕೈ ಹಿಡಿದು ಮೇಲೆತ್ತಿದ್ದು, ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಇವರಿಗೆ ಬೆಲೆ ಬರುವಂತೆ ಮಾಡಿದ್ದು ಮತ್ತದೇ ''ಗದರ್‌'' ಸಿನಿಮಾ. 2000ನೇ ಇಸ್ವಿಯಲ್ಲಿ ಕೂಡ ಮುಳುಗುತ್ತಿದ್ದ ಸಮಯದಲ್ಲಿ ''ಗದರ್'' ಚಿತ್ರದ ಮೂಲಕ ಎದ್ದು ನಿಂತಿದ್ದ ಸನ್ನಿ ಡಿಯೋಲ್‌ 2023ರಲ್ಲಿ ''ಗದರ್ ''2 ಚಿತ್ರದ ಮೂಲಕ ಮತ್ತೆ ಮೈಕೊಡವಿ ಎದ್ದು ನಿಂತರು. ಸನ್ನಿ ಡಿಯೋಲ್ ಮುಖ ಚಹರೆ ಮರೆತ ಜನ ''ಗದರ್ 2'' ಚಿತ್ರವನ್ನ ಮುಗಿ ಬಿದ್ದು ನೋಡಿದರು. ಈಗ ''ಬಾರ್ಡರ್ 2'' ಸರದಿ.

ಹೌದು, ''ಬಾರ್ಡರ್ 2''.. ವರ್ಷದ ಆರಂಭದಲ್ಲಿ ಬಾಲಿವುಡ್‌ ಪಾಲಿಗೆ ಭಾಗ್ಯದ ಬಾಗಿಲು ತೆರೆಯುವಂತೆ ಮಾಡಿರುವ ಸಿನಿಮಾ. ದೇಶಭಕ್ತಿಯ ಕಥಾಹಂದರವನ್ನು ಹೊಂದಿರುವ ಈ ಚಿತ್ರ ಸದ್ಯ ಬಾಕ್ಸಾಫೀಸ್‌ನಲ್ಲಿ 15 ದಿನಗಳ ಯಶಸ್ವಿ ಪ್ರದರ್ಶನವನ್ನು ಪೂರೈಸಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಇಲ್ಲಿಯವರೆಗೆ ಕೇವಲ ಭಾರತದಲ್ಲಿ ₹ 297.25 ಕೋಟಿಯನ್ನು ಗಳಿಸಿದೆ.

''ಸ್ಯಾಕ್ನಿಲ್'' ಪ್ರಕಾರ ''ಬಾರ್ಡರ್ 2'' ಚಿತ್ರದ 15 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ದಿನ ಗಳಿಕೆ

ಮೊದಲನೇ ದಿನ [ಶುಕ್ರವಾರ] ₹ 30.00 ಕೋಟಿ
ಎರಡನೇ ದಿನ [1ನೇ ಶನಿವಾರ] ₹ 36.50 ಕೋಟಿ
ಮೂರನೇ ದಿನ [1ನೇ ಭಾನುವಾರ] ₹ 54.50 ಕೋಟಿ
ನಾಲ್ಕನೇ ದಿನ [1ನೇ ಸೋಮವಾರ] ₹ 59.00 ಕೋಟಿ
ಐದನೇ ದಿನ [1ನೇ ಮಂಗಳವಾರ] ₹ 20.00 ಕೋಟಿ
ಆರನೇ ದಿನ [1ನೇ ಬುಧವಾರ] ₹ 13.00 ಕೋಟಿ
ಏಳನೇ ದಿನ [1ನೇ ಗುರುವಾರ] ₹ 11.25 ಕೋಟಿ


ಮೊದಲ ವಾರದ ಒಟ್ಟು ಗಳಿಕೆ ₹ 224.25 ಕೋಟಿ

ಎಂಟನೇ ದಿನ [2ನೇ ಶುಕ್ರವಾರ] ₹ 10.75 ಕೋಟಿ
ಒಂಬತ್ತನೇ ದಿನ [2ನೇ ಶನಿವಾರ] ₹ 17.75 ಕೋಟಿ
ಹತ್ತನೇ ದಿನ [2ನೇ ಭಾನುವಾರ] ₹ 22.50 ಕೋಟಿ
ಹನ್ನೊಂದನೇ ದಿನ [2ನೇ ಸೋಮವಾರ] ₹ 5.75 ಕೋಟಿ
ಹನ್ನೆರಡನೇ ದಿನ [2ನೇ ಮಂಗಳವಾರ] ₹ 5.75 ಕೋಟಿ
ಹದಿಮೂರನೇ ದಿನ [2ನೇ ಬುಧವಾರ] ₹ 4.15 ಕೋಟಿ
ಹದಿನಾಲ್ಕನೇ ದಿನ [2ನೇ ಗುರುವಾರ] ₹ 3.50 ಕೋಟಿ


ಎರಡನೇ ವಾರದ ಒಟ್ಟು ಗಳಿಕೆ ₹ 70.15 ಕೋಟಿ

ಹದಿನೈದನೇ ದಿನ [3ನೇ ಶುಕ್ರವಾರ] ₹ 2.85 ಕೋಟಿ

ಒಟ್ಟು 15 ದಿನಗಳ ಗಳಿಕೆ ₹ 297.25 ಕೋಟಿ

Border 2 Stands Tall Sunny Deol s Epic Defies the Dip Inches Closer to the 300 Crore Milestone

ಖಾನ್‌ತ್ರಯರ ಸಾಲಿನಲ್ಲಿ ಸನ್ನಿ ಡಿಯೋಲ್

ಅಂದ್ಹಾಗೇ ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಕೀರ್ತಿಗೆ ಸದ್ಯ ರಣ್ವೀರ್ ಸಿಂಗ್ ಪಾತ್ರರಾಗಿದ್ದಾರೆ. ''ಧುರಂಧರ್ 2'' ಮೂಲಕ ಹತ್ ಹತ್ರ 1000 ಕೋಟಿಯನ್ನು ಭಾರತದಲ್ಲಿ ದೋಚಿದ್ದಾರೆ. ವಿಶೇಷ ಅಂದರೆ ರಣವೀರ್ ಸಿಂಗ್ ಹೊರತು ಪಡಿಸಿ ಬೇರೆ ಯಾರು ಈ ಸಾಧನೆ ಮಾಡಿಲ್ಲ. ಬಾಲಿವುಡ್‌ನ ಖಾನ್‌ಗಳಾದ ಆಮಿರ್ ಖಾನ್, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರಿಂದ ಕೂಡ ಈ ಪವಾಡ ಸಾಧ್ಯವಾಗಿಲ್ಲ. ಹೆಚ್ಚೆಂದರೆ 300, 400 ಅಥವಾ 500 ಕೋಟಿಗೂ ಅಧಿಕ ಹಣವನ್ನಷ್ಟೇ ಈ ಮೂವರು ಗಳಿಸಿದ್ದಾರೆ. ಈ ಸಾಲಿಗೆ ಈಗ ಸನ್ನಿ ಡಿಯೋಲ್ ಕೂಡ ಸೇರಿಕೊಂಡಿದ್ದಾರೆ.

ಹೌದು, ಇಲ್ಲಿಯವರೆಗೆ ಸಲ್ಮಾನ್ ಖಾನ್ ಅವರ 3 ಚಿತ್ರಗಳು 300 ಕೋಟಿಯ ಗಡಿಯನ್ನು ದಾಟಿವೆ. ''ಪಠಾಣ್'' ಮತ್ತು ''ಜವಾನ್'' ಮೂಲಕ ಶಾರುಖ್ ಖಾನ್ ಎರಡು ಬಾರಿ 300 ಕೋಟಿಯ ಗಡಿಯನ್ನು ದಾಟಿದ್ದಾರೆ. ಆಮಿರ್ ಖಾನ್ ಅವರ ''ಪಿಕೆ'' ಮತ್ತು ''ದಂಗಲ್'' 300 ಕೋಟಿಗೂ ಅಧಿಕ ಹಣ ಗಳಿಸಿವೆ. ಈ ಸಾಲಿಗೆ ಈಗ ಸನ್ನಿ ಡಿಯೋಲ್ ಕೂಡ ಸೇರಿಕೊಂಡಿದ್ದು ಈ ಹಿಂದೆ ಗದರ್ ಮೂಲಕ ತ್ರಿಶತಕ ಸಿಡಿಸಿದ್ದ ಸನ್ನಿ ಡಿಯೋಲ್ ಈಗ 68ನೇ ವರ್ಷದಲ್ಲಿ ಮತ್ತೊಮ್ಮೆ ಬಾಕ್ಸಾಫೀಸ್‌ನಲ್ಲಿ 300 ಕೋಟಿಗೂ ಅಧಿಕ ಹಣ ದೋಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಅಪರೂಪದ ದಾಖಲೆಯನ್ನು ಬರೆದಿದ್ದಾರೆ.

Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Despite a mid-week dip, the Border 2 juggernaut is unstoppable! With ₹297 Crore in the bank, Sunny Deol is about to make history. Will the weekend surge push it past the ₹300 Cr milestone? Get the full breakdown here.
Read more about: sunny deol bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X