'Mastiii 4' Box Office Day 8 ; ಒಂದೇ ವಾರಕ್ಕೆ ಮೂವರು ಸ್ನೇಹಿತರ ಮಸ್ತಿ ಖತಂ-ನಿರ್ಮಾಪಕ ಕಳೆದುಕೊಂಡಿದ್ದೆಷ್ಟು ?

ಕನ್ನಡ ಚಿತ್ರರಂಗವನ್ನು ಹೊರತು ಪಡಿಸಿದರೆ ಅಕ್ಕ-ಪಕ್ಕದ ರಾಜ್ಯಗಳಲ್ಲಿನ ಚಿತ್ರರಂಗದವರಿಗೆ ಸದ್ಯ ಸಿಕ್ವೆಲ್ ಜ್ವರ ಹಿಡಿದಿದೆ. ನಿಜಾ.. ನಮ್ಮಲ್ಲಿ ಕೂಡ ಈ ಟ್ರೆಂಡ್ ಇದೆ. ಆದರೆ.. ಅನ್ಯ ಭಾಷೆಯವರಿಗೆ ಹೋಲಿಸಿದರೆ ಪ್ರಯತ್ನಗಳು ನಡೆಯುತ್ತಿರುವುದು ಕಡಿಮೆ. ಬೇರೆ ಭಾಷೆಗಳಲ್ಲಿ ಹಳೆಯ ಗೆಲುವನ್ನೇ ಟ್ರಂಪ್ ಕಾರ್ಡ್‌ ಆಗಿ ಉಪಯೋಗಿಸಿಕೊಂಡು ಹಲವರು ಇಲ್ಲಿ ದುಡ್ಡು ಬಾಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಯಾರನ್ನೇ ಕೇಳಿ..

ಎಲ್ಲರಲ್ಲಿಯೂ ತಮ್ಮದೇ ಆದ ಯೂನಿವರ್ಸ್‌ ರೆಡಿಯಾಗಿರುತ್ತೆ. ಆದರೆ ಹೀಗೆ ರೆಡಿಯಾದವರಿಗೆಲ್ಲಾ ಪ್ರೇಕ್ಷಕರು ಪ್ರತಿ ಬಾರಿ ರತ್ನಗಂಬಳಿ ಹಾಕಿ ಸ್ವಾಗತವನ್ನು ಮಾಡುತ್ತಿಲ್ಲ. ಬದಲಿಗೆ ಸಾರಾಸಗಟವಾಗಿ ತಮಗೆ ಇಷ್ಟವಾಗದ ಸಿಕ್ವೆಲ್‌ಗಳನ್ನು ರಿಜೆಕ್ಟ್ ಮಾಡುತ್ತಿದ್ದಾರೆ. ಇನ್ನು ಬದಲಾದ ಈ ಕಾಲದಲ್ಲಿ ಕೇವಲ ಸ್ಟಾರ್‌ ವ್ಯಾಲ್ಯೂ ಎನ್‌ ಕ್ಯಾಶ್ ಮಾಡಿಕೊಂಡು ಕ್ಯಾಶ್ ಎಣಿಸುವುದು ತುಂಬಾನೇ ಕಷ್ಟ.

box-office-battle-mastiii-4-day-8-collection-plummets-ahead-of-tere-ishq-mein-release

ಇದಕ್ಕೆ ಕೈಗನ್ನಡಿ ಎಂಬಂತೆ ''ವಾರ್ 2''.. ''ಧಡಕ್ 2''.. ''ಸರ್ದಾರ್ 2''.. ''ಕೇಸರಿ 2''..ಹೀಗೆ ಹಲವು ಚಿತ್ರಗಳು ಸೋತಿವೆ. ಪ್ರೇಕ್ಷಕರ ನಿರೀಕ್ಷೆಯ ಮಟ್ಟ ತಲುಪಲಾರದೇ ನಿರಾಸೆಯನ್ನು ಮಾಡಿವೆ. ಈ ಸಾಲಿಗೆ ಈಗ ''ಮಸ್ತಿ 4'' ಅಧಿಕೃತವಾಗಿ ಸೇರಿಕೊಂಡಿದೆ.

ಹೌದು, ಕಳೆದ ವಾರ (ನವೆಂಬರ್ 21 ) ಬಿಡುಗಡೆಯಾದ ವಿವೇಕ್ ಓಬೆರಾಯ್, ರಿತೇಶ್ ದೇಶಮುಖ್ ಮತ್ತು ಅಫ್ತಾಬ್ ಶಿವದಾಸನಿ ಅಭಿನಯದ ''ಮಸ್ತಿ 4'' ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸುವಲ್ಲಿ ವಿಫಲವಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಚಿತ್ರ ಬಿಡುಗಡೆಯಾಗಿ ಒಂದು ವಾರ ಆದರೂ ಕೂಡ ಈ ಚಿತ್ರದ ಗಳಿಕೆ ₹ 15 ಕೋಟಿಯ ಗಡಿಯನ್ನು ಕೂಡ ಪಾರು ಮಾಡಲಿಲ್ಲ.

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಈ 7 ದಿನದಲ್ಲಿ ಈ ಚಿತ್ರ ಕೇವಲ ₹ 13.85 ಕೋಟಿಯನ್ನಷ್ಟೇ ಗಳಿಸಿದೆ. ಈ ಮೂಲಕ ಸತತ ಸೋಲುಗಳಿಂದ ಕಂಗಾಲಾದ ಬಾಲಿವುಡ್‌ನ ಗಾಯದ ಮೇಲೆ ಮತ್ತೊಂದು ಬರೆಯನ್ನು ಈ ಚಿತ್ರ ಎಳೆದಿದೆ.

box-office-battle-mastiii-4-day-8-collection-plummets-ahead-of-tere-ishq-mein-release

ಸ್ಯಾಕ್ನಿಲ್ ಪ್ರಕಾರ ಮಸ್ತಿ 4 ಚಿತ್ರದ ಮೊದಲ ವಾರದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ ( ಶುಕ್ರವಾರ ) : ₹ 2.75 ಕೋಟಿ
ಎರಡನೇ ದಿನ ( ಶನಿವಾರ ) : ₹ 2.75 ಕೋಟಿ
ಮೂರನೇ ದಿನ (ಭಾನುವಾರ ) : ₹3 ಕೋಟಿ
ನಾಲ್ಕನೇ ದಿನ ( ಸೋಮವಾರ ) : ₹1.6 ಕೋಟಿ
ಐದನೇ ದಿನ ( ಮಂಗಳವಾರ) : ₹1.6 ಕೋಟಿ
ಆರನೇ ದಿನ ( ಬುಧವಾರ ) : ₹1.15 ಕೋಟಿ
ಏಳನೇ ದಿನ ( ಗುರುವಾರ ) : ₹1 ಕೋಟಿ

ಒಟ್ಟು ಗಳಿಕೆ : ₹ 13.85 ಕೋಟಿ

ಹೀಗೆ ಕೇವಲ 7 ದಿನದಲ್ಲಿ ₹ 13.85 ಕೋಟಿಯನ್ನು ಗಳಿಸಿರುವ ಈ ಚಿತ್ರ ಇಂದು ಅಂದಾಜು ₹ 15ರಿಂದ ₹ 25 ಲಕ್ಷದವರೆಗೆ ಗಳಿಸಬಹುದು ಎನ್ನುವ ಲೆಕ್ಕಾಚಾರವನ್ನು ''ಸ್ಯಾಕ್ನಿಲ್'' ಹಾಕಿದೆ. ಇನ್ನು ಇಂದು ( ನವೆಂಬರ್ 28 ) ಧನುಷ್ ಮತ್ತು ಕೃತಿ ಸನೋನ್ ಅಭಿನಯದ ''ತೇರೆ ಇಷ್ಕ್ ಮೇ'' ಚಿತ್ರ ಭಾರತದೆಲ್ಲೆಡೆ ತೆರೆಗೆ ಬಂದಿದೆ.

ಇನ್ನು ವಿಜಯ್ ವರ್ಮಾ ಮತ್ತು ಫಾತಿಮಾ ಸನ್ಹಾ ಶೇಖ್ ಅಭಿನಯದ ''ಗುಸ್ತಾಖ್ ಇಷ್ಕ್'' ಕೂಡ ಇಂದು ಬಿಡುಗಡೆಯಾಗಿದೆ. ಕೀರ್ತಿ ಸುರೇಶ್ ಅಭಿನಯದ ''ರಿವಾಲ್ವರ್ ರಾಣಿ'' ಉಪೇಂದ್ರ ಪ್ರಮುಖ ಪಾತ್ರದಲ್ಲಿರುವ ''ಆಂಧ್ರ ಕಿಂಗ್ ತಾಲೂಕಾ'' ಚಿತ್ರಗಳು ಕೂಡ ಇಂದು ತೆರೆಗೆ ಅಪ್ಪಳಿಸಿವೆ. ಈ ಹಿನ್ನೆಲೆ ಹಲವಡೆ ''ಮಸ್ತಿ 4'' ಚಿತ್ರವನ್ನು ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಲಾಗಿದೆ.

ಇದಕ್ಕೆ ಪುರಾವೆ ಎನ್ನುವಂತೆ ಬೆಂಗಳೂರಿನಲ್ಲಿ ನಾಳೆ ( ನವೆಂಬರ್ 29 ) ಈ ಚಿತ್ರಕ್ಕೆ ಕೇವಲ ಆರೇ ಆರು ಪ್ರದರ್ಶನಗಳನ್ನು ನೀಡಲಾಗಿದೆ. ಮುಂಬೈನಲ್ಲಿ ಪ್ರದರ್ಶನಗಳ ಸಂಖ್ಯೆ ಹೆಚ್ಚಿವೆಯಾದರೂ ಎಲ್ಲೆಡೆ ಪ್ರೇಕ್ಷಕರ ಬರ ಇದೆ. ಹೀಗಾಗಿ ಈ ಚಿತ್ರ ₹15 ಕೋಟಿಯ ಗಡಿಯನ್ನಾದರೂ ದಾಟುತ್ತಾ..? ಎನ್ನುವ ಪ್ರಶ್ನೆ ಸದ್ಯಕ್ಕೆ ಚಿತ್ರ ಪಂಡಿತರನ್ನು ಕಾಡುತ್ತಿದೆ.

ಅಂದ್ಹಾಗೇ ಕೊಯಿ ಮೊಯಿ ವರದಿಯ ಪ್ರಕಾರ ''ಮಸ್ತಿ 4'' ಚಿತ್ರಕ್ಕೆ ₹50 ಕೋಟಿ ಹಣವನ್ನು ಹೂಡಲಾಗಿದೆ. ಇನ್ನು ಹೇಳಿ ಕೇಳಿ ಈ ಚಿತ್ರ ಅಡಲ್ಟ್ ಕಾಮಿಡಿ ಚಿತ್ರ. ಹೀಗಾಗಿ ಚಿತ್ರದ ಸ್ಯಾಟ್‌ಲೈಟ್ ಹಕ್ಕುಗಳ ವಿಚಾರದಲ್ಲಿ ಈ ಚಿತ್ರಕ್ಕೆ ಹಿನ್ನೆಡೆಯಾಗಿರುವ ಸಾಧ್ಯತೆ ಇದೆ. ಓಟಿಟಿಯವರು ಕೂಡ ಹೆಚ್ಚಿನ ಹಣ ನೀಡಲಾರರು. ಈ ಹಿನ್ನೆಲೆ ''ಮಸ್ತಿ 4'' ಚಿತ್ರವನ್ನು ನಿರ್ಮಾಣ ಮಾಡಿದ ತಪ್ಪಿಗೆ ನಿರ್ಮಾಪಕರು ಕಳೆದುಕೊಂಡ ಹಣದ ಲೆಕ್ಕಾಚಾರವನ್ನು ಸದ್ಯ ಹಲವರು ಹಾಕುತ್ತಿದ್ದಾರೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
'Mastiii 4' faces tough competition and records a further drop on Day 8. Is the new film 'Tere Ishq Mein' ending the comedy's theatrical run?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X