De De Pyaar De 2 BO Day 3 ; ಮ್ಯಾಜಿಕ್ ಮಾಡ್ತಾ ಅಜಯ್ ದೇವಗನ್-ಮಾಧವನ್ ಕಾಮಿಡಿ ? 3 ದಿನದಲ್ಲಿ ಗಳಿಸಿದ್ದೆಷ್ಟು ?

ಹಿಂದಿ ಚಿತ್ರರಂಗದಲ್ಲಿ ಈ ವರ್ಷ ಹೇಳಿಕೊಳ್ಳುವಂತಹ ಪವಾಡ ನಡೆದಿಲ್ಲ. ಈ ಕಾರಣಕ್ಕೆ ಅಜಯ್ ದೇವಗನ್, ಆರ್. ಮಾಧವನ್ ಹಾಗೂ ರಕುಲ್ ಪ್ರೀತ್ ಸಿಂಗ್ ಅಭಿನಯದ ''ದೇ ದೇ ಪ್ಯಾರ್ ದೇ''2 ಚಿತ್ರದ ಮೇಲೆ ಎಲ್ಲರ ಕಣ್ಣಿತ್ತು. ಮೊದಲ ದಿನ ಚಿತ್ರ ಉತ್ತಮವಾದ ಮೊತ್ತ ಕಲೆ ಹಾಕುವ ನಿರೀಕ್ಷೆ ಇತ್ತು. ಆದರೆ ಈ ನಿರೀಕ್ಷೆ ಹುಸಿಯಾಯ್ತು.

ಟ್ರೇಲರ್ ಮತ್ತು ಹಾಡುಗಳು ಸದ್ದು ಮಾಡಿದ್ದರೂ ಕೂಡ ಅದ್ಯಾಕೋ ಪ್ರೇಕ್ಷಕರು ಮೊದಲ ದಿನ ಚಿತ್ರಮಂದಿರದತ್ತ ಬರುವ ಆಸಕ್ತಿ ತೋರಿಸಿದ್ದು ಕಡಿಮೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಾಲಿವುಡ್‌ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಮೊದಲ ದಿನ ಈ ಚಿತ್ರ ಗಳಿಸಿದ್ದು ಕೇವಲ ₹ 8.75 ಕೋಟಿ ಮಾತ್ರ.

Box Office Fireworks Ajay Devgn Starrer De De Pyaar De 2 Shows Massive Sunday Surge

ಹೀಗಾಗಿ ಅಕ್ಷಯ್ ಕುಮಾರ್ ಅವರಂತೆಯೇ ಅಜಯ್ ದೇವಗನ್‌ಗೆ ಅದೃಷ್ಟ ಕೈ ಕೊಟ್ಟಿದೆ ಎಂದು ಬಾಲಿವುಡ್‌ನಲ್ಲಿ ಹಲವರು ಮಾತನಾಡಿಕೊಂಡರು. ಆದರೆ.. ಎರಡನೇ ದಿನ ಚಿತ್ರದ ಗಳಿಕೆಯಲ್ಲಿ ಚೇತರಿಕೆ ಕಂಡು ಬಂತು. ''ಸ್ಯಾಕ್ನಿಲ್'' ಪ್ರಕಾರ ಚಿತ್ರ ಎರಡನೇ ದಿನ ಅಂದರೆ ಶನಿವಾರ ( ನವೆಂಬರ್ 15 ) ₹ 12.25 ಕೋಟಿ ಗಳಿಸುವಲ್ಲಿ ಯಶಸ್ವಿಯಾಯ್ತು.

ಇನ್ನು ನಿನ್ನೆ ಭಾನುವಾರ ( ನವೆಂಬರ್ 16 ) ಆದ ಕಾರಣ ಚಿತ್ರದ ಗಳಿಕೆ ಇನ್ನೂ ಹೆಚ್ಚಾಗುತ್ತೆ ಎಂದು ಹಲವರು ಅಂದುಕೊಂಡಿದ್ದರು. ಬಾಲಿವುಡ್‌ ಪಂಡಿತರು ₹15 ಕೋಟಿಗೂ ಅಧಿಕ ಹಣ ಗಳಿಸುತ್ತೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದರು.

ಆದರೆ.. ''ದೇ ದೇ ಪ್ಯಾರ್ ದೇ 2'' ನಿನ್ನೆ ( ಭಾನುವಾರ ) ಗಳಿಸಿದ್ದು ಕೇವಲ ₹13.75 ಕೋಟಿ ಮಾತ್ರ. ಈ ಮೂಲಕ ಮೂರು ದಿನದಲ್ಲಿ ₹ 34.75 ಕೋಟಿಯನ್ನು ಈ ಕಾಮಿಡಿ ಎಂಟ್ರಟೇನರ್ ಚಿತ್ರ ಕೊಳ್ಳೆ ಹೊಡೆದಿದೆ.

''ಸ್ಯಾಕ್ನಿಲ್'' ಪ್ರಕಾರ ಚಿತ್ರದ ಮೊದಲ 3 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ ( ಶುಕ್ರವಾರ ) : ₹8.75 ಕೋಟಿ
ಎರಡನೇ ದಿನ ( ಶನಿವಾರ ) : ₹12.25 ಕೋಟಿ
ಮೂರನೇ ದಿನ ( ಭಾನುವಾರ ) : ₹13.75 ಕೋಟಿ

ಒಟ್ಟು ಗಳಿಕೆ : ₹34.75 ಕೋಟಿ

box-office-fireworks-ajay-devgn-starrer-de-de-pyaar-de-2-shows-massive-sunday-surge

ನಿಜಾ.. ಅಜಯ್ ದೇವಗನ್ ಹೆಸರಿಗೆ ಈ ಮೂರು ದಿನದ ಗಳಿಕೆ ಕಮ್ಮಿನೇ. ಆದರೆ ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆ ಎಂಬಂತೆ ಸದ್ಯ ₹ 34.75 ಕೋಟಿಗೆ ತೃಪ್ತಿಯನ್ನು ಪಟ್ಟಿರುವ ಚಿತ್ರತಂಡಕ್ಕೆ ಮುಂಬರುವ ದಿನಗಳಲ್ಲಿ ಚಿತ್ರದ ಗಳಿಕೆಯಲ್ಲಿ ಇನ್ನೂ ಏರಿಕೆಯಾಗುತ್ತೆ ಎನ್ನುವ ವಿಶ್ವಾಸದಲ್ಲಿ ಇದೆ.

ಇನ್ನೂ ₹ 34.75 ಕೋಟಿ ಗಳಿಸುವ ಮೂಲಕ ''ದೇ ದೇ ಪ್ಯಾರ್ ದೇ 2'' ಬಾಕ್ಸಾಫೀಸ್‌ನಲ್ಲಿ ಈ ವರ್ಷ ಬಂದ ಮೂರು ರೊಮ್ಯಾಂಟಿಕ್ ಚಿತ್ರಗಳನ್ನು ಹಿಂದಿಕ್ಕಿದೆ. ಆ ಪೈಕಿ ಕರಣ್ ಜೋಹರ್ ನಿರ್ಮಾಣದ ಎರಡು ಚಿತ್ರಗಳಿರುವುದು ವಿಶೇಷ.

ಹೌದು, ಈ ವರ್ಷ ತೆರೆಗೆ ಬಂದ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಜಾಹ್ನವಿ ಕಪೂರ್ ಅಭಿನಯದ, ಕರಣ್ ಜೋಹರ್ ನಿರ್ಮಾಣದ, ''ಧಡಕ್ 2''ಚಿತ್ರಮಂದಿರಗಳಲ್ಲಿ 17 ದಿನ ಪ್ರದರ್ಶನ ಕಂಡಿತ್ತು. ಈ 17 ದಿನದಲ್ಲಿ ಕೇವಲ ₹22.45 ಕೋಟಿಯನ್ನಷ್ಟೇ ಚಿತ್ರ ಗಳಿಸಿತ್ತು. ಮತ್ತೊಂದು ಕಡೆ ಕರಣ್ ಜೋಹರ್ ನಿರ್ಮಾಣದಲ್ಲಿ ಬಂದ ವರುಣ್ ಧವನ್ ಮತ್ತು ಜಾಹ್ನವಿ ಕಪೂರ್ ಅಭಿನಯದ '' ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಮೊದಲ ಮೂರು ದಿನ ₹32.12 ಕೋಟಿಯನ್ನು ಗಳಿಸಿತ್ತು. ಈ ಎರಡು ರೊಮ್ಯಾಂಟಿಕ್ ಚಿತ್ರದ ಗಳಿಕೆಯನ್ನು ''ದೇ ದೇ ಪ್ಯಾರ್ ದೇ 2'' ಹಿಂದಿಕ್ಕಿದೆ.

ಒಟ್ನಲ್ಲಿ ಸದ್ಯ ''ದೇ ದೇ ಪ್ಯಾರ್ ದೇ 2'' ಮೊದಲ ಮೂರು ದಿನದಲ್ಲಿ ₹ 34.75 ಕೋಟಿ ಗಳಿಸಿದೆ. ಇಂದಿನಿಂದ ಈ ಚಿತ್ರದ ಅಸಲಿ ಅಗ್ನಿ ಪರೀಕ್ಷೆ ಶುರುವಾಗಲಿದೆ. ಈ ಪರೀಕ್ಷೆಯಲ್ಲಿ ಅಜಯ್ ದೇವಗನ್ ಪಾಸಾಗುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
'De De Pyaar De 2' is on a box office rampage! Read the full day 3 collection report as Ajay Devgn's film shows massive growth, zooming past ₹34 Cr and leaving Dhadak 2 behind.
Read more about: ajay devgn bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X