Jolly LLB 3 Box Office Day 2 ; ಜಾದೂ ಮಾಡಿದ ಜಾಲಿ, ಅಕ್ಷಯ್-ಅರ್ಷದ್ ಅಬ್ಬರಕ್ಕೆ ಡಬಲ್ ಆಯ್ತು 2ನೇ ದಿನದ ಕಲೆಕ್ಷನ್
ಯಾವುದೇ ಚಿತ್ರವಾದರು ಕೂಡ ಬಿಡುಗಡೆಯಾದ ನಂತರ ಚಿತ್ರಮಂದಿರ ತುಂಬಬೇಕು, ಚಿತ್ರ ಗೆಲ್ಲಬೇಕೆಂದರೆ ಯುವ ಸಮೂಹ ಚಿತ್ರಮಂದಿರಕ್ಕೆ ಬರಬೇಕು. ಮನೆ ಮಂದಿಯೆಲ್ಲ ಜೊತೆಯಾಗಿ ಬಂದು ಚಿತ್ರವನ್ನು ನೋಡಬೇಕು. ಆಗಲೇ ಆ ಚಿತ್ರ ಗೆಲ್ಲಲು ಸಾಧ್ಯ. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯಲು ಸಾಧ್ಯ. ಆದರೆ ಈಗೀಗ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ.
ಅಂಗೈಯಲ್ಲಿಯೇ ಮನರಂಜನೆ ಇರುವಾಗ ಚಿತ್ರಮಂದಿರಕ್ಕೆ ಯಾಕೆ ಹೋಗಬೇಕೆನ್ನುವುದು ಅನೇಕರ ವಾದ. ಹಾಗಂಥ.. ಎಲ್ಲ ಚಿತ್ರವನ್ನು ಎಲ್ಲರೂ ಓಟಿಟಿಯಲ್ಲಿ ನೋಡುವುದಿಲ್ಲ. ಅಲ್ಲೊಂದು.. ಇಲ್ಲೊಂದು.. ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತವೆ. ಬಾಕ್ಸಾಫೀಸ್‌ನಲ್ಲಿ ಹಣವನ್ನು ಕೂಡ ಗಳಿಸುತ್ತವೆ. ಇದಕ್ಕೆ ಸದ್ಯ ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ಅಭಿನಯದ ''ಜಾಲಿ ಎಲ್‌ಎಲ್‌ಬಿ 3'' ಚಿತ್ರ ಅತ್ಯುತ್ತಮ ಉದಾಹರಣೆ.

ಹೌದು, ಕಳೆದ ಶುಕ್ರವಾರ (ಸೆಪ್ಟೆಂಬರ್ 19) ತೆರೆಗೆ ಬಂದ ''ಜಾಲಿ ಎಲ್‌ಎಲ್‌ಬಿ 3'' ಬಾಕ್ಸಾಫೀಸ್‌ನಲ್ಲಿ ಜಾದೂ ಮಾಡುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಚಿತ್ರದ ಎರಡನೇ ದಿನದ ಗಳಿಕೆಯಲ್ಲಿ 57 % ಏರಿಕೆ ಕಂಡು ಬಂದಿದೆ. ಮೊದಲ ದಿನ ₹ 12.75 ಕೋಟಿ ಗಳಿಸಿದ್ದ ''ಜಾಲಿ ಎಲ್‌ಎಲ್‌ಬಿ 3'' ಚಿತ್ರ ಎರಡನೇ ದಿನ ₹20 ಕೋಟಿ ಹಣ ಗಳಿಸಿದೆ. ಈ ಮೂಲಕ ಎರಡು ದಿನದಲ್ಲಿ ಚಿತ್ರ ₹ 32 ಕೋಟಿ ಹಣ ಗಳಿಸಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿಯನ್ನು ಮಾಡಿದೆ.
''ಸ್ಯಾಕ್ನಿಲ್'' ಪ್ರಕಾರ ''ಜಾಲಿ ಎಲ್‌ಎಲ್‌ಬಿ 3'' ಚಿತ್ರದ ಮೊದಲ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ
ಮೊದಲ ದಿನ [ ಶುಕ್ರವಾರ] ₹ 12.75 ಕೋಟಿ
ಎರಡನೇ ದಿನ [ಶನಿವಾರ ] ₹ 20 ಕೋಟಿ
ಒಟ್ಟು ಗಳಿಕೆ ₹ 32.75 ಕೋಟಿ
ಇನ್ನೂ ಆಕ್ಯುಪೆನ್ಸಿ ವಿಚಾರಕ್ಕೆ ಬಂದರೆ ಮೊದಲ ದಿನಕ್ಕಿಂತ ಎರಡನೇ ದಿನ ಜನಸಂದಣಿ ಹೆಚ್ಚು ಕಂಡು ಬಂದಿದೆ. ಮುಂಬೈನಲ್ಲಿ ಮೊದಲ ದಿನ 38.50% ಆಕ್ಯುಪೆನ್ಸಿ ಕಂಡು ಬಂದರೆ ದೆಹಲಿಯಲ್ಲಿ 45.00%, ಪುಣೆಯಲ್ಲಿ 41.75%, ಆಕ್ಯುಪೆನ್ಸಿ ಕಂಡು ಬಂದಿದೆ. ಇನ್ನು ಜಾಲಿಗೆ ದಕ್ಷಿಣದ ಭಾರತದಲ್ಲಿ ಕೂಡ ಡಿಮ್ಯಾಂಡ್ ಇದೆ. ಇದಕ್ಕೆ ಪುರಾವೆ ಎನ್ನುವಂತೆ ಬೆಂಗಳೂರಿನಲ್ಲಿ 46.50%, ಚೆನ್ನೈನಲ್ಲಿ 44.50% ಮತ್ತು ಹೈದರಾಬಾದ್‌ನಲ್ಲಿ 31.50% ಆಕ್ಯುಪೆನ್ಸಿ ನಿನ್ನೆ (ಸೆಪ್ಟೆಂಬರ್ 20) ಕಂಡು ಬಂದಿದೆ.
ನಿನ್ನೆ ಮತ್ತು ಮೊನ್ನೆ ಪ್ರೇಕ್ಷಕರಿಂದ ವ್ಯಕ್ತವಾದ ಅಭಿಪ್ರಾಯಗಳಿಂದ ಮತ್ತು ವಿಮರ್ಷಕರು ಆಡಿರುವ ಮಾತುಗಳಿಂದ ಇಂದು (ಸೆಪ್ಟೆಂಬರ್ 21) ಚಿತ್ರದ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಟ್ರೇಡ್ ವಿಶ್ಲೇಷಕರ ಪ್ರಕಾರ ನೂರು ಕೋಟಿಯ ಗಡಿಯನ್ನು ''ಜಾಲಿ ಎಲ್‌ಎಲ್‌ಬಿ 3'' ಅನಾಯಾಸವಾಗಿ ದಾಟಲಿದ್ದು, ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮುನ್ನ ₹150 ಕೋಟಿಯನ್ನು ಈ ಚಿತ್ರ ಗಳಿಸುವ ನಿರೀಕ್ಷೆ ಇದೆ.

ಹಾಗೊಂದು ವೇಳೆ ಈ ಲೆಕ್ಕಾಚಾರ ಸರಿಯಾದರೆ ''ಜಾಲಿ ಎಲ್‌ಎಲ್‌ಬಿ 3'' ಬಾಕ್ಸಾಫೀಸ್‌ನಲ್ಲಿ ಗೆದ್ದಂತೆ ಆಗಲಿದೆ. ಯಾಕೆಂದರೆ.. ''ಬಾಲಿವುಡ್ ಹಂಗಾಮಾ'' ವರದಿಯ ಪ್ರಕಾರ ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಅಂದರೆ ₹80 ಕೋಟಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











