Tere Ishk Mein BO Day 2 ; ಬಾಕ್ಸಾಫೀಸ್‌ನಲ್ಲಿ ಧನುಷ್ ಧಮಾಕ - 2ನೇ ದಿನ ಬಂಪರ್ ಬೆಳೆ ಬೆಳೆದ ತೇರೆ ಇಷ್ಕ್ ಮೇ

ಕನ್ನಡ ಚಿತ್ರರಂಗದ ಹಲವು ಸ್ಟಾರ್‌ಗಳು ಪ್ಯಾನ್ ಇಂಡಿಯಾ ಜ್ವರದಿಂದ ಬಳಲುತ್ತಿದ್ದಾರೆ. ಆದರೆ .. ಪಕ್ಕದ ಮನೆಯಲ್ಲಿ ಈ ಜ್ವರದ ಲಕ್ಷಣಗಳಿಲ್ಲ. ಯಾಕೆಂದರೆ.. ಚಿತ್ರರಂಗದ ಅಳಿವು ಉಳಿವು ಇವರಿಗೆ ಚೆನ್ನಾಗಿ ಗೊತ್ತು. ಹೀಗಾಗಿ ವರ್ಷಕ್ಕೆ ಕಡಿಮೆ ಅಂದರೂ ಮೂರರಿಂದ ನಾಲ್ಕು ಚಿತ್ರವನ್ನಾದರೂ ಹಲವು ಸೂಪರ್ ಸ್ಟಾರ್‌ಗಳು ಮಾಡುತ್ತಲೇ ಬರುತ್ತಿದ್ದಾರೆ. ಸೋಲು ಗೆಲುವು ಏನೇ ಇರಲಿ ಅಭಿಮಾನಿಗಳಿಗೆ...

ಮನರಂಜನೆಯ ರಸದೌತಣವನ್ನು ನಿರಂತರವಾಗಿ ಬಡಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆ ಪೈಕಿ ಧನುಷ್ ಕೂಡ ಒಬ್ಬರು. ಹೌದು.. ಧನುಷ್.. ಕಾಲಿವುಡ್‌ನ ಸೂಪರ್ ಸ್ಟಾರ್. ಈ ವರ್ಷ ಇವರ ಎರಡು ಚಿತ್ರಗಳು ಈಗಾಗಲೇ ತೆರೆಗೆ ಬಂದಿವೆ. ಎರಡು ಸಿನಿಮಾಗಳು ಸೋತಿವೆ. ಆದರೂ .. ಧನುಷ್ ಮಾತ್ರ ನಿಂತಿಲ್ಲ. ಸೋತೇ ಎಂದು ತಲೆ ಮೇಲೆ ಕೈ ಹೊತ್ತು ಕುಂತಿಲ್ಲ. ಬೇರೆಯವರಂತೆ ಪ್ಯಾನ್ ಇಂಡಿಯಾ ಎಂಬ ಕುದುರೆ ಬೆನ್ನೇರಿದರೆ ಗೆಲ್ಲಬಹುದು ಎಂಬ ಭ್ರಮೆಯಲ್ಲಿ ಕೂಡ ಧನುಷ್ ಇಲ್ಲ.

Box Office Magic Continues Dhanush-Kriti Sanon s Tere Ishk Mein Maintains Momentum On Day 2

ಬದಲಿಗೆ ಒಂದಾದ ಮೇಲೊಂದು ಪ್ರಯತ್ನ ಮಾಡುತ್ತಿದ್ದಾರೆ. ''ತೇರೆ ಇಷ್ಕ್ ಮೇ'' ಚಿತ್ರದ ಮೂಲಕ ಆರು ತಿಂಗಳ ಅವಧಿಯಲ್ಲಿ ಈ ವರ್ಷ ಮೂರನೇ ಬಾರಿ ಪ್ರೇಕ್ಷಕರ ಎದುರು ಬಂದಿದ್ದಾರೆ. ಹೃದಯವನ್ನು ಗೆಲ್ಲುವಲ್ಲಿ ಕೂಡ ಈ ಬಾರಿ ಬಹುತೇಕ ಯಶಸ್ವಿಯಾಗಿದ್ದಾರೆ. ಇದಕ್ಕೆ ಕೈಗನ್ನಡಿಯೇ ಚಿತ್ರದ ಗಳಿಕೆ.

ಹೌದು, ಕಳೆದ ಶುಕ್ರವಾರ ( ನವೆಂಬರ್ 28 ) ತೆರೆಗೆ ಬಂದ ''ತೇರೆ ಇಷ್ಕ್ ಮೇ'' ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ಯ ಸದ್ದು ಮಾಡುತ್ತಿದೆ. ಪ್ರೇಕ್ಷಕರ ಮೇಲೆ ಶಂಕರ್ ಒನ್ ಸೈಡ್ ಲವ್ ಸ್ಟೋರಿ ಜಾದೂ ಮಾಡುತ್ತಿದೆ. ಮೊದಲ ದಿನಕ್ಕಿಂತ ಎರಡನೇ ದಿನ ಹೆಚ್ಚಿನ ಹಣವನ್ನು ಚಿತ್ರ ಗಳಿಸಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಮೊದಲ ದಿನ (ಶುಕ್ರವಾರ ) ₹ 16 ಕೋಟಿ ಕೊಳ್ಳೆ ಹೊಡೆದಿದ್ದ ಈ ಚಿತ್ರ ಎರಡನೇ ದಿನ (ಶನಿವಾರ ) ₹ 17 ಕೋಟಿಯನ್ನು ದೋಚಿದೆ. ಈ ಮೂಲಕ ಎರಡು ದಿನದಲ್ಲಿ ₹ 33 ಕೋಟಿಯನ್ನು ಈ ಚಿತ್ರ ಗಳಿಸಿದೆ.

Box Office Magic Continues Dhanush-Kriti Sanon s Tere Ishk Mein Maintains Momentum On Day 2

ಇನ್ನು ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳ ಸಾಲಿನಲ್ಲಿ ''ತೇರೆ ಇಷ್ಕ್ ಮೇ'' ಚಿತ್ರ ಮುಂದಿದೆ. ಮೊದಲ ಎರಡು ದಿನ ಅಕ್ಷಯ್ ಕುಮಾರ್ ಅಭಿನಯದ ''ಜಾಲಿ ಎಲ್‌ಎಲ್‌ಬಿ 3''.. ''ಕೇಸರಿ 2''.. ಆಮಿರ್ ಖಾನ್ ಅಭಿನಯದ ''ಸಿತಾರೆ ಜಮೀನ್ ಪರ್''.. ಅಜಯ್ ದೇವಗನ್ ಅಭಿನಯದ ''ದೇ ದೇ ಪ್ಯಾರ್ ದೇ 2''.. ಚಿತ್ರಗಳಿಗಿಂತ ಹೆಚ್ಚಿನ ಹಣವನ್ನು ಈ ಚಿತ್ರ ಗಳಿಸಿದೆ.

ಅಂದ್ಹಾಗೇ ಈ ವರ್ಷ ಹಲವು ಪ್ರೇಮ ಕಥೆಗಳು ಬೆಳ್ಳಿ ತೆರೆಯಲ್ಲಿ ಅನಾವರಣವಾಗಿವೆ. ಆದರೆ ಹೊಸ ಹುಡುಗನ ''ಸೈಯಾರ'' ಮಾಡಿದ ದುಡ್ಡನ್ನು ಬೇರೆ ಯಾವ ರೊಮ್ಯಾಂಟಿಕ್ ಚಿತ್ರ ಈ ವರ್ಷ ಮಾಡಿಲ್ಲ. ಬಾಕ್ಸಾಫೀಸ್‌ನಲ್ಲಿ ''ಸೈಯಾರ'' ಚಿತ್ರವನ್ನು ''ತೇರೆ ಇಷ್ಕ್ ಮೇ'' ಹಿಂದಿಕ್ಕುತ್ತಾ ಗೊತ್ತಿಲ್ಲ. ಆದರೆ.. ಸದ್ಯಕ್ಕಂತೂ ''ಸೈಯಾರ'' ಚಿತ್ರಕ್ಕಿಂತ ''ತೇರೆ ಇಷ್ಕ್ ಮೇ'' ಹಿಂದಿದೆ. ಮೊದಲ ಎರಡು-ಮೂರು ದಿನದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಈ ವರ್ಷದ ಎರಡನೇ ರೊಮ್ಯಾಂಟಿಕ್ ಚಿತ್ರ ಎನ್ನುವ ಹೆಗ್ಗಳಿಕೆಗೆ ''ತೇರೆ ಇಷ್ಕ್ ಮೇ'' ಪಾತ್ರವಾಗಿದೆ.

ಸದ್ಯ ''ತೇರೆ ಇಷ್ಕ್ ಮೇ'' ಚಿತ್ರ ಎರಡು ದಿನದಲ್ಲಿ ₹ 33 ಕೋಟಿ ಗಳಿಸಿದೆ. ಇಂದು ಮೂರನೇ ದಿನ ( ಭಾನುವಾರ ) ಚಿತ್ರದ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ನಾಳೆಯಿಂದ (ಸೋಮವಾರ ) ''ತೇರೆ ಇಷ್ಕ್ ಮೇ'' ಚಿತ್ರಕ್ಕೆ ನಿಜವಾದ ಅಗ್ನಿ ಪರೀಕ್ಷೆ ಎದುರಾಗಲಿದೆ. ಈ ಪರೀಕ್ಷೆಯಲ್ಲಿ ''ತೇರೆ ಇಷ್ಕ್ ಮೇ'' ಜಸ್ಟ್ ಪಾಸ್ ಆಗುತ್ತಾ..? ಅಥವಾ ಡಿಸ್ಟಿಂಕ್ಷನ್‌ ಅಂಕಗಳನ್ನು ಪಡೆಯುತ್ತಾ..? ಇಲ್ಲವೇ ಫೇಲ್ ಆಗುತ್ತಾ ...? ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
See the full box office breakdown for 'Tere Ishk Mein' Day 2. Despite collecting ₹33 crore in 48 hours, the Dhanush-Kriti starrer is still trailing competitor 'Saiyaara.' Get the detailed collections report here.
Read more about: dhanush bollywood kriti sanon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X