Hari Hara Veera Mallu Day 3 ; ಪವನ್ ಕಲ್ಯಾಣ್ ಹವಾ ಕೇವಲ ಒಂದು ದಿನ ಮಾತ್ರ. ಠುಸ್ ಪಟಾಕಿಯಾದ ಹರಿಹರ ವೀರಮಲ್ಲು
ಪವನ್ ಕಲ್ಯಾಣ್ ಪಕ್ಕದ ಮನೆ ಆಂಧ್ರದ ಉಪಮುಖ್ಯಮಂತ್ರಿ. ಇಷ್ಟೇ ಅಲ್ಲ ಸೂಪರ್ ಸ್ಟಾರ್ ಕೂಡ ಹೌದು. ಚಿತ್ರರಂಗದಲ್ಲಿ ಕಳೆದ 29 ವರ್ಷಗಳಿಂದ ಸಕ್ರಿಯರಾಗಿರುವ ಪವನ್ ಕಲ್ಯಾಣ್ ಸದ್ಯ ಎರಡು ವರ್ಷಗಳ ನಂತರ ಚಿತ್ರಮಂದಿರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಹಿನ್ನೆಲೆ.. ತಮ್ಮ ಪವರ್ ಸ್ಟಾರ್‌ನ ದರ್ಶನ ಪಡೆದು ಪುನೀತರಾಗಬೇಕೆಂಬ ಹಂಬಲ ಇವರ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಈ ಧಾವಂತ ಮೊದಲ ದಿನ ಕಂಡು ಬಂತು ಕೂಡ.
ಆದರೆ.. ಎರಡನೇ ದಿನ ಅಭಿಮಾನದ ಹೊಳೆ ಕಡಿಮೆ ಆಯ್ತು. ಮೂರನೇ ದಿನ ಅಂದರೆ ಶನಿವಾರದಂದಾದರು ಅಭಿಮಾನದ ಜಾತ್ರೆಗೆ ''ಹರಿಹರ ವೀರಮಲ್ಲು''ನ ಮೇಲೆ ಹಣದ ಮಳೆ ಬೀಳುವ ನಿರೀಕ್ಷೆ ಇತ್ತು. ಆದರೆ.. ಪವನ್ ಕಲ್ಯಾಣ್ ಅಭಿಮಾನಿಗಳ ದೌರ್ಭಾಗ್ಯ. ಈ ನಿರೀಕ್ಷೆ ಕೂಡ ಹುಸಿಯಾಗಿದೆ.

ಹೌದು, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಹರಿಹರ ವೀರಮಲ್ಲು'' ಬಿಡುಗಡೆಗೂ ಮುನ್ನ ಅಂದರೆ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪ್ರೀಮಿಯರ್ ಪ್ರದರ್ಶನದಿಂದಲೇ ₹ 12.75 ಕೋಟಿಯನ್ನು ಗಳಿಸಿತ್ತು. ಆ ನಂತರ ಮೊದಲ ದಿನ ₹ 34.75 ಕೋಟಿಯನ್ನು ಚಿತ್ರ ಗಳಿಸಿತ್ತು. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ ₹47.5 ಕೋಟಿಯಾಗಿತ್ತು.
ಚಿತ್ರದ ಈ ಗಳಿಕೆಯನ್ನು ಕಂಡು ಹಲವರು ನಿಬ್ಬೇರಗಾಗಿದ್ದರು. ಪಾಲಿಟಿಕ್ಸ್‌ಗೆ ಹೋದ ಮೇಲೂ ಚಿತ್ರರಂಗದಲ್ಲಿ ಪವನ್ ಕಲ್ಯಾಣ್ ಹವಾ ಕಂಡು ವ್ಹಾ ಎಂದಿದ್ದರು. 5 ವರ್ಷದ ಈ ಹಳೆಯ ಚಿತ್ರ ಎಲ್ಲಾ ದಾಖಲೆ ಮುರಿಯುತ್ತೆ ಎಂದೇ ತೆಲುಗು ಚಿತ್ರಪಂಡಿತರು ಮಾತನಾಡಿಕೊಂಡಿದ್ದರು.
ಆದರೆ.. ಈ ಎಲ್ಲಾ ಲೆಕ್ಕಾಚಾರ ಎರಡನೇ ದಿನವೇ ತಲೆ ಕೆಳಗಾಯ್ತು. ಮೊದಲ ದಿನ ಎರಡಂಕಿ ಇದ್ದ ಚಿತ್ರದ ಗಳಿಕೆ ಎರಡನೇ ದಿನ ಒಂದಂಕಿಗೆ ಬಂದು ತಲುಪಿತು. ''ಸ್ಯಾಕ್ನಿಲ್'' ಈ ಚಿತ್ರ ಶುಕ್ರವಾರ [ ಜುಲೈ 25 ] ಕೇವಲ ₹8 ಕೋಟಿ ಮಾತ್ರ.
ಇನ್ನು ನಿನ್ನೆ ಶನಿವಾರ ಕೂಡ ಈ ಚಿತ್ರ ನಿರಾಸೆ ಮಾಡಿದೆ. ''ಸ್ಯಾಕ್ನಿಲ್'' ವರದಿಯಂತೆ ಚಿತ್ರ₹ 9.25 ಕೋಟಿ {ಅಂದಾಜು} ಮಾತ್ರ ದೋಚಿದೆ. ಈ ಮೂಲಕ ಈಗ ಚಿತ್ರದ ಒಟ್ಟಾರೆ ಗಳಿಕೆ ₹ 64.75ಕೋಟಿಗೆ ಬಂದು ತಲುಪಿದೆ. ಈ ಮೂಲಕ ಕೇವಲ ಮೂರು ದಿನದಲ್ಲಿ ಚಿತ್ರ ನೂರು ಕೋಟಿ ಗಡಿ ದಾಟುತ್ತೆ ಎಂದು ಹೇಳಿದವರಿಗೆ ಚಿತ್ರ ನಿರಾಸೆ ಮಾಡಿದೆ. ಸದ್ಯ ''ಹರಿಹರ ವೀರಮಲ್ಲು'' ಚೇತರಿಸಿಕೊಳ್ಳುವ ಯಾವ ಲಕ್ಷಣ ಕೂಡ ಕಂಡು ಬರುತ್ತಿಲ್ಲ.

''ಸ್ಯಾಕ್ನಿಲ್'' ವೆಬ್ ಸೈಟ್ ಪ್ರಕಾರ ''ಹರಿಹರ ವೀರಮಲ್ಲು'' ಚಿತ್ರದ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ವಿಶೇಷ ಪ್ರೀಮಿಯರ್ ದಿನ - [ ಬುಧವಾರ ] - ₹ 12.75 ಕೋಟಿ
ಮೊದಲ ದಿನ [ ಗುರುವಾರ] - ₹34.75 ಕೋಟಿ
ಎರಡನೇ ದಿನ [ ಶುಕ್ರವಾರ ] - ₹ 8 ಕೋಟಿ
ಮೂರನೇ ದಿನ [ ಶನಿವಾರ ] - ₹ 9.25 ಕೋಟಿ
ಒಟ್ಟು ಗಳಿಕೆ - ₹ 64.75 ಕೋಟಿ
ಒಟ್ನಲ್ಲಿ ಸದ್ಯ ''ಹರಿ ಹರ ವೀರಮಲ್ಲು'' ಚಿತ್ರವನ್ನು ಪ್ರೇಕ್ಷಕರು ರಿಜೆಕ್ಟ್ ಮಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಈ ಚಿತ್ರ ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮೊದಲು ಎಷ್ಟು ಹಣ ಗಳಿಸಲಿದೆ ಎನ್ನುವುದನ್ನು ಸದ್ಯ ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











