ಅಜಯ್ ದೇವಗನ್‌ಗೆ ಆಘಾತ, ₹95.74 ಕೋಟಿ ಕಳೆದುಕೊಂಡ ಬಾಲಿವುಡ್ ಸೂಪರ್ ಸ್ಟಾರ್..!
ಸಿನಿಮಾ ಈಗ ಕಲೆ ಮಾತ್ರ ಅಲ್ಲ. ವ್ಯಾಪಾರ ಕೂಡ ಹೌದು. ಉದ್ಯಮವಾಗಿ ಬೆಳೆದಿರುವ ಈ ಚಿತ್ರರಂಗದಲ್ಲಿ ಬಹುಕೋಟಿ ವ್ಯವಹಾರ ನಡೆಯುತ್ತೆ. ಇಂಥಾ ವಲಯದಲ್ಲಿ ಬೆಳೆದು ನಿಂತ ಸೂಪರ್ ಸ್ಟಾರ್‌ಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತೆ. ಇವರ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿರುತ್ತೆ. ಆದರೆ.. ಈಗೀಗ ಜವಾಬ್ಧಾರಿಗಳನ್ನು ನಿರ್ವಹಿಸುವಲ್ಲಿ.. ನಿರೀಕ್ಷೆಯ ಪರೀಕ್ಷೆಯಲ್ಲಿ ಪಾಸಾಗುವುದರಲ್ಲಿ ಹಲವು ಸೂಪರ್ ಸ್ಟಾರ್‌ಗಳು ಎಡವುತ್ತಿದ್ದಾರೆ.
ಹೊಸತನದ ಅಲೆಯ ಎದುರು.. ಹೊಸಬರ ಎದುರು.. ಮಂಕಾಗುತ್ತಿದ್ದಾರೆ. ಆ ಭಾಷೆ ಈ ಭಾಷೆ ಅಲ್ಲ ಎಲ್ಲಾ ಭಾಷೆಯಲ್ಲಿ ಕೂಡ ಬಹುತೇಕ ಸೂಪರ್ ಸ್ಟಾರ್‌ಗಳಿಗೆ ಕೇವಲ ನಿರಾಸೆ ಮತ್ತು ಸೋಲೇ ದಕ್ಕುತ್ತಿದೆ. ಇದಕ್ಕೆ ಅಜಯ್ ದೇವಗನ್ ಸದ್ಯದ ಉದಾಹರಣೆ.

ಹೌದು, ಅಜಯ್ ದೇವಗನ್.. ಬಾಲಿವುಡ್‌ನ ಸೂಪರ್ ಸ್ಟಾರ್‌ಗಳಲ್ಲಿ ಒಬ್ಬರು. ಕೇವಲ ಆಕ್ಟಿಂಗ್ ಮಾತ್ರ ಅಲ್ಲ ನಿರ್ದೇಶನವನ್ನು ಕೂಡ ಮಾಡುವ ಅಜಯ್ ದೇವಗನ್ ನಿರ್ಮಾಪಕ ಕೂಡ ಹೌದು. ಹಲವು ಚಿತ್ರಗಳನ್ನು ಅಜಯ್ ದೇವಗನ್ ಇಲ್ಲಿಯವರೆಗೆ ನಿರ್ಮಾಣ ಮಾಡಿದ್ದಾರೆ. ಆ ಪೈಕಿ ಮೊನ್ನೆ ಮೊನ್ನೆ ಬಿಡುಗಡೆಯಾದ ''ಸನ್ ಆಫ್ ಸರ್ದಾರ್ 2'' ಕೂಡ ಒಂದು.
ಮೊದಲ ಭಾಗದ ಗೆಲುವಿನಿಂದ ಉತ್ತೇಜನಗೊಂಡು ಎರಡನೇ ಭಾಗವನ್ನು ಕೂಡ ಅಜಯ್ ದೇವಗನ್ ನಿರ್ಮಾಣ ಮಾಡಿದ್ದರು. ತಾವೇ ಪ್ರಮುಖವಾದ ಪಾತ್ರವನ್ನು ಕೂಡ ನಿರ್ವಹಿಸಿದ್ದರು.
ಆದರೆ ದುರಾದೃಷ್ಟ.. ''ಸನ್ ಆಫ್ ಸರ್ದಾರ್ 2 ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದೆ. ಅಜಯ್ ದೇವಗನ್ ವೃತ್ತಿ ಬದುಕಿನ ಬಹುದೊಡ್ಡ ಫ್ಲಾಪ್ ಚಿತ್ರ ಎನ್ನುವ ಕುಖ್ಯಾತಿಗೆ ಕೂಡ ಪಾತ್ರವಾಗಿದೆ. ಇಷ್ಟೇ ಅಲ್ಲ ''koimoi.com'' ವರದಿಯ ಪ್ರಕಾರ ಸನ್ ಆಫ್ ಸರ್ದಾರ್ 2 ಚಿತ್ರದಿಂದ ಅಜಯ್ ದೇವಗನ್‌ಗೆ ಒಂದಲ್ಲ.. ಎರಡಲ್ಲ.. ₹95.74 ಕೋಟಿ ಹಣ ನಷ್ಟವಾಗಿದೆ.
ಹೌದು, ಅಸಲಿಗೆ ಬಹುದೊಡ್ಡ ತಾರಾಬಳಗವನ್ನೊಂದಿರುವ ಈ ಚಿತ್ರಕ್ಕೆ ₹130 ಕೋಟಿ ಹಣವನ್ನು ಖರ್ಚು ಮಾಡಲಾಗಿತ್ತು. ಆದರೆ.. ಆಗಸ್ಟ್ 1ರಂದು ತೆರೆಗೆ ಬಂದ ಈ ಚಿತ್ರ ಇಲ್ಲಿಯವರೆಗೆ ಕೇವಲ ₹34.26 ಕೋಟಿಯನ್ನಷ್ಟೇ ಗಳಿಸಿದೆ. ಈ ಮೂಲಕ ಹಾಕಿದ ಬಂಡವಾಳದಲ್ಲಿ ಕೇವಲ 26.3% ಮಾತ್ರ ಮರಳಿ ಬಂದಂತಾಗಿದೆ ಎಂದು ''koimoi.com''ನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸೇಫ್ ಜೋನ್‌ಗೆ ಬರಲು ಅಜಯ್ ದೇವಗನ್‌ಗೆ ಇನ್ನೂ ₹95.74 ಕೋಟಿಯ ಅವಶ್ಯಕತೆ ಇದೆ. ಆದರೆ ಇಷ್ಟೊಂದು ಹಣವನ್ನು ಈ ಚಿತ್ರ ಗಳಿಸುವುದು ಅಸಾಧ್ಯ. ಯಾಕೆಂದರೆ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಈ ಶುಕ್ರವಾರ ರಜಿನಿಕಾಂತ್ ಅಭಿನಯದ ''ಕೂಲಿ'' ಮತ್ತು ಹೃತಿಕ್ ರೋಷನ್, ಜ್ಯೂಎನ್‌ಟಿಆರ್ ಅಭಿನಯದ ''ವಾರ್ 2'' ಬಿಡುಗಡೆಯಾಗಲಿವೆ. ಹೀಗಾಗಿ ಬಹುತೇಕ ಚಿತ್ರಮಂದಿರಗಳಿಂದ ''ಸನ್ ಆಫ್ ಸರ್ದಾರ್ 2'' ಚಿತ್ರವನ್ನು ಎತ್ತಂಗಡಿ ಮಾಡಲಾಗುತ್ತೆ.
ಈ ಕಾರಣಗಳಿಂದ ಅಜಯ್ ದೇವಗನ್ ಸದ್ಯ ''ಸನ್ ಆಫ್ ಸರ್ದಾರ್ 2'' ಚಿತ್ರ ಮಾಡಿ ಕೈ ಸುಟ್ಟುಕೊಂಡರು ಎನ್ನುವ ಮಾತು ಸದ್ಯ ಬಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ.
ಅಂದ್ಹಾಗೇ 2012ರಲ್ಲಿ ಬಂದ ''ಸನ್ ಆಫ್ ಸರ್ದಾರ್'' ಚಿತ್ರದ ಸಂಪೂರ್ಣ ಜವಾಬ್ಧಾರಿಯನ್ನು ಅಜಯ್ ದೇವಗನ್ ತಾವೊಬ್ಬರೇ ವಹಿಸಿಕೊಂಡಿದ್ದರು. ನಿರ್ಮಾಣ ಮಾಡಿದ್ದರು. ಆದರೆ ಈ ಬಾರಿ ಅಜಯ್ ದೇವಗನ್ ತಮ್ಮ ಜೊತೆ ಎನ್.ಆರ್.ಪಚಿಸಿಯಾ..ಪ್ರವೀಣ್ ತಲ್ರೆಜಾ ಮತ್ತು ಜ್ಯೋತಿ ದೇಶಪಾಂಡೆಯನ್ನು ಸೇರಿಸಿಕೊಂಡಿದ್ದರು. ಈ ಹಿನ್ನೆಲೆ ₹95.74 ಕೋಟಿ ನಾಲ್ಕು ಜನರಿಗೆ ನಷ್ಟದಲ್ಲಿ ಸಮಪಾಲು ಸಿಕ್ಕಿದೆ ಎನ್ನುವುದಷ್ಟೇ ಅಜಯ್ ದೇವಗನ್ ಪಾಲಿಗೆ ಸಮಾಧಾನದ ವಿಷಯ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











