Devil Day 10 Boxoffice: 2ನೇ ಶನಿವಾರ ಕೂಡ ಹೆಚ್ಚಲಿಲ್ಲ ಕಲೆಕ್ಷನ್; 'ಡೆವಿಲ್' ಗೆಲ್ಲಿಸೋದಾಗಿ ಫ್ಯಾನ್ಸ್ ಶಪಥ

ಬಾಕ್ಸಾಫೀಸ್‌ನಲ್ಲಿ 'ಡೆವಿಲ್' ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆ. ಫಸ್ಟ್ ವೀಕೆಂಡ್ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ ವಾರದ ದಿನಗಳಲ್ಲಿ ಪ್ರೇಕ್ಷಕರ ಬರ ಎದುರಿಸಿತ್ತು. ಇದೀಗ 2ನೇ ವೀಕೆಂಡ್ ಕೂಡ ಸಿನಿಮಾ ಚೇತರಿಸಿಕೊಂಡಿಲ್ಲ. ಆದರೆ ಇನ್ನೊಂದು ವಾರದಲ್ಲಿ ಚಿತ್ರವನ್ನು ಗೆಲ್ಲಿಸುವುದಾಗಿ ದರ್ಶನ್ ಅಭಿಮಾನಿಗಳು ಶಪಥ ಮಾಡಿದ್ದಾರೆ.

ಪ್ರಕಾಶ್ ವೀರ್ ನಿರ್ಮಿಸಿ, ನಿರ್ಮಾಣ ಮಾಡಿರುವ 'ಡೆವಿಲ್' ಸಿನಿಮಾ ಡಿಸೆಂಬರ್ 11ರಂದು ಬಿಡುಗಡೆ ಆಗಿತ್ತು. ಸದ್ಯ 2ನೇ ವಾರ ಸಿನಿಮಾ ಪ್ರದರ್ಶನ ಕಾಣುತ್ತಿದೆ. ವಿಜಯಲಕ್ಷ್ಮಿ ದರ್ಶನ್ ಈಗಾಗಲೇ ರಾಜ್ಯಾದ್ಯಂತ ವಿಜಯಯಾತ್ರೆ ಕೈಗೊಂಡಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸುತ್ತಿದ್ದಾರೆ. ಹೋದ ಕಡೆಯೆಲ್ಲಾ ಆಕೆಗೆ ಭವ್ಯ ಸ್ವಾಗತನ ಸನ್ಮಾನ ಸಿಗುತ್ತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲಿನಲ್ಲಿದ್ದಾರೆ. ಹಾಗಾಗಿ 'ಡೆವಿಲ್' ಚಿತ್ರದ ಪ್ರಚಾರದ ಬಂಡಿಯನ್ನು ವಿಜಯಲಕ್ಷ್ಮಿ ಎಳೆಯುತ್ತಿದ್ದಾರೆ.

Box Office Struggle Continues for Darshan s Devil Fans Vow to Turn the Tide in Coming Days

'ಡೆವಿಲ್' ಸಿನಿಮಾ ಗೆಲುವು ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ಅನಿವಾರ್ಯವಾಗಿದೆ. ಸಂಕಷ್ಟದ ಸಮಯದಲ್ಲಿ ಸಿನಿಮಾ ಗೆಲ್ಲಬೇಕಿದೆ. ಆಡಿಕೊಳ್ಳುವವರ ಬಾಯಿ ಮುಚ್ಚಿಸಬೇಕಿದೆ. ಹಾಗಾಗಿ ಚಿತ್ರವನ್ನು ಗೆಲ್ಲಿಸುವ ಹಠಕ್ಕೆ ಬಿದ್ದಿದ್ದಾರೆ. ಆದರೆ ಈವರೆಗೆ ಸಾಧ್ಯವಾಗಿಲ್ಲ. ಮುಂದಿನ ನಾಲ್ಕೈದು ದಿನಗಳಲ್ಲಿ ಅಭಿಮಾನಿಗಳು ಇಡೀ ಚಿತ್ರಣ ಬದಲಿಸುವ ಲೆಕ್ಕಾಚಾರದಲ್ಲಿದ್ದಾರೆ.

10 ದಿನಗಳ ಗಳಿಕೆ

2ನೇ ಶನಿವಾರ ಅಂದರೆ ಡಿಸೆಂಬರ್ 20ರಂದು 'ಡೆವಿಲ್' ಸಿನಿಮಾ 71 ಲಕ್ಷ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ sacnilk ವೆಬ್‌ಸೈಟ್ ವರದಿ ಮಾಡಿದೆ. ಒಟ್ಟಾರೆ ಮೊದಲ 10 ದಿನಕ್ಕೆ 26 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗುತ್ತಿದೆ. ಗ್ರಾಸ್ ಕಲೆಕ್ಷನ್ 35 ಕೋಟಿ ರೂ. ದಾಟಿರುವ ಲೆಕ್ಕಾಚಾರ ನಡೀತಿದೆ. ಚಿತ್ರಕ್ಕೆ ಇದ್ದ ನಿರೀಕ್ಷೆಗೆ ಹೋಲಿಸಿದರೆ ಇದು ಕಮ್ಮಿ ಎಂದೇ ಹೇಳಬಹುದು.

ಫ್ಯಾನ್ಸ್ ಶಪಥ

ಸಂಕಷ್ಟದಲ್ಲಿ ಸಿಲುಕಿರುವ 'ಡೆವಿಲ್' ಸಿನಿಮಾವನ್ನು ಶತಾಯಗತಾಯ ಗೆಲ್ಲಿಸಲು ಫ್ಯಾನ್ಸ್ ಶಪಥ ಮಾಡಿದ್ದಾರೆ. ಇನ್ನು ನಾಲ್ಕೈದು ದಿನ ದೊಡ್ಡಮಟ್ಟದಲ್ಲಿ ಸಿನಿಮಾ ನೋಡುವುದಾಗಿ ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್‌ಗಳು ವೈರಲ್ ಆಗುತ್ತಿದೆ.

ಡಿ ಕಂಪನಿ ಪೋಸ್ಟ್

"ದರ್ಶನ್ ಅಭಿನಯದ 'ದಿ ಡೆವಿಲ್' ಸಿನಿಮಾವನ್ನ ಹನ್ನೊಂದು ಸಾವಿರಕ್ಕು ಹೆಚ್ಚು ಪೈರೆಸಿ ಮಾಡಿಸಿ ಹಿನ್ನೆಡೆಯಾಗಿಸುವ ಭ್ರಮೆ ಇರುವ ಜನಕ್ಕೆ ಉತ್ತರ ಕೊಡಲು. ರಾಜ್ಯದ ದಾಸನ ಅಭಿಮಾನಿಗಳೆಲ್ಲರು ಒಂದಾಗಿ ನಾಳೆಯಿಂದ 25ನೆ ತಾರೀಖಿನ ವರೆಗು ಸತತವಾಗಿ ದೆ ಡೆವಿಲ್ ಸಿನಿಮಾ ನೋಡಿ ,ಪ್ರಚಂಡ ಯಶಸ್ಸು ಸಾಧಿಸಿಯೆ ತೀರುತ್ತೇವೆ" ಎಂದು ದರ್ಶನ್ ಅಭಿಮಾನಿಗಳ ಅಧಿಕೃತ ಡಿಕಂಪನಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ವಿಜಯಯಾತ್ರೆ

'ಡೆವಿಲ್' ಸಿನಿಮಾ ವಿಜಯಯಾತ್ರೆ ಆರಂಭವಾಗಿದೆ. ಸಕ್ಕರೆ ನಾಡು ಮಂಡ್ಯದ ಮಹಾವೀರ್ ಚಿತ್ರಮಂದಿರಕ್ಕೆ ಭೇಟಿ ನೀಡಿ ವಿಜಯಲಕ್ಷ್ಮಿ ದರ್ಶನ್ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದಾರೆ. ಅಭಿಮಾನಿಗಳನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದ್ದಾರೆ. ಮುಂದೆ ದಾವಣಗೆರೆ ಸೇರಿ ಹಲವು ಭಾಗಗಳಲ್ಲಿ ವಿಜಯಯಾತ್ರೆ ಮುಂದುವರೆಯಲಿದೆ. 13 ವರ್ಷಗಳ ಹಿಂದೆ ದರ್ಶನ್ ಜೈಲಿನಲ್ಲಿ ಇದ್ಧಾಗಲೇ 'ಸಾರಥಿ' ಸಿನಿಮಾ ತೆರೆಕಂಡು ಗೆದ್ದಿತ್ತು. ಅದರ ಬೆನ್ನಲ್ಲೇ ದರ್ಶನ್ ಬಿಡುಗಡೆಯಾಗಿ ಬಂದು ವಿಜಯಯಾತ್ರೆ ಮಾಡಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದರು.

'ಡೆವಿಲ್' ಟ್ರೆಂಡಿಂಗ್

ಸಿನಿಮಾ ಬಿಡುಗಡೆ ಬಳಿಕ 'ಡೆವಿಲ್' ಚಿತ್ರದ ವೀಡಿಯೋ ಸಾಂಗ್ಸ್ ಒಂದೊಂದಾಗಿ ಯೂಟ್ಯೂಬ್‌ಗೆ ಬಂದಿದೆ. ಟ್ರೈಲರ್ ಕೂಡ ಟ್ರೆಂಡಿಂಗ್‌ನಲ್ಲಿದೆ. ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಇನ್ನು ಮಾರಾಟವಾಗಿಲ್ಲ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ. ಮತ್ತೊಂದು ಕಡೆ ಈ ಸಿನಿಮಾ ಪೈರಸಿ ಆಗುವುದನ್ನು ಚಿತ್ರತಂಡ ತಡೆಯುತ್ತಿದೆ. ಈಗಾಗಲೇ ಸಾವಿರಾರು ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡಿಸಲಾಗಿದೆ. ಈ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡಿದೆ.

More from Filmibeat

Read more about: darshan devil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X