Dhurandhar Box Office Day 12 ; ಬಾಕ್ಸಾಫೀಸ್‌ ಮೇಲೆ ದಂಡೆತ್ತಿ ಬಂದ ಧುರಂಧರ್ - ನೆಲಕ್ಕುರುಳಿದ ಸಲಾರ್ ಸಾಮ್ರಾಜ್ಯ

ಬಾಕ್ಸಾಫೀಸ್ ಅಚ್ಚರಿಯ ಗೂಡು. ಇಲ್ಲಿ ಯಾವತ್ತು ಯಾವ ಸಿನಿಮಾ ಚಿನ್ನದ ಬೆಳೆ ಬೆಳೆಯುತ್ತೆ. ಯಾವ ಸಿನಿಮಾ ಹೇಳ ಹೆಸರಿಲ್ಲದಂತೆ ಕಾಣೆಯಾಗುತ್ತೆ ಎನ್ನುವುದು ಹೇಳಲು ಸಾಧ್ಯ ಇಲ್ಲ. ಕೆಲ ಒಮ್ಮೆ ವ್ಯಾಪಕವಾದ ನಿರೀಕ್ಷೆಯನ್ನು ಮೂಡಿಸಿದ ಚಿತ್ರ ಇಲ್ಲಿ ಮಕಾಡೆ ಮಲಗಿದರೆ, ಇನ್ನೂ ಕೆಲ ಒಮ್ಮೆ ಯಾವ ನಿರೀಕ್ಷೆ ಇರದ ಚಿತ್ರ ದಿಗ್ಗನೆ ಎದ್ದು ಬಂದು ಸದ್ದು ಮಾಡಲು ಶುರು ಮಾಡುತ್ತೆ.

ಎಲ್ಲರನ್ನೂ ತನ್ನತ್ತ ಆಯಸ್ಕಾಂತದಂತೆ ಸೆಳೆದು ಅಚ್ಚರಿಯನ್ನು ಮೂಡಿಸುತ್ತೆ. ಬಾಕ್ಸಾಫೀಸ್‌ನಲ್ಲಿ ಐತಿಹಾಸಿಕ ದಾಖಲೆಯನ್ನು ಕೂಡ ಬರೆಯುತ್ತೆ. ಓಟಿಟಿ..ಪೈರಸಿಯ ಯುಗದಲ್ಲಿ ಕೂಡ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತೆ. ಇದಕ್ಕೆ ''ಧುರಂಧರ್'' ಸದ್ಯದ ಉದಾಹರಣೆ.

Box Office Tsunami Dhurandhar Crushes Dangal amp amp Salaar to Become a Historic All-Time Blockbuster

ಹೌದು, ''ಧುರಂಧರ್''.. ವರ್ಷಾಂತ್ಯದಲ್ಲಿ ಬಾಕ್ಸಾಫೀಸ್‌ಗೆ ಅಪ್ಪಳಿಸಿರುವ ಸುನಾಮಿ. ಕಳೆದ ಡಿಸೆಂಬರ್ 5ರಂದು ಈ ಚಿತ್ರ ಬಂದಾಗ, ಚಿತ್ರ ನೋಡಿದ ಹಲವರಲ್ಲಿ ಕೆಲವರು ಈ ಚಿತ್ರದ ಕುರಿತು ರಾಗಾ ಎಳೆಯಲು ಶುರು ಮಾಡಿದ್ದರು. ಎರಡು ಗಂಟೆ ಚಿತ್ರಮಂದಿರದಲ್ಲಿ ಕುಳಿತುಕೊಳ್ಳುವುದು ಕಷ್ಟವೆನ್ನುವ ಈ ವಾತಾವರಣದಲ್ಲಿ ಮೂರುವರೆ ಗಂಟೆಯ ಚಿತ್ರವನ್ನು ಯಾರು ನೋಡುತ್ತಾರೆ ಎಂದು ಮೂಗು ಮುರಿದಿದ್ದರು. ಹೇಳಿಕೊಳ್ಳುವಂತಹ ಸಿನಿಮಾವೇನು ಅಲ್ಲ, ಅಷ್ಟಕಷ್ಟೇ ಎಂದೆಲ್ಲಾ ಚಿತ್ರದ ವಿಮರ್ಶೆಯನ್ನು ಕೂಡ ಕೆಲವರು ಮಾಡಿದ್ದರು.

ಇನ್ನೂ ರಣವೀರ್ ಸಿಂಗ್ ಬೇರೆ ಎರಡು ವರ್ಷಗಳಿಂದ ನಿರುದ್ಯೋಗಿ ಆಗಿದ್ದರು. ಅದಕ್ಕೂ ಮುನ್ನ ಬಂದ ''ಸರ್ಕಸ್''.. ''ಜಯೇಶ್‌ಭಾಯಿ ಜೋರ್‌ದಾರ್''.. ''83''.. ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದವು. ಈ ಹಿನ್ನೆಲೆ ಸಲ್ಮಾನ್ ಖಾನ್.. ಆಮಿರ್ ಖಾನ್.. ಅವರಂತಹ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಗೆಲ್ತಿಲ್ಲ, ಹೀಗಿರುವಾಗ ರಣವೀರ್ ಸಿಂಗ್ ಸಿನಿಮಾ ಗೆದ್ದು ಬಿಡುತ್ತಾ ಎಂದು ಕೂಡ ಕೆಲವರು ಕುಹುಕವಾಡಿದ್ದರು.

ಆದರೆ.. ಈ ಎಲ್ಲ ಲೆಕ್ಕಾಚಾರವನ್ನು ''ಧುರಂಧರ್'' ಬುಡಮೇಲಾಗಿಸಿದೆ. ಬೆಳ್ಳಿತೆರೆಯಲ್ಲಿ ಅಕ್ಷರಶಃ ''ಧುರಂಧರ್'' ಧಗಧಗಿಸುತ್ತಿದೆ. ಇದಕ್ಕೆ ಚಿತ್ರದ ಗಳಿಕೆಯೇ ಕೈಗನ್ನಡಿ.

ಹೌದು, ಮೊದಲ ದಿನ ₹ 28 ಕೋಟಿಯನ್ನು ದೋಚಿದ್ದ ''ಧುರಂಧರ್'' ನಿನ್ನೆ ( ಡಿಸೆಂಬರ್ 16 ) ₹ 30 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಈ ಮೂಲಕ ಕೇವಲ ಹನ್ನೆರಡೇ ದಿನದಲ್ಲಿ ₹ 411.25 ಕೋಟಿ ಯನ್ನು ಚಿತ್ರ ಗಳಿಸಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ.

Box Office Tsunami Dhurandhar Crushes Dangal amp amp Salaar to Become a Historic All-Time Blockbuster

ಇನ್ನು. ''ಧುರಂಧರ್''ನ ಈ ಧಮಾಕಾದಿಂದಾಗಿ ಹಲವು ದಾಖಲೆಗಳು ಪುಡಿ ಪುಡಿಯಾಗಿವೆ. ಆ ಪೈಕಿ ''ದಂಗಲ್'' ಚಿತ್ರದ ದಾಖಲೆ ( ₹387.38 ಕೋಟಿ ) ಒಂದಾದರೆ ಮತ್ತೊಂದು ''ಸಲಾರ್'' ಚಿತ್ರದ ದಾಖಲೆ.

''ಸ್ಯಾಕ್ನಿಲ್'' ಪ್ರಕಾರ ಡಿಸೆಂಬರ್ 22-2023ರಂದು ಬಿಡುಗಡೆಯಾಗಿದ್ದ ಪ್ರಭಾಸ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ''ಸಲಾರ್'' ಬಾಕ್ಸಾಫೀಸ್‌ನಲ್ಲಿ ₹ 406.45 ಕೋಟಿಯನ್ನು ಗಳಿಸಿತ್ತು. ಆದರೆ.. ಇಷ್ಟೊಂದು ಹಣ ಸಂಪಾದಿಸಲು ''ಸಲಾರ್'' ಚಿತ್ರಕ್ಕೆ ಆರು ವಾರ ಬೇಕಾಗಿದ್ದವು. ಆದರೆ ''ಧುರಂಧರ್'' ಕೇವಲ ಹನ್ನೆರಡೇ ದಿನದಲ್ಲಿ ''ಸಲಾರ್'' ಸಾಮ್ರಾಜ್ಯವನ್ನು ನೆಲಕ್ಕುರಿಳಿಸಿದೆ. ಈ ಮೂಲಕ ಐತಿಹಾಸಿಕ ದಾಖಲೆಯನ್ನು ಬರೆದಿದೆ. ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನವನ್ನು ಅಲಂಕರಿಸಿದೆ.

''ಧುರಂಧರ್'' ಎದುರು ಸದ್ಯ ''ಆರ್‌ಆರ್‌ಆರ್'' (₹520ಕೋಟಿ) ''ಪಠಾಣ್'' (₹543ಕೋಟಿ) ದಾಖಲೆ ಮುರಿಯುವ ಸವಾಲು ಇದೆ. ಸದ್ಯ ''ಧುರಂಧರ್'' ನಾಗಾಲೋಟನ್ನು ನೋಡುತ್ತಿದ್ದರೆ ಇವೆರಡು ಚಿತ್ರಗಳನ್ನು ''ಧುರಂಧರ್'' ಅನಾಯಾಸವಾಗಿ ಹಿಂದಿಕ್ಕಲಿದೆ. ಭಾರತದ ಮಾರುಕಟ್ಟೆಯಲ್ಲಿ ₹594 ಕೋಟಿಯನ್ನು ಗಳಿಸಿರುವ ''ಕೆಜಿಎಫ್ 2'' ಅತೀ ಹೆಚ್ಚು ಹಣ ಗಳಿಸಿರುವ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು, ''ಧುರಂಧರ್-2'' ಚಿತ್ರ ''ಕೆಜಿಎಫ್‌ 2'' ಚಿತ್ರವನ್ನು ಹಿಂದಿಕ್ಕುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
History in the making! Dhurandhar crosses ₹400 Cr on Day 12, outperforming Salaar's lifetime collection. Check out the record-breaking 2nd Tuesday numbers here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X