Sitaare Zameen Par Box Office Day 25 : ಅಜಯ್ ದೇವಗನ್ ಅಖಾಡಕ್ಕಿಳಿಯುವ ಮುನ್ನ ದಾಖಲೆ ಬರೆಯುತ್ತಾರಾ ಆಮಿರ್ ಖಾನ್?
ಒಂದ್ಕಾಲದಲ್ಲಿ ಬಾಲಿವುಡ್‌ನ ಚಿನ್ನದ ಗಣಿಯಾಗಿದ್ದವರು ಆಮಿರ್ ಖಾನ್. ಅದರಲ್ಲಿಯೂ 2001ರ ನಂತರ ಇವರು ಮುಟ್ಟಿದ್ದೆಲ್ಲ ಚಿನ್ನ. 'ಲಗಾನ್'.. 'ದಿಲ್ ಚಾಹ್ತಾ ಹೈ'.. 'ರಂಗ್ ದೇ ಬಸಂತಿ'.. 'ಫನ್ಹಾ'.. 'ತಾರೇ ಜಮೀನ್ ಪರ್'.. 'ಗಜನಿ'.. '3 ಈಡಿಯಟ್ಸ್'.. 'ಧೂಮ್ 3'.. 'ಪಿ.ಕೆ'.. 'ದಂಗಲ್'.. ಹೀಗೆ ಎಲ್ಲವೂ ಬ್ಲಾಕ್ ಬಸ್ಟರ್ ಸಿನಿಮಾಗಳೇ. ಎಲ್ಲವೂ ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆಯನ್ನು ಹರಿಸಿದ ಚಿತ್ರಗಳೇ.
ಆದರೆ.. 2018ರ ನಂತರ ಆಮಿರ್ ಖಾನ್ ಗೆ ಅದೃಷ್ಟ ಕೈ ಕೊಡ್ತು. ಬಾಲಿವುಡ್‌ನ ನತದೃಷ್ಟ ನಾಯಕನಾದರು ಆಮಿರ್ ಖಾನ್. 'ಥಗ್ಸ್ ಆಫ್ ಹಿಂದೂಸ್ತಾನ್'.. 'ಲಾಲ್ ಸಿಂಗ್ ಚಡ್ಡಾ'.. ಈ ಎರಡು ಚಿತ್ರಗಳ ಸೋಲು ಆಮಿರ್ ಖಾನ್ ಮೇಲೆ ಭಾರೀ ಪ್ರಭಾವವನ್ನು ಬೀರಿದವು. ಈ ಸೋಲಿನಿಂದ ಆಮಿರ್ ಖಾನ್ ವಿಲಚಿತರಾಗಿದ್ದು ಸುಳ್ಳಲ್ಲ. ಇತ್ತೀಚೆಗೆ ಆಮಿರ್ ಖಾನ್ ಅನೇಕ ಸಂದರ್ಶನಗಳಲ್ಲಿ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. ಬಿಕ್ಕಿದ್ದಾರೆ ಕೂಡ.

ಆದರೆ ಈಗ ಸೋಲಿನ ಸರಪಳಿ ಕಳಚಿದೆ. ಹಲವಾರು ಜನರ ನಾನಾ ರೀತಿಯ ಭಿನ್ನಾಭಿಪ್ರಾಯದ ನಡುವೆ ಆಮಿರ್ ಖಾನ್ ಅಭಿನಯದ 'ಸಿತಾರೆ ಜಮೀನ್ ಪರ್' ಚಿತ್ರ ಗೆದ್ದಿದೆ. ಹೌದು, ಬಾಲಿವುಡ್ ಅಂಕಿ-ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಸಿತಾರೆ ಜಮೀನ್ ಪರ್ ಚಿತ್ರ ಈ 25 ದಿನದಲ್ಲಿ₹ 161.2 ಕೋಟಿ ಹಣವನ್ನು ಗಳಿಸಿದೆ.
ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಚಿತ್ರದ 25 ದಿನಗ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ವಾರ - ₹ 88.9 ಕೋಟಿ
ಎರಡನೇ ವಾರ - ₹ 46.5 ಕೋಟಿ
ಮೂರನೇ ವಾರ - ₹ 18.95 ಕೋಟಿ
ಒಟ್ಟು ಗಳಿಕೆ - ₹ 154.35 ಕೋಟಿ
ಹೀಗೆ ಮೂರು ವಾರದಲ್ಲಿ ₹ 154.35 ಕೋಟಿ ಗಳಿಸಿದ ಸಿತಾರೆ ಜಮೀನ್ ಪರ್ 22ನೇ ದಿನ ಅಂದರೆ ಕಳೆದ ಶುಕ್ರವಾರ { ಜುಲೈ 11} ₹90 ಲಕ್ಷ ಗಳಿಸಿದೆ. ವಿಶೇಷ ಅಂದರೆ ಶನಿವಾರ ಮತ್ತು ಭಾನುವಾರ ಚಿತ್ರತಂಡಕ್ಕೆ ಮತ್ತೊಮ್ಮೆ ಲಾಟರಿ ಹೊಡೆದಿದೆ. ಅನೇಕ ಹೊಸ ಚಿತ್ರಗಳು ಬಂದಿದ್ದರು ಕೂಡ ಸಿತಾರೆ ಜಮೀನ್ ಪರ್ ಚಿತ್ರಕ್ಕೆ ಪ್ರೇಕ್ಷಕರು ಮೊದಲ ಆದ್ಯತೆ ನೀಡಿದ್ದಾರೆ.
ಪರಿಣಾಮ ಶನಿವಾರ 177.78% ಏರಿಕೆ ಕಂಡು ಬಂದಿದ್ದು ₹ 2.5 ಕೋಟಿ ಹಣವನ್ನು ಚಿತ್ರ ಗಳಿಸಿದೆ, ಭಾನುವಾರ ಚಿತ್ರ ₹ 2.85 ಕೋಟಿಯನ್ನು ದೋಚಿದೆ ಎಂದು ಸ್ಯಾಕ್ನಿಲ್ ವೆಬ್ ಸೈಟ್ ಮಾಹಿತಿಯನ್ನು ಹಂಚಿಕೊಂಡಿದೆ. ಚಿತ್ರದ ಒಟ್ಟಾರೆ 25 ದಿನದ ಗಳಿಕೆ ಈ ಮೂಲಕ ₹ 161.2 ಕೋಟಿಯಾಗಿದೆ ಎಂದು ಉಲ್ಲೇಖಿಸಿದೆ.
ಅಂದ್ಹಾಗೇ ಬಾಲಿವುಡ್ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಮತ್ತೊಂದು ವೆಬ್ ಸೈಟ್'www.koimoi.com' ವರದಿಯ ಪ್ರಕಾರ ಸಿತಾರೆ ಜಮೀನ್ ಪರ್ ಚಿತ್ರಕ್ಕೆ ಆಮಿರ್ ಖಾನ್ ಖರ್ಚು ಮಾಡಿದ್ದು ಕೇವಲ ₹90 ಕೋಟಿ ಮಾತ್ರ. ವಿಶೇಷ ಅಂದರೆ ಈ ಹಣವನ್ನ ಆಮಿರ್ ಖಾನ್ ಈಗಾಗಲೇ ಮರಳಿ ಪಡೆದಿದ್ದಾರೆ. koimoi ವರದಿಯ ಪ್ರಕಾರ ₹60.5 ಕೋಟಿ ಲಾಭವನ್ನು ಕೂಡ ಕಂಡಿದ್ದಾರೆ.
ಹೀಗಾಗಿಯೇ ಈ ಬ್ಲಾಕ್‌ಬಸ್ಟರ್ ಝೋನ್‌ಗೆ ಬರಲು ಆಮಿರ್ ಖಾನ್‌ಗೆ ಬರಲು ಇನ್ನು ₹20 ಕೋಟಿಯ ಅವಶ್ಯಕತೆ ಇದೆ. ಈ ಹಣವನ್ನು ಆಮಿರ್ ಖಾನ್ ಈಗ ಗಳಿಸಿದರೆ 09 ವರ್ಷಗಳ ನಂತರ ಆಮಿರ್ ಖಾನ್ ದೊಡ್ಡ ಗೆಲುವನ್ನು ಕಂಡಂತೆ ಆಗಲಿದೆ.
ಆದರೆ ಇದು ಸಾಧ್ಯಾನಾ ? ಎನ್ನುವ ಪ್ರಶ್ನೆ ಕೂಡ ಈಗ ಹಲವರಲ್ಲಿದೆ. ಯಾಕೆಂದರೆ ಅಜಯ್ ದೇವಗನ್ ಅಭಿನಯದ ಸನ್ ಆಫ್ ಸರ್ದಾರ್-2 ಇದೇ ಜುಲೈ 25ರಂದು ತೆರೆಗೆ ಬರಲಿದೆ. ಈ ಚಿತ್ರದ ಮೇಲೂ ಬಾಲಿವುಡ್‌ಗೆ ಅಪಾರವಾದ ನಿರೀಕ್ಷೆಗಳಿವೆ. ಪ್ರೇಕ್ಷಕರಲ್ಲಿ ಕುತೂಹಲ ಇದೆ. ಹೀಗಾಗಿಯೇ ಬಾಕಿ ಉಳಿದಿರುವ ಈ 09 ದಿನದಲ್ಲಿ ಆಮೀರ್ ಖಾನ್ ₹20 ಕೋಟಿ ಗಳಿಸುತ್ತಾರಾ ಎನ್ನುವುದು ಸದ್ಯದ ಪ್ರಶ್ನೆ. ಹಾಗೊಂದು ವೇಳೆ ಈ ಗಡಿಯನ್ನು ಆಮಿರ್ ಖಾನ್ ಯಶಸ್ವಿಯಾದರೆ 9 ವರ್ಷದ ನಂತರ ಆಮಿರ್ ಖಾನ್ ಬ್ಲಾಕ್‌ಬಸ್ಟರ್ ಚಿತ್ರವನ್ನು ನೀಡಿದಂತೆ ಆಗಲಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











